VIDEO: ಅಭಿಮಾನಿಗಳಿಂದಲೇ ಶಾಹಿದ್ ಅಫ್ರಿದಿಗೆ ಗೂಸಾ: ಟ್ರೋಲಾದ ಪಾಕ್ ಕ್ರಿಕೆಟಿಗ
Pahalgam Attack: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನಲ್ಲಿರುವ ಪಹಲ್ಗಾಮ್‌ನಲ್ಲಿ ಪಾಕ್ ಬೆಂಬಲಿತ ಉಗ್ರರು ದಾಳಿ ನಡೆಸಿ 26 ಮಂದಿ ಭಾರತೀಯ ಪ್ರವಾಸಿಗರನ್ನು ಹತ್ಯೆ ಮಾಡಿದ್ದರು. ಈ ದುಷ್ಕೃತ್ಯವನ್ನು ಸಮರ್ಥಿಸುವಂತಹ ಹೇಳಿಕೆ ನೀಡುತ್ತಿದ್ದ ಶಾಹಿದ್ ಅಫ್ರಿದಿಯ ಯೂಟ್ಯೂಬ್ ಚಾನೆಲ್ ಅನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ಸಖತ್ ಸುದ್ದಿಯಲ್ಲಿದ್ದಾರೆ. ಅದು ಸಹ ಭಾರತ ಮತ್ತು ಕಾಶ್ಮೀರದ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ. ಈ ಹೇಳಿಕೆಗಳಿಗೆ ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ (Shikhar Dhawan) ಸೋಷಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡುತ್ತಿದ್ದಾರೆ. ಈ ತಿರುಗೇಟಿಗೆ ಇದೀಗ ಭಾರತೀಯ ಕ್ರಿಕೆಟ್ ಪ್ರೇಮಿಗಳು ಸಹ ಕೈ ಜೋಡಿಸಿದ್ದಾರೆ.
ಅಫ್ರಿದಿ ಹೇಳಿದ್ದೇನು?
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಚಾನೆಲ್ವೊಂದರಲ್ಲಿ ಮಾತನಾಡಿದ ಅಫ್ರಿದಿ, ಅಲ್ಲಿ ಪಟಾಕಿ ಸಿಡಿದರೂ ಅವರು ನಮ್ಮನ್ನು ದೂಷಿಸುತ್ತಾರೆ. ಕಾಶ್ಮೀರದಲ್ಲಿ ನಿಮ್ಮ ಬಳಿ 8,00,000 ಬಲದ ಸೈನ್ಯವಿದೆ. ಇದಾಗ್ಯೂ ಅಲ್ಲಿ ದಾಳಿ ನಡೆದಿದೆ ಎಂದರೆ ಅದು ನಿಮ್ಮ ಅಸಮರ್ಥತೆ ಹಾಗೂ ನಿಷ್ಪ್ರಯೋಜಕತೆಯನ್ನು ತೋರಿಸುತ್ತದೆ ಎಂದು ಅಫ್ರಿದಿ ಹೇಳಿದ್ದರು.
ಇದಕ್ಕೆ ಸೋಷಿಯಲ್ ಮೀಡಿಯಾ ಮೂಲಕ ಪ್ರತ್ಯುತ್ತರ ನೀಡಿದ್ದ ಶಿಖರ್ ಧವನ್, ನೀವುಗಳು ಕಾರ್ಗಿಲ್‌ನಲ್ಲೂ ಸೋತಿದ್ದೀರಿ. ಈಗಾಗಲೇ ತುಂಬಾ ಹಿಂದೆ ಬಿದ್ದಿದ್ದೀರಿ ಮತ್ತು ಇನ್ನೂ ಎಷ್ಟು ಹಿಂದೆ ಬೀಳುತ್ತೀರಿ. ಅನಗತ್ಯ ಹೇಳಿಕೆ ನೀಡುವ ಬದಲು ನಿಮ್ಮ ದೇಶದ ಪ್ರಗತಿ ಬಗ್ಗೆ ಚಿಂತಿಸಿ. ನಮ್ಮ ಭಾರತೀಯ ಸೇನೆಯ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಎಂದಿದ್ದರು.
ಇದಕ್ಕೆ ಕೌಂಟರ್ ಆಗಿ, ಗೆಲುವು ಮತ್ತು ಸೋಲನ್ನು ಮರೆತುಬಿಡಿ ಶಿಖರ್, ನಾನು ನಿನಗೆ ಚಹಾ ಕೊಡುತ್ತೇನೆ ಎಂದು ಶಾಹಿದ್ ಅಫ್ರಿದಿ ಟ್ರೋಲ್ ಮಾಡಿದ್ದರು. ಈ ಟ್ರೋಲ್ ಬೆನ್ನಲ್ಲೇ ಭಾರತೀಯ ಅಭಿಮಾನಿಗಳು ಶಾಹಿದ್ ಅಫ್ರಿದಿ ಬಂಡವಾಳವನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಪಾಕಿಸ್ತಾನ್ ಅಭಿಮಾನಿಗಳಿಂದೇ ಗೂಸಾ ತಿಂದ ವಿಡಿಯೋ ಹಂಚಿಕೊಂಡು ಟ್ರೋಲ್ ಮಾಡಲಾರಂಭಿಸಿದ್ದಾರೆ.
ಗೂಸಾ ತಿಂದ ಅಫ್ರಿದಿ:
ಶಾಹಿದ್ ಅಫ್ರಿದಿ-ಶಿಖರ್ ಧವನ್ ನಡುವಣ ಎಕ್ಸ್ಸಮರ ತಾರಕ್ಕೇರುತ್ತಿದ್ದಂತೆ ಗೂಸಾ ವಿಡಿಯೋದೊಂದಿಗೆ ಭಾರತೀಯರು ಕಾಮೆಂಟ್ ಬಾಕ್ಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ 2012 ರಲ್ಲಿ ಅಭಿಮಾನಿಗಳಿಂದ ತಿಂದಂತಹ ಏಟನ್ನು ಅಫ್ರಿದಿಗೆ ನೆನಪಿಸಿದ್ದಾರೆ.
ಮಾರ್ಚ್ 23, 2012 ರಂದು ಏಷ್ಯಾಕಪ್ ಮುಗಿಸಿ ಶಾಹಿದ್ ಅಫ್ರಿದಿ ಢಾಕಾದಿಂದ ಕರಾಚಿಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಸ್ವಾಗತಿಸಲು ಅಭಿಮಾನಿಗಳು ಸೇರಿದ್ದರು. ಆದರೆ ವಿಮಾನ ನಿಲ್ದಾಣದಲ್ಲಿ ತಾಳ್ಮೆ ಕಳೆದುಕೊಂಡ ಅಫ್ರಿದಿ, ಅಭಿಮಾನಿಯ ಮೇಲೆ ಹಲ್ಲೆ ನಡೆಸಿ ಕಪಾಳಮೋಕ್ಷ ಮಾಡಿದ್ದರು.
ಇದನ್ನೂ ಓದಿ: 11 ಫೋರ್, 3 ಸಿಕ್ಸ್: ಕೊನೆಗೂ ಶತಕ ಪೂರೈಸಿದ ಗ್ಲೆನ್ ಮ್ಯಾಕ್ಸ್ವೆಲ್
ಇದರಿಂದ ಉದ್ರಿಕ್ತರಾದ ಅಭಿಮಾನಿಗಳ ಗುಂಪು ಶಾಹಿದ್ ಅಫ್ರಿದಿ ಮೇಲೆ ಹಲ್ಲೆ ನಡೆಸಿದ್ದರು. ಈ ವಿಡಿಯೋ ಇದೀಗ ಸೋಷಿಯಲ್ ವೈರಲ್ ಆಗಿದೆ. ಅಲ್ಲದೆ ಸ್ವಂತ ದೇಶದಲ್ಲೇ ಏಟು ತಿಂದ ನೀನು ಭಾರತದ ವಿರುದ್ಧ ದಾಳಿ ಮಾಡುವ ಬಗ್ಗೆ ಮಾತನಾಡುತ್ತಿದ್ದೀಯಾ ಎಂದು ಶಾಹಿದ್ ಅಫ್ರಿದಿಯನ್ನು ಟ್ರೋಲ್ ಮಾಡಲಾಗುತ್ತದೆ.
ಶಾಹಿದ್ ಅಫ್ರಿದಿಯ ವಿಡಿಯೋ:
Tu mujhe kya chai pilayega bkl,tujhe to khud ke log chai nahi pilatepic.twitter.com/hoE1W9NFqT https://t.co/m2bSgiNC58
— Shikkar Dhawen🐦 (@76off43) April 29, 2025
ಅಫ್ರಿದಿ ಯೂಟ್ಯೂಬ್ ಚಾನೆಲ್ ನಿಷೇಧ:
ಭಾರತ ಅವರ ಜನರನ್ನು ಕೊಂದು ನಂತರ ಪಾಕಿಸ್ತಾನವನ್ನು ದೂಷಿಸುತ್ತದೆ ಎಂದು ಶಾಹಿದ್ ಅಫ್ರಿದಿ ಹೇಳಿಕೆ ನೀಡಿದ್ದರು. ಅಲ್ಲದೆ ಟಿವಿ ಕಾರ್ಯಕ್ರಮವೊಂದರಲ್ಲಿ ಭಾರತೀಯ ಸೇನೆಯನ್ನು ನಿಷ್ಪ್ರಯೋಜಕ ಎಂದಿದ್ದರು. ಹೀಗೆ ಸೋಷಿಯಲ್ ಮೀಡಿಯಾ ಹಾಗೂ ಟಿವಿ ಚಾನೆಲ್ಗಳ ಮೂಲಕ ಭಾರತದ ವಿರುದ್ಧ ವಿಷಕಾರುತ್ತಿರುವ ಅಫ್ರಿದಿಯ ಯೂಟ್ಯೂಬ್ ಚಾನೆಲ್ ಅನ್ನು ಇದೀಗ ಭಾರತದಲ್ಲಿ ನಿಷೇಧಿಸಲಾಗಿದೆ.
Published On - 10:32 am, Thu, 1 May 25




