ವಿಶ್ವಕಪ್ಗಾಗಿ ತಯಾರಿಯಲ್ಲಿದ್ದ ಗಿಲ್ಗೆ ಬಿಗ್ ಶಾಕ್ ನೀಡಿದ ಬಿಸಿಸಿಐ
India Squad For T20 World Cup 2026: ಫೆಬ್ರವರಿ 7 ರಿಂದ ಶುರುವಾಗಲಿರುವ ಟಿ20 ವಿಶ್ವಕಪ್ಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಿದರೆ, ಉಪನಾಯಕನಾಗಿ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಈ ಹಿಂದೆ ವೈಸ್ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದ ಶುಭ್ಮನ್ ಗಿಲ್ ಅವರನ್ನು ಭಾರತ ತಂಡದಿಂದ ಕೈ ಬಿಡಲಾಗಿದೆ.

ಟಿ20 ವಿಶ್ವಕಪ್ಗಾಗಿ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಶುಭ್ಮನ್ ಗಿಲ್ಗೆ ಸ್ಥಾನ ನೀಡಲಾಗಿಲ್ಲ ಎಂಬುದೇ ವಿಶೇಷ. ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ಉಪನಾಯಕನಾಗಿ ಗಿಲ್ ಕಣಕ್ಕಿಳಿದಿದ್ದರು. ಹೀಗಾಗಿ ಅವರು ಮುಂಬರುವ ಟಿ20 ವಿಶ್ವಕಪ್ನಲ್ಲೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಅಷ್ಟೇ ಅಲ್ಲದೆ ನ್ಯೂಝಿಲೆಂಡ್ ಸರಣಿ ಹಾಗೂ ಟಿ20 ವಿಶ್ವಕಪ್ಗಾಗಿ ಮಾನಸಿಕವಾಗಿ ತಯಾರಿಯನ್ನೂ ಸಹ ಆರಂಭಿಸಿದ್ದರು. ಆದರೆ ಭಾರತ ತಂಡದ ಘೋಷಣೆಗೂ ಕೆಲವೇ ನಿಮಿಷಗಳ ಮೊದಲು ಬಿಸಿಸಿಐ ಗಿಲ್ಗೆ ಬಿಗ್ ಶಾಕ್ ನೀಡಿರುವ ವಿಚಾರ ಇದೀಗ ಬಹಿರಂಗವಾಗಿದೆ.
ಭಾರತ ತಂಡದ ಘೋಷಣೆಗೂ ಮುನ್ನ ಮುಂಬೈನಲ್ಲಿರುವ ಬಿಸಿಸಿಐ ಕಚೇರಿಯಲ್ಲಿ ಸಭೆ ಸೇರಲಾಗಿತ್ತು. ಈ ಸಭೆಯಲ್ಲಿ ಆಯ್ಕೆ ಸಮಿತಿ ಸದಸ್ಯರು ಹಾಗೂ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಭಾಗವಹಿಸಿದ್ದರು. ಈ ವೇಳೆಯೇ ಶುಭ್ಮನ್ ಗಿಲ್ ಅವರನ್ನು ತಂಡದಿಂದ ಕೈ ಬಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಅಂದರೆ ಅದಕ್ಕೂ ಮುನ್ನ ಶುಭ್ಮನ್ ಗಿಲ್ ಭಾರತ ಟಿ20 ತಂಡದ ಭಾಗವಾಗಿಯೇ ಇದ್ದರು. ಆದರೆ ತಂಡದ ಘೋಷಣೆಗೂ ಕೆಲವೇ ನಿಮಿಷಗಳ ಮೊದಲು ಗಿಲ್ ಅವರನ್ನು ಕೈ ಬಿಟ್ಟು ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ.
ಅದರಂತೆ ಪತ್ರಿಕಾಗೋಷ್ಠಿಗೂ ನಿಮಿಷಗಳ ಮೊದಲು ಶುಭ್ಮನ್ ಗಿಲ್ಗೆ ಕರೆ ಮಾಡಿ ತಂಡದಿಂದ ಕೈ ಬಿಟ್ಟಿರುವ ವಿಚಾರವನ್ನು ತಿಳಿಸಲಾಗಿದೆ. ಅತ್ತ ಗಿಲ್ ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಹಾಗೂ ಟಿ20 ವಿಶ್ವಕಪ್ಗಾಗಿ ಮಾನಸಿಕವಾಗಿ ತಯಾರಿಯಲ್ಲಿದ್ದರು.
ಇದಾಗ್ಯೂ ಅವರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಲಾಯಿತು. ಈ ಮೂಲಕ ಶುಭ್ಮನ್ ಗಿಲ್ ಅವರನ್ನು ಭಾರತ ಟಿ20 ತಂಡದಿಂದ ಹೊರಗಿಡಲಾಗಿದೆ. ಹೀಗಾಗಿ ಮುಂಬರುವ ಟಿ20 ಸರಣಿಯಲ್ಲಿ ಶುಭ್ಮನ್ ಗಿಲ್ ಭಾರತದ ಪರ ಕಣಕ್ಕಿಳಿಯುವುದಿಲ್ಲ. ಹಾಗೆಯೇ ಟಿ20 ವಿಶ್ವಕಪ್ನಲ್ಲೂ ಕಾಣಿಸಿಕೊಳ್ಳುವುದಿಲ್ಲ.
ಇದನ್ನೂ ಓದಿ: IPL 2026: ಈ ಆಟಗಾರನನ್ನು ಖರೀದಿಸಿದ್ದೇ ಕೆಎಲ್ ರಾಹುಲ್ಗಾಗಿ..!
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.
