IND vs SL: ರಿಷಭ್ ಪಂತ್ ಗಾಯದ ಬಗ್ಗೆ ಹೊರಬಿತ್ತು ಬಿಗ್ ಅಪ್​ಡೇಟ್

Rishabh Pant injury update: ಶ್ರೀಲಂಕಾ ವಿರುದ್ಧದ ಟೆಸ್ಟ್‌ನಲ್ಲಿ ರಿಷಭ್ ಪಂತ್ ಎಡಗೈಗೆ ಗಾಯಗೊಂಡು ನಿವೃತ್ತರಾಗಿದ್ದು ಆತಂಕ ಮೂಡಿಸಿತ್ತು. ಆದರೆ, ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಪಂತ್ ಸಂಪೂರ್ಣ ಗುಣಮುಖರಾಗಿದ್ದಾರೆಂದು ಖಚಿತಪಡಿಸಿದ್ದಾರೆ. ಅವರು ಎರಡನೇ ದಿನ ಬ್ಯಾಟಿಂಗ್ ಮುಂದುವರಿಸಲಿದ್ದು, ಭಾರತಕ್ಕೆ ದೊಡ್ಡ ಮೊತ್ತ ಗಳಿಸಲು ಪ್ರಮುಖ ಪಾತ್ರ ವಹಿಸಲಿದ್ದಾರೆ. ಇದು ಅಭಿಮಾನಿಗಳಿಗೆ ರಿಷಭ್ ಪಂತ್‌ ಕಂಬ್ಯಾಕ್ ಕುರಿತು ಸಂತಸದ ಸುದ್ದಿ.

IND vs SL: ರಿಷಭ್ ಪಂತ್ ಗಾಯದ ಬಗ್ಗೆ ಹೊರಬಿತ್ತು ಬಿಗ್ ಅಪ್​ಡೇಟ್
Rishabh Pant

Updated on: Aug 23, 2026 | 10:47 PM

ಕೊಲಂಬೊದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತ (India vs Sri Lanka) ತಂಡ ಅದ್ಭುತ ಪ್ರದರ್ಶನ ನೀಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 5 ವಿಕೆಟ್‌ಗಳ ನಷ್ಟಕ್ಕೆ 300 ರನ್ ಗಳಿಸಿತು. ಆದರೆ ಮೊದಲ ದಿನದಂದು ಬ್ಯಾಟಿಂಗ್‌ ಮಾಡುವ ವೇಳೆ ರಿಷಭ್ ಪಂತ್ (Rishabh Pant) ತಮ್ಮ ಎಡಗೈಗೆ ಗಾಯ ಮಾಡಿಕೊಂಡರು. ಇದರಿಂದಾಗಿ ಪಂತ್ ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿ ಮೈದಾನ ತೊರೆದಿದ್ದರು. ಟೀಂ ಇಂಡಿಯಾದ ಎರಡು ವಿಕೆಟ್​ಗಳು ಪತನವಾದರೂ ಪಂತ್ ಬ್ಯಾಟಿಂಗ್‌ ಬರಲಿಲ್ಲ. ಹೀಗಾಗಿ ಪಂತ್ ಗಾಯ ಗಂಭೀರವಾಗಿರಬಹುದು ಎಂಬುದು ಎಲ್ಲರಲ್ಲೂ ಆತಂಕ ಮೂಡಿಸಿತ್ತು. ಆದರೆ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಪಂತ್ ಗಾಯದ ಬಗ್ಗೆ ಮಾಹತ್ವ ಮಾಹಿತಿಯನ್ನು ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಹಂಚಿಕೊಂಡಿದ್ದಾರೆ.

ಬ್ಯಾಟಿಂಗ್ ಮುಂದುವರಿಸಲಿದ್ದಾರೆ

ಪಂತ್ ಗಾಯದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್, ‘ಪಂತ್ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಮತ್ತು ಪಂದ್ಯದ ಎರಡನೇ ದಿನದಂದು ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಪಂದ್ಯದ ಎರಡನೇ ದಿನದಂದು ದೊಡ್ಡ ಸ್ಕೋರ್ ತಲುಪಲು, ಟೀಂ ಇಂಡಿಯಾಕ್ಕೆ ರಿಷಭ್ ಪಂತ್ ಅವರಿಂದ ದೊಡ್ಡ ಇನ್ನಿಂಗ್ಸ್ ಬೇಕಾಗಬಹುದು’ ಎಂದಿದ್ದಾರೆ.

IND vs SL: ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು 300 ರನ್ ಕಲೆಹಾಕಿದ ಭಾರತ

ಪಂತ್ ಗಾಯಕ್ಕೆ ತುತ್ತಾಗಿದ್ದು ಹೇಗೆ?

ನಾಯಕ ಶುಭ್​ಮನ್ ಗಿಲ್ ಔಟಾದ ನಂತರ ಬ್ಯಾಟಿಂಗ್‌ಗೆ ಬಂದ ರಿಷಭ್ ಪಂತ್​ಗೆ ಹೆಚ್ಚು ಸಮಯ ಕ್ರೀಸ್‌ನಲ್ಲಿ ಬ್ಯಾಟಿಂಗ್ ಮುಂದುವರೆಸಲು ಸಾಧ್ಯವಾಗಲಿಲ್ಲ. ದೊಡ್ಡ ಹೊಡೆತವನ್ನು ಹೊಡೆಯುವ ಯತ್ನದಲ್ಲಿ ಪಂತ್ ತಮ್ಮ ಎಡಗೈಗೆ ಗಾಯ ಮಾಡಿಕೊಂಡರು. ಶ್ರೀಲಂಕಾದ ವೇಗದ ಬೌಲರ್ ಲಹಿರು ಕುಮಾರ ಎಸೆದ ಶಾರ್ಟ್​ ಬಾಲ್ ಅನ್ನು ಪಂತ್ ಪುಲ್ ಶಾಟ್ ಮಾಡಲು ಪ್ರಯತ್ನದಲ್ಲಿ ತಮ್ಮ ಎಡಗೈಗೆ ಗಾಯ ಮಾಡಿಕೊಂಡರು.

ಇದರಿಂದ ಪಂತ್‌ ತೀವ್ರ ನೋವಿನಿಂದ ಬಳಲಲಾರಂಭಿಸಿದರು, ಹೀಗಾಗಿ ಆಟವನ್ನು ಕೆಲ ಸಮಯ ನಿಲ್ಲಿಸಲಾಯಿತು. ಕೂಡಲೇ ಮೈದಾನಕ್ಕೆ ಬಂದ ಟೀಂ ಇಂಡಿಯಾದ ಫಿಸಿಯೋ ಪಂತ್ ಅವರನ್ನು ಸಂಕ್ಷಿಪ್ತವಾಗಿ ಪರೀಕ್ಷಿಸಿ ಬ್ಯಾಂಡೇಜ್ ಹಾಕಿದರು. ಆದಾಗ್ಯೂ, ಪಂತ್ ಅವರ ನೋವು ಕಡಿಮೆಯಾಗಲಿಲ್ಲ. ಆದ್ದರಿಂದ ಪಂತ್ ಗಾಯಗೊಂಡು ನಿವೃತ್ತಿ ಹೊಂದಲು ನಿರ್ಧರಿಸಿ ಮೈದಾನದಿಂದ ಹೊರನಡೆದರು. ಹೀಗಾಗಿ ರವೀಂದ್ರ ಜಡೇಜಾ ಬ್ಯಾಟಿಂಗ್​ಗೆ ಬರಬೇಕಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us