AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕ-ಇರಾನ್ ಮಹತ್ವದ ಮಾತುಕತೆ ಮುಕ್ತಾಯ: ಪರಮಾಣು ಬಿಕ್ಕಟ್ಟು, ಆರ್ಥಿಕ ನಿರ್ಬಂಧಗಳ ಇತ್ಯರ್ಥಕ್ಕೆ ಜಂಟಿ ಕಾರ್ಯಪಡೆ ರಚನೆ

TV9 Kannada News: ಅಮೆರಿಕ-ಇರಾನ್ ನಡುವೆ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಮಹತ್ವದ ಮಾತುಕತೆ ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಪರಮಾಣು ಬಿಕ್ಕಟ್ಟು ಮತ್ತು ಆರ್ಥಿಕ ನಿರ್ಬಂಧಗಳ ಇತ್ಯರ್ಥಕ್ಕೆ ಜಂಟಿ ಕಾರ್ಯಪಡೆ ರಚಿಸಲು ಉಭಯ ದೇಶಗಳು ಒಪ್ಪಿವೆ. ಅಮೆರಿಕದಿಂದ ಕೃಷಿ ಉತ್ಪನ್ನಗಳ ಖರೀದಿಗೆ ಇರಾನ್‌ನ ಹೆಪ್ಪುಗಟ್ಟಿದ ಹಣ ಬಿಡುಗಡೆ ಮಾಡಲು ಚರ್ಚಿಸಲಾಗಿದೆ. ಇದು ಭವಿಷ್ಯದ ಒಪ್ಪಂದಕ್ಕೆ ಭದ್ರ ಅಡಿಪಾಯ ಹಾಕಿದೆ. ಲೆಬನಾನ್ ಸಂಘರ್ಷವೂ ಚರ್ಚೆಯಾಗಿದೆ.

ಅಮೆರಿಕ-ಇರಾನ್ ಮಹತ್ವದ ಮಾತುಕತೆ ಮುಕ್ತಾಯ: ಪರಮಾಣು ಬಿಕ್ಕಟ್ಟು, ಆರ್ಥಿಕ ನಿರ್ಬಂಧಗಳ ಇತ್ಯರ್ಥಕ್ಕೆ ಜಂಟಿ ಕಾರ್ಯಪಡೆ ರಚನೆ
ಅಮೆರಿಕ-ಇರಾನ್Image Credit source: Reuters
ನಯನಾ ರಾಜೀವ್
| Edited By: |

Updated on:Jun 23, 2026 | 1:59 PM

Share

ಟೆಹ್ರಾನ್, ಜೂನ್ 23: ಜಾಗತಿಕವಾಗಿ ತೀವ್ರ ಕುತೂಹಲ ಮೂಡಿಸಿದ್ದ ಅಮೆರಿಕ(America) ಮತ್ತು ಇರಾನ್ ನಡುವಿನ ತಾಂತ್ರಿಕ ಮಟ್ಟದ ರಾಜತಾಂತ್ರಿಕ ಮಾತುಕತೆಗಳು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿವೆ. ಉಭಯ ದೇಶಗಳ ನಡುವಿನ ಪರಮಾಣು ಬಿಕ್ಕಟ್ಟು ಮತ್ತು ಅಮೆರಿಕ ವಿಧಿಸಿರುವ ಕಠಿಣ ಆರ್ಥಿಕ ನಿರ್ಬಂಧಗಳನ್ನು ಬಗೆಹರಿಸಲು ವಿಶೇಷ ಜಂಟಿ ಕಾರ್ಯಪಡೆ ರಚಿಸಲು ಎರಡೂ ದೇಶಗಳು ಒಪ್ಪಿಗೆ ನೀಡಿವೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಹೇಳಿವೆ.

ಪಾಕಿಸ್ತಾನ ಮತ್ತು ಕತಾರ್ ದೇಶಗಳ ಜಂಟಿ ಮಧ್ಯಸ್ಥಿಕೆಯಲ್ಲಿ ಭಾನುವಾರದಿಂದ ಸೋಮವಾರದ ಮುಂಜಾನೆಯವರೆಗೆ ಈ ಸುದೀರ್ಘ ಚರ್ಚೆಗಳು ನಡೆದಿವೆ. ಮಾತುಕತೆಯಲ್ಲಿ ಭಾಗವಹಿಸಿದ್ದ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಈ ಕುರಿತು ಪ್ರತಿಕ್ರಿಯಿಸಿದ್ದು, ಈ ಚರ್ಚೆಗಳು ಭವಿಷ್ಯದ ಅಂತಿಮ ಒಪ್ಪಂದಕ್ಕೆ ಗಟ್ಟಿಯಾದ ಅಡಿಪಾಯವನ್ನು ಹಾಕಿವೆ. ಅಂತಿಮ ಒಪ್ಪಂದ ಎನ್ನುವುದು ಒಂದು ಸುಂದರವಾದ ಮನೆ ಇದ್ದಂತೆ. ನಾವು ಸದ್ಯಕ್ಕೆ ಅದಕ್ಕೆ ಬೇಕಾದ ಅಡಿಪಾಯವನ್ನು ಮಾತ್ರ ಹಾಕಿದ್ದೇವೆ, ಇನ್ನೂ ಪೂರ್ಣ ಪ್ರಮಾಣದ ಮನೆ ನಿರ್ಮಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಉಭಯ ದೇಶಗಳ ನಾಯಕರು ಒಪ್ಪಿಕೊಂಡಿರುವ 60 ದಿನಗಳ ಕಾಲಮಿತಿಯ ಮಾರ್ಗಸೂಚಿಯ ಅಡಿಯಲ್ಲಿ ಈ ಮಾತುಕತೆಗಳು ನಡೆಯುತ್ತಿವೆ. ಈ ವಾರವೂ ಚರ್ಚೆಗಳು ಮುಂದುವರೆಯಲಿವೆ. ಇರಾನ್‌ನ ಫ್ರೋಜನ್  ಆಸ್ತಿಗಳನ್ನು ಬಿಡುಗಡೆ ಮಾಡುವ ಪ್ರಮುಖ ಪ್ರಸ್ತಾಪದ ಬಗ್ಗೆ ಚರ್ಚಿಸಲಾಗಿದೆ. ಆದರೆ ಈ ಹಣವನ್ನು ಇರಾನ್ ನೇರವಾಗಿ ಬಳಸುವಂತಿಲ್ಲ. ಬದಲಿಗೆ, ಅಮೆರಿಕದಿಂದ ಸೋಯಾಬಿನ್, ಜೋಳ ಮತ್ತು ಗೋಧಿ ಸೇರಿದಂತೆ ಅಗತ್ಯ ಕೃಷಿ ಉತ್ಪನ್ನಗಳನ್ನು ಖರೀದಿಸಲು ಮಾತ್ರ ಇದನ್ನು ಬಳಸಬಹುದು ಎಂದು ಅಮೆರಿಕ ಷರತ್ತು ವಿಧಿಸಿದೆ.

ಮತ್ತಷ್ಟು ಓದಿ: ಅಮೆರಿಕ ಸೋಲೊಪ್ಪಿಕೊಂಡಿದೆ ಎಂದ ಇರಾನ್

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರ ಪ್ರಕಾರ, ಇರಾನ್‌ಗೆ ಲೆಬನಾನ್ ಬಿಕ್ಕಟ್ಟು ಅತ್ಯಂತ ಪ್ರಮುಖವಾಗಿದೆ. ಇಸ್ರೇಲ್ ಮತ್ತು ಹೆಜ್ಬೊಲ್ಲಾ ನಡುವಿನ ಕದನ ವಿರಾಮವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಪ್ರಗತಿ ಸಾಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಮಾತುಕತೆಯ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಲೆಬನಾನ್‌ನಲ್ಲಿ ಉಗ್ರ ಗುಂಪುಗಳನ್ನು ಬೆಂಬಲಿಸದಂತೆ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿದ್ದರು. ಟ್ರಂಪ್ ಅವರ ಈ ಅವಮಾನಕರ ಸಂದೇಶದಿಂದಾಗಿ ಇರಾನ್ ಮಾತುಕತೆಯನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಿತ್ತು. ಆದರೆ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಮಧ್ಯಸ್ಥಿಕೆಯಿಂದಾಗಿ ಉದ್ವಿಗ್ನತೆ ಶಮನಗೊಂಡು, ಮಾತುಕತೆಗಳು ತಡರಾತ್ರಿಯವರೆಗೂ ಮುಂದುವರೆದು ಯಶಸ್ವಿಯಾಗಿ ಮುಕ್ತಾಯಗೊಂಡವು.

ಇದರೊಂದಿಗೆ, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಬಗ್ಗೆಯೂ ಉಭಯ ದೇಶಗಳು ಸಹಮತ ವ್ಯಕ್ತಪಡಿಸಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:33 pm, Tue, 23 June 26

Follow Us
ಪೀಣ್ಯದಲ್ಲಿ ಪುಡಿ ರೌಡಿಗಳ ಪುಂಡಾಟ, ಕಲ್ಲು ತೂರಿ ಕಾರು ಧ್ವಂಸ!
ಪೀಣ್ಯದಲ್ಲಿ ಪುಡಿ ರೌಡಿಗಳ ಪುಂಡಾಟ, ಕಲ್ಲು ತೂರಿ ಕಾರು ಧ್ವಂಸ!
ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಕೇರಳದ ಪ್ರವಾಹದಲ್ಲಿ ಮಣಪ್ಪುರಂ ಶಿವ ದೇವಾಲಯ ಮುಳುಗಡೆ
ಕೇರಳದ ಪ್ರವಾಹದಲ್ಲಿ ಮಣಪ್ಪುರಂ ಶಿವ ದೇವಾಲಯ ಮುಳುಗಡೆ
ಸಂಪುಟ ವಿಸ್ತರಣೆ ಗೊಂದಲದ ನಡುವೆ ಡಿಕೆ ಶಿವಕುಮಾರ್ ಸ್ಪಷ್ಟನೆ
ಸಂಪುಟ ವಿಸ್ತರಣೆ ಗೊಂದಲದ ನಡುವೆ ಡಿಕೆ ಶಿವಕುಮಾರ್ ಸ್ಪಷ್ಟನೆ
ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಕೋಲಾರಕ್ಕೆ ಮೋಸ ಮಾಡಿದ್ದಾರೆ: ನಾರಾಯಣಸ್ವಾಮಿ
ಖರ್ಗೆ, ಸಿದ್ದರಾಮಯ್ಯ, ಡಿಕೆಶಿ ಕೋಲಾರಕ್ಕೆ ಮೋಸ ಮಾಡಿದ್ದಾರೆ: ನಾರಾಯಣಸ್ವಾಮಿ
‘ನಾನು ಬೇಗ ಮದುವೆ ಆದೆ; ಅನೇಕ ಹೀರೋಗಳ ಜತೆ ನಟಿಸೋಕೆ ಆಗಲಿಲ್ಲ’: ಪ್ರಿಯಾಂಕಾ
‘ನಾನು ಬೇಗ ಮದುವೆ ಆದೆ; ಅನೇಕ ಹೀರೋಗಳ ಜತೆ ನಟಿಸೋಕೆ ಆಗಲಿಲ್ಲ’: ಪ್ರಿಯಾಂಕಾ
ಇಂಗ್ಲಿಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್
ಇಂಗ್ಲಿಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ ಸಚಿವ ಜಮೀರ್ ಅಹ್ಮದ್ ಖಾನ್
ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ
ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ
ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು
ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಗೈರು
ರೆಬೆಲ್ಸ್​​ ಸಭೆಯಲ್ಲಿ ಅಪ್ಪಾಜಿ ನಾಡಗೌಡ ಕಣ್ಣೀರು
ರೆಬೆಲ್ಸ್​​ ಸಭೆಯಲ್ಲಿ ಅಪ್ಪಾಜಿ ನಾಡಗೌಡ ಕಣ್ಣೀರು