Shane Warne: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ ಸ್ಪಿನ್ ದಂತಕತೆ ಶೇನ್ ವಾರ್ನ್​ಗೆ ಸ್ಮರಣಾ ಕಾರ್ಯಕ್ರಮ

ಎಂಸಿಜಿಯಲ್ಲೇ ಶೇನ್ ವಾರ್ನ್​ 700ನೇ ಟೆಸ್ಟ್ ವಿಕೆಟ್ ಪಡೆದಿರುವ ಹಿನ್ನೆಲೆಯಲ್ಲಿ ಈ ಕ್ರೀಡಾಂಗಣವನ್ನು ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವಿಕ್ಟೋರಿಯಾ ರಾಜ್ಯದ ಮುಖ್ಯಮಂತ್ರಿ ತಿಳಿಸಿದ್ದಾರೆ.

Shane Warne: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿ ಸ್ಪಿನ್ ದಂತಕತೆ ಶೇನ್ ವಾರ್ನ್​ಗೆ ಸ್ಮರಣಾ ಕಾರ್ಯಕ್ರಮ
Shane Warne
Follow us
TV9 Web
| Updated By: Vinay Bhat

Updated on: Mar 10, 2022 | 11:03 AM

ಆಸ್ಟ್ರೇಲಿಯಾ ವಿಕ್ಟೋರಿಯಾ ರಾಜ್ಯ ಕ್ರಿಕೆಟ್ ದಂತಕತೆ ಶೇನ್ ​ವಾರ್ನ್ (Shane Warne)​ ಅವರ ಸ್ಮರಣಾ ಕಾರ್ಯಕ್ರಮವನ್ನು ಮಾರ್ಚ್​ 30ರಂದು ಆಯೋಜಿಸಲಿದ್ದು, ಈ ಕಾರ್ಯಕ್ರಮಕ್ಕೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (Melbourne Cricket Ground) ಅನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಎಂಸಿಜಿಯಲ್ಲೇ ಶೇನ್ ವಾರ್ನ್​ 700ನೇ ಟೆಸ್ಟ್ ವಿಕೆಟ್ ಪಡೆದಿರುವ ಹಿನ್ನೆಲೆಯಲ್ಲಿ ಈ ಕ್ರೀಡಾಂಗಣವನ್ನು ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವಿಕ್ಟೋರಿಯಾ ರಾಜ್ಯದ ಮುಖ್ಯಮಂತ್ರಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ವಾರ್ನಿಯನ್ನು ವಿದಾಯ ಹೇಳಲು ‘ಜಿ’ಗಿಂತ ಹೆಚ್ಚು ಸೂಕ್ತವಾದ ಜಾಗ ಈ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ”, ಎಂದಿದ್ದಾರೆ. ಈಗಾಗಲೇ ಟಿಕೆಟ್‌ಗಳು ಸಾರ್ವಜನಿಕರಿಗೆ ಲಭ್ಯವಾಗುತ್ತಿದ್ದು, ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಾಗದವರಿಗೆ ಲೈವ್‌ಸ್ಟ್ರೀಮ್ (Live Stream) ಮಾಡಲಾಗುತ್ತದೆ.

“ಮಾರ್ಚ್ 30ರ ಸಂಜೆ ಎಂಸಿಜಿಯಲ್ಲಿ ನಡೆಯುವ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಶೇನ್ ವಾರ್ನ್ ಅವರು ಕ್ರಿಕೆಟ್​ಗೆ ಮತ್ತು ಮತ್ತು ನಮ್ಮ ರಾಜ್ಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಗುತ್ತದೆ,” ಎಂದು ವಿಕ್ಟೋರಿಯಾ ರಾಜ್ಯದ ಮುಖ್ಯಮಂತ್ರಿ ಡೇನಿಯಲ್ ಆಂಡ್ರ್ಯೂಸ್ ಟ್ವೀಟ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಶೇನ್ ವಾರ್ನ್ ಎಂಸಿಜಿಯಲ್ಲಿ 1994ರಲ್ಲಿ ನಡೆದ ಆ್ಯಶಸ್ ಸರಣಿಯ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಇದರ ಜೊತೆಗೆ 2006ರ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 700ನೇ ವಿಕೆಟ್ ಪಡೆದಿದ್ದರು. ಈ ವಿಚಾರದಿಂದಾಗಿ ಶೇನ್ ವಾರ್ನ್​ ಸ್ಮರಣಾ ಕಾರ್ಯಕ್ರಮಕ್ಕೆ ಎಂಸಿಜಿ ಸೂಕ್ತ ಎನ್ನಲಾಗುತ್ತಿದೆ.

ಇನ್ನು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್​ನಲ್ಲಿರುವ ಗ್ರೇಟ್ ಸದರ್ನ್ ಸ್ಟ್ಯಾಂಡ್ ಅನ್ನು ಎಸ್‌ಕೆ ವಾರ್ನ್ ಸ್ಟ್ಯಾಂಡ್‌ ಎಂದು ಮರುನಾಮಕರಣ ಮಾಡಲಾಗುವುದು ಎಂದು ವಿಕ್ಟೋರಿಯನ್ ಕ್ರೀಡಾ ಸಚಿವ ಮಾರ್ಟಿನ್ ಪಕುಲಾ ಘೋಷಿಸಿದ್ದಾರೆ. ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ 700ನೇ ವಿಕೆಟ್ ಪಡೆದ ನೆನಪಿಗಾಗಿ ಗ್ರೇಟ್ ಸದರ್ನ್ ಸ್ಟ್ಯಾಂಡ್ ಅನ್ನು ಎಸ್‌ಕೆ ವಾರ್ನ್ ಸ್ಟ್ಯಾಂಡ್‌ ಆಗಿ ಮರು ನಾಮಕರಣ ಮಾಡಲಾಗುತ್ತಿದೆ. ಇವರ ಆಟದ ವೈಖರಿಗೆ ಸಂದ ಗೌರವ ಎಂದು ಡೇನಿಯಲ್ ಆಂಡ್ರ್ಯೂಸ್ ಹೇಳಿದ್ದಾರೆ.

ವಾರ್ನ್ ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ಕ್ರಿಕೆಟಿಗರಲ್ಲಿ ಒಬ್ಬರು. ಅವರು 1990ರ ದಶಕದ ಆರಂಭದಲ್ಲಿ ಅಂತರಾಷ್ಟ್ರೀಯ ರಂಗದಲ್ಲಿ ಲೆಗ್-ಸ್ಪಿನ್ ಕಲೆಯನ್ನು ಬಹುತೇಕ ರೂಢಿಸಿಕೊಂಡ ಏಕೈಕ ಕ್ರಿಕೆಟಿಗ ಮತ್ತು 2007ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಹೊತ್ತಿಗೆ, ಅವರು 700 ಟೆಸ್ಟ್ ವಿಕೆಟ್‌ಗಳನ್ನು ತಲುಪಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು. ಶೇನ್ ತನ್ನ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ವಿದಾಯ ಹೇಳುವ ಹೊತ್ತಿಗೆ 708 ಟೆಸ್ಟ್ ವಿಕೆಟ್‌ ಮತ್ತು 293 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದರು. ಸಾರ್ವಕಾಲಿಕ ಅಂತರರಾಷ್ಟ್ರೀಯ ವಿಕೆಟ್-ಟೇಕರ್ ಗಳ ಪಟ್ಟಿಯಲ್ಲಿ ಅವರ ಶ್ರೇಷ್ಠ ಸ್ನೇಹಿತ ಮತ್ತು ಪ್ರತಿಸ್ಪರ್ಧಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ನಂತರ ಎರಡನೇ ಸ್ಥಾನ ಪಡೆದರು.

52 ವರ್ಷದ ಶೇನ್‌ ವಾರ್ನ್‌ ಥೈಲ್ಯಾಂಡ್‌ನಲ್ಲಿ ಕಳೆದ ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಶೇನ್‌ ವಾರ್ನ್‌ ಅವರ ಅಗಲಿಕೆ ಕೇವಲ ಕ್ರಿಕೆಟ್‌ ಲೋಕಕ್ಕೆ ಮಾತ್ರವಲ್ಲದೇ, ಕ್ರಿಕೆಟ್‌ ಅಂಗಳದಲ್ಲಿ ಅವರು ಮಾಡಿದ್ದ ಸ್ಪಿನ್‌ ಮ್ಯಾಜಿಕ್‌ಗೆ ಸಾಕ್ಷಿಯಾಗಿದ್ದ ಕೋಟ್ಯಾಂತರ ಕ್ರಿಕೆಟ್‌ ಅಭಿಮಾನಿಗಳಿಗೂ ಆಘಾತವನ್ನುಂಟು ಮಾಡಿದೆ. ಸ್ಪಿನ್‌ ಡಾಕ್ಟರ್‌ಎಂದೇ ಕರೆಯಲ್ಪಡುತ್ತಿದ್ದ ಶೇನ್‌ ವಾರ್ನ್‌ ಅಗಲಿಕೆಗೆ ವಿಶ್ವ ಕ್ರಿಕೆಟ್‌ನ ಹಾಲಿ ಹಾಗೂ ಮಾಜಿ ಆಟಗಾರರು ಸಂತಾಪ ಸೂಚಿಸಿದ್ದರು.

INDW vs NZW: ಬ್ಯಾಟಿಂಗ್​ನಲ್ಲಿ ಮಿಂಚಿದ ನ್ಯೂಜಿಲೆಂಡ್: ಮಿಥಾಲಿ ಪಡೆಗೆ ಕಠಿಣ ಟಾರ್ಗೆಟ್

IND vs SL: ಸಿಕ್ಸರ್​ಗಳ ದಾಖಲೆ ಮೇಲೆ ಇಬ್ಬರ ಕಣ್ಣು: ರೋಹಿತ್-ಜಡೇಜಾ ನಡುವೆ ಶುರುವಾಗಿದೆ ಪೈಪೋಟಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ