IPL 2025: ಕೇವಲ 3 ಓವರ್ಗಳಲ್ಲಿ 53 ರನ್ ಚಚ್ಚಿದ ಕೊಹ್ಲಿ- ಸಾಲ್ಟ್
IPL 2025 RCB's Explosive Start Against DC: ಐಪಿಎಲ್ 2025ರ 24ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅದ್ಭುತ ಆರಂಭ ಪಡೆಯಿತು. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರ ಅದ್ಭುತ ಬ್ಯಾಟಿಂಗ್‌ನಿಂದ ಕೇವಲ 18 ಎಸೆತಗಳಲ್ಲಿ 53 ರನ್ ಗಳಿಸಿತು. ಕೊಹ್ಲಿ ಮತ್ತು ಸಾಲ್ಟ್ ಅವರ ಅಮೋಘ ಪಾಲುದಾರಿಕೆ ಆರ್‌ಸಿಬಿಗೆ ಉತ್ತಮ ಆರಂಭವನ್ನು ನೀಡಿತು.

ಐಪಿಎಲ್ 2025 ರ (IPL 2025) 24ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮತ್ತೊಮ್ಮೆ ತವರಿನಲ್ಲಿ ಟಾಸ್ ಸೋತ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಅದರಂತೆ ಆರ್‌ಸಿಬಿಗೆ ಭರ್ಜರಿ ಆರಂಭವನ್ನು ತಂದುಕೊಡುವುದರಲ್ಲೂ ಆರಂಭಿಕರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ಫಿಲ್ ಸಾಲ್ಟ್ ಯಶಸ್ವಿಯಾಗಿದ್ದಾರೆ. ಈ ಇಬ್ಬರು ದಾಂಡಿಗರು ಕೇವಲ 3 ಓವರ್ಗಳಲ್ಲಿ ಅಂದರೆ 18 ಎಸೆತಗಳಲ್ಲಿ ತಂಡವನ್ನು 53 ರನ್ಗಳಿಗೆ ಕೊಂಡೊಯ್ದರು.
ಮೊದಲ ಓವರ್ನಲ್ಲಿ 7 ರನ್
ಎಂದಿನಂತೆ ಈ ಪಂದ್ಯದಲ್ಲೂ ಆರ್ಸಿಬಿ ಆರಂಭಿಕರಾಗಿ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಕಣಕ್ಕಿಳಿದರು. ಇತ್ತ ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ ಮೊದಲ ಓವರ್ ಎಸೆದರು. ಈ ಓವರ್ನಲ್ಲಿ ಕೊಹ್ಲಿ ತಾವು ಎದುರಿಸಿದ ಮೊದಲ ಎಸೆತವನ್ನೇ ಬೌಂಡರಿ ಬಾರಿಸುವ ಮೂಲಕ ತಮ್ಮ ಖಾತೆ ತೆರೆದರು. ಈ ಓವರ್ನಿಂದ ಒಟ್ಟು 7 ರನ್ಗಳು ಬಂದವು.
ಎರಡನೇ ಓವರ್ನಲ್ಲಿ 16 ರನ್
ಎರಡನೇ ಓವರ್ ಎಸೆಯುವ ಜವಬ್ದಾರಿ ಹೊತ್ತ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಒಟ್ಟು 16 ರನ್ ಬಿಟ್ಟುಕೊಟ್ಟರು. ಈ ಓವರ್ನ ಮೊದಲ ಎಸೆತವನ್ನು ವಿರಾಟ್ ಕೊಹ್ಲಿ ಬೌಂಡರಿಗಟ್ಟಿದರೆ, ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಫಿಲ್ ಸಾಲ್ಟ್ ಕ್ರಮವಾಗಿ 1 ಸಿಕ್ಸರ್ ಹಾಗೂ 1 ಬೌಂಡರಿ ಬಾರಿಸಿದರು. ಆ ನಂತರ ಸ್ಟಾರ್ಕ್ ಎಸೆದ ಮೂರನೇ ಓವರ್ನಲ್ಲಿ ರನ್ಗಳ ಮಳೆಯೇ ಹರಿಯಿತು.
3ನೇ ಓವರ್ನಲ್ಲಿ 30 ರನ್
ಮೂರನೇ ಓವರ್ನ ಸ್ಟ್ರೈಕ್ ತೆಗೆದುಕೊಂಡ ಫಿಲ್ ಸಾಲ್ಟ್ ಮೊದಲ ಎಸೆತವನ್ನೇ ಸಿಕ್ಸರ್ಗಟ್ಟಿದರು. ಆ ಬಳಿಕ ಎರಡು, ಮೂರು ಹಾಗೂ ನಾಲ್ಕನೇ ಎಸೆತವನ್ನು ಸಾಲ್ಟ್ ಬೌಂಡರಿ ಬಾರಿಸಿದರು. ದುರಾದೃಷ್ಟವೆಂಬಂತೆ ಸ್ಟಾರ್ಕ್ ಎಸೆದ ನಾಲ್ಕನೇ ಎಸೆತ ನೋ ಬಾಲ್ ಆಗಿತ್ತು. ಆ ಬಳಿಕ ಫ್ರೀ ಹಿಟ್ನಲ್ಲೂ ಸಾಲ್ಟ್ ಸಿಕ್ಸರ್ ಬಾರಿಸಿದರು. ಐದನೇ ಎಸೆತದಲ್ಲಿ ಸಾಲ್ಟ್ ಸಿಂಗಲ್ ತೆಗೆದುಕೊಂಡರು. ಕೊನೆಯ ಬಾಲ್ನಲ್ಲಿ ಸ್ಟ್ರೈಕ್ಗೆ ಬಂದ ಕೊಹ್ಲಿ ಕೊನೆಯ ಎಸೆತವನ್ನು ಸಿಕ್ಸರ್ಗಟ್ಟಿದರು. ಈ ಮೂಲಕ ಆರ್ಸಿಬಿ ಕೇವಲ 18 ಎಸೆತಗಳಲ್ಲಿ 53 ರನ್ ಕಲೆಹಾಕಿತು.
RCB vs DC Live Score, IPL 2025: ಆರ್ಸಿಬಿ 5ನೇ ವಿಕೆಟ್ ಪತನ
ಉಭಯ ತಂಡಗಳು
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಜೇಕ್ ಫ್ರೇಸರ್-ಮೆಕ್‌ಗುರ್ಕ್, ಫಾಫ್ ಡು ಪ್ಲೆಸಿಸ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಶುತೋಷ್ ಶರ್ಮಾ, ಅಕ್ಷರ್ ಪಟೇಲ್ (ನಾಯಕ), ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ, ಮುಖೇಶ್ ಕುಮಾರ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:33 pm, Thu, 10 April 25