Team India: ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಎಷ್ಟು ಪಂದ್ಯಗಳನ್ನಾಡಲಿದೆ?
India vs South Africa: ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಸರಣಿಯು ನವೆಂಬರ್ 14 ರಿಂದ ಶುರುವಾಗಲಿದೆ. 2 ಪಂದ್ಯಗಳ ಈ ಸರಣಿಯ ಬಳಿಕ ಮೂರು ಮ್ಯಾಚ್ಗಳ ಏಕದಿನ ಸರಣಿ ಜರುಗಲಿದೆ. ಇದಾದ ಬಳಿಕ ಭಾರತ ಮತ್ತು ಸೌತ್ ಆಫ್ರಿಕಾ ನಡುವಣ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಬಹುನಿರೀಕ್ಷಿತ ಟಿ20 ವಿಶ್ವಕಪ್ಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 7 ರಿಂದ ಆರಂಭವಾಗಲಿರುವ ಈ ಬಾರಿಯ ಚುಟುಕು ವಿಶ್ವಕಪ್ಗೆ ಭಾರತ ಮತ್ತು ಶ್ರೀಲಂಕಾ ಆತಿಥ್ಯವಹಿಸಲಿದೆ. ಹಾಲಿ ಚಾಂಪಿಯನ್ ಎನಿಸಿಕೊಂಡಿರುವ ಟೀಮ್ ಇಂಡಿಯಾ ಮತ್ತೊಮ್ಮೆ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ಇರಾದೆಯಲ್ಲಿದೆ. ಅದಕ್ಕಾಗಿ ಮುಂದಿನ 10 ಪಂದ್ಯಗಳ ಮೂಲಕ ಸಂಪೂರ್ಣ ತಯಾರಿ ನಡೆಸಲಿದೆ.
ಅಂದರೆ ಟಿ20 ವಿಶ್ವಕಪ್ಗೂ ಮುನ್ನ ಭಾರತ ತಂಡವು ತವರಿನಲ್ಲಿ 10 ಟಿ20 ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ನೇರವಾಗಿ ಚುಟುಕು ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿದೆ. ಚುಟುಕು ವಿಶ್ವಕಪ್ನಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದ್ದು, ಇದರಲ್ಲಿ ಲೀಗ್ ಹಂತದಲ್ಲಿ ಭಾರತ ತಂಡವು 3 ಪಂದ್ಯಗಳನ್ನಾಡುವುದು ಖಚಿತ.
ಅಲ್ಲದೆ ಮುಂದಿನ ಹಂತಕ್ಕೇರಿದರೆ ಮತ್ತೆ ನಾಲ್ಕು ಪಂದ್ಯಗಳನ್ನಾಡುವ ಸಾಧ್ಯತೆಯಿದೆ. ಏಕೆಂದರೆ ಮುಂಬರುವ ಟಿ20 ವಿಶ್ವಕಪ್ ಗ್ರೂಪ್ ಸ್ವರೂಪಗಳಲ್ಲಿ ನಡೆಯಲಿದ್ದು, ಮೊದಲ ಹಂತದಲ್ಲಿ ಗ್ರೂಪ್ ಮ್ಯಾಚ್ಗಳು ನಡೆಯಲಿದೆ. ಇದಾದ ಬಳಿಕ ಸೂಪರ್-10 ಪಂದ್ಯಗಳು ಜರುಗಲಿದೆ.
ಈ ಎಲ್ಲಾ ಪಂದ್ಯಗಳಿಗೂ ಮುನ್ನ ಟೀಮ್ ಇಂಡಿಯಾ ಸೌತ್ ಆಫ್ರಿಕಾ ಹಾಗೂ ನ್ಯೂಝಿಲೆಂಡ್ ತಂಡಗಳ ವಿರುದ್ಧದ ಕಣಕ್ಕಿಳಿಯಲಿದೆ. ಅಂದರೆ ಭಾರತ ತಂಡವು ಡಿಸೆಂಬರ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ 5 ಟಿ20 ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ಜನವರಿಯಲ್ಲಿ ನ್ಯೂಝಿಲೆಂಡ್ ಮತ್ತು ಭಾರತ 5 ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿದೆ.
ಈ ಪಂದ್ಯಗಳ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ಗೆ ತಯಾರಿ ನಡೆಸಲಿದೆ. ಈ ತಯಾರಿಯೊಂದಿಗೆ ಚುಟಕು ವಿಶ್ವಕಪ್ಗೆ ಸಜ್ಜಾಗಲು ಭಾರತ ತಂಡವು ಯೋಜನೆ ರೂಪಿಸುತ್ತಿರುವುದಾಗಿ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ತಿಳಿಸಿದ್ದಾರೆ. ಅದರಂತೆ ಭಾರತ ತಂಡವು ಟಿ20 ವಿಶ್ವಕಪ್ಗೂ ಮುನ್ನ ಆಡಲಿರುವ ಟಿ20 ಪಂದ್ಯಗಳ ಸಂಪೂರ್ಣ ವಿವರಗಳು ಈ ಕೆಳಗಿನಂತಿದೆ…
ಭಾರತ vs ಸೌತ್ ಆಫ್ರಿಕಾ ಟಿ20 ಸರಣಿ ವೇಳಾಪಟ್ಟಿ:
- ಭಾರತ vs ಸೌತ್ ಆಫ್ರಿಕಾ ಮೊದಲ ಟಿ20: ಡಿಸೆಂಬರ್ 9 – ಕಟಕ್, ಬಾರಾಬತಿ ಕ್ರೀಡಾಂಗಣ
- ಭಾರತ vs ಸೌತ್ ಆಫ್ರಿಕಾ ಎರಡನೇ ಟಿ20: ಡಿಸೆಂಬರ್ 11 – ಮುಲ್ಲನ್‌ಪುರ, ಎಂವೈಸಿ ಕ್ರೀಡಾಂಗಣ
- ಭಾರತ vs ಸೌತ್ ಆಫ್ರಿಕಾ ಮೂರನೇ ಟಿ20: ಡಿಸೆಂಬರ್ 14 – ಧರ್ಮಶಾಲಾ, ಎಚ್‌ಪಿಸಿಎ ಕ್ರೀಡಾಂಗಣ
- ಭಾರತ vs ಸೌತ್ ಆಫ್ರಿಕಾ ನಾಲ್ಕನೇ ಟಿ20: ಡಿಸೆಂಬರ್ 17 – ಲಕ್ನೋ, ಏಕಾನಾ ಕ್ರೀಡಾಂಗಣ
- ಭಾರತ vs ಸೌತ್ ಆಫ್ರಿಕಾ ಐದನೇ ಟಿ20: ಡಿಸೆಂಬರ್ 19 – ಅಹಮದಾಬಾದ್, ನರೇಂದ್ರ ಮೋದಿ ಕ್ರೀಡಾಂಗಣ.
ಇದನ್ನೂ ಓದಿ: IPL 2026: ಲೈಂಗಿನ ದೌರ್ಜನ್ಯ ಪ್ರಕರಣ: RCB ಆಟಗಾರ ಕಿಕ್ ಔಟ್ ಖಚಿತ
ಭಾರತ vs ನ್ಯೂಝಿಲೆಂಡ್ ಟಿ20 ಸರಣಿ ವೇಳಾಪಟ್ಟಿ:
- ಭಾರತ vs ನ್ಯೂಝಿಲೆಂಡ್ ಮೊದಲ ಟಿ20: ಜನವರಿ 21 – ನಾಗ್ಪುರ, ವಿಸಿಎ ಕ್ರೀಡಾಂಗಣ
- ಭಾರತ vs ನ್ಯೂಝಿಲೆಂಡ್ ಎರಡನೇ ಟಿ20: ಜನವರಿ 23 – ರಾಯ್‌ಪುರ, ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣ
- ಭಾರತ vs ನ್ಯೂಝಿಲೆಂಡ್ ಮೂರನೇ ಟಿ20: ಜನವರಿ 25 – ಗುವಾಹಟಿ, ಎಸಿಎ ಕ್ರೀಡಾಂಗಣ
- ಭಾರತ vs ನ್ಯೂಝಿಲೆಂಡ್ ನಾಲ್ಕನೇ ಟಿ20: ಜನವರಿ 28 – ವಿಶಾಖಪಟ್ಟಣಂ, ಡಾ. ವೈಎಸ್ಆರ್ ಕ್ರೀಡಾಂಗಣ
- ಭಾರತ vs ನ್ಯೂಝಿಲೆಂಡ್ ಐದನೇ ಟಿ20: ಜನವರಿ 31 – ತಿರುವನಂತಪುರಂ, ಗ್ರೀನ್‌ಫೀಲ್ಡ್ ಕ್ರೀಡಾಂಗಣ.
Published On - 10:55 am, Tue, 11 November 25
