ಟೀಂ ಇಂಡಿಯಾ ಕ್ರಿಕೆಟಿಗರಿಗೆ ಮೆಗಾಸ್ಟಾರ್ ಕುಟುಂಬದಿಂದ ಡಿನ್ನರ್ ಪಾರ್ಟಿ; ಫೋಟೋ ನೋಡಿ

India Vs Australia: ಪಂದ್ಯಕ್ಕಾಗಿ ಹೈದರಾಬಾದ್‌ಗೆ ಬಂದಿದ್ದ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ಇತರ ಹಲವು ಆಟಗಾರರು ರಾಮ್ ಚರಣ್ ಅವರ ಆಹ್ವಾನದ ಮೇರೆಗೆ ಮನೆಗೆ ಆಗಮಿಸಿದ್ದರು.

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಮೆಗಾಸ್ಟಾರ್ ಕುಟುಂಬದಿಂದ ಡಿನ್ನರ್ ಪಾರ್ಟಿ; ಫೋಟೋ ನೋಡಿ
ರಾಮ್ ಚರಣ್- ಹಾರ್ದಿಕ್ ಪಾಂಡ್ಯ
TV9kannada Web Team

| Edited By: pruthvi Shankar

Sep 26, 2022 | 5:31 PM

ಭಾರತ- ಆಸೀಸ್ (India Vs Australia) ನಡುವಿನ 3 ಪಂದ್ಯಗಳ ಟಿ20 ಸರಣಿ ಸುಖಾಂತ್ಯ ಕಂಡಿದೆ. ಅಂತಿಮ ಪಂದ್ಯಕ್ಕೂ ಮುನ್ನ ಸರಣಿಯಲ್ಲಿ ಸಮಬಲ ಸಾಧಿಸಿದ್ದ ಉಭಯ ತಂಡಗಳು ಕೊನೆಯ ಪಂದ್ಯದಲ್ಲಿ ಸರಣಿ ಗೆಲ್ಲಲು ಜಿದ್ದಾಜಿದ್ದಿನ ಹೋರಾಟ ನೀಡಿದವು. ಆದರೆ ಅಂತಿಮವಾಗಿ ಸರಣಿ ಗೆಲ್ಲುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಯಿತು. ಇದರೊಂದಿಗೆ ಕಳೆದ 3 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವನ್ನು ಆಯೋಜಿಸದ ಬರವನ್ನು ಹೈದರಾಬಾದ್‌ ಕ್ರಿಕೆಟ್ ಅಸೋಸಿಯೆಷನ್ ನೀಗಿಸಿಕೊಂಡಿತು. ಇದರ ಜೊತೆಗೆ ಬಹಳ ದಿನಗಳ ಬಳಿಕ ಹೈದರಾಬಾದ್​ಗೆ ಬಂದಿದ್ದ ಟೀಂ ಇಂಡಿಯಾ ಆಟಗಾರರಿಗೆ ಮೆಗಾಸ್ಟಾರ್ ಮನೆಯಿಂದ ರಾಜಾತಿಥ್ಯ ಸಿಕ್ಕಿದೆ. ಮೆಗಾಸ್ಟಾರ್ ಚಿರಂಜೀವಿ ( Megastar Chiranjeevi) ಅವರ ಪುತ್ರ ರಾಮ್ ಚರಣ್ (Ram Charan) ಪಂದ್ಯ ಮುಗಿದ ನಂತರ ಭಾರತೀಯ ಕ್ರಿಕೆಟಿಗರಿಗೆ ಭೋಜನ ವ್ಯವಸ್ಥೆ ಏರ್ಪಡಿಸಿದ್ದರು. ಪಂದ್ಯಕ್ಕಾಗಿ ಹೈದರಾಬಾದ್‌ಗೆ ಬಂದಿದ್ದ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ಇತರ ಹಲವು ಆಟಗಾರರು ರಾಮ್ ಚರಣ್ ಅವರ ಆಹ್ವಾನದ ಮೇರೆಗೆ ಮನೆಗೆ ಆಗಮಿಸಿದ್ದರು.

ಟೀಂ ಇಂಡಿಯಾ ಕ್ರಿಕೆಟಿಗರಿಗೆ ಆಹ್ವಾನ ನೀಡಿದ್ದ ರಾಮ್ ಚರಣ್, ಅವರೊಂದಿಗೆ ಕೆಲಕಾಲ ಹರಟೆ ಹೊಡೆದು ಉಪಚರಿಸಿದ್ದಾರೆ. ಈ ಪಾರ್ಟಿಯಲ್ಲಿ ಮೆಗಾಸ್ಟಾರ್ ಕುಟುಂಬ ಸದಸ್ಯರು ಮತ್ತು ಅನೇಕ ಸೆಲೆಬ್ರಿಟಿಗಳು ಕೂಡ ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಹಾರ್ದಿಕ್ ಪಾಂಡ್ಯ ಇರುವ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ರಾಮ್ ಚರಣ್ ಮನೆಯಲ್ಲಿ ನಡೆದ ಔತಣಕೂಟದ ಫೋಟೋಗಳನ್ನು ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತವಾಗಿ ಹಂಚಿಕೊಳ್ಳಲಾಗುವುದು ಎಂದು ವರದಿಗಳಿವೆ. ಸೆಲೆಬ್ರಿಟಿಗಳನ್ನು ಸನ್ಮಾನಿಸುವ ಮೂಲಕ ರಾಮ್ ಚರಣ್ ತಮ್ಮ ತಂದೆ ಚಿರಂಜೀವಿ ಅವರ ಹಾದಿಯಲ್ಲಿ ಸಾಗುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಈ ಹಿಂದೆಯೂ ಮೆಗಾಸ್ಟಾರ್ ಅನೇಕ ಕ್ರೀಡಾ ಮತ್ತು ರಾಜಕೀಯ ಗಣ್ಯರಿಗೆ ಆತಿಥ್ಯ ನೀಡಿದ್ದರು. ಚರಣ್ ಕೂಡ ಈ ಸಂಪ್ರದಾಯವನ್ನು ಮುಂದುವರೆಸುತ್ತಿದ್ದಾರೆ. ಏತನ್ಮಧ್ಯೆ, ‘RRR’ ನಂತರ ತಮಿಳಿನ ಸೂಪರ್ ಡುಪ್ಪರ್ ಸಿನಿಮಾಗಳ ನಿರ್ದೇಶಕ ಶಂಕರ್ ಜೊತೆ ರಾಮ್ ಚರಣ್ ಸಿನಿಮಾ ಮಾಡುತ್ತಿದ್ದು, ಇದು ರಾಜಕೀಯ ಮತ್ತು ಸಾಮಾಜಿಕ ವಿಷಯಾಧಾರಿತ ಸಿನಿಮಾವಾಗಿದೆ ಎಂದು ವರದಿಯಾಗಿದೆ. ಅಲ್ಲದೆ ಈ ಸಿನಿಮಾದಲ್ಲಿ ರಾಮ್ ಚರಣ್ ವಿಶೇಷ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇದ್ದು, ಸದ್ಯ ಈ ಸಿನಿಮಾ ನಿರ್ಮಾಣ ಹಂತದಲ್ಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada