AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಓವರ್​ನಲ್ಲಿ 18 ರನ್… ಬುಮ್ರಾಗೆ ಯದ್ವ ತದ್ವ ಚಚ್ಚಿದ ಸ್ಯಾಮ್ ಕೊನ್​ಸ್ಟಾಸ್

Australia vs India, 4th Test: ಮೆಲ್ಬೋರ್ನ್​ ಎಂಸಿಜಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೂಲಕ ಸ್ಯಾಮ್ ಕೊನ್​ಸ್ಟಾಸ್ ಅಂತಾರಾಷ್ಟ್ರೀಯ ಕೆರಿಯರ್ ಆರಂಭಿಸಿದ್ದಾರೆ. ಅದು ಸಹ ಸ್ಪೋಟಕ ಅರ್ಧಶತಕ ಬಾರಿಸುವ ಮೂಲಕ ಎಂಬುದು ವಿಶೇಷ. ಅದರಲ್ಲೂ ಬುಮ್ರಾ ಅವರ ಒಂದೇ ಓವರ್​ನಲ್ಲಿ 18 ರನ್​ ಚಚ್ಚುವ ಮೂಲಕ ಸ್ಯಾಮ್ ಇದೀಗ ಇಡೀ ವಿಶ್ವದ ಗಮನ ಸೆಳೆದಿದ್ದಾರೆ.

ಒಂದೇ ಓವರ್​ನಲ್ಲಿ 18 ರನ್... ಬುಮ್ರಾಗೆ ಯದ್ವ ತದ್ವ ಚಚ್ಚಿದ ಸ್ಯಾಮ್ ಕೊನ್​ಸ್ಟಾಸ್
Jasprit Bumrah - Sam Konstas
ಝಾಹಿರ್ ಯೂಸುಫ್
|

Updated on: Dec 26, 2024 | 9:53 AM

Share

ಮೆಲ್ಬೋರ್ನ್​​ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಯುವ ದಾಂಡಿಗ ಸ್ಯಾಮ್ ಕೊನ್​ಸ್ಟಾಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅದು ಸಹ ಯಾರ್ಕರ್ ಸ್ಪೆಷಲಿಸ್ಟ್ ಖ್ಯಾತಿಯ ವಿಶ್ವದ ನಂಬರ್ 1 ಬೌಲರ್ ಜಸ್​ಪ್ರೀತ್ ಬುಮ್ರಾ ಅವರನ್ನು ಟಾರ್ಗೆಟ್ ಮಾಡುವ ಮೂಲಕ ಎಂಬುದು ವಿಶೇಷ. ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಸ್ಯಾಮ್ ಕೊನ್​ಸ್ಟಾಸ್ ಆರಂಭದಲ್ಲೇ ಭಾರತೀಯ ಬೌಲರ್​ಗಳ ಬೆಂಡೆತ್ತಿದರು. ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ ಟೆಸ್ಟ್ ಕೆರಿಯರ್ ಶುರು ಮಾಡಿದ ಸ್ಯಾಮ್ ಕೊನ್​ಸ್ಟಾಸ್ ಕೆಲವೇ ಕ್ಷಣಗಳಲ್ಲಿ ತಂಡದ ಸ್ಕೋರ್​​ ಅನ್ನು 50ರ ಗಡಿದಾಟಿಸಿದರು. ಅದರಲ್ಲೂ ಜಸ್​ಪ್ರೀತ್ ಬುಮ್ರಾ ಎಸೆದ 11ನೇ ಓವರ್​​ನಲ್ಲಿ ಸ್ಯಾಮ್ ಬರೋಬ್ಬರಿ 18 ರನ್​ ಚಚ್ಚಿದ್ದರು.

ಬುಮ್ರಾ ಎಸೆದ ಈ ಓವರ್​ನ ಮೊದಲ ಎಸೆತದಲ್ಲಿ ಸ್ಯಾಮ್ ಕೊನ್​ಸ್ಟಾಸ್ ಫೋರ್ ಬಾರಿಸಿದರು. ದ್ವಿತೀಯ ಎಸೆತದಲ್ಲಿ ಯಾವುದೇ ರನ್ ಮೂಡಿಬಂದಿರಲಿಲ್ಲ. ಮೂರನೇ ಎಸೆತದಲ್ಲಿ 2 ರನ್ ಕಲೆಹಾಕಿದರು. ನಾಲ್ಕನೇ ಎಸೆತದಲ್ಲಿ ಲಾಂಗ್ ಆನ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದರು. ಐದನೇ ಎಸೆತದಲ್ಲಿ ಮತ್ತೊಂದು ಫೋರ್ ಬಾರಿಸಿದರು. ಇನ್ನು ಆರನೇ ಎಸೆತದಲ್ಲಿ 2 ರನ್ ಕಲೆಹಾಕಿದರು. ಈ ಮೂಲಕ ಚೊಚ್ಚಲ ಪಂದ್ಯದಲ್ಲೇ ಜಸ್​ಪ್ರೀತ್ ಬುಮ್ರಾ ಓವರ್​ನಲ್ಲಿ ಸ್ಯಾಮ್ ಕೊನ್​ಸ್ಟಾಸ್ 18 ರನ್​​ಗಳಿಸಿ ಅಬ್ಬರಿಸಿದರು.

ಈ ಅಬ್ಬರದೊಂದಿಗೆ ಸ್ಯಾಮ್ ಕೊನ್​ಸ್ಟಾಸ್ ಕೇವಲ 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇಂಟ್ರೆಸ್ಟಿಂಗ್ ವಿಷಯ ಎಂದರೆ ಸ್ಯಾಮ್ ಅರ್ಧಶತಕ ಪೂರೈಸುವಾಗ ಆಸ್ಟ್ರೇಲಿಯಾ ತಂಡದ ಸ್ಕೋರ್ 73 ರನ್​ಗಳು. ಅದರಲ್ಲಿ 52 ರನ್​ಗಳನ್ನು ಯುವ ದಾಂಡಿಗನೇ ಕಲೆಹಾಕಿದ್ದರು.

ಈ ಮೂಲಕ ಮೊದಲ ಪಂದ್ಯದಲ್ಲಿ ಎದುರಿಸಿದ 65 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್​​ಗಳೊಂದಿಗೆ 60 ರನ್​ ಬಾರಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಈ ಮೂಲಕ 19 ವರ್ಷದ ಸ್ಯಾಮ್ ಕೊನ್​ಸ್ಟಾಸ್ ಸ್ಪೋಟಕ ಇನಿಂಗ್ಸ್​ನೊಂದಿಗೆ ತಮ್ಮ ಟೆಸ್ಟ್ ಕೆರಿಯರ್ ಆರಂಭಿಸಿದ್ದು ವಿಶೇಷ.

Follow Us
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಜಾತ್ರೆಯಲ್ಲಿ ಯುವತಿಯರನ್ನು ಹಿಂಬಾಲಿಸಿ ಖಾಸಗಿ ಭಾಗ ಮುಟ್ಟಿ ಹಿಂಸೆ
ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ
ಎರಡು ಸಿಂಹಗಳನ್ನು ಧೈರ್ಯವಾಗಿ ಎದುರಿಸಿದ ಬಸವ
ಕಾರು ಡಿಕ್ಕಿಯಾದ ರಭಸಕ್ಕೆ ಮೇಲೆ ಹಾರಿ ಹತ್ತಾರು ಅಡಿ ದೂರಕ್ಕುರುಳಿದ ಮಹಿಳೆ
ಕಾರು ಡಿಕ್ಕಿಯಾದ ರಭಸಕ್ಕೆ ಮೇಲೆ ಹಾರಿ ಹತ್ತಾರು ಅಡಿ ದೂರಕ್ಕುರುಳಿದ ಮಹಿಳೆ
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮೇಲೆ ಹಾರಿ ನೆಲಕ್ಕೆ ಬಿದ್ದ ಗಂಡ-ಹೆಂಡತಿ
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮೇಲೆ ಹಾರಿ ನೆಲಕ್ಕೆ ಬಿದ್ದ ಗಂಡ-ಹೆಂಡತಿ