IND vs BAN: ಚೊಚ್ಚಲ ಪಂದ್ಯದಲ್ಲೇ ಗೆಲುವಿನ ಶತಕ; ಗಿಲ್ ಮುರಿದ ದಾಖಲೆಗಳೆಷ್ಟು ಗೊತ್ತಾ?
hubman Gill's Maiden Champions Trophy Century: 2025ರ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು 6 ವಿಕೆಟ್‌ಗಳಿಂದ ಸೋಲಿಸಿದೆ. ಶುಭ್ಮನ್ ಗಿಲ್ ಅವರ ಅಜೇಯ 101 ರನ್‌ಗಳ ಅದ್ಭುತ ಇನ್ನಿಂಗ್ಸ್ ಭಾರತದ ಗೆಲುವಿಗೆ ಪ್ರಮುಖ ಕಾರಣವಾಯಿತು. ಇದು ಗಿಲ್ ಅವರ ಏಕದಿನ ವೃತ್ತಿಜೀವನದ 8ನೇ ಶತಕ ಮತ್ತು ಚಾಂಪಿಯನ್ಸ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಬಾರಿಸಿದ ಮೊದಲ ಶತಕವಾಗಿದೆ. ಈ ಸಾಧನೆಯೊಂದಿಗೆ ಗಿಲ್ ವಿಶೇಷ ದಾಖಲೆಯನ್ನೂ ಸೃಷ್ಟಿಸಿದ್ದಾರೆ.

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಿದೆ. ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತ, ಬಾಂಗ್ಲಾದೇಶವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಈ ಮಹತ್ವದ ಗೆಲುವಿನಲ್ಲಿ ಶುಭ್ಮನ್ ಗಿಲ್ ಅವರ ಪಾತ್ರ ಅಪಾರವಾಗಿತ್ತು. ದಿಢೀರ್ ಕುಸಿತದ ನಡುವೆ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಗಿಲ್ ಅಜೇಯ 101 ರನ್‌ಗಳ ಇನ್ನಿಂಗ್ಸ್ ಆಡಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಇದರ ಜೊತೆಗೆ ಚೊಚ್ಚಲ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ ಸಾಧನೆ ಮಾಡಿದಲ್ಲದೆ, ಐಸಿಸಿ ಟೂರ್ನಿಯಲ್ಲಿ ಮೊದಲ ಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು.
ಐಸಿಸಿ ಟೂರ್ನಿಯಲ್ಲಿ ಮೊದಲ ಶತಕ
ತಮ್ಮ ಶತಕದ ಇನ್ನಿಂಗ್ಸ್ನಲ್ಲಿ 125 ಎಸೆತಗಳನ್ನು ಎದುರಿಸಿದ ಗಿಲ್ 100 ರನ್ ಪೂರ್ಣಗೊಳಿಸಿದರು. ಇದರಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದ್ದವು. ಈ ಶತಕದೊಂದಿಗೆ ಗಿಲ್ ಐಸಿಸಿ ಈವೆಂಟ್‌ನಲ್ಲಿ ಮೊದಲ ಬಾರಿಗೆ ಶತಕ ಬಾರಿಸಿದ ಸಾಧನೆಯನ್ನು ಮಾಡಿದರು. ಇದಲ್ಲದೆ, ಇದು ಅವರ ಏಕದಿನ ವೃತ್ತಿಜೀವನದ 8 ನೇ ಶತಕವಾಗಿದ್ದು, ಇದಕ್ಕೂ ಮುನ್ನ ಅವರು ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿಯೂ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದರು. ಇಷ್ಟೇ ಅಲ್ಲ, ಗಿಲ್ ಕಳೆದ 4 ಏಕದಿನ ಇನ್ನಿಂಗ್ಸ್‌ಗಳಲ್ಲಿ 50+ ರನ್‌ಗಳ ಗಡಿಯನ್ನು ದಾಟಿದ್ದಾರೆ, ಇದು ಪ್ರಸ್ತುತ ಅವರು ಎಷ್ಟು ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ.
Leading the chase ✅Hundred ✅ Win ✅
Vice Captain Shubman Gill guides #TeamIndia to victory 👏
Updates ▶️ https://t.co/ggnxmdG0VK#BANvIND | #ChampionsTrophy | @ShubmanGill pic.twitter.com/YbWSCERX6E
— BCCI (@BCCI) February 20, 2025
ಧವನ್ ದಾಖಲೆ ಮುರಿದ ಗಿಲ್
ಈ ಪಂದ್ಯದಲ್ಲಿ ಶುಭ್ಮನ್ ಗಿಲ್ 129 ಎಸೆತಗಳಲ್ಲಿ ಅಜೇಯ 101 ರನ್ ಗಳಿಸಿ ಟೀಂ ಇಂಡಿಯಾವನ್ನು ಗೆಲುವಿನತ್ತ ಕೊಂಡೊಯ್ದರು. ಈ ಗೆಲುವಿನ ಇನ್ನಿಂಗ್ಸ್‌ನೊಂದಿಗೆ ಗಿಲ್ ತಮ್ಮ ಹೆಸರಿನಲ್ಲಿ ಒಂದು ದೊಡ್ಡ ದಾಖಲೆಯನ್ನೂ ನಿರ್ಮಿಸಿದರು. ಅದೆನೆಂದರೆ, ಭಾರತ ಪರ ಏಕದಿನ ಪಂದ್ಯಗಳಲ್ಲಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 8 ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ. ಗಿಲ್ 51 ಏಕದಿನ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ, ಇದಕ್ಕೂ ಮೊದಲು 57 ಏಕದಿನ ಇನ್ನಿಂಗ್ಸ್‌ಗಳಲ್ಲಿ 8 ಶತಕಗಳನ್ನು ಬಾರಿಸಿದ್ದ ಶಿಖರ್ ಧವನ್ ಅವರ ಹೆಸರಿನಲ್ಲಿ ಈ ದಾಖಲೆ ಇತ್ತು.
ವಿಶೇಷ ಪಟ್ಟಿಯಲ್ಲಿ ಗಿಲ್ ಸೇರ್ಪಡೆ
ಈ ಶತಕದೊಂದಿಗೆ ಶುಭ್ಮನ್ ಗಿಲ್ ಕೂಡ ಸಚಿನ್ ತೆಂಡೂಲ್ಕರ್ ಅವರ ವಿಶೇಷ ಪಟ್ಟಿಗೆ ಸೇರಿಕೊಂಡಿದ್ದಾರೆ. ವಾಸ್ತವವಾಗಿ, ಅವರು ಚಾಂಪಿಯನ್ಸ್ ಟ್ರೋಫಿಯ ಚೊಚ್ಚಲ ಪಂದ್ಯದಲ್ಲೇ ಶತಕ ಗಳಿಸಿದ ನಾಲ್ಕನೇ ಭಾರತೀಯ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಸಚಿನ್ ತೆಂಡೂಲ್ಕರ್, ಮೊಹಮ್ಮದ್ ಕೈಫ್ ಮತ್ತು ಶಿಖರ್ ಧವನ್ ಈ ಸಾಧನೆ ಮಾಡಿದ್ದರು. 1998 ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಚೊಚ್ಚಲ ಪಂದ್ಯದಲ್ಲೇ ಸಚಿನ್ ತೆಂಡೂಲ್ಕರ್, 2002 ರಲ್ಲಿ ಮೊಹಮ್ಮದ್ ಕೈಫ್ ಮತ್ತು 2013 ರಲ್ಲಿ ಶಿಖರ್ ಧವನ್ ಶತಕ ಸಿಡಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ