AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗುವುದಾಗಿ ನಂಬಿಸಿ ಮೋಸ; ಮೊಹಮ್ಮದ್ ಶಮಿ ಸಹೋದರನ ಮೇಲೆ ಗಂಭೀರ ಆರೋಪ

Mohammed Kaif Fraud Allegations: ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ವೈಯಕ್ತಿಕ ಜೀವನದ ವಿವಾದಗಳಿಂದ ಸುದ್ಧಿಯಲ್ಲಿದ್ದರು. ಇದೀಗ ಅವರ ಸಹೋದರ ಮೊಹಮ್ಮದ್ ಕೈಫ್ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ವಂಚನೆ ಮತ್ತು ಮೋಸ ಮಾಡಿದ ಆರೋಪ ಕೇಳಿಬಂದಿದೆ. ಮಹ್ವಿಶ್ ಎಂಬ ಮಹಿಳೆ ಕೈಫ್ ತಮ್ಮನ್ನು ಪ್ರೀತಿಸಿ, ಮದುವೆಯ ಭರವಸೆ ನೀಡಿ ನಂತರ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಶಮಿ ಕೂಡ ಈ ವಿಚಾರದಲ್ಲಿ ಸಹಾಯ ಮಾಡಿಲ್ಲ ಎಂದಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಮೋಸ; ಮೊಹಮ್ಮದ್ ಶಮಿ ಸಹೋದರನ ಮೇಲೆ ಗಂಭೀರ ಆರೋಪ
Mohammed Shami, Mohammed Kaif
ಪೃಥ್ವಿಶಂಕರ
|

Updated on: May 06, 2026 | 9:10 PM

Share

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ( Mohammed Shami) ಅವರ ವೃತ್ತಿಜೀವನದ ಜೊತೆಗೆ ವೈಯಕ್ತಿಕ ಜೀವನವೂ ಹಳಿತಪ್ಪಿದೆ. ಶಮಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡು ವರ್ಷಗಳೇ ಕಳೆದಿವೆ. ಇತ್ತ ಶಮಿ ಅವರ ವೈವಾಹಿಕ ಜೀವನವೂ ಮುರಿದುಬಿದ್ದಿದೆ. 2014 ರಲ್ಲಿ ಶಮಿ, ಹಸಿನ್ ಜಹಾನ್ ಅವರನ್ನು ವಿವಾಹವಾಗಿದ್ದರು. ಆದರೆ 2018 ರಲ್ಲಿ ಹಸಿನ್ ಜಹಾನ್, ಶಮಿ ಮತ್ತು ಅವರ ಕುಟುಂಬದ ವಿರುದ್ಧ ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಮತ್ತು ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಘಟನೆಯು ಶಮಿ ಅವರ ವೃತ್ತಿಜೀವನದ ಮೇಲೂ ಪರಿಣಾಮ ಬೀರಿತ್ತು. ಇದೀಗ ಶಮಿ ಅವರ ಸಹೋದರ ಮೊಹಮ್ಮದ್ ಕೈಫ್ ವಿರುದ್ಧವೂ ಮಹಿಳೆಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಮೋಸ

ವಾಸ್ತವವಾಗಿ ಮೊಹಮ್ಮದ್ ಶಮಿ ಅವರ ಕಿರಿಯ ಸಹೋದರ ಮೊಹಮ್ಮದ್ ಕೈಫ್ ವಿರುದ್ಧ ಮಹಿಳೆಯೊಬ್ಬರು ವಂಚನೆ ಮತ್ತು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಚಾನೆಲ್​ವೊಂದಕ್ಕೆ ಸಂದರ್ಶನ ನೀಡಿರುವ ಮಹ್ವಿಶ್ ಎಂಬ ಮಹಿಳೆ, ‘ಆರಂಭದಲ್ಲಿ ನಮ್ಮಿಬ್ಬರ ನಡುವೆ ಸ್ನೇಹವಿತ್ತು, ಅದು ಕ್ರಮೇಣ ಪ್ರೀತಿಯಾಗಿ ಬದಲಾಯಿತು. ಆದರೆ ಮದುವೆಯ ವಿಷಯ ಬಂದಾಗ, ಕೈಫ್ ನಾನಾ ನೆಪಗಳನ್ನು ಹೇಳಲು ಪ್ರಾರಂಭಿಸಿದರು. ಕಾಮನ್ ಗೆಳೆಯನಿಂದ ನಾವಿಬ್ಬರು ಪರಸ್ಪರ ಪರಿಚಿತರಾದೆವು.

ಆ ನಂತರ ನಾವಿಬ್ಬರು ಇನ್ಸ್ಟಾಗ್ರಾಮ್ನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದೆವು. ನಮ್ಮಿಬ್ಬರ ಸ್ನೇಹ ಸಂಬಂಧವಾಗಿ ಅರಳಿತು. ಹೀಗಾಗಿ ನಾನು ಕೈಫ್ ಅವರನ್ನು ಮದುವೆಯಾಗಲು ಬಯಸಿದ್ದೆ. ಆದರೆ ಕೈಫ್ ಬಳಿ ನಾನು ಈ ಬಗ್ಗೆ ಹೇಳಿದಕ್ಕೆ ಅವರು ನಾನಾ ಕಾರಣಗಳನ್ನು ನೀಡಲಾರಂಭಿಸಿದರು. ಈ ವಿಚಾರವನ್ನು ನಾನು ಕೈಫ್ ಅವರ ಅಣ್ಣ ಮೊಹಮ್ಮದ್ ಶಮಿ ಅವರೊಂದಿಗೂ ಮಾತನಾಡಿದ್ದೇನೆ. ಆದರೆ ಶಮಿ ಕೂಡ ಆ ನಂತರ ನನ್ನ ಫೋನ್‌ಗೆ ಉತ್ತರಿಸುವುದನ್ನು ನಿಲ್ಲಿಸಿದ್ದಾರೆ ಎಂಬ ಆರೋಪಗಳನ್ನು ಹೊರಿಸಿದ್ದಾರೆ.

SIR ವಿಚಾರಣೆಗೆ ಹಾಜರಾಗಲು ಕ್ರಿಕೆಟಿಗ ಮೊಹಮ್ಮದ್ ಶಮಿಗೆ ಸಮನ್ಸ್

ಮೊಹಮ್ಮದ್ ಕೈಫ್ ಯಾರು?

ಮೊಹಮ್ಮದ್ ಕೈಫ್ ಡಿಸೆಂಬರ್ 10, 1996 ರಂದು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಜನಿಸಿದರು. ಬಂಗಾಳ ತಂಡದ ಪರ ದೇಶೀಯ ಕ್ರಿಕೆಟ್ ಆಡುವ ಕೈಫ್ ಬಲಗೈ ಬ್ಯಾಟ್ಸ್‌ಮನ್ ಮತ್ತು ಮಧ್ಯಮ ವೇಗದ ಬೌಲರ್ ಆಗಿದ್ದಾರೆ. ಇದುವರೆಗೆ ಅವರು 14 ಪ್ರಥಮ ದರ್ಜೆ ಪಂದ್ಯಗಳು, 9 ಲಿಸ್ಟ್ ಎ ಪಂದ್ಯಗಳು ಮತ್ತು 1 ಟಿ20 ಪಂದ್ಯವನ್ನು ಆಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 43 ವಿಕೆಟ್‌ಗಳನ್ನು ಮತ್ತು ಲಿಸ್ಟ್ ಎ ಪಂದ್ಯದಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದಾಗ್ಯೂ, ಅವರು ಇನ್ನೂ ಐಪಿಎಲ್‌ನಲ್ಲಿ ಆಡಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us