AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರೋಬ್ಬರಿ 504 ರನ್​ಗಳ ಅಮೋಘ ಜಯ: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ

Yorkshire vs Worcestershire: ಕೌಂಟಿ ಚಾಂಪಿಯನ್​ಶಿಪ್​ ಪಂದ್ಯದಲ್ಲಿ ಅಮೋಘ ಗೆಲುವು ದಾಖಲಿಸಿ ಯಾರ್ಕ್​ಶೈರ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಅದು ಸಹ ವೋರ್ಸೆಸ್ಟರ್‌ಶೈರ್ ತಂಡವನ್ನು 504 ರನ್​ಗಳ ಅಂತರದಿಂದ ಮಣಿಸುವ ಮೂಲಕ ಎಂಬುದು ವಿಶೇಷ. ಇದು ಕೌಂಟಿ ಕ್ರಿಕೆಟ್​ನಲ್ಲಿ ಮೂಡಿಬಂದ ಅತೀ ಅಂತರದ ಗೆಲುವುದಾಗಿದೆ.

ಬರೋಬ್ಬರಿ 504 ರನ್​ಗಳ ಅಮೋಘ ಜಯ: ಕೌಂಟಿ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ
Yorkshire
ಝಾಹಿರ್ ಯೂಸುಫ್
|

Updated on: Apr 15, 2025 | 12:32 PM

Share

ಕೌಂಟಿ ಕ್ರಿಕೆಟ್​ ಚಾಂಪಿಯನ್​ಶಿಪ್​ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಅದು ಸಹ 504 ರನ್​ಗಳ ಅಮೋಘ ಜಯದೊಂದಿಗೆ ಎಂಬುದು ವಿಶೇಷ. ಇಂಗ್ಲೆಂಡ್​ನ ಲೀಡ್ಸ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೋರ್ಸೆಸ್ಟರ್‌ಶೈರ್ ಹಾಗೂ ಯಾರ್ಕ್​ಶೈರ್ (Yorkshire) ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ವೋರ್ಸೆಸ್ಟರ್‌ಶೈರ್ ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ಯಾರ್ಕ್​ಶೈರ್ ಪರ ಡೇವಿಡ್ ಮಲಾನ್ 98 ರನ್ ಬಾರಿಸಿದರು. ಇನ್ನು ಜಾರ್ಜ್ ಹಿಲ್ 67 ಹಾಗೂ ಜಾನ್ಸನ್ ಥಾಂಪ್ಸನ್ 70 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಮೊದಲ ಇನಿಂಗ್ಸ್​ನಲ್ಲಿ ಯಾರ್ಕ್​ಶೈರ್ 456 ರನ್ ಕಲೆಹಾಕಿತು.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಶುರು ಮಾಡಿದ ವೋರ್ಸೆಸ್ಟರ್‌ಶೈರ್ ತಂಡಕ್ಕೆ ಜೇಬ್ ಲಿಬ್ಬಿ (53) ಉತ್ತಮ ಆರಂಭ ಒದಗಿಸಿದ್ದರು. ಆದರೆ ಇತರೆ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ 166 ರನ್​ಗಳಿಸಿ ವೋರ್ಸೆಸ್ಟರ್‌ಶೈರ್ ತಂಡ ಆಲೌಟ್ ಆಗಿದೆ.

ಇದನ್ನೂ ಓದಿ
Image
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
Image
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
Image
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
Image
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ದ್ವಿತೀಯ ಇನಿಂಗ್ಸ್:

294 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಯಾರ್ಕ್​ಶೈರ್ ತಂಡದ ಪರ ಡಾಮ್ ಬೆಸ್ 117 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 13 ಫೋರ್​ಗಳೊಂದಿಗೆ 107 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ಮಲಾನ್ (76) ಆಕರ್ಷಕ ಅರ್ಧಶತಕ ಸಿಡಿಸಿದರು. ಈ ಮೂಲಕ ದ್ವಿತೀಯ ಇನಿಂಗ್ಸ್​ನಲ್ಲಿ 315 ರನ್​ ಕಲೆಹಾಕಿತು.

609 ರನ್​ಗಳ ಗುರಿ:

ಮೊದಲ ಇನಿಂಗ್ಸ್​ನಲ್ಲಿನ 294 ರನ್​ಗಳ ಹಿನ್ನಡೆಯೊಂದಿಗೆ ವೋರ್ಸೆಸ್ಟರ್‌ಶೈರ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಬರೋಬ್ಬರಿ 609 ರನ್​ಗಳ ಗುರಿ ಪಡೆಯಿತು. ಈ ಕಠಿಣ ಗುರಿ ಬೆನ್ನತ್ತಿದ ವೋರ್ಸೆಸ್ಟರ್‌ಶೈರ್​ಗೆ ಜಾರ್ಜ್ ಹಿಲ್ ಆರಂಭಿಕ ಆಘಾತ ನೀಡಿದರು.

7.1 ಓವರ್​ಗಳನ್ನು ಎಸೆದ ಜಾರ್ಜ್ ಹಿಲ್ ಕೇವಲ 23 ರನ್ ನೀಡಿ 4 ವಿಕೆಟ್ ಕಬಳಿಸಿದರು. ಪರಿಣಾಮ ಕೇವಲ 105 ರನ್​ಗಳಿಗೆ ವೋರ್ಸೆಸ್ಟರ್‌ಶೈರ್ ತಂಡ ಆಲೌಟ್ ಆಗಿದೆ. ಈ ಮೂಲಕ ಯಾರ್ಕ್​​ಶೈರ್ ತಂಡ ಬರೋಬ್ಬರಿ 504 ರನ್​ಗಳ ಜಯ ಸಾಧಿಸಿದೆ.

ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಹೊಸ ಇತಿಹಾಸ:

ಕೌಂಟಿ ಚಾಂಪಿಯನ್​ಶಿಪ್​ನಲ್ಲಿ ಇದು ಸರ್ವಶ್ರೇಷ್ಠ ಗೆಲುವುದಾಗಿದೆ. ಇದಕ್ಕೂ ಮುನ್ನ ಸರ್ರೆ ತಂಡವು 483 ರನ್​ಗಳ ಜಯ ಸಾಧಿಸಿದ್ದು ದಾಖಲೆಯಾಗಿತ್ತು. 2002 ರಲ್ಲಿ ಲೀಸೆಸ್ಟರ್‌ಶೈರ್ ವಿರುದ್ಧ ಸರ್ರೆ ತಂಡವು 483 ರನ್​ಗಳ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದರು.

ಇದೀಗ ವೋರ್ಸೆಸ್ಟರ್‌ಶೈರ್ ವಿರುದ್ಧ ಬರೋಬ್ಬರಿ 504 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಯಾರ್ಕ್​ಶೈರ್ ತಂಡವು ಕೌಂಟಿ ಚಾಂಪಿಯನ್​ಶಿಪ್​ ಟೂರ್ನಿಯಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.

ಯಾರ್ಕ್​​ಶೈರ್ ಪ್ಲೇಯಿಂಗ್ 11: ಆಡಮ್ ಲಿತ್ , ಫಿನ್ಲೇ ಬೀನ್ , ಜೇಮ್ಸ್ ವಾರ್ಟನ್ , ಡೇವಿಡ್ ಮಲಾನ್ , ವಿಲಿಯಂ ಲಕ್ಸ್ಟನ್ , ಜಾನಿ ಬೈರ್‌ಸ್ಟೋ (ನಾಯಕ) , ಜಾರ್ಜ್ ಹಿಲ್ , ಡೊಮಿನಿಕ್ ಬೆಸ್ , ಬೆನ್ ಕೋಡ್ , ಜೋರ್ಡಾನ್ ಥಾಂಪ್ಸನ್ , ಜ್ಯಾಕ್ ವೈಟ್.

ಇದನ್ನೂ ಓದಿ: IPL 2025: ಪ್ಲೇಆಫ್​ಗೇರಲು ಯಾವ ತಂಡ ಎಷ್ಟು ಪಂದ್ಯ ಗೆಲ್ಲಬೇಕು?

ವೋರ್ಸೆಸ್ಟರ್‌ಶೈರ್ ಪ್ಲೇಯಿಂಗ್ 11: ಗ್ಯಾರೆತ್ ರೋಡೆರಿಕ್ (ವಿಕೆಟ್ ಕೀಪರ್), ಜೇಕ್ ಲಿಬ್ಬಿ , ಕಾಶಿಫ್ ಅಲಿ , ಎಥಾನ್ ಬ್ರೂಕ್ಸ್ , ಆಡಮ್ ಹೋಸ್ , ಬ್ರೆಟ್ ಡೊಲಿವೆರಾ (ನಾಯಕ) , ಮ್ಯಾಥ್ಯೂ ವೈಟ್ , ಟಾಮ್ ಟೇಲರ್ , ಬೆನ್ ಅಲಿಸನ್ , ಜೇಕಬ್ ಡಫಿ , ಆ್ಯಡಂ ಫಿಂಚ್.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ