AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ವಾರದಿಂದ ಬೆಂಗಳೂರಿನಲ್ಲಿ ಮಳೆ; ಆರ್​ಸಿಬಿ- ಡೆಲ್ಲಿ ಪಂದ್ಯಕ್ಕೆ ವರುಣನ ಅವಕೃಪೆ?

Bengaluru Weather Report: ಬೆಂಗಳೂರಿನಲ್ಲಿ ಕಳೆದ 1 ವಾರದಿಂದ ಉತ್ತಮವಾಗಿ ಮಳೆಯಾಗುತ್ತಿದೆ. ಹೀಗಾಗಿ ನಗರದಲ್ಲಿ ತಾಪಮಾನ ಕೊಂಚ ತಗ್ಗಿದೆ. ಇನ್ನು ಅಕ್ಯುವೆದರ್ ಪ್ರಕಾರ ಭಾನುವಾರದಂದು ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.

IPL 2024: ವಾರದಿಂದ ಬೆಂಗಳೂರಿನಲ್ಲಿ ಮಳೆ; ಆರ್​ಸಿಬಿ- ಡೆಲ್ಲಿ ಪಂದ್ಯಕ್ಕೆ ವರುಣನ ಅವಕೃಪೆ?
ಬೆಂಗಳೂರು ಹವಾಮಾನ ವರದಿ
ಪೃಥ್ವಿಶಂಕರ
|

Updated on: May 11, 2024 | 9:53 PM

Share

ಐಪಿಎಲ್ 2024 (IPL 2024) ರ 62 ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Royal Challengers Bengaluru vs Delhi Capitals) ನಡುವೆ ನಡೆಯಲಿದೆ. ಈ ಪಂದ್ಯ ಆರ್‌ಸಿಬಿಯ ತವರು ಮೈದಾನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಇದೇ ಮೈದಾನದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತ್ತು. ಅಲ್ಲದೆ ಆಡಿರುವ ಕಳೆದ ನಾಲ್ಕು ಪಂದ್ಯಗಳಲ್ಲಿ ಆರ್​ಸಿಬಿ ಜಯ ದಾಖಲಿಸಿದೆ. ಹೀಗಾಗಿ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸುವ ಜೊತೆಗೆ ಪ್ಲೇಆಫ್‌ಗೆ ಇನ್ನಷ್ಟು ಹತ್ತಿರವಾಗುವ ಲೆಕ್ಕಾಚಾರದೊಂದಿಗೆ ಆರ್​ಸಿಬಿ ಕಣಕ್ಕಿಳಿಯುತ್ತಿದೆ. ಆದರೆ ಒಂದು ವಾರದಿಂದ ಬೆಂಗಳೂರಿನಲ್ಲಿ ಮಳೆ ಸುರಿಯುತ್ತಿದ್ದು, ನಾಳಿನ ಪಂದ್ಯಕ್ಕೆ ವರುಣ ಅಡ್ಡಿಪಡಿಸುತ್ತಾನಾ ಎಂಬ ಆತಂಕ ಅಭಿಮಾನಿಗಳಲ್ಲಿ ಮೂಡಿದೆ.

ಶೇ.55ರಷ್ಟು ಮಳೆಯಾಗುವ ಸಾಧ್ಯತೆ

ಮೇಲೆ ಹೇಳಿದಂತೆ ಬೆಂಗಳೂರಿನಲ್ಲಿ ಕಳೆದ 1 ವಾರದಿಂದ ಉತ್ತಮವಾಗಿ ಮಳೆಯಾಗುತ್ತಿದೆ. ಹೀಗಾಗಿ ನಗರದಲ್ಲಿ ತಾಪಮಾನ ಕೊಂಚ ತಗ್ಗಿದೆ. ಇಷ್ಟು ದಿನ ಬೆಂಗಳೂರಿನಲ್ಲಿ ಮಳೆ ಬರಲಿ ಎಂದು ಆಶಿಸುತ್ತಿದ್ದ ಕ್ರಿಕೆಟ್ ಅಭಿಮಾನಿಗಳು ನಾಳೆ ಮಾತ್ರ ಮಳೆ ಬಾರದಿರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ. ಇನ್ನು ಅಕ್ಯುವೆದರ್ ಪ್ರಕಾರ ಭಾನುವಾರದಂದು ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ವೇಳೆಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಅಲ್ಲದೆ ಪಂದ್ಯವು ರಾತ್ರಿ 7.30 ಕ್ಕೆ ಪ್ರಾರಂಭವಾಗಲ್ಲಿದ್ದು, ಈ ವೇಳೆಯೂ ಅಂದರೆ ಸಂಜೆಯೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹಾಗೆಯೇ ನಾಳೆ ಶೇ.55ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

Breaking: ಆರ್​ಸಿಬಿ ವಿರುದ್ಧದ ಪಂದ್ಯದಿಂದ ರಿಷಬ್ ಪಂತ್​ಗೆ ನಿಷೇಧದ ಶಿಕ್ಷೆ..!

ಚಿನ್ನಸ್ವಾಮಿ ಪಿಚ್ ವರದಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ತಂಡ ಚೇಸಿಂಗ್‌ಗೆ ಆದ್ಯತೆ ನೀಡುತ್ತದೆ. ಪಿಚ್ ನೋಡಿದರೆ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಬ್ಯಾಟ್ಸ್​ಮನ್​ಗಳಿಗೆ ಹೆಚ್ಚಿನ ನೆರವು ಸಿಗಲಿದೆ ಎಂಬ ನಂಬಿಕೆ ಇದೆ. ವೇಗದ ಬೌಲರ್‌ಗಳು ಹೊಸ ಚೆಂಡಿನಲ್ಲಿ ಕೊಂಚ ಲಾಭ ಪಡೆಯಲ್ಲಿದ್ದಾರೆ. ಈ ಮೈದಾನವನ್ನು ಹೆಚ್ಚಿನ ಸ್ಕೋರಿಂಗ್ ಮೈದಾನವೆಂದು ಪರಿಗಣಿಸಲಾಗಿದ್ದರೂ, ಈ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡುವ ತಂಡದ ಸರಾಸರಿ ಸ್ಕೋರ್ 165-170 ರನ್ ಆಗಿದೆ. ಇಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಲು ಆದ್ಯತೆ ನೀಡಬಹುದು.

ಚಿನ್ನಸ್ವಾಮಿ ಅಂಕಿಅಂಶ

ಈ ಮೈದಾನದಲ್ಲಿ ಇದುವರೆಗೆ 93 ಐಪಿಎಲ್ ಪಂದ್ಯಗಳು ನಡೆದಿವೆ. ಈ ಮೈದಾನದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡ ಅತಿ ಹೆಚ್ಚು ಪಂದ್ಯಗಳನ್ನು ಅಂದರೆ 50 ಪಂದ್ಯಗಳಲ್ಲಿ ಗೆದ್ದಿದೆ. ಉಳಿದಂತೆ 4 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಈ ಮೈದಾನದಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 166 ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ