Rahul Dravid: ಇಂದಿನ ಪಂದ್ಯದಲ್ಲಿ ಕಾರ್ತಿಕ್ ಆಡ್ತಾರ? ಪ್ರಶ್ನೆಗೆ ಕೋಚ್ ದ್ರಾವಿಡ್ ಮಹತ್ವದ ಉತ್ತರ

India vs Bangladesh, T20 World Cup:; ದಿನೇಶ್ ಕಾರ್ತಿಕ್ ಇಂಜುರಿಗೆ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿರಲಿಲ್ಲ. ಇದೀಗ ತಂಡದ ಕೋಚ್ ರಾಹುಲ್ ದ್ರಾವಿಡ್ ಈ ಬಗ್ಗೆ ಮಾತನಾಡಿದ್ದು ಏನು ಹೇಳಿದರು ಕೇಳಿ.

Rahul Dravid: ಇಂದಿನ ಪಂದ್ಯದಲ್ಲಿ ಕಾರ್ತಿಕ್ ಆಡ್ತಾರ? ಪ್ರಶ್ನೆಗೆ ಕೋಚ್ ದ್ರಾವಿಡ್ ಮಹತ್ವದ ಉತ್ತರ
Rahul Dravid and Dinesh Karthik
Follow us
TV9 Web
| Updated By: Vinay Bhat

Updated on: Nov 02, 2022 | 8:31 AM

ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ ಇಂದು ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ತಂಡಗಳು ಮುಖಾಮುಖಿ ಆಗುತ್ತಿದ್ದು ಅಡಿಲೇಡ್​ ಓವಲ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ. ಪಾಯಿಂಟ್ ಟೇಬಲ್​ನಲ್ಲಿ ಉಭಯ ತಂಡಗಳು ನಾಲ್ಕು ಅಂಕ ಪಡೆದು ರನ್​ರೇಟ್ ಆಧಾರದ ಮೇಲೆ ಭಾರತ ದ್ವಿತೀಯ ಸ್ಥಾನದಲ್ಲಿದ್ದರೆ, ಬಾಂಗ್ಲಾ ಮೂರನೇ ಸ್ಥಾನದಲ್ಲಿದೆ. ಹೀಗಾಗಿ ಸೆಮಿ ಫೈನಲ್​​ಗೆ ಪ್ರವೇಶ ಪಡೆಯಲು ಎರಡೂ ತಂಡಕ್ಕೆ ಈ ಪಂದ್ಯ ಮಹತ್ವದ್ದಾಗಿದೆ. ಇದರ ನಡುವೆ ರೋಹಿತ್ (Rohit Sharma) ಪಡೆಗೆ ಇಂಜುರಿ ಸಮಸ್ಯೆ ಕೂಡ ಕಾಡುತ್ತಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮಧ್ಯೆ ದಿನೇಶ್ ಕಾರ್ತಿಕ್ (Dinesh Karthik) ಕೀಪಿಂಗ್ ಮಾಡುವಾಗ ಬೆನ್ನು ನೋವು ಕಾಣಿಸಿಕೊಂಡ ಪರಿಣಾಮ ಅರ್ಧದಲ್ಲೇ ಪೆವಿಲಿಯನ್​ಗೆ ತೆರಳಿದರು. ಇಂದಿನ ಪಂದ್ಯಕ್ಕೆ ಇವರ ಲಭ್ಯತೆ ಬಗ್ಗೆ ಅನುಮಾನವಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಫೀಲ್ಡಿಂಗ್ ಮಾಡುವಾಗ 16ನೇ ಓವರ್​​ ವೇಳೆ ದೇಹದ ಹಿಂಭಾಗ ಜೋರಾಗಿ ನೋವು ಕಾಣಿಸಿಕೊಂಡಿದೆ. ಈ ಸಂದರ್ಭ ಕಾರ್ತಿಕ್​ಗೆ ಕೀಪಿಂಗ್ ಕೂಡ ಮಾಡಲಾಗಿಲ್ಲ. ಹೀಗಾಗಿ ಮೈದಾನ ತೊರೆದು ಇವರ ಬದಲು ರಿಷಭ್ ಪಂತ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದರು. ಆದರೆ, ಕಾರ್ತಿಕ್ ಇಂಜುರಿಗೆ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡಿರಲಿಲ್ಲ. ಇದೀಗ ತಂಡದ ಕೋಚ್ ರಾಹುಲ್ ದ್ರಾವಿಡ್ ಈ ಬಗ್ಗೆ ಮಾತನಾಡಿದ್ದು ಏನು ಹೇಳಿದರು ಕೇಳಿ.

”ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬೌನ್ಸರ್ ಚೆಂಡನ್ನು ಹಿಡಿಯಲು ಹೋಗಿ ದಿನೇಶ್ ಕಾರ್ತಿಕ್ ಬೆನ್ನು ನೋವಿಗೆ ಗುರಿಯಾಗಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಈಗ ಗುಣಮುಖರಾಗುತ್ತಿದ್ದು ಚೆನ್ನಾಗಿದ್ದಾರೆ. ಅಭ್ಯಾಸದ ವೇಳೆಯೂ ದಿನೇಶ್ ಕಾರ್ತಿಕ್ ವರ್ಕೌಟ್ ಮಾಡಿದ್ದಾರೆ. ಸದ್ಯ ಪ್ರ್ಯಾಕ್ಟೀಸ್ ಸೆಷನ್​ನಲ್ಲಿ ಇರುವ ಕಾರ್ತಿಕ್ ಆಡುವ ಬಗ್ಗೆ ಸಕರಾತ್ಮಕವಾಗಿದ್ದು ಬುಧವಾರ ಬೆಳಗ್ಗೆ ಲಭ್ಯತೆ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇವೆ,” ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
IND vs BAN: ಭಾರತಕ್ಕೆ ಇಂದು ಬಾಂಗ್ಲಾದೇಶ ಸವಾಲು: ರೋಹಿತ್ ಪಡೆಗೆ ಗೆಲ್ಲಲೇ ಬೇಕಾದ ಅನಿವಾರ್ಯತೆ
Image
ENG vs NZ: 152 ಕಿ.ಮೀ ವೇಗದ ಎಸೆತವನ್ನು ಅಷ್ಟೇ ವೇಗವಾಗಿ ಸಿಕ್ಸರ್​ಗಟ್ಟಿದ ಕಿವೀಸ್ ಬ್ಯಾಟರ್..! ವಿಡಿಯೋ
Image
IND vs BAN: ಭಾರತ- ಬಾಂಗ್ಲಾ ಪಂದ್ಯಕ್ಕೆ ಮಳೆ ಕಾಟ ಖಚಿತ! ಮ್ಯಾಚ್ ರದ್ದಾದರೆ ಉಭಯ ತಂಡಗಳಿಗೂ ಸಂಕಷ್ಟ
Image
ENG vs NZ: ಕಿವೀಸ್ ಕಿವಿ ಹಿಂಡಿದ ಆಂಗ್ಲರು; ಕಾಂಗರೂಗಳು ಕೊನೆಯ ಪಂದ್ಯ ಗೆದ್ದರೂ ಸೇಮಿಸ್​ಗೇರುವುದು ಕಷ್ಟ..!

ಇದೇವೇಳೆ ಕೆ.ಎಲ್ ರಾಹುಲ್ ಕಳಪೆ ಆಟದಿಂದ ಅವರನ್ನು ಪ್ಲೇಯಿಂಗ್ ಇಲವೆನ್‌ನಿಂದ ಕೈ ಬಿಡಬೇಕು ಎಂದು ಕೇಳಿಬರುತ್ತಿರುವ ಮಾತಿಗೆ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ. ”ಕೆ.ಎಲ್‌ ರಾಹುಲ್ ಒಬ್ಬ ಅದ್ಭುತ ಆಟಗಾರ, ಆತ ಬಲಿಷ್ಠವಾಗಿ ಕಂಬ್ಯಾಕ್ ಮಾಡುತ್ತಾನೆ ಎಂದು ನಮಗೆ ನಂಬಿಕೆಯಿದೆ. ಈ ಪಿಚ್‌ಗಳು ವಿಶ್ವದ ಯಾವುದೇ ಬ್ಯಾಟರ್‌ಗಳಿಗೆ ಸವಾಲನ್ನು ಒಡ್ಡುತ್ತವೆ. ಯಾರು ಓಪನಿಂಗ್ ಮಾಡಬೇಕು ಎಂಬುದರ ಕುರಿತು ನನಗೆ ಹಾಗೂ ರೋಹಿತ್‌ಗೆ ಯಾವುದೇ ಅನುಮಾನವಿಲ್ಲ. ಕೆ.ಎಲ್ ರಾಹುಲ್ ಓಪನಿಂಗ್ ಮಾಡಿದ್ರೆ ಎಷ್ಟು ಪರಿಣಾಮ ಇರುತ್ತದೆ ಎಂದು ತಿಳಿದಿದೆ,” ಎಂಬುದು ದ್ರಾವಿಡ್ ಮಾತು.

ನಾವು ವಿಶ್ವಕಪ್ ಗೆಲ್ಲಲು ಬಂದಿಲ್ಲ ಎಂದ ಶಕಿಬ್:

ಬಾಂಗ್ಲಾದೇಶ ತಂಡದ ನಾಯಕ ಶಕಿಬ್ ಅಲ್ ಹಸನ್ ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ”ಟಿ20 ವಿಶ್ವಕಪ್‌ ಗೆಲ್ಲಲು ನಾವು ಇಲ್ಲಿಗೆ ಬಂದಿಲ್ಲ, ಆದರೆ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲು ಬಂದಿದ್ದಾರೆ. ನಾವು ಭಾರತ ತಂಡವನ್ನು ಸೋಲಿಸಿದರೆ ನಿಜಕ್ಕೂ ಒಂದು ಸಾಧನೆ. ಪ್ರತಿಯೊಂದು ಪಂದ್ಯವೂ ನಮಗೆ ಮುಖ್ಯವಾಗಿದೆ. ನಾವು ಅದೇ ವಿಧಾನದೊಂದಿಗೆ ಆಡಲು ಬಯಸುತ್ತೇವೆ. ಯಾವುದೇ ವಿರೋಧದ ಮೇಲೆ ನಾವು ಗಮನ ನೀಡುವುದಿಲ್ಲ. ನಾವು ನಮ್ಮ ಯೋಜನೆಗಳಿಗೆ ಬದ್ಧರಾಗಿ ಆಡಲು ಬಯಸುತ್ತೇವೆ,” ಎಂದು ಶಕಿಬ್ ಹೇಳಿದ್ದಾರೆ.

ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ