Rohit Sharma: ಅಂಪೈರ್ ವೈಡ್ ಕೊಡದಿದ್ದಕ್ಕೆ ಮೈದಾನದಲ್ಲೇ ಸಿಡಿದೆದ್ದ ರೋಹಿತ್ ಶರ್ಮಾ: ಏನು ಮಾಡಿದ್ರು ನೋಡಿ
India vs South Africa: ಎರಡನೇ ಓವರ್ನ ವೇನ್ ಪಾರ್ನೆಲ್ನ ನಾಲ್ಕನೇ ಎಸೆತ ಲೆಗ್ಸೈಡ್ ಕಡೆ ಬಂದ ಕಾರಣ ಕ್ರೀಸ್ನಲ್ಲಿದ್ದ ರೋಹಿತ್ ಶರ್ಮಾ ಚೆಂಡನ್ನು ವೈಡ್ ಎಂದು ಬಿಟ್ಟರು. ಈ ಸಂದರ್ಭ ಅಂಪೈರ್ ಕೊಟ್ಟ ನಿರ್ಧಾರಕ್ಕೆ ರೋಹಿತ್ ಸಿಡಿಮಿಡಿಗೊಂಡ ಘಟನೆ ಕೂಡ ನಡೆಯಿತು.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿರುವ ಭಾರತ (India vs South Africa) ಟಿ20 ವಿಶ್ವಕಪ್ಗೂ ಮುನ್ನ ಬಲಿಷ್ಠವಾಗಿ ಹೊರಹೊಮ್ಮಿದೆ. ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ರನ್ ಮಳೆಯೇ ಹರಿಯಿತು. ಉಭಯ ತಂಡಗಳ ಸ್ಕೋರ್ 200ರ ಗಡಿ ದಾಟಿದವು. ಭಾರತ 237 ರನ್ ಸಿಡಿಸಿದರೆ ಆಫ್ರಿಕಾ 221 ರನ್ ಗಳಿಸಿತು. ರೋಹಿತ್ ಪಡೆ 16 ರನ್ಗಳ ಜಯ ಸಾಧಿಸಿತು. ಬೌಲರ್ಗಳ ನೆಚ್ಚಿನ ಪಿಚ್ ಆಗಿರುವ ಬರ್ಸಾಪರದಲ್ಲಿ ಬ್ಯಾಟರ್ಗಳು ಅಬ್ಬರಿಸಿದ್ದು ಎಲ್ಲರ ಹುಬ್ಬೇರಿವಂತೆ ಮಾಡಿತು. ಮೊದಲ ಓವರ್ನಿಂದಲೇ ಟೀಮ್ ಇಂಡಿಯಾ ಓಪನರ್ಗಳಾದ ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಉಪ ನಾಯಕ ಕೆಎಲ್ ರಾಹುಲ್ (KL Rahul) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 9.5 ಓವರ್ಗಳಲ್ಲಿ 96 ರನ್ ಜೊತೆಯಾಟ ಆಡಿ ಭದ್ರ ಬುನಾದಿ ಹಾಕಿದರು. ಇದರ ನಡುವೆ ಅಂಪೈರ್ ಕೊಟ್ಟ ನಿರ್ಧಾರಕ್ಕೆ ರೋಹಿತ್ ಸಿಡಿಮಿಡಿಗೊಂಡ ಘಟನೆ ಕೂಡ ನಡೆಯಿತು.
ಎರಡನೇ ಓವರ್ನ ವೇನ್ ಪಾರ್ನೆಲ್ನ ನಾಲ್ಕನೇ ಎಸೆತ ಲೆಗ್ಸೈಡ್ ಕಡೆ ಬಂದ ಕಾರಣ ಕ್ರೀಸ್ನಲ್ಲಿದ್ದ ರೋಹಿತ್ ಶರ್ಮಾ ಚೆಂಡನ್ನು ವೈಡ್ ಎಂದು ಬಿಟ್ಟರು. ಈ ಸಂದರ್ಭ ರೋಹಿತ್ ಬ್ಯಾಟ್ ಆಗಲಿ, ಪ್ಯಾಡ್ ಚೆಂಡಿಗೆ ಟಚ್ ಆಗಿರಲಿಲ್ಲ. ಆದರೆ, ಅಂಪೈರ್ ಇದನ್ನು ವೈಡ್ ಎಂಬ ತೀರ್ಮಾನ ಪ್ರಕಟಿಸಿಲ್ಲ. ಇದರಿಂದ ಕೋಪಗೊಂಡ ರೋಹಿತ್ ಮೈದಾನದಲ್ಲೇ ಅಂಪೈರ್ ಜೊತೆ ವಾದಕ್ಕಿಳಿದಿದ್ದಾರೆ. ಅಲ್ಲದೆ ಇದು ವೈಡ್ ಎಂದು ಡಿಆರ್ಎಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ವೈಡ್ಗೆ ರಿವ್ಯೂ ತೆಗೆದುಕೊಳ್ಳುವ ಆಯ್ಕೆ ಇಲ್ಲದ ಕಾರಣ ಅಂಪೈರ್ ತೀರ್ಮಾನಕ್ಕೆ ಸುಮ್ಮನಾಗಬೇಕಾಯಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
— Guess Karo (@KuchNahiUkhada) October 2, 2022
ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ:
ದಕ್ಷಿಣ ಆಫ್ರಿಕಾ 2ನೇ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಇತಿಹಾಸ ಸೃಷ್ಟಿಸಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಮತ್ತೊಂದು ಹೊಸ ದಾಖಲೆ ಬರೆದಿರುವ ರೋಹಿತ್ 400 ಟಿ20 ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಮತ್ತು ವಿಶ್ವದ ಒಂಬತ್ತನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೆಸ್ಟ್ ಇಂಡೀಸ್ ಆಟಗಾರ ಕೀರಾನ್ ಪೊಲಾರ್ಡ್ ವಿಶ್ವದಲ್ಲಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದ್ದು, ಅವರು ಇದುವರೆಗೆ 614 ಪಂದ್ಯಗಳನ್ನು ಆಡಿದ್ದಾರೆ.
ರೋಹಿತ್ ಪುರುಷರ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಯನ್ನು ಹೊಂದಿದ್ದು, ಇದುವರೆಗೆ 140 ಟಿ20 ಪಂದ್ಯಗಳನ್ನು ಆಡಿದ್ದಾರೆ. ದಿನೇಶ್ ಕಾರ್ತಿಕ್ ಮತ್ತು ಎಂಎಸ್ ಧೋನಿ ಮಾತ್ರ ಟಿ20ಯಲ್ಲಿ 350ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಭಾರತೀಯ ಕ್ರಿಕೆಟಿಗರಾಗಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 237 ರನ್ ಕಲೆಹಾಕಿತು. ರೋಹಿತ್ ಶರ್ಮಾ 37 ಎಸೆತದಲ್ಲಿ 43 ರನ್ ಬಾರಿಸಿ ಔಟಾದರೆ, ರಾಹುಲ್ 28 ಎಸೆತದಲ್ಲಿ 57 ರನ್ ಗಳಿಸಿದರು. ಕೊಹ್ಲಿ – ಸೂರ್ಯಕುಮಾರ್ ಯಾದವ್ ಶತಕದ ಜೊತೆಯಾಟ ಆಡಿದರು. ಸೂರ್ಯ 22 ಬಾಲ್ನಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಯಿಂದ 61 ರನ್ ಚಚ್ಚಿದರು. ಕೊಹ್ಲಿ 49 ರನ್ಗಳ ಕೊಡುಗೆ ನೀಡಿದರು.
ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ಸೋಲಿಗೆ ಶರಣಾಯಿತು. ಡೇವಿಡ್ ಮಿಲ್ಲರ್ ಅಜೇಯ 106 ರನ್ ಸಿಡಿಸಿದರೆ, ಡಿಕಾಕ್ ಅಜೇಯ 69 ರನ್ ಗಳಿಸಿದರು.




