ಭಾರತೀಯರು ನಿಮ್ಮನ್ನು… ಪಾಕ್ ಪತ್ರಕರ್ತನ ಪ್ರಶ್ನೆಗೆ ಡೇವಿಡ್ ವಾರ್ನರ್ ಖಡಕ್ ಉತ್ತರ
David Warner In PSL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್ 2025) ಸನ್ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳನ್ನು ಮುನ್ನಡೆಸಿದ್ದ ಡೇವಿಡ್ ವಾರ್ನರ್ ಇದೀಗ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ (ಪಿಎಸ್ಎಲ್ 2025) ಕರಾಚಿ ಕಿಂಗ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL 2025) ಅವಕಾಶ ವಂಚಿತರಾಗಿರುವ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (David Warner) ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಅದು ಸಹ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ (PSL 2025) ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ. ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ ವಾರ್ನರ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಹೀಗಾಗಿ ಅವರು ಪಿಎಸ್‌ಎಲ್‌ಗೆ ಹೆಸರು ನೀಡಿದ್ದರು. ಅದರಂತೆ ಇದೀಗ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಕರಾಚಿ ಕಿಂಗ್ಸ್ ತಂಡದ ನಾಯಕರಾಗಿ ವಾರ್ನರ್ ಕಣಕ್ಕಿಳಿದಿದ್ದಾರೆ.
ಮುಲ್ತಾನ್ ಸುಲ್ತಾನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದ ಡೇವಿಡ್ ವಾರ್ನರ್ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಾಗಿತ್ತು. ಅದರಲ್ಲೊಂದು ಪ್ರಶ್ನೆ ಭಾರತೀಯರು ಟ್ರೋಲ್ ಮಾಡುತ್ತಿರುವುದರ ಬಗ್ಗೆಯಾಗಿತ್ತು. ಐಪಿಎಲ್ನಲ್ಲಿ ಅವಕಾಶ ಸಿಗದಿರುವ ಕಾರಣ ನಿಮ್ಮನ್ನು ಭಾರತೀಯರು ಟ್ರೋಲ್ ಮಾಡುತ್ತಿದ್ದಾರೆ. ಐಪಿಎಲ್ ಬಿಟ್ಟು ಪಿಎಸ್ಎಲ್ ಆಡುತ್ತಿರುವುದರ ಬಗ್ಗೆ ಇಂಡಿಯಾದ ಅಭಿಮಾನಿಗಳು ಕಾಲೆಳೆಯುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪ್ರಶ್ನಿಸಲಾಗಿತ್ತು.
ಡೇವಿಡ್ ವಾರ್ನರ್ ಖಡಕ್ ಉತ್ತರ:
ಪಾಕಿಸ್ತಾನ್ ಪತ್ರಕರ್ತನ ಈ ಅನಿರೀಕ್ಷಿತ ಪ್ರಶ್ನೆಗೆ ಡೇವಿಡ್ ವಾರ್ನರ್ ಸೂಕ್ತ ಉತ್ತರವನ್ನು ನೀಡಿದರು. ನೀವು ಹೇಳಿರುವ ವಿಷಯವನ್ನು ನಾನು ಇದೇ ಮೊದಲ ಬಾರಿಗೆ ಕೇಳುತ್ತಿದ್ದೇನೆ. ಆ ರೀತಿ ಏನೂ ಇಲ್ಲ. ನನಗೆ ಕ್ರಿಕೆಟ್ ಆಡಲು ಮಾತ್ರ ಇಷ್ಟ. ಈ ಬಾರಿ ಪಿಎಸ್‌ಎಲ್‌ನಲ್ಲಿ ಆಡಲು ಅವಕಾಶ ಸಿಕ್ಕಿದೆ, ಅದಕ್ಕೆ ತಾನು ಸಿದ್ಧನಿದ್ದೇನೆ ಎಂದರು.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ, ಮೊದಲು ಪಿಎಸ್‌ಎಲ್‌ಗೆ ಬರುವ ಅವಕಾಶ ಸಿಗಲಿಲ್ಲ. ಆದರೆ ಈಗ ಸಿಕ್ಕಿದೆ. ಕರಾಚಿ ಕಿಂಗ್ಸ್‌ಗೆ ನಾಯಕತ್ವ ವಹಿಸಿಕೊಂಡು ಪ್ರಶಸ್ತಿ ಗೆಲ್ಲುವುದು ಮಾತ್ರ ನನ್ನ ಗುರಿ ಎಂದು ಡೇವಿಡ್ ವಾರ್ನರ್ ಹೇಳಿದರು.
ಅಲ್ಲದೆ ಭಾರತೀಯ ಅಭಿಮಾನಿಗಳು ನನ್ನನ್ನು ಟ್ರೋಲ್ ಮಾಡುತ್ತಿದ್ದಾರೆ, ಪಿಎಸ್ಎಲ್ ಆಡುತ್ತಿರುವುದಕ್ಕೆ ದೂಷಿಸುತ್ತಿದ್ದಾರೆ ಎಂಬುದೆಲ್ಲಾ ನಾನು ಇದೇ ಮೊದಲ ಬಾರಿಗೆ ಕೇಳುತ್ತಿದ್ದೇನೆ. ಆ ರೀತಿ ಏನೂ ಇಲ್ಲ ಎಂದು ವಾರ್ನರ್ ಹೇಳಿದ್ದಾರೆ.
ಈ ಮೂಲಕ ದ್ವೇಷ ಹರಡಲು ಮುಂದಾಗಿದ್ದ ಪಾಕಿಸ್ತಾನ್ ಪತ್ರಕರ್ತನಿಗೆ ಭಾರತದ ವಿರುದ್ಧ ಯಾವುದೇ ಹೇಳಿಕೆ ನೀಡದೇ ಡೇವಿಡ್ ವಾರ್ನರ್, ನಾನು ಕ್ರಿಕೆಟ್ ಆಡಲಷ್ಟೇ ಇಷ್ಟಪಡುತ್ತೇನೆ ಎಂದು ಖಡಕ್ ಉತ್ತರ ನೀಡಿದ್ದಾರೆ. ಈ ಉತ್ತರದೊಂದಿಗೆ ಪಾಕ್ ಪತ್ರಕರ್ತ ಕೂಡ ಗಪ್ ಚುಪ್ ಆಗಿದ್ದಾರೆ.
ಇದನ್ನೂ ಓದಿ: IPL 2025: ಮುಂಬೈ ಇಂಡಿಯನ್ಸ್ ಆಟಗಾರನ ಬ್ಯಾನ್ ಮಾಡಿದ ಪಾಕಿಸ್ತಾನ್
IPL ನಲ್ಲಿ ವಾರ್ನರ್ ಸಾಧನೆ:
Published On - 9:04 am, Sun, 13 April 25