AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಷಭ್​ ಪಂತ್​ಗೆ ಗಂಭೀರ ಗಾಯ: ಐಸಿಸಿ ನಿಯಮದಿಂದ ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾ

India vs Engaland 4th Test: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುವಾಗ ರಿಷಭ್ ಪಂತ್ ಅವರ ಕಾಲಿಗೆ ಗಾಯವಾಗಿದೆ. ಹೀಗಾಗಿ ಪಂತ್ ಇನಿಂಗ್ಸ್ ಅಂತ್ಯಗೊಳಿಸಿ ಪೆವಿಲಿಯನ್​ಗೆ ಹಿಂತಿರುಗಿದ್ದರು. ಈ ತೀವ್ರ ಗಾಯದ ಕಾರಣ ಪಂತ್ ಈ ಪಂದ್ಯದಲ್ಲಿ ಮುಂದುವರೆಯುವ ಸಾಧ್ಯತೆ ಕೂಡ ಕ್ಷೀಣಿಸಿದೆ. ಇತ್ತ ಪಂತ್ ಪಂದ್ಯದಿಂದ ಹೊರಗುಳಿದರೆ ಟೀಮ್ ಇಂಡಿಯಾಗೆ ಕನ್ಕ್ಯುಶನ್ ಸಬ್ಸ್​ಟಿಟ್ಯೂಟ್ ಆಯ್ಕೆ ಕೂಡ ಸಿಗುವುದಿಲ್ಲ ಎಂಬುದೇ ಸತ್ಯ.

ರಿಷಭ್​ ಪಂತ್​ಗೆ ಗಂಭೀರ ಗಾಯ: ಐಸಿಸಿ ನಿಯಮದಿಂದ ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾ
Team India
ಝಾಹಿರ್ ಯೂಸುಫ್
|

Updated on:Jul 24, 2025 | 12:00 PM

Share

ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ವೇಳೆ ಕ್ರಿಸ್ ವೋಕ್ಸ್​ ಎಸೆದ ಚೆಂಡು ರಿಷಭ್ ಪಂತ್ ಅವರ ಬಲಗಾಲಿಗೆ ಬಡಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಅವರು ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ಮೈದಾನ ತೊರೆದಿದ್ದಾರೆ. ಅಷ್ಟೇ ಅಲ್ಲದೆ ತೀವ್ರವಾಗಿ ಗಾಯಗೊಂಡಿರುವ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.

ಇತ್ತ ತೀವ್ರವಾಗಿ ಗಾಯಗೊಂಡಿರುವ ಕಾರಣ ರಿಷಭ್ ಪಂತ್ 4ನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ. ಒಂದು ವೇಳೆ ಪಂತ್ ಈ ಪಂದ್ಯದಿಂದ ಹೊರಗುಳಿದರೆ ಬದಲಿಗೆ ವಿಕೆಟ್ ಕೀಪರ್ ಆಗಿ ಧ್ರುವ್ ಜುರೇಲ್ ಕಣಕ್ಕಿಳಿಯಲಿದ್ದಾರೆ. ಹೀಗೆ ಬದಲಿಯಾಗಿ ಕಣಕ್ಕಿಳಿದರೂ ಜುರೇಲ್​ಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗುವುದಿಲ್ಲ ಎಂಬುದೇ ಸತ್ಯ. ಏಕೆಂದರೆ ಐಸಿಸಿ ನಿಯಮದ ಪ್ರಕಾರ ತಲೆ ಅಥವಾ ಕುತ್ತಿಗೆಯ ಭಾಗಕ್ಕೆ ಗಾಯವಾದರೆ ಮಾತ್ರ ಕನ್ಕ್ಯುಶನ್ ಸಬ್ಸ್​ಟಿಟ್ಯೂಟ್​ನನ್ನು ಕಣಕ್ಕಿಳಿಸಬಹುದು.

ಐಸಿಸಿ ನಿಯಮದಿಂದ ಸಂಕಷ್ಟಕ್ಕೆ ಸಿಲುಕಿದ ಟೀಮ್ ಇಂಡಿಯಾ:

ಪಂದ್ಯದ ನಡುವೆ ಆಟಗಾರನ ತಲೆಯ ಭಾಗಕ್ಕೆ ಅಥವಾ ಕುತ್ತಿಗೆಯ ಭಾಗಕ್ಕೆ ಗಾಯವಾದರೆ ಕನ್ಕ್ಯುಶನ್ ಸಬ್ಸ್​ಟಿಟ್ಯೂಟ್ ಆಯ್ಕೆ ಮೂಲಕ ಬದಲಿ ಆಟಗಾರನನ್ನು ಕಣಕ್ಕಿಳಿಸಬಹುದು. ಇಂತಹದೊಂದು ನಿಯಮ ರೂಪಿಸಿರುವ ಐಸಿಸಿ, ಇತರೆ ಗಂಭೀರ ಗಾಯಗಳಾದ ವೇಳೆ ಬದಲಿ ಆಟಗಾರನನ್ನು ಕಣಕ್ಕಿಳಿಸುವ ಆಯ್ಕೆಯನ್ನು ನೀಡಿಲ್ಲ ಎಂಬುದೇ ಅಚ್ಚರಿ.

ಹೀಗಾಗಿಯೇ ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ಸ್ಪಿನ್ನರ್ ಶೊಯೆಬ್ ಬಶೀರ್ ಅವರ ಕೈಗೆ ಗಂಭೀರ ಗಾಯವಾಗಿದ್ದರೂ, ಪಂದ್ಯದಿಂದ ಹೊರಗುಳಿದಿರಲಿಲ್ಲ. ಅಲ್ಲದೆ ಕೊನೆಯ ದಿನದಾಟದಂದು ಕೈಗೆ ಬ್ಯಾಂಡೇಜ್ ಹಾಕಿ 5.5 ಓವರ್​ಗಳನ್ನು ಎಸೆದಿದ್ದರು. ಇಲ್ಲಿ ಬಶೀರ್ ಗಂಭೀರವಾಗಿ ಗಾಯಗೊಂಡಿದ್ದರೂ ಇಂಗ್ಲೆಂಡ್ ತಂಡಕ್ಕೆ ಕನ್ಕ್ಯುಶನ್ ಸಬ್ಸ್​ಟಿಟ್ಯೂಟ್ ಆಯ್ಕೆ ಬಳಸಲು ಅವಕಾಶ ನೀಡಿರಲಿಲ್ಲ. ಇದಕ್ಕೆ ಕಾರಣ ಐಸಿಸಿಯ ಕನ್ಕ್ಯುಶನ್ ಸಬ್ ನಿಯಮ.

ಅಂದರೆ ಆಟಗಾರನ ತಲೆಯ ಭಾಗಕ್ಕೆ ಅಥವಾ ಕುತ್ತಿಗೆಯ ಭಾಗಕ್ಕೆ ಗಾಯವಾದರೆ ಮಾತ್ರ ಕನ್ಕ್ಯುಶನ್ ಸಬ್ ಆಯ್ಕೆ ಮೂಲಕ ಬೇರೊಬ್ಬ ಆಟಗಾರನನ್ನು ಕಣಕ್ಕಿಳಿಸಬಹುದು ಎಂದು ತಿಳಿಸಲಾಗಿದೆ. ಇದೀಗ ರಿಷಭ್ ಪಂತ್ ಅವರ ಕಾಲಿಗೆ ಗಾಯವಾಗಿದೆ. ಈ ಗಾಯದ ಕಾರಣ ರಿಷಭ್ ಪಂತ್ ಹೊರಗುಳಿದರೆ ಟೀಮ್ ಇಂಡಿಯಾಗೆ ಕನ್ಕ್ಯುಶನ್ ಸಬ್ ಆಯ್ಕೆ ಸಿಗುವುದಿಲ್ಲ. ಬದಲಾಗಿ ಹೆಚ್ಚುವರಿ ವಿಕೆಟ್ ಕೀಪರ್​ನನ್ನು ಬಳಸಿಕೊಳ್ಳಲು ಮಾತ್ರ ಅವಕಾಶ ನೀಡಲಿದ್ದಾರೆ.

ಹೀಗಾಗಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಿಂದ ರಿಷಭ್ ಪಂತ್ ಹೊರಗುಳಿದರೆ ಧ್ರುವ್ ಜುರೇಲ್ ಕೇವಲ ವಿಕೆಟ್ ಕೀಪರ್ ಆಗಿ ಮಾತ್ರ ಕಾಣಿಸಿಕೊಳ್ಳಬಹುದು. ಇದರ ಹೊರತಾಗಿ ಅವರಿಗೆ ಬ್ಯಾಟಿಂಗ್​ಗೆ ಅವಕಾಶ ನೀಡುವ ಸಾಧ್ಯತೆಯಿಲ್ಲ. ಅದರಂತೆ ಪಂತ್ ಪಂದ್ಯದಿಂದ ಹೊರಬಿದ್ದರೆ ಟೀಮ್ ಇಂಡಿಯಾ 10 ಬ್ಯಾಟರ್​ಗಳೊಂದಿಗೆ ದ್ವಿತೀಯ ಇನಿಂಗ್ಸ್ ಆಡಬೇಕಾಗಿ ಬರಬಹುದು.

ಕನ್ಕ್ಯುಶನ್ ಸಬ್ ನಿಯಮದ ವಿರುದ್ಧ ಅಪಸ್ವರ:

ರಿಷಭ್ ಪಂತ್ ಅವರ ಗಾಯದ ಬೆನ್ನಲ್ಲೇ ಕನ್ಕ್ಯುಶನ್ ಸಬ್ ನಿಯಮವು ಚರ್ಚೆಗೀಡಾಗಿದೆ. ತಲೆ ಮತ್ತು ಕುತ್ತಿಗೆ ಗಾಯಗಳನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ತೀವ್ರ ಗಾಯಗಳಾದಾಗ ಏಕೆ ಬದಲಿ ಆಟಗಾರನ ಆಯ್ಕೆ ನೀಡುತ್ತಿಲ್ಲ ಎಂದು ಕೆಲ ಮಾಜಿ ಆಟಗಾರರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Ayush Mhatre: ಆಯುಷ್ ಆರ್ಭಟಕ್ಕೆ ಮೆಕಲಂ ದಾಖಲೆ ಧೂಳೀಪಟ

ಅಲ್ಲದೆ ಇಂತಹ ಸಂದರ್ಭಗಳಲ್ಲಿ ಮ್ಯಚ್ ರೆಫರಿ ಕೂಡ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ಗೂ ಮುನ್ನ ಕನ್ಕ್ಯುಶನ್ ಸಬ್ ನಿಯಮದಲ್ಲಿ ಬದಲಾವಣೆಯಾಗಲಿದೆಯಾ ಕಾದು ನೋಡಬೇಕಿದೆ.

Published On - 11:56 am, Thu, 24 July 25

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ