RR vs KKR Highlights, IPL 2025: ಕೆಕೆಆರ್ಗೆ ಸುಲಭ ಜಯ; ಸೋತ ರಾಜಸ್ಥಾನ್
Rajasthan Royals vs Kolkata Knight Riders Highlights in Kannada: ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಆರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡವು 152 ರನ್‌ಗಳ ಗುರಿಯನ್ನು ನೀಡಿತ್ತು, ಈ ಗುರಿ ಬೆನ್ನಟ್ಟಿದ ಕೋಲ್ಕತಾ ತಂಡವು ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಜಯದ ನಗೆಬೀರಿತು.

ಗುವಾಹಟಿಯ ಬರ್ಸಪಾರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಆರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡವು 152 ರನ್‌ಗಳ ಗುರಿಯನ್ನು ನೀಡಿತ್ತು, ಈ ಗುರಿ ಬೆನ್ನಟ್ಟಿದ ಕೋಲ್ಕತಾ ತಂಡವು ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಜಯದ ನಗೆಬೀರಿತು. ಕೆಕೆಆರ್ ಪರ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಮೊದಲ ಬಾರಿಗೆ ಅರ್ಧಶತಕ ಗಳಿಸುವ ಮೂಲಕ ತಂಡದ ಗೆಲುವಿನ ನಾಯಕರಾದರು. ಅವರು 61 ಎಸೆತಗಳಲ್ಲಿ 97 ರನ್ ಗಳಿಸಿ ಅಜೇಯರಾಗುಳಿದರೆ ಅವರಿಗೆ ಉತ್ತಮ ಬೆಂಬಲ ನೀಡಿದ ಅಂಗ್‌ಕ್ರಿಶ್ ರಘುವಂಶಿ 17 ಎಸೆತಗಳಲ್ಲಿ 22 ರನ್ ಗಳಿಸಿದರು. ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ 4 ಓವರ್‌ಗಳಲ್ಲಿ ಕೇವಲ 17 ರನ್‌ಗಳಿಗೆ 2 ವಿಕೆಟ್ ಪಡೆದರೆ, ಮೊಯಿನ್ ಅಲಿ ಕೂಡ 23 ರನ್‌ಗಳಿಗೆ 2 ವಿಕೆಟ್ ಪಡೆದರು. ಹರ್ಷಿತ್ ರಾಣಾ ಮತ್ತು ವೈಭವ್ ಅರೋರಾ ತಲಾ 2 ವಿಕೆಟ್ ಪಡೆದರು.
LIVE NEWS & UPDATES
-
RR vs KKR: ಕೋಲ್ಕತ್ತಾಗೆ 8 ವಿಕೆಟ್‌ಗಳ ಜಯ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ತನ್ನ ತವರು ನೆಲದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ತಮ್ಮ ಗೆಲುವಿನ ಖಾತೆಯನ್ನು ತೆರೆದಿದೆ. ಈ ರನ್ ಚೇಸ್‌ನಲ್ಲಿ ಕ್ವಿಂಟನ್ ಡಿ ಕಾಕ್ 61 ಎಸೆತಗಳಲ್ಲಿ 97 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
-
RR vs KKR: 17 ಓವರ್‌ಗಳ ನಂತರ- 135/2
17 ಓವರ್‌ಗಳ ಆಟ ಮುಗಿದಿದೆ. ಕೋಲ್ಕತ್ತಾ ತಂಡ 2 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿದೆ.
-
-
RR vs KKR: ಅರ್ಧಶತಕದ ಜೊತೆಯಾಟ
ಕ್ವಿಂಟನ್ ಡಿ ಕಾಕ್ ಮತ್ತು ಅಂಗ್‌ಕ್ರಿಶ್ ರಘುವಂಶಿ ನಡುವೆ 35 ಎಸೆತಗಳಲ್ಲಿ 55 ರನ್‌ಗಳ ಪಾಲುದಾರಿಕೆ ಇದೆ. ಕೋಲ್ಕತ್ತಾ 16 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ಗಳ ನಷ್ಟಕ್ಕೆ 125 ರನ್ ಗಳಿಸಿದೆ. ಈಗ ಅವರಿಗೆ ಗೆಲ್ಲಲು 24 ಎಸೆತಗಳಲ್ಲಿ ಕೇವಲ 27 ರನ್‌ಗಳು ಬೇಕಾಗಿವೆ.
-
RR vs KKR: ಕ್ವಿಂಟನ್ ಡಿ ಕಾಕ್ ಅರ್ಧಶತಕ
ಕೋಲ್ಕತ್ತಾಗೆ ರನ್ ಚೇಸ್ ಕಷ್ಟಕರವಾಗುತ್ತಿದೆ. ಆದರೆ ಕ್ವಿಂಟನ್ ಡಿ ಕಾಕ್ ಒಂದು ತುದಿಯಲ್ಲಿ ಭದ್ರವಾಗಿ ನಿಂತು ಅರ್ಧಶತಕ ಗಳಿಸಿದ್ದಾರೆ ಮತ್ತು ನಿಧಾನವಾಗಿ ತಂಡವನ್ನು ಗುರಿಯತ್ತ ಕೊಂಡೊಯ್ಯುತ್ತಿದ್ದಾರೆ
-
RR vs KKR: ಎರಡನೇ ಹೊಡೆತ
ಕೋಲ್ಕತ್ತಾ ತಂಡ ಎರಡನೇ ಹಿನ್ನಡೆ ಅನುಭವಿಸಿದೆ. ನಾಯಕ ಅಜಿಂಕ್ಯ ರಹಾನೆ 15 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು.
-
-
RR vs KKR: 10 ಓವರ್‌ಗಳ ನಂತರ ಸ್ಕೋರ್- 70/1
10 ಓವರ್‌ಗಳ ಆಟ ಮುಗಿದಿದೆ. ಕೋಲ್ಕತ್ತಾ ತಂಡ 1 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದೆ.
-
RR vs KKR: 50 ರನ್ ಪೂರ್ಣ
ಕೋಲ್ಕತ್ತಾ ತಂಡ 8ನೇ ಓವರ್‌ನಲ್ಲಿ 50 ರನ್‌ಗಳ ಗಡಿ ದಾಟಿತು. 8 ಓವರ್‌ಗಳು ಮುಗಿಯುವ ವೇಳೆಗೆ ತಂಡವು 1 ವಿಕೆಟ್ ನಷ್ಟಕ್ಕೆ 55 ರನ್‌ಗಳನ್ನು ಗಳಿಸಿದೆ.
-
RR vs KKR: ಮೊದಲ ಆಘಾತ
ಕೋಲ್ಕತ್ತಾ ತಂಡ ಮೊದಲ ಹಿನ್ನಡೆ ಅನುಭವಿಸಿದೆ. 12 ಎಸೆತಗಳಲ್ಲಿ 5 ರನ್ ಗಳಿಸಿದ ನಂತರ ಮೊಯಿನ್ ಅಲಿ ರನೌಟ್ ಆದರು.
-
RR vs KKR: ಪವರ್‌ಪ್ಲೇನಲ್ಲಿ 40 ರನ್
ಪವರ್ ಪ್ಲೇ ಮುಗಿದಿದೆ. ಅಂದರೆ 6 ಓವರ್‌ಗಳು ಮುಗಿದಿವೆ. ಕೋಲ್ಕತ್ತಾ ತಂಡ ನಿಧಾನಗತಿಯ ಆರಂಭವನ್ನು ಹೊಂದಿದ್ದು, ವಿಕೆಟ್ ನಷ್ಟವಿಲ್ಲದೆ ಕೇವಲ 40 ರನ್ ಗಳಿಸಿದೆ.
-
RR vs KKR: ನಿಧಾನಗತಿಯ ಆರಂಭ
152 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ತಂಡವು ನಿಧಾನಗತಿಯ ಆರಂಭವನ್ನು ನೀಡಿತು, ಮೊದಲ 3 ಓವರ್‌ಗಳಲ್ಲಿ ಕೇವಲ 20 ರನ್‌ಗಳನ್ನು ಗಳಿಸಿತು.
-
RR vs KKR: ಕೆಕೆಆರ್ ಬ್ಯಾಟಿಂಗ್ ಆರಂಭ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕ್ವಿಂಟನ್ ಡಿ ಕಾಕ್ ಮತ್ತು ಮೊಯಿನ್ ಅಲಿ ಗುರಿ ಬೆನ್ನಟ್ಟಲು ಬಂದಿದ್ದಾರೆ. ರಾಜಸ್ಥಾನ ಪರ ಜೋಫ್ರಾ ಆರ್ಚರ್ ಬೌಲಿಂಗ್ ಆರಂಭಿಸಿದ್ದಾರೆ.
-
RR vs KKR: 152 ರನ್‌ಗಳ ಗುರಿ
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 151 ರನ್ ಗಳಿಸಿತು. ಕೋಲ್ಕತ್ತಾ ನೈಟ್ ರೈಡರ್ಸ್ ಗೆಲ್ಲಲು 152 ರನ್ ಗಳಿಸಬೇಕಾಗಿದೆ.
-
RR vs KKR: 9ನೇ ವಿಕೆಟ್ ಪತನ
ಸ್ಪೆನ್ಸರ್ ಜಾನ್ಸನ್ ಜೋಫ್ರಾ ಆರ್ಚರ್ ಅವರನ್ನು ಬೌಲ್ಡ್ ಮಾಡಿದ್ದಾರೆ. ಇದರೊಂದಿಗೆ ರಾಜಸ್ಥಾನ್ ತನ್ನ 9ನೇ ವಿಕೆಟ್ ಕಳೆದುಕೊಂಡು ಈಗ ಆಲೌಟ್ ಆಗುವ ಹಂತಕ್ಕೆ ತಲುಪಿದೆ.
-
RR vs KKR: ಆರ್ಚರ್ ಸಿಕ್ಸರ್
ಧ್ರುವ್ ಜುರೆಲ್ ಔಟಾದ ನಂತರ ಜೋಫ್ರಾ ಆರ್ಚರ್ ಬ್ಯಾಟಿಂಗ್‌ಗೆ ಇಳಿದಿದ್ದಾರೆ. ಅವರು ಸಿಕ್ಸರ್ ಬಾರಿಸುವ ಮೂಲಕ ಇನ್ನಿಂಗ್ಸ್ ಆರಂಭಿಸಿದರು.
-
RR vs KKR: ರಾಜಸ್ಥಾನ ರಾಯಲ್ಸ್ 7ನೇ ವಿಕೆಟ್
28 ಎಸೆತಗಳಲ್ಲಿ 33 ರನ್ ಗಳಿಸಿದ ಧ್ರುವ್ ಜುರೆಲ್ ಹರ್ಷಿತ್ ರಾಣಾಗೆ ಬಲಿಯಾದರು. ರಾಜಸ್ಥಾನ್ ರಾಯಲ್ಸ್ ತನ್ನ 7ನೇ ವಿಕೆಟ್ ಕಳೆದುಕೊಂಡಿದೆ.
-
RR vs KKR: 16 ಓವರ್ ಮುಕ್ತಾಯ
16 ಓವರ್‌ಗಳ ಆಟ ಮುಗಿದಿದೆ. ರಾಜಸ್ಥಾನ ರಾಯಲ್ಸ್ ತಂಡ 6 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿದೆ. ಶಿಮ್ರಾನ್ ಹೆಟ್ಮೆಯರ್ ಮತ್ತು ಧ್ರುವ್ ಜುರೆಲ್ ಕ್ರೀಸ್‌ನಲ್ಲಿದ್ದಾರೆ.
-
RR vs KKR: ಆರನೇ ವಿಕೆಟ್
ರಾಜಸ್ಥಾನ ತಂಡ ತನ್ನ ಆರನೇ ವಿಕೆಟ್ ಕಳೆದುಕೊಂಡಿದೆ. ಶುಭಂ ದುಬೆ 12 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು. ಹರ್ಷಿತ್ ರಾಣಾ ಅವರನ್ನು ಬೇಟೆಯಾಡಿದ್ದಾರೆ.
-
RR vs KKR: 100 ರನ್ ದಾಟಿದ ರಾಜಸ್ಥಾನ್
14 ಓವರ್‌ಗಳ ಆಟ ಮುಗಿದಿದೆ. ರಾಜಸ್ಥಾನ ತಂಡ 5 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿದೆ.
-
RR vs KKR: 13 ಓವರ್ ಪೂರ್ಣ
13 ಓವರ್‌ಗಳ ಆಟ ಮುಗಿದಿದೆ. ರಾಜಸ್ಥಾನ ರಾಯಲ್ಸ್ ತಂಡ 5 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದೆ.
-
RR vs KKR: 12 ಓವರ್‌ಗಳ ನಂತರ RR- 84/2
12 ಓವರ್‌ಗಳ ಆಟ ಮುಗಿದಿದೆ. ರಾಜಸ್ಥಾನ ತಂಡ 5 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದೆ.
-
RR vs KKR: 9 ರನ್‌ಗಳ ಒಳಗೆ 3 ವಿಕೆಟ್
ರಾಜಸ್ಥಾನ್ ತನ್ನ ನಾಲ್ಕನೇ ವಿಕೆಟ್ ಅನ್ನು ಕಳೆದುಕೊಂಡಿದೆ. ವರುಣ್ ಚಕ್ರವರ್ತಿ ವನಿಂದು ಹಸರಂಗನನ್ನು ಬೇಟೆಯಾಡಿದ್ದಾರೆ. ರಾಜಸ್ಥಾನ ತಂಡ 9 ರನ್‌ಗಳ ಒಳಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
-
RR vs KKR:ಮೊಯಿನ್ ಅಲಿಯ ದೊಡ್ಡ ಸಾಧನೆ
2023 ರಿಂದ ಐಪಿಎಲ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಿದ ಎರಡನೇ ಸ್ಪಿನ್ನರ್ ಮೊಯಿನ್ ಅಲಿ. 2024 ರ ಐಪಿಎಲ್‌ನಲ್ಲಿ ಶಹಬಾಜ್ ಅಹ್ಮದ್ ಅವರನ್ನು ಔಟ್ ಮಾಡಿದ್ರುದ. 2023 ರಿಂದ ಐಪಿಎಲ್‌ನಲ್ಲಿ ಜೈಸ್ವಾಲ್ ಸ್ಪಿನ್ನರ್‌ಗಳ ವಿರುದ್ಧ 157.5 ಸರಾಸರಿ ಮತ್ತು 155.2ರ ಸ್ಟ್ರೈಕ್ ರೇಟ್‌ನಲ್ಲಿ 315 ರನ್ ಗಳಿಸಿದ್ದಾರೆ.
-
RR vs KKR: ಜೈಸ್ವಾಲ್ ಔಟ್
ರಾಜಸ್ಥಾನ ತಂಡ ಮೂರನೇ ವಿಕೆಟ್ ಕಳೆದುಕೊಂಡಿದೆ. 24 ಎಸೆತಗಳಲ್ಲಿ 29 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಮೊಯಿನ್ ಅಲಿಗೆ ಬಲಿಯಾದರು. ಇದರೊಂದಿಗೆ ತಂಡ ಸಂಕಷ್ಟಕ್ಕೆ ಸಿಲುಕಿದೆ.
-
RR vs KKR: ಎರಡನೇ ವಿಕೆಟ್
ರಾಜಸ್ಥಾನ ರಾಯಲ್ಸ್ ತನ್ನ ಎರಡನೇ ವಿಕೆಟ್ ಕಳೆದುಕೊಂಡಿತು. ರಿಯಾನ್ ಪರಾಗ್ 15 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರು. ವರುಣ್ ಚಕ್ರವರ್ತಿ ಅವರನ್ನು ಬೇಟೆಯಾಡಿದರು.
-
RR vs KKR: ರಾಜಸ್ಥಾನ 50 ರನ್
ಮೊದಲ ಪವರ್‌ಪ್ಲೇ ಮುಗಿದಿದೆ. ರಾಜಸ್ಥಾನ ರಾಯಲ್ಸ್ ತಂಡ 6 ಓವರ್‌ಗಳ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿದೆ.
-
RR vs KKR: ಪರಾಗ್ ಸಿಕ್ಸರ್
ಸಂಜು ಸ್ಯಾಮ್ಸನ್ ಔಟಾದ ನಂತರ ರಿಯಾನ್ ಪರಾಗ್ ಕಣಕ್ಕಿಳಿದಿದ್ದಾರೆ. ಅವರು ಹರ್ಷಿತ್ ರಾಣಾ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಇನ್ನಿಂಗ್ಸ್ ಆರಂಭಿಸಿದರು.
-
RR vs KKR: ಮೊದಲ ವಿಕೆಟ್
ರಾಜಸ್ಥಾನ ರಾಯಲ್ಸ್ ತಂಡ ತನ್ನ ಮೊದಲ ವಿಕೆಟ್ ಕಳೆದುಕೊಂಡಿದೆ. ವೈಭವ್ ಅರೋರಾ ಸಂಜು ಸ್ಯಾಮ್ಸನ್ ಅವರನ್ನು ಬೌಲ್ಡ್ ಮಾಡಿದ್ದಾರೆ. ಸ್ಯಾಮ್ಸನ್ 11 ಎಸೆತಗಳಲ್ಲಿ 13 ರನ್ ಗಳಿಸಿದರು.
-
RR vs KKR: ಜೈಸ್ವಾಲ್ ಭರ್ಜರಿ ಸಿಕ್ಸ್
ಸ್ಪೆನ್ಸರ್ ಜಾನ್ಸನ್ ಬೌಲಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್ ಅದ್ಭುತ ಸಿಕ್ಸರ್ ಬಾರಿಸಿದರು. 3ನೇ ಓವರ್‌ನ 5ನೇ ಎಸೆತದಲ್ಲಿ ಅವರು 89 ಮೀಟರ್ ಸಿಕ್ಸ್ ಬಾರಿಸಿದರು.
-
RR vs KKR: ರಾಜಸ್ಥಾನದ ಬ್ಯಾಟಿಂಗ್ ಆರಂಭ
ರಾಜಸ್ಥಾನದ ಬ್ಯಾಟಿಂಗ್ ಆರಂಭವಾಗಿದೆ. ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಕ್ರೀಸ್‌ನಲ್ಲಿದ್ದಾರೆ. ಪಂದ್ಯದ ಮೊದಲ ಎಸೆತದಲ್ಲೇ ಯಶಸ್ವಿ ಬೌಂಡರಿ ಬಾರಿಸಿದರು. ಕೆಕೆಆರ್ ಬೌಲರ್ ಸ್ಪೆನ್ಸರ್ ಜಾನ್ಸನ್ ಅವರ ಮೊದಲ ಓವರ್‌ನಲ್ಲಿ ಎರಡು ಬೌಂಡರಿಗಳು ಸೇರಿದಂತೆ 9 ರನ್‌ಗಳು ಬಂದವು. ಆ ಓವರ್‌ನ ಕೊನೆಯ ಎಸೆತದಲ್ಲಿ ಸಂಜು ಬೌಂಡರಿ ಬಾರಿಸಿದರು.
-
RR vs KKR: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ (ನಾಯಕ), ರಿಂಕು ಸಿಂಗ್, ಮೋಯಿನ್ ಅಲಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಸ್ಪೆನ್ಸರ್ ಜಾನ್ಸನ್, ವೈಭವ್ ಅರೋರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
-
RR vs KKR: ರಾಜಸ್ಥಾನ ರಾಯಲ್ಸ್ ತಂಡ
ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮಾಯೆರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ.
-
RR vs KKR: ಟಾಸ್ ಗೆದ್ದ ಕೆಕೆಆರ್
ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯಾ ರಹಾನೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ರಾಜಸ್ಥಾನ್ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - Mar 26,2025 7:01 PM