RCB vs PBKS: ಚಿನ್ನಸ್ವಾಮಿಯಲ್ಲಿ ಹ್ಯಾಟ್ರಿಕ್ ಸೋಲು: ಈ 5 ಆಟಗಾರರಿಂದಾಗಿ ಆರ್‌ಸಿಬಿಗೆ ತವರಿನಲ್ಲೇ ಅವಮಾನ
Bengaluru vs Punjab: ಇಂಡಿಯನ್ ಪ್ರೀಮಿಯರ್ ಲೀಗ್ನ 34ನೇ ಪಂದ್ಯ ಆರಂಭಕ್ಕೆ ಮಳೆ ಅಡ್ಡಿಪಡಿಸಿತು. ಹೀಗಾಗಿ ಓವರ್ ಅನ್ನು 14 ಕ್ಕೆ ಇಳಿಸಲಾಯಿತು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ಆರ್‌ಸಿಬಿ ಸೋಲಿಗೆ ತಮ್ಮದೇ ತಂಡದ ಕೆಲ ಸ್ಟಾರ್ ಆಟಗಾರರೇ ಕಾರಣರಾದರು.

ಬೆಂಗಳೂರು (ಏ. 19): ಐಪಿಎಲ್ 2025ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು (Royal Challengers Bengaluru) 14 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 95 ರನ್‌ಗಳಿಗೆ ನಿರ್ಬಂಧಿಸಿದ ಪಂಜಾಬ್ ತಂಡ, 12.1 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಪಂಜಾಬ್ ಪರ ನೆಹಾಲ್ ವಾಧೇರಾ ಅಜೇಯ 33 ರನ್ ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡಿದರು. ಆರ್‌ಸಿಬಿ ಪರ ಜೋಶ್ ಹ್ಯಾಜಲ್‌ವುಡ್ 14 ರನ್‌ಗಳಿಗೆ ಮೂರು ವಿಕೆಟ್ ಕಿತ್ತರು. ಭುವನೇಶ್ವರ್ ಕುಮಾರ್ ಎರಡು ವಿಕೆಟ್ ಪಡೆದರು. ಮಳೆಯಿಂದ ಬಾಧಿತವಾದ 14 ಓವರ್‌ಗಳ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸಿತು. ಆರ್‌ಸಿಬಿ ಸೋಲಿಗೆ ತಮ್ಮದೇ ತಂಡದ ಕೆಲ ಸ್ಟಾರ್ ಆಟಗಾರರೇ ಕಾರಣರಾದರು.
ಫಿಲ್ ಸಾಲ್ಟ್: ಪಂಜಾಬ್ ವಿರುದ್ಧ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರ ಬ್ಯಾಟ್ ಮೌನವಾಗಿತ್ತು. ಅವರು ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಆದರೆ ಅದಾದ ನಂತರ ಅವರನ್ನು ಆ ಓವರ್‌ನ ನಾಲ್ಕನೇ ಎಸೆತದಲ್ಲಿ ಅರ್ಶ್‌ದೀಪ್ ಸಿಂಗ್ ಔಟ್ ಮಾಡಿದರು.
ವಿರಾಟ್ ಕೊಹ್ಲಿ: ಆರ್‌ಸಿಬಿಯ ಮಾಜಿ ನಾಯಕ ಮತ್ತು ರನ್ ಮೆಷಿನ್ ವಿರಾಟ್ ಕೊಹ್ಲಿ ಪಂಜಾಬ್ ವಿರುದ್ಧ ಸಂಪೂರ್ಣ ವಿಫಲರಾದರು. ಅವರು ಮೂರು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು.
ಕೃನಾಲ್ ಪಾಂಡ್ಯ: ಭಾರತದ ಅನುಭವಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಕೂಡ ಹೇಳಿಕೊಳಳುವಂತಹ ಪ್ರದರ್ಶನ ನೀಡಿಲ್ಲ. ಅವರು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ವಿಫಲರಾದರು. ಮೊದಲು ಬ್ಯಾಟಿಂಗ್ ಮಾಡಿದ ಪಾಂಡ್ಯ ಎರಡನೇ ಎಸೆತದಲ್ಲಿ ಒಂದೇ ಒಂದು ರನ್ ಗಳಿಸಿ ಔಟಾದರು. ಅದಾದ ನಂತರ ಅವರು ಪಂದ್ಯದಾದ್ಯಂತ ಒಂದು ಓವರ್ ಬೌಲಿಂಗ್ ಮಾಡಿದರು. ಈ ಓವರ್‌ನಲ್ಲಿ ಕೃನಾಲ್ 10 ರನ್ ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ.
RCB vs PBKS, IPL 2025: ಪಂಜಾಬ್ ಕಿಂಗ್ಸ್ ಗೆಲುವಿನ ಹೊರತಾಗಿಯೂ ನೆಹಾಲ್ ವಧೇರಾಗೆ ಅನ್ಯಾಯ?: ಈ ಗೌರವ ಸಿಗಲಿಲ್ಲ
ಲಿಯಾಮ್ ಲಿವಿಂಗ್‌ಸ್ಟೋನ್: ಇಂಗ್ಲೆಂಡ್‌ನ ಅನುಭವಿ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ ವಿಫಲರಾದರು. ಅವರು ಆರ್‌ಸಿಬಿ ಪರ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗುತ್ತಿಲ್ಲ. ಆರು ಎಸೆತಗಳಲ್ಲಿ ಕೇವಲ ನಾಲ್ಕು ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಯಶ್ ದಯಾಳ್: ವೇಗಿ ಯಶ್ ದಯಾಳ್ ಆರ್‌ಸಿಬಿ ನಿರೀಕ್ಷೆಗಳನ್ನು ಪೂರೈಸುವಲ್ಲಿ ವಿಫಲರಾದರು. ಆರ್‌ಸಿಬಿಗೆ ಅವರ ಅಗತ್ಯವಿದ್ದಾಗ, ತಂಡಕ್ಕೆ ವಿಕೆಟ್ ಪಡೆಯುವಲ್ಲಿ ಸಾಧ್ಯವಾಗಲಿಲ್ಲ. ಜೋಶ್ ಹ್ಯಾಜಲ್‌ವುಡ್ ಮೂರು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಎರಡು ವಿಕೆಟ್ ಪಡೆದರು. ಆದರೆ ಈ ಪಂದ್ಯದಲ್ಲಿ ಯಶ್‌ಗೆ ಯಾವುದೇ ವಿಕೆಟ್ ಸಿಗಲಿಲ್ಲ. ಅವರು 2.1 ಓವರ್‌ಗಳಲ್ಲಿ 18 ರನ್‌ಗಳನ್ನು ನೀಡಿದರು.
ಐಪಿಎಲ್‌ನಲ್ಲಿ ತಂಡಗಳು ತಮ್ಮ ತವರು ಮೈದಾನದಲ್ಲಿ 7 ಪಂದ್ಯಗಳನ್ನು ಆಡುತ್ತವೆ. ಉಳಿದ 7 ಪಂದ್ಯಗಳನ್ನು ಬೇರೆ ಬೇರೆ ಕ್ರೀಡಾಂಗಣಗಳಲ್ಲಿ ಆಡಲಾಗುತ್ತದೆ. ತವರಿನಲ್ಲಿ ಉತ್ತಮ ಪ್ರದರ್ಶನ ನೀಡುವುದರಿಂದ ಪ್ಲೇಆಫ್‌ಗೆ ಹೋಗುವ ಹಾದಿ ಸುಲಭವಾಗುತ್ತದೆ, ಆದರೆ ಆರ್‌ಸಿಬಿ ತವರಿನಲ್ಲಿ ಒಂದು ಗೆಲುವಿಗೂ ಕಷ್ಟಪಡುತ್ತಿದೆ. ಇಲ್ಲಿಯವರೆಗೆ, ಆರ್‌ಸಿಬಿ ತನ್ನ ತವರು ಮೈದಾನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 46 ಸೋಲುಗಳನ್ನು ಅನುಭವಿಸಿದೆ. ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ತವರಿನ ಪಂದ್ಯಗಳನ್ನು ಸೋತ ತಂಡ ಇದು. ಈ ಬಾರಿ ಕೂಡ ತವರಿನಲ್ಲಿ ಹ್ಯಾಟ್ರಿಕ್ ಸೋಲುಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ