AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranji Trophy: 540 ಎಸೆತಗಳಲ್ಲಿ ಮುಗಿದ ರಣಜಿ ಪಂದ್ಯ; 63 ವರ್ಷಗಳ ಹಳೆಯ ದಾಖಲೆ ಪುಡಿಪುಡಿ

Ranji Trophy 2025: ಟಿನ್ಸುಕಿಯಾದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಸೇವೆಸ್ ತಂಡ ಅಸ್ಸಾಂ ಅನ್ನು ಕೇವಲ ಎರಡು ದಿನಗಳಲ್ಲಿ ಎಂಟು ವಿಕೆಟ್‌ಗಳಿಂದ ಸೋಲಿಸಿತು. ಇದು ರಣಜಿ ಇತಿಹಾಸದಲ್ಲಿ ಕಡಿಮೆ ಎಸೆತಗಳಿಗೆ ಮುಕ್ತಾಯವಾದ ಪಂದ್ಯವಾಗಿ 63 ವರ್ಷಗಳ ದಾಖಲೆಯನ್ನು ಮುರಿಯಿತು. ಈ ಪಂದ್ಯದಲ್ಲಿ ಸರ್ವಿಸಸ್‌ನ ಇಬ್ಬರು ಬೌಲರ್‌ಗಳು ಹ್ಯಾಟ್ರಿಕ್ ಸಾಧಿಸಿದ್ದು ವಿಶೇಷ. ಈ ಗೆಲುವಿನೊಂದಿಗೆ ಸೇವೆಸ್ ಎಲೈಟ್ ಗ್ರೂಪ್ ಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

Ranji Trophy: 540 ಎಸೆತಗಳಲ್ಲಿ ಮುಗಿದ ರಣಜಿ ಪಂದ್ಯ; 63 ವರ್ಷಗಳ ಹಳೆಯ ದಾಖಲೆ ಪುಡಿಪುಡಿ
Riyan Parag
ಪೃಥ್ವಿಶಂಕರ
|

Updated on: Oct 26, 2025 | 10:21 PM

Share

ಟಿನ್ಸುಕಿಯಾ ಮೈದಾನದಲ್ಲಿ ನಡೆದ ಅಸ್ಸಾಂ ಮತ್ತು ಸರ್ವಿಸಸ್ (Assam vs Services) ನಡುವಿನ 2025-26ರ ರಣಜಿ ಟ್ರೋಫಿ (Ranji Trophy) ಪಂದ್ಯ ಕೇವಲ ಎರಡೇ ದಿನಗಳಲ್ಲಿ ಕೊನೆಗೊಂಡಿದೆ. ಈ ಪಂದ್ಯವನ್ನು ಸರ್ವಿಸಸ್ ತಂಡವು ಎಂಟು ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಇಡೀ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಅಸ್ಸಾಂ ಪರ ಎರಡೂ ಇನ್ನಿಂಗ್ಸ್​ಗಳಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಸಿಡಿಯಿತು. ಪಂದ್ಯದ ಎರಡನೇ ದಿನದಂದು ಗೆಲುವಿಗೆ ಕೇವಲ 71 ರನ್​ಗಳ ಗುರಿ ಪಡೆದ ಸರ್ವಿಸಸ್‌ ತಂಡವು ಕೇವಲ ಎರಡು ವಿಕೆಟ್‌ಗಳ ನಷ್ಟಕ್ಕೆ ಗೆಲುವಿನ ದಡ ಮುಟ್ಟಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಸ್ಸಾಂ ತಂಡವು ಮೊದಲ ಇನ್ನಿಂಗ್ಸ್​ನಲ್ಲಿ 103 ರನ್​ಗಳಿಗೆ ಆಲೌಟ್ ಅಯಿತು. ತಂಡದ ಪರ ಪ್ರದ್ಯುನ್ ಸೈಕಿಯಾ 52 ರನ್​ಗಳ ಇನ್ನಿಂಗ್ಸ್ ಅಡಿದರೆ, ರಿಯಾನ್ ಪರಾಗ್ 36 ರನ್​ಗಳ ಕಾಣಿಕೆ ನೀಡಿದರು. ಮೊದಲ ಇನ್ನಿಂಗ್ಸ್ ಆರಂಭಿಸಿದ ಸರ್ವಿಸಸ್ ತಂಡ ಕೂಡ ಕೇವಲ 108 ರನ್​ಗಳಿಗೆ ಆಲೌಟ್ ಆಯಿತು. ತಂಡದ ಪರ ಇರ್ಫಾನ್ ಖಾನ್ 51 ರನ್ ಬಾರಿಸಿದರು. ಇತ್ತ ಎರಡನೇ ಇನ್ನಿಂಗ್ಸ್​ನಲ್ಲಿ ಅಸ್ಸಾಂ ತಂಡವು 75 ರನ್​ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಸರ್ವಿಸಸ್ ತಂಡ 2 ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು.

ರಣಜಿಯಲ್ಲಿ ಇತಿಹಾಸ ಸೃಷ್ಟಿ

ಅಸ್ಸಾಂ ಮತ್ತು ಸರ್ವಿಸಸ್ ನಡುವಿನ ಈ ಪಂದ್ಯದಲ್ಲಿ ಒಟ್ಟು 540 ಎಸೆತಗಳನ್ನು ಆಡಲಾಗಿದ್ದು, ಇದು ರಣಜಿ ಟ್ರೋಫಿಯ ಇತಿಹಾಸದಲ್ಲಿ ಚೆಂಡುಗಳ ವಿಷಯದಲ್ಲಿ ಅತ್ಯಂತ ಕಡಿಮೆ ಪಂದ್ಯವಾಗಿದೆ. ಈ ಪಂದ್ಯವು 1962 ರಲ್ಲಿ ರೈಲ್ವೇಸ್ ಮತ್ತು ದೆಹಲಿ ನಡುವಿನ ಪಂದ್ಯದಲ್ಲಿ ಆಡಿದ 547 ಎಸೆತಗಳ 63 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಈ ಪಂದ್ಯದಲ್ಲಿ, 91 ವರ್ಷಗಳ ರಣಜಿ ಟ್ರೋಫಿಯ ಇತಿಹಾಸದಲ್ಲಿ ಮೊದಲ ಬಾರಿಗೆ, ಇಬ್ಬರು ವಿಭಿನ್ನ ಬೌಲರ್‌ಗಳು ಒಂದೇ ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಪಡೆದರು. ಇದರಲ್ಲಿ ಸರ್ವಿಸಸ್‌ನ ಅರ್ಜುನ್ ಶರ್ಮಾ ಮತ್ತು ಮೋಹಿತ್ ಜಂಗ್ರಾ ಈ ಸಾಧನೆಯನ್ನು ಮಾಡಿದರು.

ಬೌಲಿಂಗ್​ನಲ್ಲಿ ಮಿಂಚಿದ ಪರಾಗ್

ಅಸ್ಸಾಂ ತಂಡದ ಪರ ಆಡುತ್ತಿರುವ ರಿಯಾನ್ ಪರಾಗ್ ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರೂ, ಬೌಲಿಂಗ್​ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಸರ್ವಿಸಸ್ ತಂಡದ ಮೊದಲ ಇನ್ನಿಂಗ್ಸ್‌ನಲ್ಲಿ ರಿಯಾನ್ ಒಟ್ಟು 5 ವಿಕೆಟ್‌ಗಳನ್ನು ಪಡೆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು, ಈ ಪಂದ್ಯದಲ್ಲಿ ಅವರ ಒಟ್ಟು 7 ವಿಕೆಟ್‌ಗಳನ್ನು ಕಬಳಿಸಿದರು. ಈ ಪಂದ್ಯದ ಗೆಲುವಿನೊಂದಿಗೆ, ಸರ್ವಿಸಸ್ ತಂಡವು ಈಗ ಎರಡು ಪಂದ್ಯಗಳ ನಂತರ 13 ಅಂಕಗಳೊಂದಿಗೆ ಎಲೈಟ್ ಗ್ರೂಪ್ ಸಿ ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ತಲುಪಿದೆ. ಇತ್ತ ಅಸ್ಸಾಂ ತಂಡ ಎರಡು ಪಂದ್ಯಗಳಿಂದ ಕೇವಲ ಒಂದು ಪಾಯಿಂಟ್ ಅನ್ನು ಹೊಂದಿದ್ದು, 5 ನೇ ಸ್ಥಾನದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ