ದಾನಿಶ್ ಸೇಠ್ ಮಾತಿಗೆ ಸಿಟ್ಟಾಗಿ ಎದ್ದೇ ಹೋದ ವಿರಾಟ್ ಕೊಹ್ಲಿ
ದಾನಿಶ್ ಸೇಠ್ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಅವರು ಸಿಟ್ಟಾಗಿ ಎದ್ದೇ ಹೋದ ಘಟನೆ ಚರ್ಚೆಯಾಗಿದೆ. ಸಂದರ್ಶನದಲ್ಲಿ ಆಧ್ಯಾತ್ಮಿಕತೆ ಕುರಿತು ಚರ್ಚೆ ನಡೆದಿದ್ದು, ಕೊಹ್ಲಿ ಅವರು ಧ್ಯಾನದ ಸಲಹೆಗಳನ್ನು ನೀಡಿದ್ದಾರೆ. ದಾನಿಶ್ ಅವರು ಕೊಹ್ಲಿಯನ್ನು ತಬ್ಬಿಕೊಳ್ಳಲು ಯತ್ನಿಸಿದಾಗ ಅವರಿಗೆ ಸಿಟ್ಟು ಬಂದಿದೆ.

ನಟ ದಾನಿಶ್ ಸೇಠ್ (Danish Sait) ಅವರು ಐಪಿಎಲ್ ಸಂದರ್ಭದಲ್ಲಿ ಆರ್ಸಿಬಿ ಇನ್ಸೈಡರ್ ಆಗಿ ಗಮನ ಸೆಳೆಯುತ್ತಾರೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರ ಜೊತೆ ಸಂದರ್ಶನಗಳನ್ನು ಮಾಡಿ ಹಂಚಿಕೊಳ್ಳುತ್ತಾರೆ. ಪ್ರತಿ ಸೀಸನ್ನಲ್ಲಿ ವಿರಾಟ್ ಕೊಹ್ಲಿ ಸಂದರ್ಶನ ಮಾಡುತ್ತಾರೆ. ಈ ಬಾರಿ ಆ ಸಂದರ್ಶನ ಇನ್ನೂ ಬಂದಿರಲಿಲ್ಲ. ಈಗ ದಾನಿಶ್ ಸೇಠ್ ಅವರು ವಿರಾಟ್ನ ಸಂದರ್ಶಿಸಿದ್ದಾರೆ. ಈ ವೇಳೆ ವಿರಾಟ್ ಸಿಟ್ಟಾಗಿ ಎದ್ದೇ ಹೋಗಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಆ ಬಗ್ಗೆ ಇಲ್ಲಿದೆ ವಿವರ.
ವಿರಾಟ್ ಕೊಹ್ಲಿ ಅವರು ಇತ್ತೀಚೆಗೆ ಆಧ್ಯಾತ್ಮದ ಕಡೆ ವಾಲಿದ್ದಾರೆ. ಪ್ರೇಮಾನಂದ ಗೋವಿಂದ ಶರಣ್ ಮಹಾರಾಜ್ ಹಾಗೂ ಬಾಬಾ ನೀಮ್ ಕರೋಲಿ ಮಂದಿರಕ್ಕೆ ಪತ್ನಿ ಜೊತೆ ತೆರಳಿ ಧ್ಯಾನ ಮಾಡಿದ್ದೂ ಇದೆ. ಈ ಕಾರಣಕ್ಕೆ ಇದೇ ಥೀಮ್ನಲ್ಲಿ ಸಂದರ್ಶನವನ್ನು ಆಯೋಜನೆ ಮಾಡಲಾಗಿತ್ತು ಅನ್ನೋದು ವಿಶೇಷ. ಸಂದರ್ಶನ ಉದ್ದಕ್ಕೂ ಆಧ್ಯತ್ಮದ ಬಗ್ಗೆ ಚರ್ಚೆಗಳು ನಡೆದಿವೆ. ಈ ವೇಳೆ ವಿರಾಟ್ ಕೆಲವು ಟಿಪ್ಸ್ ಕೊಟ್ಟಿದ್ದಾರೆ.
‘ನಿಮಗೆ ಕಂಫರ್ಟ್ ಆಗುವ ಆಸನದಲ್ಲಿ ಕುಳಿತುಕೊಳ್ಳಿ. ದೀರ್ಘವಾಗಿ ಮೂಗಿನ ಮೂಲಕ ಉಸಿರು ತೆಗೆದುಕೊಳ್ಳಿ, ಬಾಯಿ ಮೂಲಕ ಉಸಿರನ್ನು ಬಿಡಿ. ಸಮುದ್ರದ ಸೌಂಡ್ನ ಊಹಿಸಿಕೊಳ್ಳಿ’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಈ ರೀತಿಯ ಅನೇಕ ಟಿಪ್ಸ್ಗಳನ್ನು ಅವರು ನೀಡಿದ್ದಾರೆ. ಈ ವೇಳೆ ವಿರಾಟ್ ಕೊಹ್ಲಿಯನ್ನು ದಾನಿಶ್ ತಬ್ಬಿಕೊಂಡಿದ್ದಾರೆ. ಇದರಿಂದ ಕೊಹ್ಲಿ ಸಿಟ್ಟಾಗಿದ್ದಾರೆ.
‘ನೀವೇ ತಾನೇ ಪ್ರೀತಿ ಪಾತ್ರರಿಗೆ ಪ್ರೀತಿ ಕೊಡಿ ಎಂದು ಹೇಳಿದ್ದು’ ಎಂದು ದಾನಿಶ್ ಅವರು ಕೊಹ್ಲಿಗೆ ಕೇಳಿದ್ದಾರೆ. ‘ಸ್ನಾನ ಆದ ಬಳಿಕ ಬಂದು ನೀವು ಹಗ್ ಕೊಡಬೇಕು. ಸ್ನಾನ ಮಾಡದೆ ಬಂದಿದ್ದಕ್ಕೆ ನನ್ನ ಶಾಂತಿಯೆಲ್ಲ ಹಾಳಾಯಿತು. ನಾನು ಹೊಗಬೇಕು, ಸ್ನಾನ ಮಾಡಬೇಕು’ ಎಂದು ಕೊಹ್ಲಿ ಹೊರಟರು. ‘ಶಾಂತಿ ಕಾಪಾಡಿಕೊಳ್ಳಿ’ ಎಂದು ದಾನಿಶ್ ಕೋರಿದರು. ಆದರೆ ಕೊಹ್ಲಿ ಕೂಗಾಡುತ್ತಾ ಹೊರಟೇಬಿಟ್ಟರು.
ಇದನ್ನೂ ಓದಿ: ದ್ರಾವಿಡ್ ಊರುಗೋಲಿನ ಸಹಾಯದಿಂದ ಮೈದಾನಕ್ಕೆ ಬಂದಾಗ ವಿರಾಟ್ ಕೊಹ್ಲಿ ಏನು ಮಾಡಿದ್ರು ನೋಡಿ
ಅಂದಹಾಗೆ, ಇದು ಸಂಪೂರ್ಣವಾಗಿ ಸ್ಕ್ರಿಪ್ಟೆಡ್ ಕಾರ್ಯಕ್ರಮ. ವಿರಾಟ್ ಕೊಹ್ಲಿ ಸಿಟ್ಟು ಮಾಡಿಕೊಂಡಿದ್ದು ಕೂಡ ಸ್ಕ್ರಿಪ್ಟ್ನ ಒಂದು ಭಾಗ ಅಷ್ಟೇ. ಈ ಮೊದಲು ಕೂಡ ಕೊಹ್ಲಿ ಅವರು ದಾನಿಶ್ ಬಗ್ಗೆ ಸಿಟ್ಟಾದಂತೆ ನಟಿಸಿದ ಸಾಕಷ್ಟು ಉದಾಹರಣೆಗಳು ಇವೆ. ಆದರೆ, ಎಲ್ಲವೂ ಸ್ಕ್ರಿಪ್ಟ್ನ ಭಾಗ ಅಷ್ಟೇ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.