MS Dhoni: ಒಂದೇ ಕೈಯಿಂದ ಸಿಕ್ಸ್ ಸಿಡಿಸಿ 11 ಎಸೆತಗಳಲ್ಲಿ ಪಂದ್ಯವನ್ನೇ ತಿರುಗಿಸಿದ ಧೋನಿ: ಸಿಎಸ್‌ಕೆಗೆ ಗೆಲುವು ತಂದುಕೊಟ್ಟಿದ್ದು ಹೀಗೆ

LSG vs CSK, IPL 2025: ಲಕ್ನೋ ವಿರುದ್ಧ ಸಿಎಸ್ಕೆ ತಂಡ ಗೆಲ್ಲಲು 30 ಎಸೆತಗಳಲ್ಲಿ 55 ರನ್ ಅಗತ್ಯವಿದ್ದಾಗ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ಗೆ ಬಂದರು. ಆದರೆ ಅದಾದ ನಂತರ ಧೋನಿ ಎಂತಹ ಇನ್ನಿಂಗ್ಸ್ ಆಡಿದರು ಎಂದರೆ ಪಂದ್ಯದ ಗತಿಯೇ ಬದಲಾಯಿತು. ಅವರು ಕೇವಲ 11 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 26 ರನ್ ಗಳಿಸಿ ಅಜೇಯರಾಗುಳಿದರು.

MS Dhoni: ಒಂದೇ ಕೈಯಿಂದ ಸಿಕ್ಸ್ ಸಿಡಿಸಿ 11 ಎಸೆತಗಳಲ್ಲಿ ಪಂದ್ಯವನ್ನೇ ತಿರುಗಿಸಿದ ಧೋನಿ: ಸಿಎಸ್‌ಕೆಗೆ ಗೆಲುವು ತಂದುಕೊಟ್ಟಿದ್ದು ಹೀಗೆ
Ms Dhoni Lsg Vs Csk

Updated on: Apr 15, 2025 | 9:52 AM

(ಬೆಂಗಳೂರು ಏ, 15): ಐಪಿಎಲ್ 2025 ರ 30 ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ, ಚೆನ್ನೈ ಸೂಪರ್ ಕಿಂಗ್ಸ್ (Lucknow Super Giants vs Chennai Super Kings) ತನ್ನ ಸೋಲಿನ ಸರಣಿಯನ್ನು ಮುರಿದು ಅದ್ಭುತ ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್‌ಜೈಂಟ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 166 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಸಿಎಸ್‌ಕೆ 19.3 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ಗುರಿಯನ್ನು ತಲುಪಿತು. ಈ ಗೆಲುವಿನಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರಮುಖ ಪಾತ್ರ ವಹಿಸಿದರು ಮತ್ತು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಶಿವಂ ದುಬೆ ಕೂಡ ಅವರಿಗೆ ಉತ್ತಮ ಬೆಂಬಲ ನೀಡಿದರು. ಇಬ್ಬರೂ ಒಟ್ಟಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಧೋನಿ ಕೇವಲ 11 ಎಸೆತಗಳಲ್ಲಿ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಈ ಗೆಲುವಿನ ಹೊರತಾಗಿಯೂ, ಚೆನ್ನೈ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ. ತಂಡ ಗೆಲ್ಲಲು 30 ಎಸೆತಗಳಲ್ಲಿ 55 ರನ್ ಅಗತ್ಯವಿದ್ದಾಗ ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ಗೆ ಬಂದರು. ಆದರೆ ಅದಾದ ನಂತರ ಧೋನಿ ಎಂತಹ ಇನ್ನಿಂಗ್ಸ್ ಆಡಿದರು ಎಂದರೆ ಪಂದ್ಯದ ಗತಿಯೇ ಬದಲಾಯಿತು. ಅವರು ಕೇವಲ 11 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 26 ರನ್ ಗಳಿಸಿ ಅಜೇಯರಾಗುಳಿದರು.

ಇದನ್ನೂ ಓದಿ
ಕೇವಲ 26 ರನ್ ಗಳಿಸಿದ ಧೋನಿಗೆ ಪಂದ್ಯಶ್ರೇಷ್ಠ ಸಿಕ್ಕಿದ್ದು ಏಕೆ?
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಐಪಿಎಲ್​ನಿಂದ ಹೊರಬಿದ್ದ ಪಂಜಾಬ್ ತಂಡದ ಸ್ಟಾರ್ ವೇಗಿ

ಧೋನಿ ಒಂದೇ ಕೈಯಿಂದ ಸಿಕ್ಸ್ ಸಿಡಿಸಿದ್ದು ನೋಡಲು ಅಮೋಘವಾಗಿತ್ತು. ಅವರು ಇಂಪ್ಯಾಕ್ಟ್ ಪ್ಲೇಯರ್ ಶಿವಂ ದುಬೆ ಅವರೊಂದಿಗೆ 27 ಎಸೆತಗಳಲ್ಲಿ 56 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ದುಬೆ 37 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 43 ರನ್ ಗಳಿಸಿ ಅಜೇಯರಾಗುಳಿದರು. ಇದು ಸಿಎಸ್‌ಕೆ ಆಡಿದ 7 ಪಂದ್ಯಗಳಲ್ಲಿ ಎರಡನೇ ಗೆಲುವು. ಆದರೆ ಅವರು ಇನ್ನೂ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಎಲ್‌ಎಸ್‌ಜಿ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

 

ಧೋನಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು:

ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ನಾಯಕ ಅದ್ಭುತ ಆಟ ಪ್ರದರ್ಶಿಸಿದರು. ಪಂದ್ಯದುದ್ದಕ್ಕೂ ಅವರು ಒಂದು ಕ್ಯಾಚ್, ಒಂದು ಸ್ಟಂಪಿಂಗ್ ಮತ್ತು ಒಂದು ರನೌಟ್ ಮಾಡಿದರು. ತಮ್ಮ ಚುರುಕುತನದಿಂದ ಎಲ್ಲರನ್ನೂ ಬೆರಗುಗೊಳಿಸಿದರು. ಲಕ್ನೋ ಸೂಪರ್ ಜೈಂಟ್ಸ್ ಇನ್ನಿಂಗ್ಸ್‌ನಲ್ಲಿ 20 ನೇ ಓವರ್‌ನ ಮೊದಲ ಎಸೆತದಲ್ಲಿ ಅಬ್ದುಲ್ ಸಮದ್ ಅವರನ್ನು ಅದ್ಭುತವಾಗಿ ಔಟ್ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತು.

MS Dhoni: ಪಂತ್-ದುಬೆ ಅಲ್ಲ: ಕೇವಲ 26 ರನ್ ಗಳಿಸಿದ ಧೋನಿಗೆ ಪಂದ್ಯಶ್ರೇಷ್ಠ ಸಿಕ್ಕಿದ್ದು ಏಕೆ ಗೊತ್ತೇ?

ಇದಾದ ನಂತರ, ಅವರು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಸತತ ಐದು ಪಂದ್ಯಗಳ ಸೋಲಿನ ಸರಣಿಯನ್ನು ಮುರಿದರು. ಪಂದ್ಯದ ವೇಳೆ, ಸಿಎಸ್‌ಕೆ ನಾಯಕ ಧೋನಿ ಅವರು ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಆಯುಷ್ ಬಡೋನಿಯನ್ನು ಸ್ಟಂಪ್ ಔಟ್ ಮಾಡುವ ಮೂಲಕ ಐಪಿಎಲ್‌ನಲ್ಲಿ ತಮ್ಮ 200 ನೇ ವಿಕೆಟ್ ಪಡೆದರು. ಅವರು ಈ ಸಾಧನೆ ಮಾಡಿದ ಮೊದಲ ಐಪಿಎಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ