AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs MI Highlights, IPL 2024: ಅಧಿಕೃತವಾಗಿ ಪ್ಲೇಆಫ್​ಗೆ ಎಂಟ್ರಿಕೊಟ್ಟ ಕೆಕೆಆರ್

Kolkata Knight Riders Vs Mumbai Indians Highlights in Kannada: ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಇಂದು ತವರು ನೆಲ ಈಡನ್ ಗಾರ್ಡನ್‌ನಲ್ಲಿ ನಡೆದ 60ನೇ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಅಧಿಕೃತವಾಗಿ ಪ್ಲೇಆಫ್​ಗೆ ಎಂಟ್ರಿಕೊಟ್ಟಿದೆ.

KKR vs MI Highlights, IPL 2024: ಅಧಿಕೃತವಾಗಿ ಪ್ಲೇಆಫ್​ಗೆ ಎಂಟ್ರಿಕೊಟ್ಟ ಕೆಕೆಆರ್
ಪೃಥ್ವಿಶಂಕರ
|

Updated on:May 12, 2024 | 12:36 AM

Share

LIVE NEWS & UPDATES

  • 12 May 2024 12:35 AM (IST)

    18 ರನ್‌ಗಳ ಸೋಲು

    ಮಳೆ ಪೀಡಿತ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್ ತಂಡವನ್ನು 18 ರನ್‌ಗಳಿಂದ ಸೋಲಿಸಿತು. ಇದು ಕೆಕೆಆರ್ ಒಂಬತ್ತನೇ ಜಯವಾಗಿದ್ದು, 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರೊಂದಿಗೆ ಕೋಲ್ಕತ್ತಾ ಐಪಿಎಲ್ 2024 ಸೀಸನ್‌ನಲ್ಲಿ ಪ್ಲೇಆಫ್ ತಲುಪಿದ ಮೊದಲ ತಂಡವಾಗಿದೆ.

  • 12 May 2024 12:15 AM (IST)

    ಡೇವಿಡ್ ಔಟ್

    ಟಿಮ್ ಡೇವಿಡ್ ಅವರನ್ನು ಔಟ್ ಮಾಡುವ ಮೂಲಕ ಆಂಡ್ರೆ ರಸೆಲ್ ಮುಂಬೈಗೆ ಐದನೇ ಹೊಡೆತ ನೀಡಿದರು. ಮೂರು ಎಸೆತಗಳನ್ನು ಆಡಿದ ಡೇವಿಡ್ ಖಾತೆ ತೆರೆಯದೆ ಔಟಾದರು.

  • 12 May 2024 12:15 AM (IST)

    ಹಾರ್ದಿಕ್ ಪಾಂಡ್ಯ ಔಟ್

    ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ಔಟ್ ಮಾಡುವ ಮೂಲಕ ಸ್ಪಿನ್ನರ್ ವರುಣ್ ಚಕ್ರವರ್ತಿ ಮುಂಬೈ ಇನ್ನಿಂಗ್ಸ್​ಗೆ ಆಘಾತ ನೀಡಿದ್ದಾರೆ. ನಾಲ್ಕು ಎಸೆತಗಳಲ್ಲಿ ಎರಡು ರನ್ ಗಳಿಸಿ ಹಾರ್ದಿಕ್ ಔಟಾದರು.

  • 12 May 2024 12:07 AM (IST)

    ಮೂರನೇ ವಿಕೆಟ್

    ಮುಂಬೈ 87 ಸ್ಕೋರ್‌ನಲ್ಲಿ ಸೂರ್ಯಕುಮಾರ್ ಯಾದವ್ ರೂಪದಲ್ಲಿ ಮೂರನೇ ವಿಕೆಟ್ ಕಳೆದುಕೊಂಡಿದೆ. ಸೂರ್ಯ 11 ರನ್ ಗಳಿಸಿ ಔಟಾದರು.

  • 11 May 2024 11:57 PM (IST)

    ರೋಹಿತ್ ಶರ್ಮಾ ಔಟ್

    ರೋಹಿತ್ ಶರ್ಮಾ 19 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು.

  • 11 May 2024 11:57 PM (IST)

    ಮೊದಲ ವಿಕೆಟ್

    158 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 65 ರನ್‌ಗಳ ಸ್ಕೋರ್‌ಗೆ ಮೊದಲ ವಿಕೆಟ್ ಕಳೆದುಕೊಂಡಿದೆ. ಇಶಾನ್ ಕಿಶನ್ 40 ರನ್ ಗಳಿಸಿ ಸುನಿಲ್ ನರೈನ್‌ಗೆ ಬಲಿಯಾದರು.

  • 11 May 2024 11:37 PM (IST)

    4 ಓವರ್‌ಗಳಿಗೆ 46 ರನ್

    ಮುಂಬೈ ಇಂಡಿಯನ್ಸ್ ತಂಡ 4 ಓವರ್‌ಗಳ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 46 ರನ್ ಗಳಿಸಿದೆ. ಇಶಾನ್ ಕಿಶನ್ 25 ರನ್ ಹಾಗೂ ರೋಹಿತ್ ಶರ್ಮಾ 14 ರನ್ ಗಳಿಸಿ ಆಡುತ್ತಿದ್ದಾರೆ.

  • 11 May 2024 11:17 PM (IST)

    2 ಓವರ್‌ ಅಂತ್ಯ

    158 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 2 ಓವರ್‌ಗಳ ಅಂತ್ಯಕ್ಕೆ 17 ರನ್ ಗಳಿಸಿದೆ. ರೋಹಿತ್ ಶರ್ಮಾ 6 ರನ್, ಇಶಾನ್ ಕಿಶನ್ 11 ರನ್ ಗಳಿಸಿ ಆಡುತ್ತಿದ್ದಾರೆ.

  • 11 May 2024 10:57 PM (IST)

    158 ರನ್‌ಗಳ ಗುರಿ

    ಮಳೆ ಪೀಡಿತ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್‌ಗೆ ಗೆಲ್ಲಲು 158 ರನ್‌ಗಳ ಗುರಿಯನ್ನು ನೀಡಿದೆ. ಮಳೆಯಿಂದಾಗಿ ಪಂದ್ಯ ಎರಡು ಗಂಟೆ 15 ನಿಮಿಷ ತಡವಾಗಿ ಆರಂಭಗೊಂಡಿದ್ದು, ಓವರ್‌ಗಳನ್ನು ಮೊಟಕುಗೊಳಿಸಲಾಯಿತು. ಪಂದ್ಯವನ್ನು ತಲಾ 16 ಓವರ್‌ ಆಡಿಸಲು ನಿರ್ಧರಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 157 ರನ್ ಗಳಿಸಿತು. ಕೆಕೆಆರ್ ಪರ ವೆಂಕಟೇಶ್ ಅಯ್ಯರ್ 21 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 42 ರನ್ ಗಳಿಸಿದರು. ಮುಂಬೈ ಪರ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ತಲಾ ಎರಡು ವಿಕೆಟ್ ಪಡೆದರು.

  • 11 May 2024 10:40 PM (IST)

    ರಸೆಲ್ ಔಟ್

    ಪಿಯೂಷ್ ಚಾವ್ಲಾ ಎಸೆತದಲ್ಲಿ ಬಿಗ್ ಶಾಟ್ ಬಾರಿಸುವ ಯತ್ನದಲ್ಲಿ ಆಂಡ್ರೆ ರಸೆಲ್ ಕ್ಯಾಚಿತ್ತು ಔಟಾದರು.

  • 11 May 2024 10:38 PM (IST)

    ರಾಣಾ ಔಟ್

    33 ರನ್ ಗಳಿಸಿ ನಿತೀಶ್ ರಾಣಾ ರನೌಟ್​ಗೆ ಬಲಿಯಾಗಿದ್ದಾರೆ. ಕೆಕೆಆರ್ ತಂಡ 116 ರನ್ ಗಳಿಸುವಷ್ಟರಲ್ಲಿ 5ನೇ ವಿಕೆಟ್ ಕಳೆದುಕೊಂಡಿದೆ.

  • 11 May 2024 10:24 PM (IST)

    10 ಓವರ್‌ ಪೂರ್ಣ

    ಕೋಲ್ಕತ್ತಾ ನೈಟ್ ರೈಡರ್ಸ್ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದೆ. ನಿತೀಶ್ ರಾಣಾ 20 ರನ್, ಆಂಡ್ರೆ ರಸೆಲ್ 17 ರನ್ ಗಳಿಸಿ ಆಡುತ್ತಿದ್ದಾರೆ.

  • 11 May 2024 10:24 PM (IST)

    ಅಯ್ಯರ್ ಔಟ್

    42 ರನ್‌ಗಳ ಇನಿಂಗ್ಸ್‌ನಲ್ಲಿ ಪಿಯೂಷ್ ಚಾವ್ಲಾಗೆ ವೆಂಕಟೇಶ್ ಅಯ್ಯರ್ ಬಲಿಯಾದರು. ಕೆಕೆಆರ್ ತಂಡವು 77 ರನ್‌ಗಳ ಸ್ಕೋರ್‌ಗೆ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ.

  • 11 May 2024 09:56 PM (IST)

    6 ಓವರ್‌ ಅಂತ್ಯ

    ಕೋಲ್ಕತ್ತಾ ನೈಟ್ ರೈಡರ್ಸ್ 6 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿದೆ. ವೆಂಕಟೇಶ್ ಅಯ್ಯರ್ 30 ರನ್ ಹಾಗೂ ನಿತೀಶ್ ರಾಣಾ 5 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

  • 11 May 2024 09:29 PM (IST)

    ನರೈನ್ ಶೂನ್ಯಕ್ಕೆ ಔಟ್

    ಜಸ್ಪ್ರೀತ್ ಬುಮ್ರಾ ಎರಡನೇ ಓವರ್‌ನ ಮೊದಲ ಎಸೆತದಲ್ಲಿ ಸುನಿಲ್ ನರೈನ್​ರನ್ನು ಶೂನ್ಯಕ್ಕೆ ಔಟ್ ಮಾಡಿದರು. .

  • 11 May 2024 09:28 PM (IST)

    ಸಾಲ್ಟ್ ಔಟ್

    ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲ ಓವರ್‌ನ 5ನೇ ಎಸೆತದಲ್ಲಿ ಫಿಲ್ ಸಾಲ್ಟ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ.

    ಮೊದಲ ಓವರ್‌ನ ಅಂತ್ಯಕ್ಕೆ ಕೆಕೆಆರ್ 1 ವಿಕೆಟ್ ನಷ್ಟಕ್ಕೆ 10 ರನ್ ಗಳಿಸಿದೆ.

  • 11 May 2024 09:01 PM (IST)

    ಟಾಸ್ ಗೆದ್ದ ಮುಂಬೈ

    ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • 11 May 2024 08:50 PM (IST)

    ತಲಾ 16 ಓವರ್‌ಗಳ ಪಂದ್ಯ

    ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕೆಕೆಆರ್ ಮತ್ತು ಮುಂಬೈ ನಡುವಿನ ಪಂದ್ಯ ಭಾರತೀಯ ಕಾಲಮಾನ ರಾತ್ರಿ 9.15ಕ್ಕೆ ಆರಂಭವಾಗಲಿದೆ. ಈ ಪಂದ್ಯ ತಲಾ 16 ಓವರ್‌ಗಳದ್ದಾಗಿದ್ದು, ಟಾಸ್ 9 ಗಂಟೆಗೆ ನಡೆಯಲಿದೆ.

  • 11 May 2024 07:46 PM (IST)

    ಮಳೆ ನಿಂತಿದೆ

    ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿರುವ ಐಪಿಎಲ್ 60 ನೇ ಪಂದ್ಯ ಮಳೆಯಿಂದಾಗಿ ಇನ್ನೂ ಪ್ರಾರಂಭವಾಗಿಲ್ಲ. ಆದರೆ, ಈಗ ಮಳೆ ನಿಂತಿದ್ದು, ಮೈದಾನದಿಂದ ನೀರನ್ನು ಹೊರಹಾಕಲಾಗುತ್ತಿದೆ.

  • 11 May 2024 07:04 PM (IST)

    ಮಳೆಯಿಂದಾಗಿ ಟಾಸ್ ವಿಳಂಬ

    ಮುಂಬೈ ಹಾಗೂ ಕೋಲ್ಕತ್ತಾ ನಡುವೆ ವಾಂಖೆಡೆಯಲ್ಲಿ ನಡೆಯಬೇಕಿರುವ ಪಂದ್ಯಕ್ಕೆ ವರುಣ ಅಡ್ಡಿಪಡಿಸಿದ್ದಾನೆ.

ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಇಂದು ತವರು ನೆಲ ಈಡನ್ ಗಾರ್ಡನ್‌ನಲ್ಲಿ ನಡೆದ 60ನೇ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿ ಅಧಿಕೃತವಾಗಿ ಪ್ಲೇಆಫ್​ಗೆ ಎಂಟ್ರಿಕೊಟ್ಟಿದೆ. ಲೀಗ್​ನಲ್ಲಿ ಆಡಿರುವ 13 ಪಂದ್ಯಗಳಲ್ಲಿ 9 ಗೆಲುವಿನೊಂದಿಗೆ 18 ಅಂಕ ಸಂಪಾಧಿಸಿದೆ. ಇದರೊಂದಿಗೆ ಈ ಆವೃತ್ತಿಯಲ್ಲಿ ಪ್ಲೇಆಫ್​ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಂಡಿದೆ. ಇತ್ತ ಲೀಗ್​ನಲ್ಲಿ 9ನೇ ಸೋಲು ಕಂಡ ಮುಂಬೈ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲೇ ಉಳಿದಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 16 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಮುಂಬೈ ಅಂತಿಮವಾಗಿ 139 ರನ್​ ಕಲೆಹಾಕಲಷ್ಟೇ ಶಕ್ತವಾಗಿ 18 ರನ್​​ಗಳಿಂದ ಸೋಲೊಪ್ಪಿಕೊಂಡಿತು.

Published On - May 11,2024 7:03 PM