AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ: 10 ಬ್ಯಾಟರ್​ಗಳು ರಿಟೈರ್ ಔಟ್..!

United Arab Emirates Women vs Qatar Women: ಬ್ಯಾಂಕಾಕ್​ನಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕತಾರ್ ವಿರುದ್ಧ ಯುಎಇ ತಂಡ ಭರ್ಜರಿ ಜಯ ಸಾಧಿಸಿದೆ. ಅದು ಕೂಡ ಮಾಸ್ಟರ್ ಪ್ಲ್ಯಾನ್​ನೊಂದಿಗೆ ಕತಾರ್ ತಂಡವನ್ನು ಬ್ಯಾಟಿಂಗ್​ಗೆ ಇಳಿಸುವ ಮೂಲಕ ಎಂಬುದು ವಿಶೇಷ.

ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ: 10 ಬ್ಯಾಟರ್​ಗಳು ರಿಟೈರ್ ಔಟ್..!
Uae Team
ಝಾಹಿರ್ ಯೂಸುಫ್
|

Updated on: May 11, 2025 | 12:54 PM

Share

ಟಿ20 ಕ್ರಿಕೆಟ್​ ಅಪರೂಪದ ಸ್ಕೋರ್​ ಕಾರ್ಡ್​​ಗೆ ಸಾಕ್ಷಿಯಾಗಿದೆ. ಅದು ಕೂಡ ಒಂದು ತಂಡದ 10 ಬ್ಯಾಟರ್​ಗಳು ರಿಟೈರ್ ಔಟ್ ಆಗುವ ಮೂಲಕ ಎಂಬುದೇ ವಿಶೇಷ. ಬ್ಯಾಂಕಾಕ್​ನ ಟೆರ್ಡ್‌ಥೈ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್​ ಏಷ್ಯನ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುಎಇ ಹಾಗೂ ಕತಾರ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಯುಎಇ ತಂಡಕ್ಕೆ ಇಶಾ ರೋಹಿತ್ ಓಜಾ ಹಾಗೂ ತೀರ್ಥ ಸತೀಶ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಬಿರುಸಿ ಬ್ಯಾಟಿಂಗ್​ಗೆ ಒತ್ತು ನೀಡಿದ ಇಶಾ ರೋಹಿತ್ ಓಜಾ 55 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 14 ಫೋರ್​ಗಳೊಂದಿಗೆ 113 ರನ್ ಬಾರಿಸಿದರು. ಮತ್ತೊಂದೆಡೆ ತೀರ್ಥ ಸತೀಶ್ 42 ಎಸೆತಗಳಲ್ಲಿ 11 ಫೋರ್​ಗಳೊಂದಿಗೆ 74 ರನ್ ಬಾರಿಸಿದರು.

ಈ ಮೂಲಕ ತೀರ್ಥ ಸತೀಶ್ ಹಾಗೂ ಇಶಾ ರೋಹಿತ್ ಮೊದಲ ವಿಕೆಟ್​ಗೆ 16 ಓವರ್​ಗಳಲ್ಲಿ 192 ರನ್​ಗಳ ಜೊತೆಯಾಟವಾಡಿದ್ದಾರೆ. ಈ ವೇಳೆ ಮಳೆ ಬರುವ ಮನ್ಸೂಚನೆ ಸಿಕ್ಕಿದೆ. ಮೈದಾನದ ಸುತ್ತಲೂ ಕಾರ್ಮೋಡ ಕವಿಯುತ್ತಿದ್ದಂತೆ ಯುಎಇ ತಂಡವು 2 ಅಂಕಗಳನ್ನು ಪಡೆಯಲು ಮಾಸ್ಟರ್ ಪ್ಲ್ಯಾನ್ ರೂಪಿಸಿದರು.

ಇದನ್ನೂ ಓದಿ
Image
ಬೋಲ್ಡ್ ಫೋಟೋಗೆ ಬೌಲ್ಡ್ ಆಗಿ ಸ್ಪಷ್ಟನೆ ನೀಡಿದ ವಿರಾಟ್ ಕೊಹ್ಲಿ
Image
IPL 2025: ಪ್ಲೇಆಫ್​ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು
Image
IPL 2025: ಕರುಣ್ ನಾಯರ್ ಡಕೌಟ್: ಈ ಬಾರಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್?
Image
IPL ನಲ್ಲಿ ಬದಲಾವಣೆ: ರೌಂಡ್ ರಾಬಿನ್ ಸ್ವರೂಪ, ಒಂದು ತಂಡಕ್ಕೆ 18 ಪಂದ್ಯ

ಯುಎಇ ತಂಡದ ಮಾಸ್ಟರ್ ಪ್ಲ್ಯಾನ್:

ಮಳೆ ಬರುವ ಮನ್ಸೂಚನೆ ಸಿಗುತ್ತಿದ್ದಂತೆ ಯುಎಇ ತಂಡದ ಆರಂಭಿಕರಿಬ್ಬರು ರಿಟೈರ್ ಔಟ್ ನೀಡಿ ಪೆವಿಲಿಯನ್​ಗೆ ಹಿಂತಿರುಗಿದ್ದಾರೆ. ಇದರ ಬೆನ್ನಲ್ಲೇ ಉಳಿದ ಬ್ಯಾಟರ್​ಗಳು ಕೂಡ ಒಬ್ಬರ ಹಿಂದೆ ಒಬ್ಬರಂತೆ ರಿಟೈರ್ ಔಟ್ ಘೋಷಿಸಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಡಿಕ್ಲೇರ್ ಘೋಷಿಸಲು ಅವಕಾಶವಿಲ್ಲ. ಇತ್ತ ಮಳೆ ಬರುವ ಮುನ್ನ ಇನಿಂಗ್ಸ್ ಅಂತ್ಯಗೊಳಿಸುವ ಅನಿವಾರ್ಯತೆ ಯುಎಇ ತಂಡದ ಮುಂದಿತ್ತು. ಹೀಗಾಗಿ 10 ಬ್ಯಾಟರ್​ಗಳು ಕೂಡ ರಿಟೈರ್ ಔಟ್ ಘೋಷಿಸಿ ಇನಿಂಗ್ಸ್ ಅಂತ್ಯಗೊಳಿಸಿದ್ದಾರೆ. ಅದು ಕೂಡ 16 ಓವರ್​ಗಳಲ್ಲಿ 192 ರನ್​ಗಳಿಸುವ ಮೂಲಕ ಎಂಬುದು ವಿಶೇಷ.

ಗೆದ್ದು ಬೀಗಿದ ಯುಎಇ:

ಯುಎಇ ತಂಡದ ಮಾಸ್ಟರ್ ಪ್ಲ್ಯಾನ್ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಕತಾರ್ ತಂಡವು 11.1 ಓವರ್​ಗಳಲ್ಲಿ 29 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಯುಎಇ ತಂಡ 163 ರನ್​ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಯುಎಇ 2 ಅಂಕಗಳನ್ನು ಪಡೆದು ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ: IPL 2025: ಮುಂದಿನ ಪಂದ್ಯಕ್ಕೆ RCB ನಾಯಕನೇ ಅಲಭ್ಯ..!

ಅಂದರೆ ಮಳೆ ಬರುವ ಮುನ್ನವೇ ಎದುರಾಳಿ ತಂಡಕ್ಕೆ ಬ್ಯಾಟಿಂಗ್ ನೀಡಿ 2 ಅಂಕಗಳನ್ನು ಪಡೆಯುವ ಯುಎಇ ತಂಡದ ಯೋಜನೆ ಕಾರ್ಯಗತಗೊಂಡಿದ್ದು, ಇದರೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ 10 ಬ್ಯಾಟರ್​ಗಳು ರಿಟೈರ್ ಔಟ್ ಆದ ಮೊದಲ ತಂಡವೆಂಬ ಕೀರ್ತಿ ಕೂಡ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ಪಾಲಾಗಿದೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ