T20 World Cup 2022: 10 ರನ್ಗೆ 5 ವಿಕೆಟ್: ಅಫ್ಘಾನ್ ವಿರುದ್ಧ ಇಂಗ್ಲೆಂಡ್ಗೆ ಭರ್ಜರಿ ಜಯ
Sam Curran: ಸ್ಯಾಮ್ ಕರನ್ ಅವರ ಈ ಮಾರಕ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ್ ತಂಡವು ಅಂತಿಮವಾಗಿ 19.4 ಓವರ್ 112 ರನ್ಗಳಿಗೆ ಆಲೌಟ್ ಆಯಿತು.
T20 World Cup 2022: ಟಿ20 ವಿಶ್ವಕಪ್ನ ಸೂಪರ್-12 ಹಂತದ ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಜಯ ಸಾಧಿಸಿ ಶುಭಾರಂಭ ಮಾಡಿದೆ. ಪರ್ತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿತ್ತು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡರು. ಬಟ್ಲರ್ ಅವರ ಈ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಯುವ ಆಲ್ರೌಂಡರ್ ಸ್ಯಾಮ್ ಕರನ್ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದರು.
ಆರಂಭಿಕ ಆಟಗಾರ ಗುರ್ಬಾಜ್ (10) ವಿಕೆಟ್ ಪಡೆಯುವ ಮೂಲಕ ಮಾರ್ಕ್ವುಡ್ ಇಂಗ್ಲೆಂಡ್ಗೆ ಮೊದಲ ಯಶಸ್ಸು ತಂದುಕೊಟ್ಟರೆ, ಇದರ ಬೆನ್ನಲ್ಲೇ ಬೆನ್ ಸ್ಟೋಕ್ಸ್ ಎಡಗೈ ಬ್ಯಾಟರ್ ಝಝೈ (7) ವಿಕೆಟ್ ಪಡೆದರು. ಈ ಎರಡು ವಿಕೆಟ್ಗಳ ಬಳಿಕ ಸ್ಯಾಮ್ ಕರನ್ ಬೌಲಿಂಗ್ ಮೋಡಿ ಶುರುವಾಗಿತ್ತು.
32 ರನ್ಗಳಿಸಿದ್ದ ಇಬ್ರಾಹಿಂ ಝರ್ದಾನ್ ವಿಕೆಟ್ ಉರುಳಿಸುವ ಮೂಲಕ ಖಾತೆ ತೆರೆದ ಕರನ್, ಆ ಬಳಿಕ ಉಸ್ಮಾನ್ ಘನಿ (30), ಅಝಮುಲ್ಲಾ (8), ರಶೀದ್ ಖಾನ್ (0) ಹಾಗೂ ಫಾರೂಕಿ (0) ವಿಕೆಟ್ ಉರುಳಿಸಿ ಚೊಚ್ಚಲ ಟಿ20 ವಿಶ್ವಕಪ್ ಪಂದ್ಯದಲ್ಲೇ ಐದು ವಿಕೆಟ್ಗಳನ್ನು ಕಬಳಿಸಿದ ಸಾಧನೆ ಮಾಡಿದರು.
ಸ್ಯಾಮ್ ಕರನ್ ಅವರ ಈ ಮಾರಕ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ್ ತಂಡವು ಅಂತಿಮವಾಗಿ 19.4 ಓವರ್ 112 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಸ್ಯಾಮ್ ಕರನ್ 5 ವಿಕೆಟ್ ಕಬಳಿಸಿ ಮಿಂಚಿದರೆ, ಮಾರ್ಕ್ವುಡ್ ಮತ್ತು ಬೆನ್ ಸ್ಟೋಕ್ಸ್ ತಲಾ 2 ವಿಕೆಟ್ ಪಡೆದರು.
ಇನ್ನು 113 ರನ್ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ಬೌಲರ್ಗಳು ಉತ್ತಮ ಪ್ರದರ್ಶನವನ್ನೇ ನೀಡಿದರು. 13.5 ಓವರ್ಗಳಲ್ಲಿ 81 ರನ್ ನೀಡಿ 4 ವಿಕೆಟ್ ಉರುಳಿಸಿ ಅಫ್ಘಾನಿಸ್ತಾನ್ ಪಂದ್ಯದಲ್ಲಿ ರೋಚಕತೆ ತರುವಲ್ಲಿ ಯಶಸ್ವಿಯಾಗಿದ್ದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ 21 ಎಸೆತಗಳಲ್ಲಿ 29 ರನ್ ಬಾರಿಸುವ ಮೂಲಕ ಲಿಯಾಮ್ ಲಿವಿಂಗ್ಸ್ಟೋನ್ ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು. ಅದರಂತೆ ಅಂತಿಮವಾಗಿ ಇಂಗ್ಲೆಂಡ್ ತಂಡವು 18.1 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 113 ರನ್ಗಳಿಸುವ ಮೂಲಕ ಗೆಲುವಿನೊಂದಿಗೆ ಶುಭಾರಂಭ ಮಾಡಿತು. 3.4 ಓವರ್ಗಳಲ್ಲಿ ಕೇವಲ 10 ರನ್ ನೀಡಿ 5 ವಿಕೆಟ್ ಕಬಳಿಸಿ ಸ್ಯಾಮ್ ಕರನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.