
ಇಂಡಿಯನ್ ಪ್ರೀಮಿಯರ್ ಲೀಗ್‌ನ 19 ನೇ ಸೀಸನ್ (IPL 2026 ) ಮಾರ್ಚ್ 28 ರಿಂದ ಪ್ರಾರಂಭವಾಗುತ್ತಿದೆ. ಮೊದಲಿಗೆ ಕೇವಲ 20 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದ ಬಿಸಿಸಿಐ (BCCI), ಟೂರ್ನಿ ಆರಂಭಕ್ಕೆ ಎರಡು ದಿನಗಳಿರುವಾಗ ಉಳಿದ 50 ಪಂದ್ಯಗಳನ್ನು ಪ್ರಕಟಿಸಿತು. ಇದರರ್ಥ ಈ ಬಾರಿಯ ಐಪಿಎಲ್ನ ಪೂರ್ಣ ವೇಳಾಪಟ್ಟಿ ಪ್ರಕಟವಾಗಿದೆ. ಈ ಆವೃತ್ತಿಯಲ್ಲಿ ಒಟ್ಟು 12 ಡಬಲ್ ಹೆಡರ್ ಪಂದ್ಯಗಳು ನಡೆಯಲಿದ್ದು, 12 ನಗರಗಳು ಈ ಟೂರ್ನಿಗೆ ಆತಿಥ್ಯವಹಿಸುತ್ತಿವೆ.
ಲೀಗ್‌ನ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ಬೆಂಗಳೂರಿನಲ್ಲಿ ನಡೆದರೆ, ಲೀಗ್‌ನ ಕೊನೆಯ ಪಂದ್ಯ ಮೇ 24 ರಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೆಕೆಆರ್ ನಡುವೆ ನಡೆಯಲಿದೆ. ಇದಾದ ಬಳಿಕ ಪ್ಲೇ ಅಫ್ ಸುತ್ತು ಶುರುವಾಗಲಿದೆ. ಲೀಗ್ ಸುತ್ತು ಆರಂಭಕ್ಕೂ ಮುನ್ನ ಈ ಪಂದ್ಯಾವಳಿಯನ್ನು ಟಿವಿಯಲ್ಲಿ ಯಾವ ಚಾನೆಲ್‌ನಲ್ಲಿ ವೀಕ್ಷಿಸಬಹುದು? ಹಾಗೆಯೇ ಮೊಬೈಲ್‌ನಲ್ಲಿ ಉಚಿತವಾಗಿ ವೀಕ್ಷಿಸುವುದು ಹೇಗೆ? ಪಂದ್ಯಗಳು ಎಷ್ಟು ಗಂಟೆಗೆ ಶುರುವಾಗಲಿವೆ ಎಂಬುದನ್ನು ನೋಡುವುದಾದರೆ..
ಐಪಿಎಲ್ 2026 ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿದ ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಕನ್ನಡಿಗರು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಹಾಗೆಯೇ ಪಂದ್ಯಗಳ ನೇರ ಪ್ರಸಾರವನ್ನು ಮೊಬೈಲ್‌ನಲ್ಲಿ, ಜಿಯೋಹಾಟ್‌ಸ್ಟಾರ್ ಅಪ್ಲಿಕೇಶನ್‌ನಲ್ಲಿ ವೀಕ್ಷಿಸಬಹುದಾಗಿದೆ. ಇದಲ್ಲದೆ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಮಲೇಷ್ಯಾ ಮತ್ತು ಇತರ ಹಲವು ದೇಶಗಳಲ್ಲಿ YuppTV ಯಲ್ಲಿಯೂ ನೇರ ಪ್ರಸಾರವು ಲಭ್ಯವಿರುತ್ತದೆ.
ಐಪಿಎಲ್ 2026 ರಲ್ಲಿ, ಮಧ್ಯಾಹ್ನದ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗುತ್ತವೆ. ಸಂಜೆಯ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:30 ಕ್ಕೆ ಪ್ರಾರಂಭವಾಗುತ್ತವೆ.
IPL 2026: ಲೀಗ್ ಹಂತದಲ್ಲಿ ಆರ್ಸಿಬಿ ಯಾವ ದಿನ ಯಾರ ವಿರುದ್ಧ ಆಡಲಿದೆ? ಇಲ್ಲಿದೆ ವಿವರ
1. ಮಾರ್ಚ್ 28 (ಶನಿವಾರ): ಸನ್‌ರೈಸರ್ಸ್ ಹೈದರಾಬಾದ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಸಂಜೆ 7:30)
2. ಮಾರ್ಚ್ 29 (ಭಾನುವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7:30)
3. ಮಾರ್ಚ್ 30 (ಸೋಮವಾರ): ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ – ಗುವಾಹಟಿ (ಸಂಜೆ 7:30)
4. ಮಾರ್ಚ್ 31 (ಮಂಗಳವಾರ): ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್ – ನ್ಯೂ ಚಂಡೀಗಢ (ಸಂಜೆ 7:30)
5. ಏಪ್ರಿಲ್ 01 (ಬುಧವಾರ): ಡೆಲ್ಲಿ ಕ್ಯಾಪಿಟಲ್ಸ್ vs ಲಕ್ನೋ ಸೂಪರ್‌ಜೈಂಟ್ಸ್ – ಲಕ್ನೋ (ಸಂಜೆ 7:30)
6. ಏಪ್ರಿಲ್ 02 (ಗುರುವಾರ): ಸನ್‌ರೈಸರ್ಸ್ ಹೈದರಾಬಾದ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7:30)
7. ಏಪ್ರಿಲ್ 03 (ಶುಕ್ರವಾರ): ಪಂಜಾಬ್ ಕಿಂಗ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7:30)
8. ಏಪ್ರಿಲ್ 04 (ಶನಿವಾರ): ಮುಂಬೈ ಇಂಡಿಯನ್ಸ್ vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಮಧ್ಯಾಹ್ನ 3:30)
9. ಏಪ್ರಿಲ್ 04 (ಶನಿವಾರ): ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)
10. ಏಪ್ರಿಲ್ 05 (ಭಾನುವಾರ): ಲಕ್ನೋ ಸೂಪರ್‌ಜೈಂಟ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಮಧ್ಯಾಹ್ನ 3:30)
11. ಏಪ್ರಿಲ್ 05 (ಭಾನುವಾರ): ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಸಂಜೆ 7:30)
12. ಏಪ್ರಿಲ್ 06 (ಸೋಮವಾರ): ಪಂಜಾಬ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7:30)
13. ಏಪ್ರಿಲ್ 07 (ಮಂಗಳವಾರ): ಮುಂಬೈ ಇಂಡಿಯನ್ಸ್ vs ರಾಜಸ್ಥಾನ್ ರಾಯಲ್ಸ್ – ಗುವಾಹಟಿ (ಸಂಜೆ 7:30)
14. ಏಪ್ರಿಲ್ 08 (ಬುಧವಾರ): ಗುಜರಾತ್ ಟೈಟಾನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ – ಡೆಲ್ಲಿ (ಸಂಜೆ 7:30)
15. ಏಪ್ರಿಲ್ 09 (ಗುರುವಾರ): ಲಕ್ನೋ ಸೂಪರ್ ಜೈಂಟ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7:30)
16. ಏಪ್ರಿಲ್ 10 (ಶುಕ್ರವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ರಾಜಸ್ಥಾನ ರಾಯಲ್ಸ್ – ಗುವಾಹಟಿ (ಸಂಜೆ 7:30)
17. ಏಪ್ರಿಲ್ 11 (ಶನಿವಾರ): ಸನ್‌ರೈಸರ್ಸ್ ಹೈದರಾಬಾದ್ vs ಪಂಜಾಬ್ ಕಿಂಗ್ಸ್ – ನ್ಯೂ ಚಂಡೀಗಢ (ಮಧ್ಯಾಹ್ನ 3:30)
18. ಏಪ್ರಿಲ್ 11 (ಶನಿವಾರ): ಡೆಲ್ಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7:30)
19. ಏಪ್ರಿಲ್ 12 (ಭಾನುವಾರ): ಗುಜರಾತ್ ಟೈಟಾನ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಲಕ್ನೋ (ಮಧ್ಯಾಹ್ನ 3:30)
20. ಏಪ್ರಿಲ್ 12 (ಭಾನುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7:30)
21. ಏಪ್ರಿಲ್ 13 (ಸೋಮವಾರ): ರಾಜಸ್ಥಾನ ರಾಯಲ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7:30)
22. ಏಪ್ರಿಲ್ 14 (ಮಂಗಳವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7:30)
23. ಏಪ್ರಿಲ್ 15 (ಬುಧವಾರ): ಲಕ್ನೋ ಸೂಪರ್‌ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಸಂಜೆ 7:30)
24. ಏಪ್ರಿಲ್ 16 (ಗುರುವಾರ): ಪಂಜಾಬ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7:30)
25. ಏಪ್ರಿಲ್ 17 (ಶುಕ್ರವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)
26. ಏಪ್ರಿಲ್ 18 (ಶನಿವಾರ): ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಮಧ್ಯಾಹ್ನ 3:30)
27. ಏಪ್ರಿಲ್ 18 (ಶನಿವಾರ): ಚೆನ್ನೈ ಸೂಪರ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7:30)
28. ಏಪ್ರಿಲ್ 19 (ಭಾನುವಾರ): ರಾಜಸ್ಥಾನ ರಾಯಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಮಧ್ಯಾಹ್ನ 3:30)
29. ಏಪ್ರಿಲ್ 19 (ಭಾನುವಾರ): ಲಕ್ನೋ ಸೂಪರ್‌ಜೈಂಟ್ಸ್ vs ಪಂಜಾಬ್ ಕಿಂಗ್ಸ್ – ನ್ಯೂ ಚಂಡೀಗಢ (ಸಂಜೆ 7:30)
30. ಏಪ್ರಿಲ್ 20 (ಸೋಮವಾರ): ಮುಂಬೈ ಇಂಡಿಯನ್ಸ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)
31. ಏಪ್ರಿಲ್ 21 (ಮಂಗಳವಾರ): ಡೆಲ್ಲಿ ಕ್ಯಾಪಿಟಲ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7:30)
32. ಏಪ್ರಿಲ್ 22 (ಬುಧವಾರ): ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್‌ಜೈಂಟ್ಸ್ – ಲಕ್ನೋ (ಸಂಜೆ 7:30)
33. ಏಪ್ರಿಲ್ 23 (ಗುರುವಾರ): ಚೆನ್ನೈ ಸೂಪರ್ ಕಿಂಗ್ಸ್ vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7:30)
34. ಏಪ್ರಿಲ್ 24 (ಶುಕ್ರವಾರ): ಗುಜರಾತ್ ಟೈಟಾನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ಬೆಂಗಳೂರು (ಸಂಜೆ 7:30)
35. ಏಪ್ರಿಲ್ 25 (ಶನಿವಾರ): ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ – ಡೆಲ್ಲಿ (ಮಧ್ಯಾಹ್ನ 3:30)
36. ಏಪ್ರಿಲ್ 25 (ಶನಿವಾರ): ಸನ್ ರೈಸರ್ಸ್ ಹೈದರಾಬಾದ್ vs ರಾಜಸ್ಥಾನ್ ರಾಯಲ್ಸ್ – ಜೈಪುರ (ಸಂಜೆ 7:30)
37. ಏಪ್ರಿಲ್ 26 (ಭಾನುವಾರ): ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಮಧ್ಯಾಹ್ನ 3:30)
38. ಏಪ್ರಿಲ್ 26 (ಭಾನುವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಲಕ್ನೋ (ಸಂಜೆ 7:30)
39. ಏಪ್ರಿಲ್ 27 (ಸೋಮವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಸಂಜೆ 7:30)
40. ಏಪ್ರಿಲ್ 28 (ಮಂಗಳವಾರ): ರಾಜಸ್ಥಾನ ರಾಯಲ್ಸ್ vs ಪಂಜಾಬ್ ಕಿಂಗ್ಸ್ – ನ್ಯೂ ಚಂಡೀಗಢ (ಸಂಜೆ 7:30)
41. ಏಪ್ರಿಲ್ 29 (ಬುಧವಾರ): ಸನ್‌ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7:30)
42. ಏಪ್ರಿಲ್ 30 (ಗುರುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)
43. ಮೇ 01 (ಶುಕ್ರವಾರ): ಡೆಲ್ಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್ – ಜೈಪುರ (ಸಂಜೆ 7:30)
44. ಮೇ 02 (ಶನಿವಾರ): ಮುಂಬೈ ಇಂಡಿಯನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7:30)
45. ಮೇ 03 (ಭಾನುವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಮಧ್ಯಾಹ್ನ 3:30)
46. ಮೇ 03 (ಭಾನುವಾರ): ಪಂಜಾಬ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)
47. ಮೇ 04 (ಸೋಮವಾರ): ಲಕ್ನೋ ಸೂಪರ್‌ಜೈಂಟ್ಸ್ vs ಮುಂಬೈ ಇಂಡಿಯನ್ಸ್ – ಮುಂಬೈ (ಸಂಜೆ 7:30)
48. ಮೇ 05 (ಮಂಗಳವಾರ): ಚೆನ್ನೈ ಸೂಪರ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಸಂಜೆ 7:30)
49. ಮೇ 06 (ಬುಧವಾರ): ಪಂಜಾಬ್ ಕಿಂಗ್ಸ್ vs ಸನ್‌ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7:30)
50. ಮೇ 07 (ಗುರುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್‌ಜೈಂಟ್ಸ್ – ಲಕ್ನೋ (ಸಂಜೆ 7:30)
51. ಮೇ 08 (ಶುಕ್ರವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಸಂಜೆ 7:30)
52. ಮೇ 09 (ಶನಿವಾರ): ಗುಜರಾತ್ ಟೈಟಾನ್ಸ್ vs ರಾಜಸ್ಥಾನ್ ರಾಯಲ್ಸ್ – ಜೈಪುರ (ಸಂಜೆ 7:30)
53. ಮೇ 10 (ಭಾನುವಾರ): ಲಕ್ನೋ ಸೂಪರ್‌ಜೈಂಟ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಮಧ್ಯಾಹ್ನ 3:30)
54. ಮೇ 10 (ಭಾನುವಾರ): ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಾಯ್ಪುರ (ಸಂಜೆ 7:30)
55. ಮೇ 11 (ಸೋಮವಾರ): ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ – ಧರ್ಮಶಾಲಾ (ಸಂಜೆ 7:30)
56. ಮೇ 12 (ಮಂಗಳವಾರ): ಸನ್‌ರೈಸರ್ಸ್ ಹೈದರಾಬಾದ್ vs ಗುಜರಾತ್ ಟೈಟಾನ್ಸ್ – ಅಹಮದಾಬಾದ್ (ಸಂಜೆ 7:30)
57. ಮೇ 13 (ಬುಧವಾರ): ಕೋಲ್ಕತ್ತಾ ನೈಟ್ ರೈಡರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು – ರಾಯ್ಪುರ (ಸಂಜೆ 7:30)
58. ಮೇ 14 (ಗುರುವಾರ): ಮುಂಬೈ ಇಂಡಿಯನ್ಸ್ vs ಪಂಜಾಬ್ ಕಿಂಗ್ಸ್ – ಧರ್ಮಶಾಲಾ (ಸಂಜೆ 7:30)
59. ಮೇ 15 (ಶುಕ್ರವಾರ): ಚೆನ್ನೈ ಸೂಪರ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಲಕ್ನೋ (ಸಂಜೆ 7:30)
60. ಮೇ 16 (ಶನಿವಾರ): ಗುಜರಾತ್ ಟೈಟಾನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7:30)
61. ಮೇ 17 (ಭಾನುವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್ – ಧರ್ಮಶಾಲಾ (ಮಧ್ಯಾಹ್ನ 3:30)
62. ಮೇ 17 (ಭಾನುವಾರ): ರಾಜಸ್ಥಾನ ರಾಯಲ್ಸ್ vs ದೆಹಲಿ ಕ್ಯಾಪಿಟಲ್ಸ್ – ದೆಹಲಿ (ಸಂಜೆ 7:30)
63. ಮೇ 18 (ಸೋಮವಾರ): ಸನ್‌ರೈಸರ್ಸ್ ಹೈದರಾಬಾದ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7:30)
64. ಮೇ 19 (ಮಂಗಳವಾರ): ಲಕ್ನೋ ಸೂಪರ್‌ಜೈಂಟ್ಸ್ vs ರಾಜಸ್ಥಾನ್ ರಾಯಲ್ಸ್ – ಜೈಪುರ (ಸಂಜೆ 7:30)
65. ಮೇ 20 (ಬುಧವಾರ): ಮುಂಬೈ ಇಂಡಿಯನ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7:30)
66. ಮೇ 21 (ಗುರುವಾರ): ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್ – ಚೆನ್ನೈ (ಸಂಜೆ 7:30)
67. ಮೇ 22 (ಶುಕ್ರವಾರ): ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್ ರೈಸರ್ಸ್ ಹೈದರಾಬಾದ್ – ಹೈದರಾಬಾದ್ (ಸಂಜೆ 7:30)
68. ಮೇ 23 (ಶನಿವಾರ): ಪಂಜಾಬ್ ಕಿಂಗ್ಸ್ vs ಲಕ್ನೋ ಸೂಪರ್ ಜೈಂಟ್ಸ್ – ಲಕ್ನೋ (ಸಂಜೆ 7:30)
69. ಮೇ 24 (ಭಾನುವಾರ): ರಾಜಸ್ಥಾನ ರಾಯಲ್ಸ್ vs ಮುಂಬೈ ಇಂಡಿಯನ್ಸ್ – ಮುಂಬೈ (ಮಧ್ಯಾಹ್ನ 3:30)
70. ಮೇ 24 (ಭಾನುವಾರ): ಡೆಲ್ಲಿ ಕ್ಯಾಪಿಟಲ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್ – ಕೋಲ್ಕತ್ತಾ (ಸಂಜೆ 7:30)
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ