AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharaja Trophy 2022: 36 ಎಸೆತಗಳಲ್ಲಿ ಸುನಾಮಿ ಎಬ್ಬಿಸಿದ ಮನಿಷ್ ಪಾಂಡೆ; ಸೋತ ಶಿವಮೊಗ್ಗ ಸ್ಟ್ರೈಕರ್ಸ್

Maharaja Trophy 2022: ಪಾಂಡೆ ಕೇವಲ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 50 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಮನೀಶ್ ಪಾಂಡೆ ಸ್ಟ್ರೈಕ್ ರೇಟ್ 138ಕ್ಕಿಂತ ಹೆಚ್ಚಿತ್ತು.

Maharaja Trophy 2022: 36 ಎಸೆತಗಳಲ್ಲಿ ಸುನಾಮಿ ಎಬ್ಬಿಸಿದ ಮನಿಷ್ ಪಾಂಡೆ; ಸೋತ ಶಿವಮೊಗ್ಗ ಸ್ಟ್ರೈಕರ್ಸ್
ಪೃಥ್ವಿಶಂಕರ
|

Updated on: Aug 10, 2022 | 5:17 PM

Share

ಕರ್ನಾಟಕದಲ್ಲಿ ದೇಶೀಯ T20 ಲೀಗ್ ಮಹಾರಾಜ ಟ್ರೋಫಿ (Maharaja Trophy 2022) ನಡೆಯುತ್ತಿದ್ದು, ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಲ್ಬರ್ಗ ಮಿಸ್ಟಿಕ್ಸ್ (Gulberg Mystic) ತಂಡ ಶಿವಮೊಗ್ಗ ಸ್ಟ್ರೈಕರ್ಸ್ (Shivamoga Strikers) ತಂಡವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಮನಿಷ್ ಪಾಂಡೆ (Manish Pandey) ಅಬ್ಬರದ ಇನ್ನಿಂಗ್ಸ್ ಆಡಿದ್ದಾರೆ. ಕೇವಲ 36 ಎಸೆತಗಳಲ್ಲಿ ಬ್ಯಾಟ್ ಬೀಸಿ ಎದುರಾಳಿ ತಂಡಕ್ಕೆ ಸೋಲಿನ ರುಚಿ ತೊರಿದ್ದಾರೆ.

ಪಂದ್ಯದಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 175 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮನೀಶ್ ಪಾಂಡೆ ನೇತೃತ್ವದ ಗುಲ್ಬರ್ಗ್ ಮಿಸ್ಟಿಕ್ ತಂಡ ಈಗಾಗಲೇ 5 ಎಸೆತಗಳಲ್ಲಿ 7 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಸ್ಟ್ರೈಕರ್ಸ್ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಸ್ಟಾಲಿನ್ ಹೂವರ್ ಅವರ ವಿಕೆಟ್ ಕಳೆದುಕೊಂಡಿತು. ಬಳಿಕ ಜೊತೆಯಾದ ಮೊದಲು ರೋಹನ್ ಕದಮ್ ಮತ್ತು ಸಿದ್ಧಾರ್ಥ್ ಗುಲ್ಬರ್ಗಾ ಮಿಸ್ಟಿಕ್ಸ್ ಬೌಲಿಂಗ್ ದಾಳಿಯನ್ನು ವಿಫಲಗೊಳಿಸಿದರು. ರೋಹನ್ ಮತ್ತು ಸಿದ್ಧಾರ್ಥ್ ಇಬ್ಬರೂ ಪವರ್‌ಪ್ಲೇಯ ನಂತರ ತಮ್ಮ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿದರು.

ರೋಹನ್ 41 ಎಸೆತಗಳಲ್ಲಿ 53 ರನ್ ಗಳಿಸಿದರು. ಜೊತೆಗೆ ಅವರ ಇನ್ನಿಂಗ್ಸ್​ನಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಕೂಡ ಸೇರಿದ್ದವು. ಇನ್ನೊಂದು ತುದಿಯಲ್ಲಿ ಸಿದ್ಧಾರ್ಥ್ ಕೂಡ 51 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 53 ರನ್ ಸೇರಿಸಿದರು. ಇವರಿಬ್ಬರು 108 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ತಂಡಕ್ಕೆ ಉತ್ತಮ ಕೊಡುಗೆ ನಿಡಿದರು.

ಆದಾಗ್ಯೂ, ಶರತ್ ಬಿಆರ್ (9), ಸ್ಮರನ್ ಆರ್ (3) ಬೇಗ ವಿಕೆಟ್ ಕಳೆದುಕೊಂಡರು. ನಾಯಕ ಕೆ ಗೌತಮ್ (23) ಮತ್ತು ಅವಿನಾಶ್ ಡಿ (20) ಅವರಿಬ್ಬರ ನಡುವೆ ನಾಲ್ಕು ಸಿಕ್ಸರ್‌ಗಳೊಂದಿಗೆ ಉತ್ತಮ ಜೊತೆಯಾಟ ಏರ್ಪಟಿತು. ಗುಲ್ಬರ್ಗಾ ಪರ ಕಾರ್ತಿಕ್ ಸಿಎ 3 ವಿಕೆಟ್ ಕಬಳಿಸಿದರೆ, ಅಂತಿಮವಾಗಿ ಸ್ಟ್ರೈಕರ್ಸ್ 8 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿತು.

175 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಮಿಸ್ಟಿಕ್ 5ನೇ ಓವರ್‌ನಲ್ಲಿ 9 ರನ್‌ಗಳಿಸಿದ್ದ ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡಿತು. ನಂತರ ಜೆಸ್ವತ್ ಮತ್ತು ರೋಹನ್ ಪಾಟೀಲ್ ಇನ್ನಿಂಗ್ಸ್ ಕಟ್ಟಲು ಮುಂದಾದರು. ಆದಾಗ್ಯೂ, ಜೆಸ್ವತ್ ಅವರು 17 ಎಸೆತಗಳಲ್ಲಿ 30 ರನ್ ಗಳಿಸಿ ಔಟಾದರು. ನಾಯಕ ಮನೀಶ್ ಪಾಂಡೆ ಮತ್ತು ಕೃಷ್ಣನ್ ಶ್ರೀಜಿತ್ 32 ರನ್ ಗಳ ಜೊತೆಯಾಟ ನೀಡುವ ಮೊದಲು ರೋಹನ್ ಪಾಟೀಲ್ 28 ರನ್ ಸೇರಿಸುವಲ್ಲಿ ಯಶಸ್ವಿಯಾದರು, ನಂತರ ಅವರು ಪೆವಿಲಿಯನ್‌ಗೆ ವಾಪಾಸ್ ಆದರು.

36 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಮನೀಶ್ ಪಾಂಡೆ

ಗುಲ್ಬರ್ಗ್ ಮಿಸ್ಟಿಕ್ ತಂಡದ ಗೆಲುವಿನಲ್ಲಿ ಮನೀಶ್ ಪಾಂಡೆ ಅವರ ನಾಯಕತ್ವದ ಇನ್ನಿಂಗ್ಸ್‌ ಸಹಕಾರಿಯಾಯಿತು. ಪಾಂಡೆ ಕೇವಲ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 50 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಮನೀಶ್ ಪಾಂಡೆ ಸ್ಟ್ರೈಕ್ ರೇಟ್ 138ಕ್ಕಿಂತ ಹೆಚ್ಚಿತ್ತು.

ಗುಲ್ಬರ್ಗ್ ಮಿಸ್ಟಿಕ್ ಗೆಲುವಿನಲ್ಲಿ ಮನೀಶ್ ಪಾಂಡೆ ಹೊರತಾಗಿ ಕೆಳ ಕ್ರಮಾಂಕದ ಸಿಎ ಕಾರ್ತಿಕ್ 200ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ ಆಡುತ್ತಾ ಕೇವಲ 9 ಎಸೆತಗಳಲ್ಲಿ 22 ರನ್ ಗಳಿಸಿ ಪಂದ್ಯವನ್ನು ಮುಗಿಸುವ ಕೆಲಸ ಮಾಡಿದರು.

ಇದಕ್ಕೂ ಮುನ್ನ ನಡೆದ ಕೊನೆಯ ಕ್ರಿಕೆಟ್ ಪಂದ್ಯದಲ್ಲಿ ಗುಲ್ಬರ್ಗ್ ಮಿಸ್ಟಿಕ್ ತಂಡ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಸೋಲನುಭವಿಸಿತ್ತು. ಆಗ ಮಯಾಂಕ್ ಅಗರ್ವಾಲ್ ಈ ತಂಡದ ವಿರುದ್ಧ ಅರ್ಧಶತಕ ಗಳಿಸಿದ್ದರು.

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ