AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: RCB ಅಭಿಮಾನಿಗಳಿಗೆ ‘ಮುಟ್ಟಿ’ ನೋಡಿಕೊಳ್ಳುವಂತಹ ಉತ್ತರ ನೀಡಿದ ಶಿವಂ ದುಬೆ

IPL 2025 RCB - CSK: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್​) ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಕೆಲವೇ ಕೆಲವು ಆಟಗಾರರಲ್ಲಿ ಶಿವಂ ದುಬೆ ಕೂಡ ಒಬ್ಬರು. ಈ ಹಿಂದೆ ಆರ್​ಸಿಬಿಯಲ್ಲಿ ಕಾಣಿಸಿಕೊಂಡಿದ್ದ ದುಬೆ ಇದೀಗ ಸಿಎಸ್​ಕೆ ತಂಡದ ಪರ ಕಣಕ್ಕಿಳಿಯುತ್ತಿದ್ದಾರೆ.

VIDEO: RCB ಅಭಿಮಾನಿಗಳಿಗೆ 'ಮುಟ್ಟಿ' ನೋಡಿಕೊಳ್ಳುವಂತಹ ಉತ್ತರ ನೀಡಿದ ಶಿವಂ ದುಬೆ
Shivam Dube - Rcb fans
Follow us
ಝಾಹಿರ್ ಯೂಸುಫ್
|

Updated on:Apr 19, 2025 | 9:04 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಗೆಲುವಿನ ಲಯಕ್ಕೆ ಮರಳಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯದಲ್ಲಿ ಸಿಎಸ್​ಕೆ ತಂಡವು 5 ವಿಕೆಟ್​ಗಳ ಜಯ ಸಾಧಿಸಿತ್ತು. ಈ ಪಂದ್ಯವನ್ನು ವೀಕ್ಷಿಸಲು ಆರ್​ಸಿಬಿ ಅಭಿಮಾನಿಗಳು ಕೂಡ ಆಗಮಿಸಿದ್ದರು.

ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಶಿವಂ ದುಬೆ ಪ್ರಮುಖ ಪಾತ್ರವಹಿಸಿದ್ದರು. ಅಲ್ಲದೆ ಅಜೇಯ 43 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿ ದುಬೆ ಡ್ರೆಸ್ಸಿಂಗ್​ಗೆ ರೂಮ್​ಗೆ ಮರಳಿದ್ದರು. ಈ ವೇಳೆ ಗ್ಯಾಲರಿಯಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಶಿವಂ ದುಬೆ ಅವರನ್ನು ಟ್ರೋಲ್ ಮಾಡಿದ್ದಾರೆ.

ಇತ್ತ ಆರ್​ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಂಡ ಅಭಿಮಾನಿಗಳ ಹಿಯ್ಯಾಳಿಕೆ ಕೇಳಿಸುತ್ತಿದ್ದಂತೆ ಶಿವಂ ದುಬೆ ತನ್ನ ಜೆರ್ಸಿ ಮೇಲಿರುವ 5 ಸ್ಟಾರ್​ಗಳನ್ನು ತೋರಿಸಿ ತಿರುಗೇಟು ನೀಡಿದ್ದಾರೆ. ಈ ಐದು ಸ್ಟಾರ್​ಗಳು ಸಿಎಸ್​ಕೆ ತಂಡವು ಗೆದ್ದಿರುವ 5 ಟ್ರೋಫಿಗಳನ್ನು ಪ್ರತಿನಿಧಿಸುತ್ತದೆ. ಇದನ್ನೇ ತೋರಿಸಿ ಆರ್​ಸಿಬಿ ತಂಡ ಇನ್ನೂ ಸಹ ಕಪ್ ಗೆದ್ದಿಲ್ಲ ಎಂದು ದುಬೆ ಪರೋಕ್ಷವಾಗಿ ಕಾಲೆಳೆದಿದ್ದಾರೆ.

ಇದನ್ನೂ ಓದಿ
Image
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
Image
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
Image
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
Image
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಇದೀಗ ಶಿವಂ ದುಬೆ ಅವರ ತಿರುಗೇಟಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಿಎಸ್​ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ.

ಶಿವಂ ದುಬೆ ವಿಡಿಯೋ:

ಸತತ 5 ಸೋಲುಗಳ ಬಳಿಕ ಗೆಲುವು:

ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆ ಬಳಿಕ ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿತ್ತು. ಈ ಐದು ಪಂದ್ಯಗಳ ಬಳಿಕ ಇದೀಗ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 166 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19.3 ಓವರ್​ಗಳಲ್ಲಿ 168 ರನ್ ಬಾರಿಸಿ 5 ವಿಕೆಟ್​ಗಳ ಗೆಲುವು ದಾಖಲಿಸಿದೆ. ಈ ಗೆಲುವಿನ ಹೊರತಾಗಿಯೂ ಸಿಎಸ್​ಕೆ ತಂಡವು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಇದಾಗ್ಯೂ ಮುಂದಿನ 7 ಪಂದ್ಯಗಳಲ್ಲಿ 6 ರಲ್ಲಿ ಗೆಲುವು ದಾಖಲಿಸಿದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇಆಫ್​ಗೇರುವುದು ಬಹುತೇಕ ಖಚಿತವಾಗಲಿದೆ. ಹೀಗಾಗಿ ಸಿಎಸ್​ಕೆ ಪಾಲಿಗೆ ಮುಂದಿನ ಎಲ್ಲಾ ಪಂದ್ಯಗಳು ತುಂಬಾ ಮಹತ್ವದ್ದು ಎಂಬುದು ವಿಶೇಷ.

Published On - 9:04 am, Sat, 19 April 25

ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಆಪರೇಷನ್​ ಸಿಂಧೂರ್​, ಪ್ರಧಾನಿಗೆ ಧನ್ಯವಾದ ತಿಳಿಸಿದ ಪಹಲ್ಗಾಮ್ ಸಂತ್ರಸ್ತೆ
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
ಅರಸೊತ್ತಿಗೆ ಕಾಲದಿಂದ ನಡೆದುಕೊಂಡು ಬಂದಿರುವ ಪದ್ಧತಿ: ಅರ್ಚಕ ದೀಕ್ಷಿತ್
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
‘ಭರ್ಜರಿ ಬ್ಯಾಚುಲರ್ಸ್’ ಹೊಸ ಎಪಿಸೋಡ್​ಗೆ ಹೊರಾಂಗಣ ಶೂಟಿಂಗ್; ಯಾವ ಜಿಲ್ಲೆ?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
ಸೇನೆಗೆ ವರವಾಯ್ತೇ ಲಕ್ಷ್ಮೀ ಜನಾರ್ದನ ಪ್ರಸಾದ! ಬಲಭಾಗದಿಂದ ಹೂ ನೀಡಿದ ದೇವರು
ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು
ವಿವೇಕ, ವಿವೇಚನೆ ಮಾರಿಕೊಂಡಿರುವ ಪಾಕಿಸ್ತಾನಕ್ಕೆ ಬುದ್ಧಿ ಬಾರದು
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ಕರುಂಗಲಿ ಮಾಲೆಯ ಹಿಂದಿನ ರಹಸ್ಯ ಹಾಗೂ ಅದರ ಮಹತ್ವ ತಿಳಿಯಿರಿ
ಕರುಂಗಲಿ ಮಾಲೆಯ ಹಿಂದಿನ ರಹಸ್ಯ ಹಾಗೂ ಅದರ ಮಹತ್ವ ತಿಳಿಯಿರಿ
Daily horoscope: ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲ
Daily horoscope: ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲ