IPL 2026 Final: ಕರ್ನೂಲ್​ನಲ್ಲಿ ಆರ್​ಸಿಬಿ ಫ್ಯಾನ್ಸ್ ಅತಿರೇಕ; ಬಸ್ ಮೇಲೆ ಕಲ್ಲು ತೂರಾಟ

IPL fan celebrations: 2025ರ ಐಪಿಎಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆದ ನಂತರ ಕರ್ನೂಲ್‌ನಲ್ಲಿ ಸಂಭ್ರಮಾಚರಣೆ ಹಿಂಸಾತ್ಮಕವಾಗಿ ತಿರುಗಿತ್ತು. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಬಿಗಿ ಬಂದೋಬಸ್ತ್‌ನಿಂದ ಯಾವುದೇ ಅಹಿತಕರ ಘಟನೆ ನಡೆಯದಿದ್ದರೂ, ಕರ್ನೂಲ್‌ನಲ್ಲಿ ಅಭಿಮಾನಿಗಳು ರಸ್ತೆ ತಡೆದು ಗದ್ದಲವೆಬ್ಬಿಸಿದರು. ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಕಿಟಕಿಗಳನ್ನು ಧ್ವಂಸಗೊಳಿಸಿದ್ದರಿಂದ ಪ್ರಯಾಣಿಕರು ತೊಂದರೆಗೊಳಗಾದರು. ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು.

IPL 2026 Final: ಕರ್ನೂಲ್​ನಲ್ಲಿ ಆರ್​ಸಿಬಿ ಫ್ಯಾನ್ಸ್ ಅತಿರೇಕ; ಬಸ್ ಮೇಲೆ ಕಲ್ಲು ತೂರಾಟ
Rcb Fans

Updated on: Jun 01, 2026 | 7:57 PM

2025 ರ ಐಪಿಎಲ್‌ನಲ್ಲಿ (IPL) ಆರ್​ಸಿಬಿ (RCB) ಚಾಂಪಿಯನ್‌ ಆದ ಬಳಿಕ ರಾಜ್ಯಾದ್ಯಂತ ಕೋಟ್ಯಾಂತರ ಅಭಿಮಾನಿಗಳು ರಸ್ತೆಗಳಿದು ಸಂಭ್ರಮಾಚರಣೆ ನಡೆಸಿದ್ದರು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳಾಗಿದ್ದವು. ಹೀಗಾಗಿ ಈ ಬಾರಿ ಆ ರೀತಿಯ ಘಟನೆಗಳು ನಡೆಯುವುದನ್ನು ತಡೆಯುವ ಸಲುವಾಗಿ ರಾಜ್ಯದಲ್ಲಿ ಬಿಗ್ ಬಂದೋಬಸ್ತ್ ಮಾಡಲಾಗಿತ್ತು. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಆ ರೀತಿಯ ಅಹಿತಕರ ಘಟನೆಗಳು ಯಾವು ನಡೆಯಲಿಲ್ಲ. ಆದರೆ ಪಕ್ಕದ ರಾಜ್ಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಆರ್​ಸಿಬಿ ಫ್ಯಾನ್ಸ್​ಗಳ ಅತಿರೇಕದಿಂದಾಗಿ ಸಾರ್ವಜನಿಕರು ತೊಂದರೆಗೊಳಗಾಗಿದ್ದಾರೆ. ಮಾತ್ರವಲ್ಲದೆ ಅಭಿಮಾನಿಗಳ ಸಂಭ್ರಮಾಚರಣೆ ಹಿಂಸಾತ್ಮಕವಾಗಿ ತಿರುಗಿ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ಕಿಟಕಿ ಗ್ಲಾಸ್​ಗಳನ್ನು ಧ್ವಂಸಗೊಳಿಸಲಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಆರ್‌ಸಿಬಿ ಅಭಿಮಾನಿಗಳ ಸಂಭ್ರಮಾಚರಣೆ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಬೆಂಗಳೂರು ತಂಡ ಸತತ ಎರಡನೇ ವರ್ಷ ಐಪಿಎಲ್ ಟ್ರೋಫಿ ಗೆದ್ದ ನಂತರ ದೇಶಾದ್ಯಂತ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು. ಕರ್ನೂಲ್ ನಗರದಲ್ಲಿಯೂ ಸಹ, ನೂರಾರು ಯುವಕರು ಮತ್ತು ಅಭಿಮಾನಿಗಳು ಭಾನುವಾರ ಮಧ್ಯರಾತ್ರಿ ಬ್ಯಾನರ್‌ಗಳನ್ನು ಹಿಡಿದು ರಸ್ತೆಗಳಿಗೆ ಇಳಿದಿದ್ದರು. ಆದರೆ, ಈ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ.

ಖಾಸಗಿ ಬಸ್ ಮೇಲೆ ಕಲ್ಲು ತೂರಾಟ

ನಗರದ ರಾಜು ವಿಹಾರ್ ಸೆಂಟರ್‌ಗೆ ಆಗಮಿಸಿದ ಅಭಿಮಾನಿಗಳ ದೊಡ್ಡ ಗುಂಪು ಇದ್ದಕ್ಕಿದ್ದಂತೆ ರಸ್ತೆ ತಡೆದು ಸಂಭ್ರಮಾಚರಣೆಯಲ್ಲಿ ಮೊಳಗಿತು. ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಾ ಘೋಷಣೆಗಳನ್ನು ಕೂಗಿದರು. ಇದು ಸಾಮಾನ್ಯ ಪ್ರಯಾಣಿಕರು ಮತ್ತು ವಾಹನ ಚಾಲಕರಿಗೆ ತೀವ್ರ ತೊಂದರೆಯನ್ನುಂಟುಮಾಡಿತು. ಈ ಸಂಭ್ರಮಾಚರಣೆ ಗದ್ದಲಕ್ಕೆ ತಿರುಗುತ್ತಿದ್ದಂತೆ, ಇದ್ದಕ್ಕಿದ್ದಂತೆ ಕಾನೂನು ಸುವ್ಯವಸ್ಥೆ ಹದಗೆಡಲಾರಂಭಿಸಿತು. ಇದೇ ವೇಳೆ ಕೆಲವು ಅಪರಿಚಿತ ದುಷ್ಕರ್ಮಿಗಳು ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಖಾಸಗಿ ಸಾರಿಗೆ ಬಸ್ ಮೇಲೆ ಇದ್ದಕ್ಕಿದ್ದಂತೆ ಕಲ್ಲು ತೂರಾಟ ನಡೆಸಿ ವಿಧ್ವಂಸಕ ಕೃತ್ಯ ಎಸಗಿದರು.

IPL 2026 Final: ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್; ವಿಡಿಯೋ

ದಾಳಿಯಲ್ಲಿ ಬಸ್ಸಿನ ಕಿಟಕಿ ಗ್ಲಾಸ್​ಗಳು ಸಂಪೂರ್ಣವಾಗಿ ಪುಡಿಪುಡಿಯಾದವು. ಇದರಿಂದ ಮಧ್ಯರಾತ್ರಿ ತಮ್ಮ ಆಸನಗಳಲ್ಲಿ ಮಲಗಿದ್ದ ಪ್ರಯಾಣಿಕರು ಹಠಾತ್ ದಾಳಿಯಿಂದ ಆಘಾತಕ್ಕೊಳಗಾಗಿ ಜೋರಾಗಿ ಕಿರುಚಾಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಕರ್ನೂಲ್ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಭಿಮಾನಿಗಳ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿದ ನಂತರ ಪರಿಸ್ಥಿತಿಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:54 pm, Mon, 1 June 26

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us