AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯಿ ಮುಚ್ಚಿಕೊಂಡ ಆಟಗಾರನನ್ನು ಹೊರಹಾಕಿದ ಮ್ಯಾಚ್ ರೆಫರಿ!

Fifa World Cup 2026: ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್​ನ 25ನೇ ಪಂದ್ಯದಲ್ಲಿ ಟರ್ಕಿ ಹಾಗೂ ಪರಾಗ್ವೆ ತಂಡಗಳು ಮುಖಾಮುಖಿಯಾಗಿದ್ದವು. ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗಿದ್ದ ಈ ಪಂದ್ಯವನ್ನು ಪರಾಗ್ವೆ ತಂಡವು 1-0 ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನ ನಡುವೆ ಪರಾಗ್ವೆ ತಂಡದ ಮಿಚೆಲ್ ಅಲ್ಮಿರೋನ್ ಸಖತ್ ಸುದ್ದಿಯಾಗಿದ್ದಾರೆ.

ಬಾಯಿ ಮುಚ್ಚಿಕೊಂಡ ಆಟಗಾರನನ್ನು ಹೊರಹಾಕಿದ ಮ್ಯಾಚ್ ರೆಫರಿ!
Miguel AlmironImage Credit source: Tvcnewsng
ಝಾಹಿರ್ ಯೂಸುಫ್
|

Updated on:Jun 23, 2026 | 11:36 AM

Share

ಬಾಯಿ ಮುಚ್ಚಿಕೊಂಡಿದ್ದಕ್ಕೆ ಯಾರಾದರೂ ಮೈದಾನದಿಂದ ಹೊರ ಹೋಗ್ತಾರಾ? ಹೋಗ್ತಾರೆ… ಹೋಗಲೇಬೇಕು ಎನ್ನುವುದು ಹೊಸ ನಿಯಮ. ಹೌದು, ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಂದ್ಯದ ವೇಳೆ ಬಾಯಿ ಮುಚ್ಚಿಕೊಂಡು ಮಾತನಾಡಿದಕ್ಕೆ ಪರಾಗ್ವೆ ತಂಡದ ಮಿಚೆಲ್ ಅಲ್ಮಿರೋನ್ ಅವರನ್ನು ಹೊರಗೆ ಕಳುಹಿಸಲಾಗಿದೆ. ಅದು ಸಹ ನೇರವಾಗಿ ರೆಡ್ ಕಾರ್ಡ್ ನೀಡಿ!

ಫಿಫಾ ವಿಶ್ವಕಪ್​ನ 25ನೇ ಪಂದ್ಯದಲ್ಲಿ ಪರಾಗ್ವೆ ಹಾಗೂ ಟರ್ಕಿ ತಂಡಗಳು ಮುಖಾಮುಖಿಯಾಗಿದ್ದವು. ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಮೊದಲಾರ್ಧದ ಹೆಚ್ಚುವರಿ ಸಮಯದಲ್ಲಿ ಟರ್ಕಿ ಆಟಗಾರನೊಂದಿಗೆ ವಾಗ್ವಾದ ನಡೆಸುವಾಗ ಅಲ್ಮಿರೋನ್ ತಮ್ಮ ಕೈಯಿಂದ ಬಾಯಿ ಮುಚ್ಚಿಕೊಂಡಿದ್ದರು.

ಇದನ್ನು ಗಮನಿಸಿದ ರೆಫರಿ ಇವಾನ್ ಬಾರ್ಟನ್, ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ಪರಿಶೀಲನೆ ನಡೆಸಿ ಅಲ್ಮಿರೋನ್‌ಗೆ ನೇರ ರೆಡ್ ಕಾರ್ಡ್ ನೀಡಿದರು. ಪರಿಣಾಮ ಮಿಚೆಲ್ ಅಲ್ಮಿರೋನ್ ಅರ್ಧದಲ್ಲೇ ಮೈದಾನ ತೊರೆಯಬೇಕಾಯಿತು.

ಬಾಯಿ ಮುಚ್ಚಿದಕ್ಕೆ ರೆಡ್ ಕಾರ್ಡ್​ ಪಡೆದ ಮೊದಲ ಆಟಗಾರ:

ಫಿಫಾ ವಿಶ್ವಕಪ್​ 2026ರ ನಿಯಮದ ಪ್ರಕಾರ, ಆಟಗಾರರ ಮೈದಾನದಲ್ಲಿ ಬಾಯಿ ಮುಚ್ಚಿಕೊಂಡು ವಾಗ್ವಾದ ನಡೆಸುವಂತಿಲ್ಲ. ಒಂದು ವೇಳೆ ಬಾಯಿ ಮುಚ್ಚಿಕೊಂಡು ವಾಕ್ಸಮರ ನಡೆಸುತ್ತಿರುವುದು ಕಂಡು ಬಂದರೆ ರೆಡ್ ಕಾರ್ಡ್ ನೀಡಿ ಹೊರಗೆ ಕಳುಹಿಸಲಾಗುತ್ತದೆ. ಅದರಂತೆ ಇದೀಗ ಮಿಚೆಲ್ ಅಲ್ಮಿರೋನ್ ಬಾಯಿ ಮುಚ್ಚಿದಕ್ಕೆ ರೆಡ್ ಕಾರ್ಡ್​ ಪಡೆದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಏನಿದು ಹೊಸ ನಿಯಮ?

ಮೈದಾನದಲ್ಲಿ ಆಟಗಾರರು ಪರಸ್ಪರ ನಿಂದಿಸುವುದನ್ನು ಮತ್ತು ಜನಾಂಗೀಯ ನಿಂದನೆ ಮಾಡಿ ತಪ್ಪಿಸಿಕೊಳ್ಳುವುದನ್ನು ತಡೆಯಲು ಅಂತರರಾಷ್ಟ್ರೀಯ ಫುಟ್‌ಬಾಲ್ ಅಸೋಸಿಯೇಷನ್ ಮಂಡಳಿ ಈ ಬಾರಿ ಕಠಿಣ ನಿಯಮವನ್ನು ತಂದಿದೆ. ಈ ನಿಯಮದ ಪ್ರಕಾರ ಮೈದಾನದಲ್ಲಿ ಬಾಯಿ ಮುಚ್ಚಿಕೊಂಡು ಮಾತನಾಡುವಂತಿಲ್ಲ.

  • ಮೈದಾನದಲ್ಲಿ ಎದುರಾಳಿ ಆಟಗಾರ ಅಥವಾ ರೆಫರಿ ಜೊತೆ ಜಗಳವಾಡುವಾಗ ಯಾವುದೇ ಆಟಗಾರ ತನ್ನ ಕೈ, ಜೆರ್ಸಿ ಅಥವಾ ತೋಳಿನಿಂದ ಬಾಯಿ ಮುಚ್ಚಿಕೊಂಡರೆ ಅದಕ್ಕೆ ನೇರ ರೆಡ್ ಕಾರ್ಡ್ ನೀಡಲಾಗುತ್ತದೆ.

ಈ ನಿಯಮ ಜಾರಿಗೆ ತರಲು ಕಾರಣವೇನು?

ಮೈದಾನದಲ್ಲಿ ಆಟಗಾರರು ಎದುರಾಳಿಗಳ ವಿರುದ್ಧ ಜನಾಂಗೀಯ ನಿಂದನೆ ಅಥವಾ ಅಸಭ್ಯ ಪದಗಳನ್ನು ಬಳಸಿ, ಕ್ಯಾಮೆರಾಗಳಿಗೆ ಮತ್ತು ಲಿಪ್-ರೀಡರ್‌ಗಳಿಗೆ ಸಿಗದಂತೆ ಬಾಯಿ ಮುಚ್ಚಿಕೊಳ್ಳುತ್ತಿದ್ದರು. ಸಾಕ್ಷಿ ಸಿಗದ ಕಾರಣ ತನಿಖೆ ನಡೆಸುವುದು ಫಿಫಾಗೆ ಕಷ್ಟವಾಗುತ್ತಿತ್ತು.

ಈ ರಹಸ್ಯ ನಿಂದನೆಗೆ ಸಂಪೂರ್ಣ ಬ್ರೇಕ್ ಹಾಕಲು, “ಬಾಯಿ ಮುಚ್ಚಿಕೊಳ್ಳುವ ಕೃತ್ಯವನ್ನೇ” ಅಪರಾಧ ಎಂದು ಪರಿಗಣಿಸಿ ಅಂತರರಾಷ್ಟ್ರೀಯ ಫುಟ್‌ಬಾಲ್ ಅಸೋಸಿಯೇಷನ್ ಮಂಡಳಿ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಇದಾಗ್ಯೂ ತಂತ್ರಗಾರಿಕೆ ರೂಪಿಸಲು, ಫ್ರೀ-ಕಿಕ್ ಬಗ್ಗೆ ಚರ್ಚಿಸಲು ಸ್ವಂತ ತಂಡದ ಆಟಗಾರರೊಂದಿಗೆ ಬಾಯಿ ಮುಚ್ಚಿ ಮಾತನಾಡಬಹುದು. ಆದರೆ ಎದುರಾಳಿ ಆಟಗಾರರೊಂದಿಗೆ ಜಗಳವಾಡುವಾಗ ಅಥವಾ ರೆಫರಿ ಜೊತೆ ವಾದ ಮಾಡುವಾಗ ಕೈ ಅಥವಾ ಜೆರ್ಸಿಯಿಂದ ಬಾಯಿ ಮುಚ್ಚಿಕೊಳ್ಳುವಂತಿಲ್ಲ.

ಇದನ್ನೂ ಓದಿ: 3 ಸರಣಿಗಳಿಂದ ಟೀಮ್ ಇಂಡಿಯಾ ಆಟಗಾರ ಔಟ್!

ಈ ನಿಯಮವನ್ನು ಉಲ್ಲಂಘಿಸಿ ಪರಾಗ್ವೆ ತಂಡದ ಮಿಚೆಲ್ ಅಲ್ಮಿರೋನ್ ಟರ್ಕಿ ಆಟಗಾರನೊಂದಿಗೆ ವಾಗ್ವಾದಕ್ಕಿಳಿದಿದ್ದರು. ಇದನ್ನು ಪರಿಶೀಲಿಸಿದ ಮ್ಯಾಚ್ ರೆಫರಿ ತಕ್ಷಣವೇ ರೆಡ್ ಕಾರ್ಡ್ ನೀಡುವ ಮೂಲಕ ಅಲ್ಮಿರೋನ್ ಅವರನ್ನು ಮೈದಾನದಿಂದ ಹೊರಗೆ ಕಳುಹಿಸಿದ್ದಾರೆ.

Published On - 11:30 am, Tue, 23 June 26

Follow Us
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ