Super Over: ಭಾರತ-ಆಸ್ಟ್ರೇಲಿಯಾ 2ನೇ ಟಿ20 ಟೈ: ರೋಚಕ ಸೂಪರ್ ಓವರ್​ನಲ್ಲಿ ಗೆದ್ದ ಕೌರ್ ಪಡೆ

India Women vs Australia Women 2nd T20I: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯ ಟೈ ಆದ ಪರಿಣಾಮ ಸೂಪರ್ ಓವರ್ ನಡೆಸಲಾಯಿತು. ಇದರಲ್ಲಿ ಭಾರತ ಗೆಲುವು ಸಾಧಿಸಿ ಇದೀಗ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1 ಅಂತರದ ಮುನ್ನಡೆ ಪಡೆದುಕೊಂಡಿದೆ.

Super Over: ಭಾರತ-ಆಸ್ಟ್ರೇಲಿಯಾ 2ನೇ ಟಿ20 ಟೈ: ರೋಚಕ ಸೂಪರ್ ಓವರ್​ನಲ್ಲಿ ಗೆದ್ದ ಕೌರ್ ಪಡೆ
INDW vs AUSW
Follow us
TV9 Web
| Updated By: Vinay Bhat

Updated on: Dec 12, 2022 | 8:13 AM

ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ (India Women vs Australia Women) ಮಹಿಳಾ ತಂಡಗಳ ನಡುವಣ ಎರಡನೇ ಟಿ20 ಪಂದ್ಯ ರಣ ರೋಚಕವಾಗಿತ್ತು. ಮೊದಲ ಪಂದ್ಯದಲ್ಲಿ ಭಾರತೀಯ ಮಹಿಳೆಯರು ಸೋತ ಪರಿಣಾಮ ದ್ವಿತೀಯ ಪಂದ್ಯ ಮಹತ್ವದ್ದಾಗಿತ್ತು. ಅದರಂತೆ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದ ಕೌರ್ ಪಡೆ ಹೋರಾಟ ನಡೆಸಿತು. ಕೊನೆಯಲ್ಲಿ ಪಂದ್ಯ ಟೈ ಆದ ಪರಿಣಾಮ ಸೂಪರ್ ಓವರ್ (Super Over) ನಡೆಸಲಾಯಿತು. ಇದರಲ್ಲಿ ಭಾರತ ಗೆಲುವು ಸಾಧಿಸಿ ಇದೀಗ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1 ಅಂತರದ ಮುನ್ನಡೆ ಪಡೆದುಕೊಂಡಿದೆ. ಭಾರತದ ಗೆಲುವಿನಲ್ಲಿ ಸ್ಮೃತಿ ಮಂದಾನ (Smriti Mandhana) ಪ್ರಮುಖ ಪಾತ್ರವಹಿಸಿದರು.

ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್​ಗೆ ಬಂದ ಆಸ್ಟ್ರೇಲಿಯಾ ಆರಂಭದಲ್ಲಿ ನಾಯಕಿ ಅಲೆಸ್ಸಾ ಹೇಲೆ (25) ವಿಕೆಟ್ ಕಳೆದುಕೊಂಡಿತು. ನಂತರ ಶುರುವಾಗಿದ್ದು ಇನ್​ಫಾರ್ಮ್ ಬ್ಯಾಟರ್​ಗಳಾದ ಬೆತ್ ಮೋನೆ ಮತ್ತು ತಹಿಲಾ ಮೆಕ್​ಘ್ರಾತ್ ಆಟ. ಭಾರತೀಯ ಬೌಲರ್​ಗಳನ್ನು ಕಾಡಿದ ಈ ಜೋಡಿ ಸಂಪೂರ್ಣ ಓವರ್ ಆಡಿತು. ಎಷ್ಟೇ ಹರಸಾಹಸ ಪಟ್ಟರೂ ಭಾರತೀಯ ಮಹಿಳೆಯರಿಗೆ ಇವರಿಬ್ಬರ ಜೊತೆಯಾಟ ಮುರಿಯಲು ಸಾಧ್ಯವಾಗಲಿಲ್ಲ. ಇಬ್ಬರೂ ಅರ್ಧಶತಕ ಸಿಡಿಸಿ ಮಿಂಚಿದರು. ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 1 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿತು. ಮೋನೆ 54 ಎಸೆತಗಳಲ್ಲಿ 13 ಫೋರ್​ನೊಂದಿಗೆ ಅಜೇಯ 82 ಹಾಗೂ ಮೆಕ್​ಘ್ರಾತ್ 51 ಎಸೆತಗಳಲ್ಲಿ 10 ಫೋರ್, 1 ಸಿಕ್ಸರ್​ನೊಂದಿಗೆ ಅಜೇಯ 70 ರನ್ ಸಿಡಿಸಿದರು.

ಇದನ್ನೂ ಓದಿ
Image
IND vs BAN Test ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್​ಗೆ ಟೀಂ ಇಂಡಿಯಾ ಪ್ರಕಟ: ರೋಹಿತ್ ಔಟ್, ಕನ್ನಡಿಗ ಕ್ಯಾಪ್ಟನ್
Image
IPL 2023: ಮಿನಿ ಹರಾಜಿನಲ್ಲಿ ಅಧಿಕ ಬೆಲೆಗೆ ಮಾರಾಟವಾಗಬಹುದಾದ ಐವರು ಅನ್‌ಕ್ಯಾಪ್ಡ್ ಆಟಗಾರರಿವರು
Image
ಟಿ20 ತಂಡದಿಂದ ರೋಹಿತ್- ಕೊಹ್ಲಿ ಔಟ್! ಲಂಕಾ ವಿರುದ್ಧದ ಸರಣಿಯಲ್ಲಿ ಎರಡು ತಂಡಗಳು ಕಣಕ್ಕೆ?
Image
‘ಡಿಯರ್ ಕ್ರಿಕೆಟ್, ಇನ್ನೊಂದು ಅವಕಾಶ ಕೊಡು’; ತನ್ನ ಅಳಲು ತೊಡಿಕೊಂಡ ಕನ್ನಡಿಗ ಕರುಣ್ ನಾಯರ್

ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಭಾರತ ಮಹಿಳಾ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಮೊದಲ ವಿಕೆಟ್​ಗೆ 8.4 ಓವರ್​ಗಳಲ್ಲಿ 76 ರನ್​ಗಳ ಕಾಣಿಕೆ ನೀಡಿದರು. ಶಫಾಲಿ 23 ಎಸೆತಗಳಲ್ಲಿ 34 ರನ್ ಬಾರಿಸಿದರು. ಜೆಮಿಯ ರೋಡ್ರಿಗಸ್ ಮತ್ತೊಮ್ಮೆ ವೈಫಲ್ಯ ಅನುಭವಿಸಿ 4 ರನ್​ಗೆ ಔಟಾದರೆ, ನಾಯಕಿ ಹರ್ಮನ್​ಪ್ರೀತ್ ಕೌರ್ (21 ರನ್) ಅವರು ಮಂದಾನ ಜೊತೆಗೂಡಿ ಗೆಲುವಿಗೆ ಹೋರಾಟ ನಡೆಸಿದರು. ಇತ್ತ ಬಿರುಸಿನ ಆಟ ಆಡುತ್ತಿದ್ದ ಮಂದಾನ 49 ಎಸೆತಗಳಲ್ಲಿ 9 ಫೋರ್, 4 ಸಿಕ್ಸರ್​ನೊಂದಿಗೆ 79 ರನ್ ಚಚ್ಚಿ ನಿರ್ಗಮಿಸಿದರು. ದೀಪ್ತಿ ಶರ್ಮಾ 2 ರನ್​ಗೆ ಸುಸ್ತಾದರು.

IPL 2023 Start DATE: ಒಂದು ವಾರ ತಡವಾಗಿ ಆರಂಭವಾಗಲಿದೆ ಈ ಬಾರಿಯ ಐಪಿಎಲ್..!

ಈ ಹಂತದಲ್ಲಿ ಜೊತೆಯಾದ ರಿಚ್ಚಾ ಘೋಷ್ ಹಾಗೂ ದೇವಿಕಾ ವೈದ್ಯ ಗೆಲುವಿಗೆ ಹೋರಾಡಿ ಪಂದ್ಯವನ್ನು ಮತ್ತಷ್ಟು ರೋಚಕತೆ ಸೃಷ್ಟಿಸಿದರು. ಕೊನೆಯ 2 ಓವರ್​ಗಳಲ್ಲಿ ಭಾರತದ ಗೆಲುವಿಗೆ 18 ರನ್​ಗಳ ಅವಶ್ಯಕತೆಯಿತ್ತು. 19ನೇ ಓವರ್​ನಲ್ಲಿ ಭಾರತ ಕಲೆಹಾಕಿದ್ದು ಕೇವಲ 4 ರನ್. ಹೀಗಾಗಿ ಅಂತಿಮ 6 ಎಸೆತಗಳಲ್ಲಿ 13 ರನ್ ಬೇಕಾಯಿತು. ಮೆಗನ್ ಸ್ಕಟ್ ಅವರ ಮೊದಲ ಎಸೆತದಲ್ಲಿ ಘೋಷ್ 1 ರನ್ ಗಳಿಸಿದರೆ, ಎರಡನೇ ಎಸೆತದಲ್ಲಿ ದೇವಿಕಾ ಫೋರ್ ಬಾರಿಸಿದರು. ಮೂರನೇ ಎಸೆತ 1 ರನ್, 4ನೇ ಎಸೆತ 2 ರನ್ ಮತ್ತು 5ನೇ ಎಸೆತದಲ್ಲಿ 1 ರನ್ ಮೂಡಿಬಂತು. ಕೊನೇ ಎಸೆತದಲ್ಲಿ 5 ರನ್​ಗಳು ಬೇಕಾಯಿತು. ಈ ಸಂದರ್ಭ ದೇವಿಕಾ ಚೆಂಡನ್ನು ಫೋರ್​ಗೆ ಅಟ್ಟಿದ ಪರಿಣಾಮ ಭಾರತ ಕೂಡ 20 ಓವರ್​ಗೆ 5 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಹೀಗಾಗಿ ಸೂಪರ್ ಓವರ್ ಆಡಿಸಬೇಕಾಯಿತು. ಘೋಷ್ 13 ಎಸೆತಗಳಲ್ಲಿ 26 ರನ್ ಮತ್ತು ದೇವಿಕಾ 11 ರನ್ ಗಳಿಸಿ ಅಜೇಯರಾಗಿದ್ದರು.

ಸೂಪರ್ ಓವರ್:

ಸೂಪರ್ ಓವರ್​ನಲ್ಲಿ ಮೊದಲು ಭಾರತ ಬ್ಯಾಟಿಂಗ್ ಮಾಡಿತು. ಸ್ಮೃತಿ ಮಂದಾನ ಮತ್ತು ರಿಚ್ಚಾ ಘೋಷ್ ಕಣಕ್ಕಿಳಿದರು. ಹೇದರ್ ಗ್ರಹಮ್ ಅವರ ಮೊದಲ ಎಸೆತದಲ್ಲೇ ಘೋಷ್ ಚೆಂಡನ್ನು ಸಿಕ್ಸರ್​ಗೆ ಅಟ್ಟಿದರು. ಆದರೆ, ಎರಡನೇ ಎಸೆತದಲ್ಲಿ ಔಟಾದರು. ಮೂರನೇ ಎಸೆತದಲ್ಲಿ ಕೌರ್ 1 ರನ್ ಗಳಿಸಿದರೆ, 4ನೇ ಎಸೆತದಲ್ಲಿ ಮಂದಾನ ಫೋರ್, 5ನೇ ಎಸೆತದಲ್ಲಿ ಸಿಕ್ಸ್ ಹಾಗೂ 6ನೇ ಎಸೆತದಲ್ಲಿ 3 ರನ್ ಕಲೆಹಾಕಿದರು. ಈ ಮೂಲಕ ಆಸ್ಟ್ರೇಲಿಯಾಕ್ಕೆ ಸೂಪರ್ ಓವರ್​ನಲ್ಲಿ ಗೆಲ್ಲಲು ಭಾರತ 21 ರನ್​ಗಳ ಟಾರ್ಗೆಟ್ ನೀಡಿತು.

ಭಾರತ ಪರ ರೇಣುಕಾ ಸಿಂಗ್ ಬೌಲಿಂಗ್ ಮಾಡಿದರು. ಅಲೆಸ್ಸಾ ಹೇಲೆ ಆಶ್ಲೆಗ್ ಗಾರ್ಡನರ್ ಕಣಕ್ಕಿಳಿದರು. ಮೊದಲ ಎಸೆತದಲ್ಲಿ ಹೇಲೆ ಫೋರ್ ಬಾರಿಸಿದರು. ಎರಡನೇ ಎಸೆತದಲ್ಲಿ 1 ರನ್ ಗಳಿಸಿದರೆ, ಮೂರನೇ ಎಸೆತದಲ್ಲಿ ಗಾರ್ಡನರ್ ಔಟಾದರು. 4ನೇ ಎಸೆತದಲ್ಲಿ ಮೆಕ್​ಘ್ರತ್ 1 ರನ್ ಗಳಿಸಲಷ್ಟೇ ಶಕ್ತವಾದರು. 5ನೇ ಎಸೆತದಲ್ಲಿ ಫೋರ್ ಬಂತು. 6ನೇ ಎಸೆತದಲ್ಲಿ ಸಿಕ್ಸ್ ಸಿಡಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಆಸ್ಟ್ರೇಲಿಯಾ 6 ಎಸೆತಗಳಲ್ಲಿ 1 ವಿಕೆಟ್ ನಷ್ಟಕ್ಕೆ 16 ರನ್ ಗಳಿಸಿ ಸೋಲು ಕಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು