T20 World Cup 2024: ಟಿ20 ವಿಶ್ವಕಪ್ ಮುಕ್ತಾಯಗೊಂಡಿದೆ. 20 ತಂಡಗಳ ನಡುವಣ ಕದನದಲ್ಲಿ ಅಂತಿಮವಾಗಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ ಐಸಿಸಿ ಟ್ರೋಫಿ ಗೆಲ್ಲುವ ಭಾರತ ತಂಡದ 11 ವರ್ಷಗಳ ಕನಸು ಕೂಡ ನನಸಾಗಿದೆ. ಇನ್ನೇನಿದ್ದರೂ ಸರಣಿಗಳ ಕದನ. ಅಂದರೆ 2025ರ ಚಾಂಪಿಯನ್ಸ್ ಟ್ರೋಫಿವರೆಗೂ, ಭಾರತ ತಂಡವು ಹಲವು ಸರಣಿಗಳನ್ನಾಡಲಿದೆ. ಈ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ…
2024ರ ಟಿ20 ವಿಶ್ವಕಪ್ ವಿಜಯದ ಬೆನ್ನಲ್ಲೇ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಗಾಗಿ ಝಿಂಬಾಬ್ವೆಗೆ ತೆರಳಲಿದೆ. ಜುಲೈ 6 ರಿಂದ ಶುರುವಾಗಲಿರುವ ಈ ಸರಣಿಗಾಗಿ ಟೀಮ್ ಇಂಡಿಯಾ ಯುವ ಪಡೆಯನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ ಈ ಸರಣಿಯಲ್ಲಿ ಭಾರತ ತಂಡವನ್ನು ಶುಭ್ಮನ್ ಗಿಲ್ ಮುನ್ನಡೆಸಲಿದ್ದಾರೆ.
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟಿ20, ಝಿಂಬಾಬ್ವೆ vs ಭಾರತ | ಶನಿವಾರ, 6 ಜುಲೈ 2024 | 4:30 PM | ಹರಾರೆ |
2ನೇ ಟಿ20, ಝಿಂಬಾಬ್ವೆ vs ಭಾರತ | ಭಾನುವಾರ, 7 ಜುಲೈ 2024 | 4:30 PM | ಹರಾರೆ |
3ನೇ ಟಿ20, ಝಿಂಬಾಬ್ವೆ vs ಭಾರತ | ಬುಧವಾರ, 10 ಜುಲೈ 2024 | 9:30 PM | ಹರಾರೆ |
4ನೇ ಟಿ20, ಝಿಂಬಾಬ್ವೆ vs ಭಾರತ | ಶನಿವಾರ, 13 ಜುಲೈ 2024 | 4:30 PM | ಹರಾರೆ |
5ನೇ ಟಿ20, ಝಿಂಬಾಬ್ವೆ vs ಭಾರತ | ಭಾನುವಾರ, 14 ಜುಲೈ 2024 | 4:30 PM | ಹರಾರೆ |
ಝಿಂಬಾಬ್ವೆ ಪ್ರವಾಸದ ಬಳಿಕ ಭಾರತ ತಂಡವು ಶ್ರೀಲಂಕಾ ವಿರುದ್ಧ ಸರಣಿ ಆಡಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಒಟ್ಟು 6 ಪಂದ್ಯಗಳನ್ನಾಡಲಿದೆ. ಈ ಸರಣಿಯ ದಿನಾಂಕವನ್ನು ಇನ್ನೂ ಕೂಡ ಖಚಿತಪಡಿಸಿಲ್ಲ. ಇದಾಗ್ಯೂ ಜುಲೈ 27 ರಿಂದ ಆಗಸ್ಟ್ 7 ರ ನಡುವೆ ಭಾರತ ಮತ್ತು ಶ್ರೀಲಂಕಾ ತಂಡಗಳು 3 ಟಿ20 ಮತ್ತು 3 ಏಕದಿನ ಪಂದ್ಯಗಳನ್ನಾಡಲಿದೆ ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ನಲ್ಲಿ ಬಾಂಗ್ಲಾದೇಶ್ ತಂಡವು ಸರಣಿ ಆಡಲು ಭಾರತಕ್ಕೆ ಬರಲಿದೆ. ಈ ವೇಳೆ 2 ಟೆಸ್ಟ್ ಪಂದ್ಯಗಳು ಮತ್ತು 3 ಟಿ20 ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ | ಗುರುವಾರ, 19 ಸೆಪ್ಟೆಂಬರ್ 2024 | 9:30 AM | ಚೆನ್ನೈ |
2ನೇ ಟೆಸ್ಟ್, ಭಾರತ vs ಬಾಂಗ್ಲಾದೇಶ | ಶುಕ್ರವಾರ, 27 ಸೆಪ್ಟೆಂಬರ್ 2024 | 9:30 AM | ಕಾನ್ಪುರ |
1ನೇ ಟಿ20, ಭಾರತ vs ಬಾಂಗ್ಲಾದೇಶ | ಭಾನುವಾರ, 6 ಅಕ್ಟೋಬರ್ 2024 | 7 PM | ಧರ್ಮಶಾಲಾ |
2ನೇ ಟಿ20, ಭಾರತ vs ಬಾಂಗ್ಲಾದೇಶ | ಬುಧವಾರ, 9 ಅಕ್ಟೋಬರ್ 2024 | 7 PM | ದೆಹಲಿ |
3ನೇ ಟಿ20, ಭಾರತ vs ಬಾಂಗ್ಲಾದೇಶ | ಶನಿವಾರ, 12 ಅಕ್ಟೋಬರ್ 2024 | 7 PM | ಹೈದರಾಬಾದ್ |
ಬಾಂಗ್ಲಾದೇಶದ ನಂತರ, ಅಕ್ಟೋಬರ್-ನವೆಂಬರ್ನಲ್ಲಿ ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಭಾರತದಲ್ಲಿ ಜರುಗಲಿರುವ ಈ ಸರಣಿಯ ವೇಳಾಪಟ್ಟಿ ಇಲ್ಲಿದೆ.
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ | ಬುಧವಾರ, 16 ಅಕ್ಟೋಬರ್ 2024 | 9:30 AM | ಚೆನ್ನೈ |
2ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ | ಗುರುವಾರ, 24 ಅಕ್ಟೋಬರ್ 2024 | 9:30 AM | ಕಾನ್ಪುರ |
3ನೇ ಟೆಸ್ಟ್, ಭಾರತ vs ನ್ಯೂಝಿಲೆಂಡ್ | ಶುಕ್ರವಾರ, 1 ನವೆಂಬರ್ 2024 | 9:30 AM | ಹೈದರಾಬಾದ್ |
ಟಿ20 ವಿಶ್ವಕಪ್ನ ಫೈನಲಿಸ್ಟ್ಗಳಾದ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ನವೆಂಬರ್ನಲ್ಲಿ ಮತ್ತೆ ಮುಖಾಮುಖಿಯಾಗಲಿದೆ. 4 ಟಿ20 ಪಂದ್ಯಗಳ ಈ ಸರಣಿಗೆ ಸೌತ್ ಆಫ್ರಿಕಾ ಆತಿಥ್ಯವಹಿಸಲಿದೆ.
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟಿ20, ಸೌತ್ ಆಫ್ರಿಕಾ vs ಭಾರತ | ಶುಕ್ರವಾರ, 8 ನವೆಂಬರ್ 2024 | 8:30 PM | ಡರ್ಬನ್ |
2ನೇ ಟಿ20, ಸೌತ್ ಆಫ್ರಿಕಾ vs ಭಾರತ | ಭಾನುವಾರ, 10 ನವೆಂಬರ್ 2024 | 8:30 PM | ಗ್ಕೆಬರ್ಹಾ |
3ನೇ ಟಿ20, ಸೌತ್ ಆಫ್ರಿಕಾ vs ಭಾರತ | ಬುಧವಾರ, 13 ನವೆಂಬರ್ 2024 | 8:30 PM | ಸೆಂಚುರಿಯನ್ |
4ನೇ ಟಿ20, ಸೌತ್ ಆಫ್ರಿಕಾ vs ಭಾರತ | ಶುಕ್ರವಾರ, 15 ನವೆಂಬರ್ 2024 | 8:30 PM | ಜೋಹಾನ್ಸ್ಬರ್ಗ್ |
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಕೊನೆಯ ಟೆಸ್ಟ್ ಸರಣಿಯನ್ನು ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಕಾಂಗರೂಗಳ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಒಟ್ಟು 5 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಈ ಸರಣಿಯ ವೇಳಾಪಟ್ಟಿ ಈ ಕೆಳಗಿನಂತಿದೆ.
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 22 ನವೆಂಬರ್ 2024 | 7:50 AM | ಪರ್ತ್ |
2ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ (D/N) | ಶುಕ್ರವಾರ, 6 ಡಿಸೆಂಬರ್ 2024 | 9:30 AM | ಅಡಿಲೇಡ್ |
3ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶನಿವಾರ, 14 ಡಿಸೆಂಬರ್ 2024 | 5:50 AM | ಬ್ರಿಸ್ಬೇನ್ |
4ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಗುರುವಾರ, 26 ಡಿಸೆಂಬರ್ 2024 | 5 AM | ಮೆಲ್ಬೋರ್ನ್ |
5ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 3 ಜನವರಿ 2025 | 5 AM | ಸಿಡ್ನಿ |
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಟೀಮ್ ಇಂಡಿಯಾ ಹೊಸ ವರ್ಷಕ್ಕೆ ಕಾಲಿಡಲಿದ್ದು, 2025 ರಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಭಾರತದಲ್ಲಿ ಜರುಗಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಟಿ20 ಹಾಗೂ 3 ಏಕದಿನ ಪಂದ್ಯಗಳನ್ನಾಡಲಿದೆ.
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟಿ20, ಭಾರತ vs ಇಂಗ್ಲೆಂಡ್ | ಬುಧವಾರ, 22 ಜನವರಿ 2025 | 7 PM | ಚೆನ್ನೈ |
2ನೇ ಟಿ20, ಭಾರತ vs ಇಂಗ್ಲೆಂಡ್ | ಶನಿವಾರ, 25 ಜನವರಿ 2025 | 7 PM | ಕೋಲ್ಕತ್ತಾ |
3ನೇ ಟಿ20, ಭಾರತ vs ಇಂಗ್ಲೆಂಡ್ | ಮಂಗಳವಾರ, 28 ಜನವರಿ 2025 | 7 PM | ರಾಜ್ಕೋಟ್ |
4ನೇ ಟಿ20, ಭಾರತ vs ಇಂಗ್ಲೆಂಡ್ | ಶುಕ್ರವಾರ, 31 ಜನವರಿ 2025 | 7 PM | ಪುಣೆ |
5ನೇ ಟಿ20, ಭಾರತ vs ಇಂಗ್ಲೆಂಡ್ | ಭಾನುವಾರ, 2 ಫೆಬ್ರವರಿ 2025 | 7 PM | ಮುಂಬೈ |
1ನೇ ಏಕದಿನ, ಭಾರತ vs ಇಂಗ್ಲೆಂಡ್ | ಗುರುವಾರ, 6 ಫೆಬ್ರವರಿ 2025 | 1:30 PM | ನಾಗ್ಪುರ |
2ನೇ ಏಕದಿನ, ಭಾರತ vs ಇಂಗ್ಲೆಂಡ್ | ಭಾನುವಾರ, 9 ಫೆಬ್ರವರಿ 2025 | 1:30 PM | ಕಟಕ್ |
3ನೇ ಏಕದಿನ, ಭಾರತ vs ಇಂಗ್ಲೆಂಡ್ | ಬುಧವಾರ, 12 ಫೆಬ್ರವರಿ 2025 | 1:30 PM | ಅಹಮದಾಬಾದ್ |
ಇದನ್ನೂ ಓದಿ: Virat Kohli: ಕೊನೆಯ ಪಂದ್ಯದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ವಿರಾಟ್ ಕೊಹ್ಲಿ
ಫೆಬ್ರವರಿ ಮೂರನೇ ವಾರದಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಶುರುವಾಗುವ ಸಾಧ್ಯತೆಯಿದ್ದು, ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೆ ಈ ಟೂರ್ನಿಯ ಬಳಿಕ ಭಾರತೀಯ ಆಟಗಾರರು ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.