ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಪೂರನ್ಗೆ ಮುಂಬೈ ತಂಡದ ನಾಯಕತ್ವ
Nicholas Pooran Named MI New York Captain: ನಿಕೋಲಸ್ ಪೂರನ್ ಅವರು 2025ರ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡದ ನಾಯಕತ್ವ ವಹಿಸಲಿದ್ದಾರೆ. ಕಳೆದ ಎರಡು ಸೀಸನ್‌ಗಳಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದಾಗಿ ಈ ಹುದ್ದೆಗೆ ಆಯ್ಕೆಯಾಗಿದ್ದಾರೆ. ಪೂರನ್ ತಮ್ಮ ಆಟದಿಂದಾಗಿ ತಂಡವನ್ನು ಚಾಂಪಿಯನ್ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ಅವರು ಆಟಗಾರ ಮತ್ತು ನಾಯಕ ಎರಡೂ ಪಾತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಬೇಕಿದೆ.

ವೆಸ್ಟ್ ಇಂಡೀಸ್ನ ಸ್ಫೋಟಕ ದಾಂಡಿಗ ನಿಕೋಲಸ್ ಪೂರನ್ (Nicholas Pooran) ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಆದರೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಕೆಲವೇ ಗಂಟೆಗಳ ನಂತರ ಅವರಿಗೆ ನಾಯಕನ ಪಟ್ಟ ಸಿಕ್ಕಿದೆ. ಪೂರನ್ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರು ಟಿ20 ಕ್ರಿಕೆಟ್‌ನಲ್ಲಿ ಅವರ ಜನಪ್ರಿಯತೆ ಕೊಂಚವೂ ಕಡಿಮೆಯಾಗಿಲ್ಲ. ಈ ಹೊಡಿಬಡಿ ಆಟಕ್ಕೆ ಸೂಕ್ತವಾದ ಆಟಗಾರನಾಗಿ ಪೂರನ್ ಬೇರೆ ಬೇರೆ ದೇಶಗಳ ಟಿ20 ಲೀಗ್ಗಳಲ್ಲಿ ಸಕ್ರಿಯರಾಗಿದ್ದಾರೆ. ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿರುವ ಪೂರನ್, ಅಮೆರಿಕದನಲ್ಲಿ ನಡೆಯಲ್ಲಿರುವ ಮೂರನೇ ಆವೃತ್ತಿಯ MLC ಅಂದರೆ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ (Major League Cricket) ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ (MI New York) ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಪೂರನ್ಗೆ ಎಂಐ ನ್ಯೂಯಾರ್ಕ್ ನಾಯಕತ್ವ
ಕಳೆದೆರಡು ಸೀಸನ್‌ಗಳಲ್ಲಿ ಮುಂಬೈ ಇಂಡಿಯನ್ಸ್ ನ್ಯೂಯಾರ್ಕ್ ತಂಡದ ಪರವಾಗಿ ಆಡುತ್ತಿರುವ ಪೂರನ್ಗೆ ಇದೇ ಮೊದಲ ಬಾರಿಗೆ MI ನ್ಯೂಯಾರ್ಕ್ ತಂಡದ ನಾಯಕತ್ವ ನೀಡಲಾಗಿದೆ. ಈ ಮೊದಲು ತಂಡವನ್ನು ಮುನ್ನಡೆಸಿದ್ದ ಕೀರನ್ ಪೊಲಾರ್ಡ್ ಬದಲಿಗೆ MI ನ್ಯೂಯಾರ್ಕ್ ತಂಡದ ಹೊಸ ನಾಯಕನನ್ನಾಗಿ ಪೂರನ್ ಅವರನ್ನು ಆಯ್ಕೆಮಾಡಲಾಗಿದೆ.
🚨 From retirement to leadership! 🇺🇸💙Just days after bidding farewell to international cricket, Nicholas Pooran has been named captain of MI New York for MLC 2025. pic.twitter.com/vLsSdmFJty
— CricketGully (@thecricketgully) June 11, 2025
IPL 2025: ಸುಮ್ಮನಿದ್ದ ಪೂರನ್ನ ಕೆಣಕಿ ಇಂಗು ತಿಂದ ಮಂಗನಂತಾದ ಸಿರಾಜ್; ವಿಡಿಯೋ ನೋಡಿ
ತಂಡದ ಪರ ಮಿಂಚಿರುವ ಪೂರನ್
ನಿಕೋಲಸ್ ಪೂರನ್ ಕಳೆದ 2 ಸೀಸನ್‌ಗಳಲ್ಲಿ ಎಂಐ ನ್ಯೂಯಾರ್ಕ್ ಪರ 15 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 39 ಸಿಕ್ಸರ್‌ಗಳು ಮತ್ತು 38 ಬೌಂಡರಿಗಳ ಸಹಿತ 1 ಶತಕ ಮತ್ತು 3 ಅರ್ಧಶತಕಗಳೊಂದಿಗೆ 568 ರನ್ ಕಲೆಹಾಕಿದ್ದಾರೆ. 2023 ರ ಆವೃತ್ತಿಯಲ್ಲಿ ತಂಡದ ಪರ ಅಬ್ಬರಿಸಿದ್ದ ಪೂರನ್, ಈ ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮಾತ್ರವಲ್ಲದೆ ತಮ್ಮ ಬ್ಯಾಟ್‌ನಿಂದ ಅತಿ ಹೆಚ್ಚು 34 ಸಿಕ್ಸರ್‌ಗಳನ್ನು ಬಾರಿಸಿದರು.
ಪೂರನ್ ಅವರ ಈ ಅಮೋಘ ಆಟದಿಂದಾಗಿ MI ನ್ಯೂಯಾರ್ಕ್ ತಂಡ 2023 ರ ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಸಿಯಾಟಲ್ ಓರ್ಕಾಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ನಿಕೋಲಸ್ ಪೂರನ್ ಕೇವಲ 55 ಎಸೆತಗಳಲ್ಲಿ 249 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 137 ರನ್ ಗಳಿಸಿದರು. ಅವರ ಅಬ್ಬರದ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳು ಮತ್ತು 13 ಸಿಕ್ಸರ್‌ಗಳು ಸೇರಿದ್ದವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ