PBKS vs RCB: ಇಂದು ಆರ್​ಸಿಬಿ ಪಂದ್ಯ: ಫಾಫ್ ಪಡೆ ಗೆದ್ದರೆ ಏನಾಗಲಿದೆ, ಸೋತರೆ ಏನಾಗುತ್ತೆ?: ಇಲ್ಲಿದೆ ಮಾಹಿತಿ

Punjab Kings vs Royal Challengers Bengaluru: ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರೀಡಾಂಗಣದಲ್ಲಿ ಇಂದು ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿ ಆಗಲಿದೆ. ಲಕ್ನೋ ವಿರುದ್ಧ ಹೈದರಾಬಾದ್ ತಂಡ ಗೆಲುವು ಸಾಧಿಸಿದ ಪರಿಣಾಮ ಇಂದಿನ ಪಂದ್ಯ ಉಭಯ ತಂಡಗಳಿಗೂ ನಾಕೌಟ್ ಆಗಿದೆ.

PBKS vs RCB: ಇಂದು ಆರ್​ಸಿಬಿ ಪಂದ್ಯ: ಫಾಫ್ ಪಡೆ ಗೆದ್ದರೆ ಏನಾಗಲಿದೆ, ಸೋತರೆ ಏನಾಗುತ್ತೆ?: ಇಲ್ಲಿದೆ ಮಾಹಿತಿ
PBKS vs RCB
Follow us
Vinay Bhat
|

Updated on: May 09, 2024 | 8:38 AM

ಐಪಿಎಲ್ 2024 ರ (IPL 2024) ಲೀಗ್ ಹಂತವು ಅಂತಿಮ ಘಟ್ಟದತ್ತ ತಲುಪಿದೆ. ಎಲ್ಲಾ ತಂಡಗಳು 11 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿವೆ. ಆದರೆ ಪ್ಲೇಆಫ್‌ನ ಚಿತ್ರ ಇನ್ನೂ ಸ್ಪಷ್ಟವಾಗಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಈ ರೇಸ್‌ನಲ್ಲಿ ಮುನ್ನಡೆಯಲ್ಲಿದೆ. ಆದರೆ ಉಳಿದ ಎರಡು ಸ್ಥಾನಗಳಿಗಾಗಿ ಕನಿಷ್ಠ 7 ತಂಡಗಳ ನಡುವೆ ಕಠಿಣ ಹೋರಾಟವಿದೆ. ಬುಧವಾರ ಎಸ್​ಆರ್​ಹೆಚ್-ಎಲ್​ಎಸ್​ಜಿ ನಡುವೆ ನಡೆದ ಪಂದ್ಯದ ನಂತರ ಮುಂಬೈ ಇಂಡಿಯನ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಟೂರ್ನಿಯಿಂದ ಹೊರಬೀಳುವ ಮತ್ತೊಂದು ತಂಡ ಯಾವುದು ಎಂಬುದು ಇಂದು ನಿರ್ಧಾರವಾಗಲಿದೆ. ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಹೈವೋಲ್ಟೇಜ್ ಪಂದ್ಯ ಏರ್ಪಡಿಸಲಾಗಿದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರೀಡಾಂಗಣದಲ್ಲಿ ಇಂದು ಆರ್​ಸಿಬಿ ಮತ್ತು ಪಂಜಾಬ್ ಮುಖಾಮುಖಿ ಆಗಲಿದೆ. ಲಕ್ನೋ ವಿರುದ್ಧ ಹೈದರಾಬಾದ್ ತಂಡ ಗೆಲುವು ಸಾಧಿಸಿದ ಪರಿಣಾಮ ಇಂದಿನ ಪಂದ್ಯ ಉಭಯ ತಂಡಗಳಿಗೂ ನಾಕೌಟ್ ಆಗಿದೆ. ಈ ಪಂದ್ಯದಲ್ಲಿ ಯಾರು ಸೋತರೂ ಟೂರ್ನಿಯಲ್ಲಿ ಅವರ ಪಯಣ ಕೊನೆಗೊಳ್ಳುತ್ತದೆ. ಉಭಯ ತಂಡಗಳು 11-11 ಪಂದ್ಯಗಳನ್ನು ಆಡಿದ್ದು, ಪ್ರಸ್ತುತ 8-8 ಅಂಕಗಳನ್ನು ಹೊಂದಿವೆ.

ಸೋತ ಬಳಿಕ ಮೈದಾನದಲ್ಲೇ ಲಕ್ನೋ ಮಾಲೀಕ ಮತ್ತು ಕೆಎಲ್ ರಾಹುಲ್ ನಡುವೆ ಜಗಳ?: ವಿಡಿಯೋ ನೋಡಿ

ಇಂದಿನ ಪಂದ್ಯದಲ್ಲಿ ಗೆದ್ದ ತಂಡವು 14 ಅಂಕಗಳನ್ನು ತಲುಪಿ ಪ್ಲೇಆಫ್‌ ರೇಸ್‌ನಲ್ಲಿ ಉಳಿಯುವ ಸಾಧ್ಯತೆ ಇದೆ, ಆದರೆ ಸೋತ ತಂಡವು 12 ಅಂಕಗಳನ್ನು ಮಾತ್ರ ತಲುಪಲು ಸಾಧ್ಯವಾಗುತ್ತದೆ. ಸದ್ಯ ಟೂರ್ನಿಯ ಉಳಿದ ಪಂದ್ಯಗಳ ವೇಳಾಪಟ್ಟಿ ಹೇಗಿದೆಯೆಂದರೆ ಉಳಿದ ತಂಡಗಳ ಪೈಕಿ ಒಂದಲ್ಲ ಒಂದು ಟೀಮ್ 14 ಅಂಕಗಳನ್ನು ತಲುಪುತ್ತದೆ. ಹೀಗಿರುವಾಗ ಈ ಪಂದ್ಯದಲ್ಲಿ ಸೋತ ತಂಡವು ಟೂರ್ನಿಯಿಂದ ಹೊರಬೀಳುವುದು ಖಚಿತ. ಅಂದರೆ ಧರ್ಮಶಾಲೆಯಲ್ಲಿ ಸೋತವನಿಗೆ ಮುಂದೆ ಸಾಗುವ ದಾರಿ ಮುಚ್ಚಲಿದೆ.

ಆರ್​ಸಿಬಿ-ಪಂಜಾಬ್ ಎರಡೂ ತಂಡಗಳ ಇತ್ತೀಚಿನ ಫಾರ್ಮ್ ಬಗ್ಗೆ ಮಾತನಾಡುತ್ತಾ, ಬೆಂಗಳೂರು ಉತ್ತಮ ಸ್ಥಿತಿಯಲ್ಲಿದೆ. ಪಂದ್ಯಾವಳಿಯ ಮೊದಲ 8 ಪಂದ್ಯಗಳಲ್ಲಿ (ಸತತ 6) 7 ರಲ್ಲಿ ಸೋತಿರುವ ಫಾಫ್ ಪಡೆ, ಪುಟಿದೇಳುವ ಮೂಲಕ ನಂತರದ ಮೂರು ಪಂದ್ಯಗಳನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಆದರೆ ಪಂಜಾಬ್ ಕಿಂಗ್ಸ್ ಸತತ 2 ಗೆಲುವಿನ ನಂತರ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಕಂಡಿತು. ತಂಡವು ಪ್ರಸ್ತುತ 8 ನೇ ಸ್ಥಾನದಲ್ಲಿದೆ, ಬೆಂಗಳೂರು ಒಂದು ಸ್ಥಾನಕ್ಕಿಂತ ಕೆಳಗಿದೆ.

ಮುಂಬೈ ಔಟ್! ಆರ್​ಸಿಬಿ ಕಥೆ ಏನು? ಇಲ್ಲಿದೆ ಸಂಪೂರ್ಣ ಪ್ಲೇಆಫ್‌ ಲೆಕ್ಕಾಚಾರ

ಆರ್​ಸಿಬಿ ಪ್ಲೇಆಫ್‌ ಹಾದಿ ನೋಡುವುದಾದರೆ, ಉಳಿದ ಮೂರೂ ಪಂದ್ಯಗಳನ್ನು ಗೆದ್ದರೆ 14 ಅಂಕ ಸಂಪಾದಿಸಲಿದೆ. ಆದರೆ ಈಗಾಗಲೇ 12 ಅಂಕ ಸಂಪಾದಿಸಿರುವ ಚೆನ್ನೈ, ಡೆಲ್ಲಿ, ಲಕ್ನೋ ಉಳಿದ ಪಂದ್ಯಗಳಲ್ಲಿ ಸೋಲಬೇಕು. ಈ ಮೂರು ತಂಡಗಳು ತಮ್ಮ ಉಳಿದ ಪಂದ್ಯಗಳಲ್ಲಿ ಒಂದನ್ನು ಗೆದ್ದರೂ ಆಗ 14 ಅಂಕ ಈ ಮೂರು ತಂಡಗಳ ಬಳಿ ಇರುತ್ತದೆ. ಆರ್​ಸಿಬಿ ಕೂಡ ಉಳಿದ ಪಂದ್ಯಗಳನ್ನು ಗೆದ್ದರೆ ಅವರ ಬಳಿಯೂ 14 ಅಂಕ ಇರುತ್ತದೆ. ಈ ವೇಳೆ ನೆಟ್​ ರನ್​ರೇಟ್​ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಆರ್​ಸಿಬಿ ಗೆಲ್ಲುವುದಲ್ಲದೆ ರನ್​ರೇಟ್ ಕಾಪಾಡಿಕೊಳ್ಳಬೇಕಾದ ಒತ್ತಡದಲ್ಲಿಯೂ ಇದೆ.

ಮತ್ತಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ