AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK, Asia Cup: ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಗೆ ಬಂದ ಪಾಕಿಸ್ತಾನ ಕೋಚ್: ಬೇಸರದಲ್ಲಿ ಏನು ಹೇಳಿದ್ರು ನೋಡಿ

Pakistan Coach Press Conference: ಏಷ್ಯಾಕಪ್‌ನಲ್ಲಿ ಭಾರತ ಪಾಕಿಸ್ತಾನವನ್ನು 7-0 ಅಂತರದಿಂದ ಸೋಲಿಸಿತು. ಟೀಮ್ ಇಂಡಿಯಾದ ಈ ಗೆಲುವಿನ ನಂತರ, ಹ್ಯಾಂಡ್‌ಶೇಕ್ ವಿವಾದ ಈಗ ಸುದ್ದಿಯಲ್ಲಿದೆ. ಪಾಕಿಸ್ತಾನ ನಾಯಕ ಏಕೆ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ಗೆ ಕೂಡ ಬರಲಿಲ್ಲ. ಇದೀಗ ಪಾಕಿಸ್ತಾನ ತಂಡದ ಕೋಚ್ ಮೈಕ್ ಹೆಸ್ಸನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

IND vs PAK, Asia Cup: ಪಂದ್ಯ ಮುಗಿದ ಬಳಿಕ ಪತ್ರಿಕಾಗೋಷ್ಠಿಗೆ ಬಂದ ಪಾಕಿಸ್ತಾನ ಕೋಚ್: ಬೇಸರದಲ್ಲಿ ಏನು ಹೇಳಿದ್ರು ನೋಡಿ
Salman Ali Agha And Pakistan Coach
ಪ್ರೀತಿ ಭಟ್​, ಗುಣವಂತೆ
| Edited By: |

Updated on:Sep 15, 2025 | 8:20 AM

Share

ಬೆಂಗಳೂರು (ಸೆ. 15): 2025 ರ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನ ತಂಡ ಭಾರತ ವಿರುದ್ಧ ಸೋತ ನಂತರ, ಇಡೀ ಪಾಕಿಸ್ತಾನದಲ್ಲಿ ಶೋಕ ಮೊಳಗಿದೆ. ಪಂದ್ಯ ಮುಗಿದ ನಂತರ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಶಿವಂ ದುಬೆ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಕಡೆಗೆ ಹೋದಾಗ ದುಬೈ ಕ್ರಿಕೆಟ್ ಕ್ರೀಡಾಂಗಣದಿಂದ ಈ ಶೋಕ ಆರಂಭವಾಯಿತು. ಭಾರತೀಯ ತಂಡದ ನಾಯಕ ಪಾಕಿಸ್ತಾನಿಗಳೊಂದಿಗೆ ಹಸ್ತಲಾಘವ ಮಾಡಲಿಲ್ಲ.. ಇದು ಪಂದ್ಯ ಆರಂಭಕ್ಕು ಮುನ್ನ ಹಾಗೂ ಪಂದ್ಯ ಮುಗಿದ ಬಳಿಕ ಕೂಡ. ಈ ಘಟನೆಯ ನಂತರ, ಪಾಕಿಸ್ತಾನಿ ಆಟಗಾರರು ಕೋಪಗೊಂಡಿದ್ದಾರೆ.

ಇದರ ನಂತರ, ಸಂದರ್ಶನದ ಸಮಯ ಬಂದಾಗ, ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಬರಲಿಲ್ಲ. ಪಾಕ್ ನಾಯಕ ಬರದಿದ್ದಕ್ಕೆ ಅನೇಕ ಹೇಳಿಕೆ ವೈರಲ್ ಆಗುತ್ತಿದೆ. ಪಾಕಿಸ್ತಾನ ಆಟಗಾರರ ಜೊತೆ ಭಾರತೀಯರು ಕೈಕುಲುಕದಿದ್ದಕ್ಕೆ ಇದು ಪ್ರತಿಭಟನೆ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಅವರಿಗೆ ಮುಜುಗರವಾಗಿರಬಹುದು ಎಂದಿದ್ದಾರೆ. ಆದರೆ ತಂಡದ ಮುಖ್ಯ ತರಬೇತುದಾರ ಮೈಕ್ ಹೆಸ್ಸನ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದರು. ಪಂದ್ಯದ ನಂತರದ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದ ಪರವಾಗಿ ಮಾತನಾಡಲು ಮೈಕ್ ಹೆಸ್ಸನ್ ಬಂದಿದ್ದರು.

ಇದನ್ನೂ ಓದಿ
Image
ಓಡಿ ಹೋದ ಪಾಕ್ ನಾಯಕ: ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ಗೂ ಬರಲಿಲ್ಲ
Image
ಈ ಜಯ ಸೇನೆಗೆ ಅರ್ಪಣೆ, ಪಹಲ್ಗಾಮ್ ಸಂತ್ರಸ್ತರೊಂದಿಗೆ ನಾವಿದ್ದೇವೆ: ಸೂರ್ಯ
Image
ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಮಣಿಸಿದ ಟೀಂ ಇಂಡಿಯಾ
Image
ಪಾಕ್ ರಾಷ್ಟ್ರಗೀತೆಯ ಬದಲು ರ‍್ಯಾಪ್ ಸಾಂಗ್ ಪ್ರಸಾರ; ವಿಡಿಯೋ

ಪಾಕಿಸ್ತಾನದ ಮುಖ್ಯ ಕೋಚ್ ಏನು ಹೇಳಿದರು?

ಭಾರತ-ಪಾಕ್ ಪಂದ್ಯದಲ್ಲಿ ಪಂದ್ಯ ಮುಗಿದ ನಂತರ, ಪತ್ರಿಕಾಗೋಷ್ಠಿ ಇರುತ್ತದೆ. ಎರಡೂ ತಂಡಗಳ ನಾಯಕರು ಪಂದ್ಯದ ನಂತರದ ಸಂದರ್ಶನಕ್ಕೆ ಹೋಗುತ್ತಾರೆ. ಗೆದ್ದ ಮತ್ತು ಸೋತ ನಾಯಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಮೈದಾನದಲ್ಲಿ ಎಲ್ಲವೂ ಮುಗಿದ ನಂತರ, ಮಾಧ್ಯಮಗಳಿಗಾಗಿ ಪತ್ರಿಕಾಗೋಷ್ಠಿ ಇರುತ್ತದೆ. ಸಾಮಾನ್ಯವಾಗಿ ನಾಯಕ ಮಾತ್ರ ಇದಕ್ಕೆ ಬರುತ್ತಾರೆ. ಕೆಲವೊಮ್ಮೆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಸಹ ಬರುತ್ತಾರೆ, ಆದರೆ ಏಷ್ಯಾಕಪ್‌ನಲ್ಲಿ ಭಾರತದ ವಿರುದ್ಧದ ಸೋಲಿನ ನಂತರ, ಪಾಕಿಸ್ತಾನದ ನಾಯಕ ಪಂದ್ಯದ ನಂತರದ ಸಂದರ್ಶನಕ್ಕೂ ಬರಲಿಲ್ಲ ಅಥವಾ ಪತ್ರಿಕಾಗೋಷ್ಠಿಗೂ ಬರಲಿಲ್ಲ.

ಪಾಕಿಸ್ತಾನ ಕೋಚ್ ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತು:

ಇಂತಹ ಪರಿಸ್ಥಿತಿಯಲ್ಲಿ, ತಂಡದ ಕೋಚ್ ಮೈಕ್ ಹೆಸ್ಸನ್ ಪತ್ರಿಕಾಗೋಷ್ಠಿಗೆ ಬರಬೇಕಾಯಿತು. ಮೈಕ್ ಹೆಸ್ಸನ್ ಪತ್ರಿಕಾಗೋಷ್ಠಿಯಲ್ಲಿ, ‘ಸ್ಪಷ್ಟವಾಗಿ, ನಾವು ಪಂದ್ಯದ ಕೊನೆಯಲ್ಲಿ ಕೈಕುಲುಕಲು ಸಿದ್ಧರಿದ್ದೆವು. ಭಾರತೀಯ ತಂಡ ಹಾಗೆ ಮಾಡದಿದ್ದಕ್ಕೆ ನಮಗೆ ಬೇಸರವಾಯಿತು. ನಾವು ಕೈಕುಲುಕಲು ಅಲ್ಲಿಗೆ ಹೋಗಿದ್ದೆವು, ಆದರೆ ಅವರು ಅದಕ್ಕು ಮೊದಲೇ ಡ್ರೆಸ್ಸಿಂಗ್ ರೂಮ್‌ಗೆ ಹೋಗಿದ್ದರು. ಪಂದ್ಯವನ್ನು ಈರೀತಿ ಕೊನೆಗೊಳಿಸಿದ್ದು ನಮಗೆ ನಿರಾಸೆ ಮೂಡಿಸಿದೆ. ನಾವು ಆಡಿದ ರೀತಿಯಿಂದ ಬೇಸರಗೊಂಡಿದ್ದೆವು. ಹೀಗಿದ್ದರೂ ನಾವು ಭಾರತೀಯ ಆಟಗಾರರೊಂದಿಗೆ ಕೈಕುಲುಕಲು ಸಿದ್ಧರಿದ್ದೆವು’ ಎಂದು ಹೇಳಿದ್ದಾರೆ.

IND vs PAK, Asia Cup: ಓಡಿ ಹೋದ ಪಾಕಿಸ್ತಾನ ನಾಯಕ: ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ಗೂ ಬರಲಿಲ್ಲ

ಗೆಲುವಿನ ಸಿಕ್ಸ್ ಬಾರಿಸಿದ ನಂತರ ಸೂರ್ಯಕುಮಾರ್ ತಮ್ಮ ಸಹ ಆಟಗಾರ ಶಿವಂ ದುಬೆ ಅವರೊಂದಿಗೆ ಕೈಕುಲುಕಿ ನೇರವಾಗಿ ಮೈದಾನದಿಂದ ಹೊರನಡೆದರು. ಈ ಮಧ್ಯೆ, ಪಾಕಿಸ್ತಾನಿ ಆಟಗಾರರು ಕೈಕುಲುಕಲು ಕಾಯುತ್ತಿದ್ದರು. ಟಾಸ್ ಸಮಯದಲ್ಲಿಯೂ ಸಹ, ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರೊಂದಿಗೆ ಕೈಕುಲುಕಲಿಲ್ಲ. ಸದ್ಯ ಈ ಎಲ್ಲ ಘಟನೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:12 am, Mon, 15 September 25

ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ನನಗೆ ಅಶ್ವಿನಿ ಗೌಡ ಇಷ್ಟ, ಅವರೇ ಬಿಗ್ ಬಾಸ್ ಗೆಲ್ಲಬೇಕು: ಮಾಜಿ ಸ್ಪರ್ಧಿ
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್