LLC 2023: ಗಂಭೀರ್ ಏಕಾಂಗಿ ಹೋರಾಟ ವ್ಯರ್ಥ; ಮಿಸ್ಬಾ ಅಬ್ಬರಕ್ಕೆ ತತ್ತರಿಸಿದ ಇಂಡಿಯಾ ಮಹಾರಾಜಸ್
Legends League Cricket 2023: ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಗಂಭೀರ್ 39 ಎಸೆತಗಳಲ್ಲಿ 54 ರನ್ ಗಳಿಸಿದರು. ಗಂಭೀರ್ ಔಟಾದ ನಂತರ ಭಾರತದ ಇನ್ನಿಂಗ್ಸ್ ತತ್ತರಿಸಲಾರಂಭಿಸಿತು.
ನಿನ್ನೆಯಿಂದ ಅಂದರೆ, ಮಾ.10 ರಿಂದ ಆರಂಭವಾಗಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ (Legends League Cricket 2023) ಲೀಗ್ನಲ್ಲಿ ಗೌತಮ್ ಗಂಭೀರ್ (Gautam Gambhir) ನಾಯಕತ್ವದ ಇಂಡಿಯಾ ಮಹಾರಾಜಸ್ ತಂಡ ಏಷ್ಯಾ ಲಯನ್ಸ್ (India Maharajas vs Asia Lions ) ವಿರುದ್ಧ 9 ರನ್‌ಗಳ ರೋಚಕ ಸೋಲು ಅನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಏಷ್ಯಾ ಲಯನ್ಸ್ ತಂಡ ಮಿಸ್ಬಾ ಉಲ್ ಹಕ್ (Misbah-ul-Haq) ಅವರ ಬಿರುಸಿನ ಇನ್ನಿಂಗ್ಸ್‌ನಿಂದಾಗಿ 6 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿತು. ತಂಡದ ಪರ ಹೊಡಿಬಡಿ ಆಟವಾಡಿದ ಮಿಸ್ಬಾ 50 ಎಸೆತಗಳಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 73 ರನ್ ಬಾರಿಸಿದರು.
ಮಿಸ್ಬಾ ಹೊರತುಪಡಿಸಿ ಉಪುಲ್ ತರಂಗ 39 ಎಸೆತಗಳಲ್ಲಿ 40 ರನ್ ಗಳಿಸಿದರು. ಇಂಡಿಯಾ ಮಹಾರಾಜಸ್ ಪರ ಸ್ಟುವರ್ಟ್ ಬಿನ್ನಿ ಮತ್ತು ಪರ್ವಿಂದರ್ ಅವಾನಾ ತಲಾ 2 ವಿಕೆಟ್ ಪಡೆದರು. ಏಷ್ಯಾ ಲಯನ್ಸ್ ನೀಡಿದ ಗುರಿ ಬೆನ್ನತ್ತಲು ಆರಂಭಿಸಿದ ಇಂಡಿಯಾ ಮಹಾರಾಜಸ್ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ಇನಿಂಗ್ಸ್ನ ನಾಲ್ಕನೇ ಎಸೆತದಲ್ಲಿ ರಾಬಿನ್ ಉತ್ತಪ್ಪ ರೂಪದಲ್ಲಿ ಮೊದಲ ವಿಕೆಟ್ ಪತನವಾಯಿತು. ಅಲ್ಲಿಯವರೆಗೆ ಇಂಡಿಯಾ ತಂಡ ಖಾತೆಯನ್ನೂ ತೆರೆದಿರಲಿಲ್ಲ.
Smriti Mandhana: ಸತತ ನಾಲ್ಕನೇ ಸೋಲು: ಪಂದ್ಯದ ಬಳಿಕ ಶಾಕಿಂಗ್ ಹೇಳಿಕೆ ನೀಡಿದ ಆರ್ಸಿಬಿ ನಾಯಕಿ ಸ್ಮೃತಿ ಮಂಧಾನ
ಗಂಭೀರ್-ವಿಜಯ್ ಜೊತೆಯಾಟ
ಕೆಟ್ಟ ಆರಂಭದ ನಂತರ ಮುರಳಿ ವಿಜಯ್ ಜೊತೆಗೂಡಿ ಗಂಭೀರ್ ಇನ್ನಿಂಗ್ಸ್ ನಿಭಾಯಿಸಲು ಯತ್ನಿಸಿದರು. ಇವರಿಬ್ಬರ ನಡುವೆ 50 ರನ್‌ಗಳ ಜೊತೆಯಾಟವಿತ್ತು. ಆದರೆ ವಿಜಯ್ 25 ರನ್‌ಗಳಿಗೆ ಔಟಾದರೆ, ನಂತರದ ಓವರ್‌ನಲ್ಲಿ ಸುರೇಶ್ ರೈನಾ ಕೂಡ 3 ರನ್‌ಗಳಿಗೆ ಔಟಾದರು. ಗಂಭೀರ್‌ಗೆ ಮೊಹಮ್ಮದ್ ಕೈಫ್ ಬೆಂಬಲ ಸಿಕ್ಕಿದ್ದರಿಂದ ಭಾರತದ ಸ್ಕೋರ್ 100ರ ಗಡಿ ದಾಟಿತು. ಗಂಭೀರ್ ಕ್ರೀಸ್ನಲ್ಲಿ ಇರುವವರೆಗೂ ಇಂಡಿಯಾ ತಂಡ ಗೆಲುವಿನ ಹಾದಿಯಲ್ಲಿತ್ತು. ಆದರೆ 14ನೇ ಓವರ್ನ ಮೊದಲ ಎಸೆತದಲ್ಲಿ ಗಂಭೀರ್ ಔಟಾದರು.
ಗಂಭೀರ್ ವಿಕೆಟ್ ಬಳಿಕ ತತ್ತರಿಸಿದ ಇಂಡಿಯಾ ಇನ್ನಿಂಗ್ಸ್
ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಗಂಭೀರ್ 39 ಎಸೆತಗಳಲ್ಲಿ 54 ರನ್ ಗಳಿಸಿದರು. ಗಂಭೀರ್ ಔಟಾದ ನಂತರ ಭಾರತದ ಇನ್ನಿಂಗ್ಸ್ ತತ್ತರಿಸಲಾರಂಭಿಸಿತು. ಯೂಸುಫ್ ಪಠಾಣ್, ಮೊಹಮ್ಮದ್ ಕೈಫ್, ಬಿನ್ನಿ ಮತ್ತು ಇರ್ಫಾನ್ ಪಠಾಣ್ 19 ಓವರ್‌ಗಳಲ್ಲಿ 150 ರನ್‌ಗಳಿಗೆ ಔಟಾದರು. ಹರ್ಭಜನ್ ಸಿಂಗ್ 5 ಮತ್ತು ಅವಾನಾ 1 ರನ್ ಗಳಿಸಿ ಅಜೇಯರಾಗಿ ಉಳಿದರು. ಏಷ್ಯಾ ಲಯನ್ಸ್ ಪರ ಸೊಹೈಲ್ ತನ್ವೀರ್ 27 ರನ್ ನೀಡಿ ಗರಿಷ್ಠ 3 ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ