Pakistan vs England: ಇಂಗ್ಲೆಂಡ್ ತಂಡ ತಂಗಿದ್ದ ಹೊಟೇಲ್ ಬಳಿ ಗುಂಡಿನ ದಾಳಿ: ಪಾಕ್​ನಲ್ಲಿ ಆಂಗ್ಲರಿಗೆ ಆತಂಕ

PAK vs ENG: ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಈ ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ ತಂಡವು 74 ರನ್​ಗಳಿಂದ ಗೆದ್ದುಕೊಂಡಿತು.

Pakistan vs England: ಇಂಗ್ಲೆಂಡ್ ತಂಡ ತಂಗಿದ್ದ ಹೊಟೇಲ್ ಬಳಿ ಗುಂಡಿನ ದಾಳಿ: ಪಾಕ್​ನಲ್ಲಿ ಆಂಗ್ಲರಿಗೆ ಆತಂಕ
England Team
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 08, 2022 | 9:55 PM

Pakistan vs England: 17 ವರ್ಷಗಳ ಬಳಿಕ ಪಾಕಿಸ್ತಾನ್ ವಿರುದ್ಧ ಸರಣಿ ಆಡಲು ತೆರಳಿರುವ ಇಂಗ್ಲೆಂಡ್ ತಂಡಕ್ಕೆ ಇದೀಗ ಆತಂಕ ಎದುರಾಗಿದೆ. ಮುಲ್ತಾನ್​ನಲ್ಲಿ​ ಇಂಗ್ಲೆಂಡ್ ತಂಡವು ತಂಗಿದ್ದ ಹೊಟೇಲ್ ಬಳಿಯೇ ಗುಂಡಿನ ದಾಳಿಗಳು ನಡೆದಿವೆ. 2ನೇ ಟೆಸ್ಟ್ ಪಂದ್ಯವಾಡಲು ಆಂಗ್ಲರ ಪಡೆ ಮುಲ್ತಾನ್​ಗೆ ಆಗಮಿಸಿದ್ದರು. ಇದೀಗ ಇಂಗ್ಲೆಂಡ್ ಆಟಗಾರರು ತಂಗಿರುವ ಹೊಟೇಲ್​ ಬಳಿ ಗುಂಡಿನ ಚಕಮಕಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸ್ಥಳೀಯ ಗ್ಯಾಂಗ್ ನಡುವೆ ಈ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಎರಡನೇ ಟೆಸ್ಟ್‌ಗೆ ತಯಾರಿ ನಡೆಸಲು ಇಂಗ್ಲೆಂಡ್ ತಂಡ ಹೋಟೆಲ್‌ನಿಂದ ಮುಲ್ತಾನ್ ಸ್ಟೇಡಿಯಂಗೆ ಹೊರಡಲಿರುವ ಸಮಯದಲ್ಲಿ ಈ ಘಟನೆ ನಡೆದಿದ್ದು, ಇದಾಗ್ಯೂ ಆಟಗಾರರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ್ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಈ ಘಟನೆಯು ಆಟಗಾರರ ಸುರಕ್ಷತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸ್ಥಳೀಯ ಆಡಳಿತವು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಭರವಸೆ ನೀಡಿದೆ. ಅಲ್ಲದೆ ಇಂಗ್ಲೆಂಡ್ ಆಟಗಾರರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹಾಗೆಯೇ ಮುಲ್ತಾನ್​ನಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯವನ್ನು ಬಿಗಿ ಭದ್ರತೆಯೊಂದಿಗೆ ನಡೆಸಲು ಪಿಸಿಬಿ ನಿರ್ಧರಿಸಿದೆ.

ಸದ್ಯ ಇಂಗ್ಲೆಂಡ್ ತಂಡಕ್ಕೆ ಪಾಕಿಸ್ತಾನದಲ್ಲಿ ದೇಶದ ಅಧ್ಯಕ್ಷರಿಗೆ ನೀಡಲಾಗುವ ಮಟ್ಟದ ಭದ್ರತೆ ನೀಡಲಾಗಿದೆ. ಆಟಗಾರರ ಭದ್ರತೆಗೆ ಸ್ಥಳೀಯ ಪೊಲೀಸರಲ್ಲದೆ ಸೇನೆಯನ್ನೂ ನಿಯೋಜಿಸಲಾಗಿದೆ. ಘಟನೆಯ ನಂತರ ತಂಡದ ಭದ್ರತಾ ಯೋಜನೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ವಕ್ತಾರರು ಖಚಿತಪಡಿಸಿದ್ದಾರೆ.

ಇದನ್ನೂ ಓದಿ
Image
IPL 2023: RCB ಈ ನಾಲ್ವರು ಆಟಗಾರರ ಖರೀದಿಗೆ ಮುಂದಾಗಬಹುದು..!
Image
IPL 2023: ಈ ಬಾರಿಯ ಐಪಿಎಲ್​ನಿಂದ 5 ಆಟಗಾರರು ಔಟ್..!
Image
IPL 2023 Mini Auction: ಐಪಿಎಲ್ ಮಿನಿ ಹರಾಜು ಲೀಸ್ಟ್ ಔಟ್: ಯಾವ ದೇಶದಿಂದ ಎಷ್ಟು ಆಟಗಾರರು?
Image
New Record: ಅತ್ಯಧಿಕ ಟೆಸ್ಟ್ ಶತಕ: ಕೊಹ್ಲಿ, ರೂಟ್​ರನ್ನು ಹಿಂದಿಕ್ಕಿದ ಸ್ಟೀವ್ ಸ್ಮಿತ್

ಇದನ್ನೂ ಓದಿ: IPL 2023: ಐಪಿಎಲ್ ಸೀಸನ್ 16 ಗೆ ಡೇಟ್ ಫಿಕ್ಸ್?

ಇದಕ್ಕೂ ಮುನ್ನ, ಕಳೆದ ವರ್ಷ ನ್ಯೂಜಿಲೆಂಡ್ ಕ್ರಿಕೆಟ್ ತಂಡವು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪಂದ್ಯವನ್ನು ಆಡದೆ ಪಾಕಿಸ್ತಾನದಿಂದ ತವರಿಗೆ ಮರಳಿತ್ತು. ಇದೀಗ 17 ವರ್ಷಗಳ ಬಳಿಕ ಪಾಕ್ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡಕ್ಕೆ ಭದ್ರತಾ ಭೀತಿ ಎದುರಾಗಿದೆ. ಹೀಗಾಗಿ ಇಂಗ್ಲೆಂಡ್ ತಂಡವು ಸರಣಿಯನ್ನು ಮುಂದುವರೆಸಲಿದ್ದಾರಾ ಕಾದು ನೋಡಬೇಕಿದೆ.

ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು, ಈ ಸರಣಿಯ ಮೊದಲ ಪಂದ್ಯವನ್ನು ಇಂಗ್ಲೆಂಡ್ ತಂಡವು 74 ರನ್​ಗಳಿಂದ ಗೆದ್ದುಕೊಂಡಿತು. ಇದೀಗ 2ನೇ ಪಂದ್ಯಕ್ಕಾಗಿ ಮುಲ್ತಾನ್​ನಲ್ಲಿ ಉಭಯ ತಂಡಗಳು ಬಂದಿಳಿದೆ. ಇದರ ಬೆನ್ನಲ್ಲೇ ಭದ್ರತಾ ಲೋಪಗಳಿರುವುದು ಪಾಕ್ ಕ್ರಿಕೆಟ್ ಮಂಡಳಿಯನ್ನು ಮತ್ತೆ ತಲೆ ತಗ್ಗಿಸುವಂತೆ ಮಾಡಿದೆ.

ಇದನ್ನೂ ಓದಿ: Shreyas Iyer: ಕೆಎಲ್ ರಾಹುಲ್ ದಾಖಲೆ ಉಡೀಸ್ ಮಾಡಿದ ಶ್ರೇಯಸ್ ಅಯ್ಯರ್

ಏಕೆಂದರೆ ಪಾಕಿಸ್ತಾನದಲ್ಲಿ ನಡೆಯಲಿರುವ ಮುಂಬರುವ ಏಷ್ಯಾಕಪ್​ನಲ್ಲಿ ಟೀಮ್ ಇಂಡಿಯಾ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ತಿಳಿಸಿತ್ತು. ಪಾಕ್​ನಲ್ಲಿ ಭಾರತದ ಸುರಕ್ಷತಾ ಕೊರತೆಯ ಭೀತಿಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಬಿಸಿಸಿಐ ಹೇಳಿತ್ತು. ಇದಾಗ್ಯೂ ತಮ್ಮ ದೇಶದಲ್ಲಿ ಯಾವುದೇ ಭದ್ರತಾ ವೈಫಲ್ಯವಿಲ್ಲ ಎಂದು ಪಾಕ್ ಕ್ರಿಕೆಟ್ ಮಂಡಳಿ ವಾದಿಸಿತ್ತು. ಇದೀಗ ಇಂಗ್ಲೆಂಡ್ ಆಟಗಾರರು ತಂಗಿರುವ ಹೊಟೇಲ್ ಬಳಿಯೇ ಗುಂಡಿನ ಚಕಮಕಿ ನಡೆದಿರುವುದು ಪಿಸಿಬಿಯನ್ನು ಮುಜುಗರಕ್ಕೀಡು ಮಾಡಿದೆ.