AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travis Head: ನಾನು ಮುಂದೆ ಏನು ಮಾಡ್ತೇನೆ ಎಂಬುದು ಊಹಿಸಲು ಸಾಧ್ಯವಿಲ್ಲ!

Virat Kohli vs Travis Head Fight: ಐಪಿಎಲ್​ನ 67ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಸನ್​ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ದಾಂಡಿಗ ಟ್ರಾವಿಸ್ ಹೆಡ್ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಕಿತ್ತಾಟದ ಬಳಿಕ ಹೆಡ್ ಸೋಷಿಯಲ್ ಮೀಡಿಯಾದಲ್ಲಿ ಮಾರ್ಮಿಕ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

Travis Head: ನಾನು ಮುಂದೆ ಏನು ಮಾಡ್ತೇನೆ ಎಂಬುದು ಊಹಿಸಲು ಸಾಧ್ಯವಿಲ್ಲ!
Virat Kohli - Travis Head
ಝಾಹಿರ್ ಯೂಸುಫ್
|

Updated on:May 23, 2026 | 2:07 PM

Share

IPL 2026: ಐಪಿಎಲ್ ಪಂದ್ಯವೊಂದರಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ನಡುವೆ ನಡೆದ ಆನ್‌-ಫೀಲ್ಡ್ ಜಟಾಪಟಿ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಮೈದಾನದಲ್ಲಿ ನಡೆದಿದ್ದೇನು?

  • ವಿರಾಟ್ ಕೊಹ್ಲಿಯ ಸಂಭ್ರಮ: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ಪರ ಟ್ರಾವಿಸ್ ಹೆಡ್ (26) ರಾಸಿಖ್ ಸಲಾಮ್  ಅವರ ಯಾರ್ಕರ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿದ್ದರು. ಇತ್ತ ಔಟಾಗಿ ಹೊರ ನಡೆಯುತ್ತಿದ್ದ ಹೆಡ್ ಅವರ ಮುಂದೆ ಆಕ್ರೋಶಭರಿತರಾಗಿ ವಿರಾಟ್ ಕೊಹ್ಲಿ ಸಂಭ್ರಮಿಸಿದ್ದರು. ಇದಾಗ್ಯೂ ಟ್ರಾವಿಸ್ ಹೆಡ್ ಯಾವುದೇ ತಿರುಗೇಟು ನೀಡಿರಲಿಲ್ಲ.
  • ಹೆಡ್ ಸವಾಲು: 256 ರನ್​ಗಳ ಕಠಿಣ ಗುರಿ ಬೆನ್ನತ್ತಲು ಬಂದ ವಿರಾಟ್ ಕೊಹ್ಲಿಗೆ ಆಕ್ರಮಣಕಾರಿಯಾಗಿ ಆಡುವಂತೆ ಟ್ರಾವಿಸ್ ಹೆಡ್ ಸವಾಲು ಹಾಕಿದ್ದಾರೆ. ಅಂದರೆ ಈ ಪಂದ್ಯದಲ್ಲಿ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದ್ದರು. ಈ ವೇಳೆ ಬಿಗ್ ಶಾಟ್ ಆಡು ನೋಡೋಣ ಎಂದು ಹೆಡ್ ಕೆಣಕಿದ್ದಾರೆ.
  • ಕೊಹ್ಲಿ ತಿರುಗೇಟು: ಟ್ರಾವಿಸ್ ಹೆಡ್ ಸವಾಲಿಗೆ ತಿರುಗೇಟು ನೀಡಿದ ವಿರಾಟ್ ಕೊಹ್ಲಿ, “ಈಗ ನೀನು ಇಂಪ್ಯಾಕ್ಟ್ ಸಬ್‌ ಆಟಗಾರ ಅಲ್ಲ, ಬಂದು ಎರಡು ಓವರ್ ಬೌಲಿಂಗ್ ಮಾಡು” ಎಂದು ವ್ಯಂಗ್ಯವಾಡಿದ್ದಾರೆ.
  • ಹೆಡ್ ಕಿಚಾಯಿಸುವಿಕೆ: ಈ ಮಾತಿನ ಚಕಮಕಿ ಮುಕ್ತಾಯದ ಬೆನ್ನಲ್ಲೇ ವಿರಾಟ್ ಕೊಹ್ಲಿ(15) ಔಟ್ ಆಗಿದ್ದಾರೆ. ಇತ್ತ ಕೊಹ್ಲಿ ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಹೆಡ್, “ಫ್ರೆಂಡ್, ನಾನು ಬೌಲಿಂಗ್ ಮಾಡಲು ಬರುವ ಮುನ್ನವೇ ನೀನು ಔಟ್ ಆಗಿ ಹೋದೆ!” ಎಂದು ಕಿಚಾಯಿಸಿದ್ದಾರೆ.
  • ಹಸ್ತಲಾಘವ ನಿರಾಕರಣೆ: ಈ ಜಟಾಪಟಿ ಮತ್ತು ಪಂದ್ಯದಲ್ಲಿ ತಂಡದ ಸೋಲಿನ ನಿರಾಸೆಯಿಂದ ಕೋಪಗೊಂಡ ಕೊಹ್ಲಿ, ಪಂದ್ಯ ಮುಗಿದ ನಂತರ ಸಾಂಪ್ರದಾಯಿಕ ಹಸ್ತಲಾಘವದ ವೇಳೆ ಟ್ರಾವಿಸ್ ಹೆಡ್‌ಗೆ ಶೇಕ್ ಹ್ಯಾಂಡ್ ನೀಡದೇ ಮೈದಾನದಿಂದ ಹೊರನಡೆದಿದ್ದರು.

ಈ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಟ್ರಾವಿಸ್ ಹೆಡ್ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಅದು ಕೂಡ ತಾನು ಬೌಲಿಂಗ್ ಮಾಡಿದ ಫೋಟೋದೊಂದಿಗೆ ಎಂಬುದು ವಿಶೇಷ.

ಈ ಮ್ಯಾಚ್​ನಲ್ಲಿ ಟ್ರಾವಿಸ್ ಹೆಡ್ ಒಂದು ಓವರ್​ ಎಸೆದಿದ್ದರು. ಅಲ್ಲದೆ ಕೇವಲ 7 ರನ್ ನೀಡಿ ರಜತ್ ಪಾಟಿದಾರ್ ವಿಕೆಟ್ ಅನ್ನು ಪಡೆದಿದ್ದರು. ಇದೇ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೆಡ್ “Keep the body guessing” ಎಂಬ ಕ್ಯಾಪ್ಷನ್ ಹಂಚಿಕೊಂಡಿದ್ದಾರೆ.

ಎದುರಾಳಿ ಆಟಗಾರ ಅಥವಾ ಬ್ಯಾಟರ್ ಮುಂದಿನ ನಡೆ ಏನು ಎಂಬುದನ್ನು ಊಹಿಸಲು ಸಾಧ್ಯವಾಗದಂತೆ ಗೊಂದಲದಲ್ಲಿ ಇಡುವುದನ್ನು ಈ ವಾಕ್ಯ ಸೂಚಿಸುತ್ತದೆ.

ವಿರಾಟ್ ಕೊಹ್ಲಿ ಅವರು ಹೆಡ್‌ಗೆ “ಬಂದು ಬೌಲಿಂಗ್ ಮಾಡು” ಎಂದು ಸವಾಲು ಹಾಕಿದ್ದರು. ಆದರೆ, ಬ್ಯಾಟರ್ ಆಗಿರುವ ಹೆಡ್ ಹಠಾತ್ ಆಗಿ ಬೌಲಿಂಗ್ ಮಾಡಿ ವಿಕೆಟ್ ಪಡೆದರು.

ಅಂದರೆ, “ನಾನು ಮುಂದೆ ಏನು ಮಾಡುತ್ತೇನೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ, ಎಲ್ಲರನ್ನೂ ನಾನು ಗೊಂದಲದಲ್ಲಿ ಇಡುತ್ತೇನೆ” ಎಂಬ ಮಾರ್ಮಿಕ ಅರ್ಥದಲ್ಲಿ ಟ್ರಾವಿಸ್ ಹೆಡ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಮೂಲಕ ಬೌಲಿಂಗ್ ಮಾಡಿ ತೋರಿಸು ಎಂದ ಕೊಹ್ಲಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಗೆದ್ದು ಬೀಗಿದ ಎಸ್​ಆರ್​ಹೆಚ್​:

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​​ರೈಸರ್ಸ್ ಹೈದರಾಬಾದ್ ತಂಡವು 20 ಓವರ್​ಗಳಲ್ಲಿ 255 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್​ಗಳಲ್ಲಿ 200 ರನ್​ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಎಸ್​ಆರ್​ಹೆಚ್​ 55 ರನ್​ಗಳ ಭರ್ಜರಿ ಜಯ ಸಾಧಿಸಿದೆ.

Published On - 2:04 pm, Sat, 23 May 26

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ಟೈರ್ ಬ್ಲಾಸ್ಟ್ ಆಗಿ ಟಿಟಿ ವಾಹನ ಪಲ್ಟಿ, ಮಗು ಸೇರಿ 12 ಜನರಿಗೆ ಗಾಯ
ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್
ರಾಯರ ಬಗ್ಗೆ ಆಲ್ಬಂ ಸಾಂಗ್ ಮಾಡಲು ಕಾರಣ ಏನು? ವಿವರಿಸಿದ ಅಜನೀಶ್
Video: ಕೋಲ್ಕತ್ತಾಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೋ
Video: ಕೋಲ್ಕತ್ತಾಗೆ ಆಗಮಿಸಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ರುಬಿಯೋ
ದೆಹಲಿಯ ಫರ್ನಿಚರ್ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ
ದೆಹಲಿಯ ಫರ್ನಿಚರ್ ಮಾರುಕಟ್ಟೆಯಲ್ಲಿ ಭಾರಿ ಅಗ್ನಿ ಅವಘಡ
ಶನಿವಾರದಂದು ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಏನಾಗುತ್ತೆ ಗೊತ್ತಾ?
ಶನಿವಾರದಂದು ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಏನಾಗುತ್ತೆ ಗೊತ್ತಾ?