IPL 2025: ಬೆಂಗಳೂರಿನಲ್ಲಿ ನಾಳೆ ಶೇ. 84 ರಷ್ಟು ಮಳೆ..! ಆರ್​ಸಿಬಿ- ಕೆಕೆಆರ್ ಪಂದ್ಯ ನಡೆಯುವುದು ಡೌಟ್

RCB vs KKR Chinnaswamy weather report: ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆಯಿಂದಾಗಿ ಸ್ಥಗಿತಗೊಂಡಿದ್ದ ಐಪಿಎಲ್ 2025, ಮೇ 17 ರಿಂದ ಮರು ಆರಂಭವಾಗುತ್ತಿದೆ. ಮೊದಲ ಪಂದ್ಯ RCB ಮತ್ತು KKR ನಡುವೆ ನಡೆಯಲಿದೆ. ಆದರೆ ಈ ಪಂದ್ಯದ ದಿನದಂದು ಬೆಂಗಳೂರಿನಲ್ಲಿ ಮಳೆಯ ಸಾಧ್ಯತೆ ಶೇಕಡಾ 84ರಷ್ಟಿದೆ. ಎರಡೂ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಿದ್ದು, ಮಳೆಯಿಂದ ಪಂದ್ಯ ರದ್ದಾದರೆ ಎರಡು ತಂಡಗಳು ಸಂಕಷ್ಟಕ್ಕೆ ಸಿಲುಕಲಿವೆ.

IPL 2025: ಬೆಂಗಳೂರಿನಲ್ಲಿ ನಾಳೆ ಶೇ. 84 ರಷ್ಟು ಮಳೆ..! ಆರ್​ಸಿಬಿ- ಕೆಕೆಆರ್ ಪಂದ್ಯ ನಡೆಯುವುದು ಡೌಟ್
Rcb Vs Kkr

Updated on: May 16, 2025 | 3:29 PM

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಸ್ಥಗಿತಗೊಂಡಿದ್ದ ಐಪಿಎಲ್ 2025 (IPL 2025), ಶನಿವಾರ ಅಂದರೆ ಮೇ 17 ರಿಂದ ಮತ್ತೆ ಪ್ರಾರಂಭವಾಗಲಿದೆ. ಮೊದಲ ಪಂದ್ಯವು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs KKR) ನಡುವೆ ನಡೆಯಲಿದೆ. ಈ ಪಂದ್ಯ ಎರಡೂ ತಂಡಗಳಿಗೂ ಬಹಳ ಮುಖ್ಯವಾಗಿದ್ದು, ಆರ್​​ಸಿಬಿ ಈ ಪಂದ್ಯವನ್ನು ಗೆದ್ದರೆ ಖಚಿತವಾಗಿ ಪ್ಲೇಆಫ್ ಟಿಕೆಟ್ ಪಡೆಯಲಿದೆ. ಇತ್ತ ಕೆಕೆಆರ್ ಗೆದ್ದರೆ ಅದರ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ, ಒಂದು ವೇಳೆ ಸೋತರೆ ಅದು ಕೂಡ ನಾಲ್ಕನೇ ತಂಡವಾಗಿ ಲೀಗ್​ನಿಂದ ಹೊರಬೀಳಲಿದೆ. ಹೀಗಾಗಿ ಈ ಪಂದ್ಯ ನಡೆಯಲಿ ಎಂದು ಎರಡೂ ತಂಡಗಳು ದೇವರ ಬಳಿ ಮೊರೆ ಇಟ್ಟಿವೆ. ಆದರೆ ಈ ಎರಡು ತಂಡಗಳ ಪ್ರಾರ್ಥನೆ ಫಲಿಸುವುದು ಅಸಾಧ್ಯವೆಂದು ತೋರುತ್ತಿದೆ. ಇದಕ್ಕೆ ಕಾರಣ ಬೆಂಗಳೂರಿನಲ್ಲಿ ಮೇ 17 ರ ಹವಾಮಾನ ವರದಿ (Bengaluru Weather).

ಆರ್​ಸಿಬಿ ಗೆದ್ದರೆ ಪ್ಲೇ ಆಫ್ ಖಚಿತ

ಮೇ 17 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಪಂದ್ಯದ ವೇಳೆ ಮಳೆ ಬರುವ ಸಾಧ್ಯತೆ ಇದೆ. ಹವಾಮಾನ ಇಲಾಖೆಯ ಪ್ರಕಾರ, ಮಳೆಯಾಗುವ ಸಾಧ್ಯತೆ ಶೇ. 84 ರಷ್ಟು ಇದೆ. ಪಂದ್ಯದ ವೇಳೆ ಮಳೆ ಬಂದರೆ ಎರಡೂ ತಂಡಗಳು ಭಾರಿ ನಷ್ಟ ಅನುಭವಿಸಬೇಕಾಗುತ್ತದೆ. ಮಳೆಯಿಂದಾಗಿ ಪಂದ್ಯ ರದ್ದಾದರೆ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಲಿದ್ದು, 17 ಅಂಕಗಳನ್ನು ಪಡೆಯುತ್ತದೆ. ಹೀಗಾಗಿ ಪ್ಲೇ ಆಫ್​ಗೇರಬೇಕೆಂದರೆ ಅದರಲ್ಲೂ ಮೊದಲೆರಡು ಸ್ಥಾನದಲ್ಲಿ ಉಳಿಯಬೇಕೆಂದರೆ ಆರ್​ಸಿಬಿ ಉಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಗೆಲ್ಲಬೇಕಾಗುತ್ತದೆ. ಆರ್‌ಸಿಬಿ ಪ್ರಸ್ತುತ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಗುಜರಾತ್ ಟೈಟನ್ಸ್ ತಂಡ ಅಗ್ರಸ್ಥಾನದಲ್ಲಿದೆ.

IPL 2025: ನಾಳೆಯಿಂದ ದ್ವಿತೀಯಾರ್ಧದ ಐಪಿಎಲ್ ಆರಂಭ; ಉಳಿದ ಪಂದ್ಯಗಳ ವೇಳಾಪಟ್ಟಿ ಹೀಗಿದೆ

ಕೆಕೆಆರ್‌ ಕನಸು ಭಗ್ನ

ಮಳೆಯಿಂದಾಗಿ ಪಂದ್ಯ ರದ್ದಾದರೆ ಕೆಕೆಆರ್‌ ಪ್ಲೇ ಆಫ್ ಭರವಸೆ ಹುಸಿಯಾಗುತ್ತದೆ. ಹೀಗಾಗಿ ಕೆಕೆಆರ್ ತಂಡ ಯಾವುದೇ ಬೆಲೆ ತೆತ್ತಾದರೂ ಆರ್‌ಸಿಬಿ ವಿರುದ್ಧ ಗೆಲ್ಲಲೇಬೇಕು. ಈ ಸೀಸನ್‌ನಲ್ಲಿ ಕೆಕೆಆರ್ ಇದುವರೆಗೆ 12 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 5 ರಲ್ಲಿ ಗೆದ್ದು 6 ರಲ್ಲಿ ಸೋತಿದೆ. ಒಂದು ಪಂದ್ಯ ರದ್ದಾಗಿದೆ. ಈ ರೀತಿಯಾಗಿ, ತಂಡ 11 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಮಳೆಯಿಂದಾಗಿ ಪಂದ್ಯ ರದ್ದಾದರೆ ತಂಡಕ್ಕೆ 12 ಅಂಕಗಳು ಸಿಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಕೆಕೆಆರ್ ತನ್ನ ಮುಂದಿನ ಎರಡೂ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆಲ್ಲಬೇಕಾಗುತ್ತದೆ. ಆಗ ಮಾತ್ರ ಪ್ಲೇಆಫ್ ತಲುಪುವ ಅವರ ಭರವಸೆ ಜೀವಂತವಾಗಿರುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ