ಭಾರತದೊಂದಿಗೆ ಜಿದ್ದಿಗೆ ಬಿದ್ದಿರುವ ಪಾಕಿಸ್ತಾನಕ್ಕೆ 1800 ಕೋಟಿ ರೂ. ನಷ್ಟ..!

ICC Champions Trophy 2025: 2025ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತದ ನಿರಾಕರಣೆಯಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಭಾರೀ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. ಐಸಿಸಿ ನೀಡುವ 65 ಮಿಲಿಯನ್ ಡಾಲರ್‌ಗಳನ್ನು ಕಳೆದುಕೊಳ್ಳುವ ಜೊತೆಗೆ, ಕ್ರೀಡಾಂಗಣಗಳ ನವೀಕರಣಕ್ಕಾಗಿ ಖರ್ಚು ಮಾಡಿದ ಹಣವೂ ವ್ಯರ್ಥವಾಗಬಹುದು.

ಭಾರತದೊಂದಿಗೆ ಜಿದ್ದಿಗೆ ಬಿದ್ದಿರುವ ಪಾಕಿಸ್ತಾನಕ್ಕೆ 1800 ಕೋಟಿ ರೂ. ನಷ್ಟ..!
ಚಾಂಪಿಯನ್ಸ್ ಟ್ರೋಫಿ
Follow us
ಪೃಥ್ವಿಶಂಕರ
|

Updated on: Nov 13, 2024 | 5:49 PM

2025 ರಲ್ಲಿ ನಡೆಯಲ್ಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೇಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಭವಿಷ್ಯ ನಿಂತಿದೆ. ಈ ಪಂದ್ಯಾವಳಿಯ ಆಯೋಜಕತ್ವದ ಹಕ್ಕು ಪಡೆದುಕೊಂಡಿರುವ ಪಾಕ್ ಕ್ರಿಕೆಟ್ ಮಂಡಳಿ,ಇದಕ್ಕಾಗಿ ಈಗಾಗಲೇ ತನ್ನ ತಯಾರಿಯನ್ನು ಅಂತಿಮ ಹಂತಕ್ಕೆ ತಂದಿದೆ. ಆ ಪ್ರಕಾರ ತನ್ನ ದೇಶದ ಮೂರು ಪ್ರಮುಖ ಕ್ರೀಡಾಂಗಣನ್ನು ನೂರಾರು ಕೋಟಿಗಳನ್ನು ಖರ್ಚು ಮಾಡಿ ಮೇಲ್ದರ್ಜೆಗೇರಿಸಿದೆ. ಹಾಗೆಯೇ ದೇಶಕ್ಕೆ ಭೇಟಿಕೊಡುವ ಎಲ್ಲಾ ತಂಡಗಳಿಗೆ ಯಾವ ರೀತಿಯ ಆತಿಥ್ಯ ನೀಡಬೇಕು ಎಂಬುದನ್ನು ನಿರ್ಧರಿಸಿದೆ. ಆದರೆ ಈ ನಡುವೆ ಭಾರತದೊಂದಿಗೆ ಜಿದ್ದಿಗೆ ಬಿದ್ದಿರುವ ಪಾಕಿಸ್ತಾನ, ತನ್ನ ಮೊಂಡುತನದಿಂದಲೇ ಸಾವಿರಾರು ಕೋಟಿ ರೂಗಳ ನಷ್ಟವನ್ನು ಎದುರಿಸಬೇಕಾಗಿ ಬಂದಿದೆ.

ವಾಸ್ತವವಾಗಿ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಭಾರತೀಯ ಕ್ರಿಕೆಟ್ ಮಂಡಳಿ ಈ ಸಂದೇಶವನ್ನು ಐಸಿಸಿ ಮೂಲಕ ಪಿಸಿಬಿಗೆ ರವಾನಿಸಿದೆ. ಇತ್ತ ಪಾಕಿಸ್ತಾನ ಮಂಡಳಿ ಕೂಡ ಹಟಕ್ಕೆ ಬಿದ್ದಿದ್ದು, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸುವುದಿಲ್ಲ ಎಂದು ಹೇಳಿದೆ. ಇದರ ಜೊತೆಗೆ ಆತಿಥ್ಯವನ್ನು ಕಸಿದಕೊಂಡರೆ, ಪಂದ್ಯಾವಳಿಯಿಂದಲೇ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿರುವ ಕೆಲವು ವರದಿಗಳೂ ಹೊರಬಿದ್ದಿವೆ. ಈ ಪರಿಸ್ಥಿತಿಯಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ಐಸಿಸಿ ಹೊಸ ವಿಳಾಸವನ್ನು ಹುಡುಕಬೇಕಾಗಿದೆ. ಆದಾಗ್ಯೂ, ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸಿದರೆ ಅಥವಾ ಪಂದ್ಯಾವಳಿಯನ್ನು ಮುಂದೂಡಬೇಕಾದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅತಿದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಪಾಕಿಸ್ತಾನಕ್ಕೆ ಭಾರೀ ಆರ್ಥಿಕ ನಷ್ಟ

ಪಂದ್ಯಾವಳಿಯನ್ನು ಆಯೋಜಿಸಲು ಆತಿಥೇಯ ದೇಶಕ್ಕೆ ಐಸಿಸಿ ಅಂದರೆ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಉತ್ತಮ ಮೊತ್ತವನ್ನು ನೀಡುತ್ತದೆ. ಈ ಹಣಕಾಸಿನ ಮೊತ್ತದಿಂದ ಮಾತ್ರ ಪಂದ್ಯಾವಳಿಯನ್ನು ಸರಿಯಾಗಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಚಾಂಪಿಯನ್ಸ್ ಟ್ರೋಫಿಗಾಗಿ ಐಸಿಸಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ 65 ಮಿಲಿಯನ್ ಯುಎಸ್ ಡಾಲರ್ ನೀಡಿತ್ತು. ಪಾಕಿಸ್ತಾನಿ ರೂಪಾಯಿ ಪ್ರಕಾರ ಈ ಮೊತ್ತ ಸುಮಾರು ಹದಿನೆಂಟು ನೂರು ಕೋಟಿ ರೂಪಾಯಿ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ನಿರಾಕರಿಸಿದರೆ, ಈ ಮೊತ್ತವು ಪಂದ್ಯಾವಳಿಯನ್ನು ಆಯೋಜಿಸುವ ದೇಶಕ್ಕೆ ಹೋಗುತ್ತದೆ ಎಂಬುದು ಸ್ಪಷ್ಟವಾಗಿದೆ.

ಈಗಾಗಲೇ 1300 ಕೋಟಿ ರೂ. ಖರ್ಚು

ಅಂದರೆ ಪಾಕಿಸ್ತಾನ 1800 ಕೋಟಿ ರೂಗಳನ್ನು ಕಳೆದುಕೊಳ್ಳಲಿದೆ. ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿಯ ಸ್ಟೇಡಿಯಂಗಳ ದುರಸ್ತಿಗೆ ಸುಮಾರು 1300 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಈ ಮೂರು ಕ್ರೀಡಾಂಗಣಗಳು ಈಗ ಬಹುತೇಕ ಹೊಸ ಕ್ರೀಡಾಂಗಣಗಳಾಗಿ ಮಾರ್ಪಟ್ಟಿವೆ ಎಂದು ಇತ್ತೀಚೆಗೆ ಮೊಹ್ಸಿನ್ ನಖ್ವಿ ಅಲ್ಲಿಯ ಮಾಧ್ಯಮಗಳಲ್ಲಿ ಹೇಳಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಆಯೋಜಿಸದಿದ್ದರೆ 1300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಕ್ರೀಡಾಂಗಣಗಳ ಗತಿಯೇನು?. ಇದು ಕೂಡ ಪಾಕಿಸ್ತಾನಕ್ಕೆ ಹೊರೆಯಾಗಲಿದೆ.

ಕ್ರಿಕೆಟ್ ಮಂಡಳಿಯನ್ನು ಮುಚ್ಚುವ ಭೀತಿ

ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯದಿದ್ದರೆ, ಪಾಕ್ ಮಂಡಳಿ ಐಸಿಸಿಯಿಂದ ಪಡೆದ 1800 ಕೋಟಿ ರೂ.ಗಳನ್ನು ವಾಪಸ್ ನೀಡಬೇಕಾಗುತ್ತದೆ. ಒಂದು ವೇಳೆ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆದರೆ, ಈಗಾಗಲೇ ಕ್ರೀಡಾಂಗಣ ದುರಸ್ಥಿಗಾಗಿ 1300 ಕೋಟಿ ರೂಗಳನ್ನು ಖರ್ಚು ಮಾಡಿರುವ ಪಿಸಿಬಿಗೆ ಇನ್ನೂ 500 ಕೋಟಿ ರೂಗಳು ಲಾಭವಾಗಿ ಉಳಿಯಲಿದೆ. ಉಳಿದಿರುವ ಈ 500 ಕೋಟಿ ರೂಗಳಲ್ಲಿ ಪಿಸಿಬಿ, ಈ ಪಂದ್ಯಾವಳಿಯನ್ನು ಅದ್ಧೂರಿಯಾಗಿ ಆಯೋಜಿಸಬಹುದು. ಆದರೆ ತಾಳ್ಮೆಯಿಂದ ಯೋಚಿಸದೆ, ದೂರ ದೃಷ್ಟಿಯಿಲ್ಲದೆ ಹೇಳಿಕೆಗಳನ್ನು ನೀಡುತ್ತಿರುವ ಪಾಕಿಸ್ತಾನ, ತನ್ನ ಮೊಂಡುತನವನ್ನೇ ಮುಂದುವರೆಸಿದರೆ, ನಷ್ಟದ ಜೊತೆಗೆ ಕ್ರಿಕೆಟ್ ಮಂಡಳಿಯನ್ನು ಸಹ ಪೂರ್ಣವಾಗಿ ಮುಚ್ಚಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ