Usman Khawaja: ಬ್ಯಾಕ್ ಟು ಬ್ಯಾಕ್ ಸೆಂಚುರಿ: ರೋಹಿತ್ ಶರ್ಮಾ ಬಳಿಕ ಉಸ್ಮಾನ್ ಖ್ವಾಜಾ ವಿಶೇಷ ಸಾಧನೆ

The Ashes 2021-22: ಇಂಗ್ಲೆಂಡ್​ ವಿರುದ್ದ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಖ್ವಾಜಾ ಈ ಅದ್ಭುತ ಇನಿಂಗ್ಸ್​ಗಳನ್ನು ಆಡಿದ್ದರು. ವಿಶೇಷ ಎಂದರೆ ಈ ಬಾರಿಯ ಆ್ಯಶಸ್ ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಉಸ್ಮಾನ್ ಖ್ವಾಜಾ ಸ್ಥಾನ ಪಡೆದಿರಲಿಲ್ಲ.

Usman Khawaja: ಬ್ಯಾಕ್ ಟು ಬ್ಯಾಕ್ ಸೆಂಚುರಿ: ರೋಹಿತ್ ಶರ್ಮಾ ಬಳಿಕ ಉಸ್ಮಾನ್ ಖ್ವಾಜಾ ವಿಶೇಷ ಸಾಧನೆ
Usman Khawaja
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 08, 2022 | 3:59 PM

ಆಸ್ಟ್ರೇಲಿಯಾ ಬ್ಯಾಟರ್ ಉಸ್ಮಾನ್ ಖ್ವಾಜಾ (Usman Khawaja) ಪ್ರತಿಷ್ಠಿತ ಆ್ಯಶಸ್ (Ashes 2021-22) ಸರಣಿಯ 2 ಇನಿಂಗ್ಸ್​ಗಳಲ್ಲಿ 2 ಶತಕ ಸಿಡಿಸಿದ ವಿಶೇಷ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ (England)​ ವಿರುದ್ದ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಖ್ವಾಜಾ ಈ ಅದ್ಭುತ ಇನಿಂಗ್ಸ್​ಗಳನ್ನು ಆಡಿದ್ದರು. ವಿಶೇಷ ಎಂದರೆ ಈ ಬಾರಿಯ ಆ್ಯಶಸ್ ಸರಣಿಗೆ ಆಸ್ಟ್ರೇಲಿಯಾ (Australia) ತಂಡದಲ್ಲಿ ಉಸ್ಮಾನ್ ಖ್ವಾಜಾ ಸ್ಥಾನ ಪಡೆದಿರಲಿಲ್ಲ. ಆದರೆ 3ನೇ ಟೆಸ್ಟ್ ಪಂದ್ಯದ ವೇಳೆ ಟ್ರಾವಿಡ್ ಹೆಡ್ ಕೊರೋನಾ ಸೋಂಕಿಗೆ ಒಳಗಾದ ಕಾರಣ ಖ್ವಾಜಾ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ 4ನೇ ಟೆಸ್ಟ್​ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಉಸ್ಮಾನ್ ಖ್ವಾಜಾ ಎಲ್ಲರ ಗಮನ ಸೆಳೆದಿದ್ದಾರೆ.

ಉಸ್ಮಾನ್ ಖ್ವಾಜಾ ಮೊದಲ ಇನ್ನಿಂಗ್ಸ್‌ನಲ್ಲಿ 137 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 101 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ಮೂಲಕ 2019 ರ ಬಳಿಕ ಈ ಸಾಧನೆ ಮಾಡಿದ ಬ್ಯಾಟರ್ ಎನಿಸಿಕೊಂಡರು. ಅಂದಹಾಗೆ 2019 ರಲ್ಲಿ ರೋಹಿತ್ ಶರ್ಮಾ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ್ದರು. ಆ ಬಳಿಕ ಯಾವುದೇ ಬ್ಯಾಟರ್ ಇಂತಹದೊಂದು ಸಾಧನೆ ಮಾಡಿರಲಿಲ್ಲ. ಇದೀಗ ಪ್ರತಿಷ್ಠಿತ ಆ್ಯಶಸ್ ಸರಣಿಯಲ್ಲೇ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸುವ ಮೂಲಕ ಉಸ್ಮಾನ್ ಖ್ವಾಜಾ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ಶತಕಗಳಿಗೆ ಸಂಬಂಧಿಸಿದ 10 ದಾಖಲೆಗಳು ಹೀಗಿವೆ:

1- ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿರುವ 70ನೇ ಬ್ಯಾಟರ್​ ಉಸ್ಮಾನ್ ಖ್ವಾಜಾ.

2- ಆಸ್ಟ್ರೇಲಿಯಾದ ವಾರೆನ್ ಬಾರ್ಡ್ಸ್ಲಿ 1909 ರಲ್ಲಿ ಮೊದಲ ಬಾರಿಗೆ ಈ ಸಾಧನೆ ಮಾಡಿದರು.

3- ವಾರೆನ್ ಬಾರ್ಡ್ಸ್ಲಿ ಇಂಗ್ಲೆಂಡ್ ವಿರುದ್ಧದ ಓವಲ್ (ಲಂಡನ್) ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕಗಳನ್ನು ಗಳಿಸಿ ಮೊದಲ ಬಾರಿ ವಿಶೇಷ ದಾಖಲೆ ಬರೆದಿದ್ದರು.

4- ವಿಜಯ್ ಹಜಾರೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ. ಹಜಾರೆ 1948 ರಲ್ಲಿ ಈ ಸಾಧನೆ ಮಾಡಿದ್ದರು.

5- ಭಾರತ ಪರ ಇದುವರೆಗೆ ಎರಡೂ ಇನ್ನಿಂಗ್ಸ್‌ಗಳಲ್ಲಿ 5 ಬ್ಯಾಟರ್​ಗಳು ಶತಕ ಸಿಡಿಸಿದ್ದಾರೆ.

6- ಎರಡೂ ಇನ್ನಿಂಗ್ಸ್‌ಗಳಲ್ಲಿ ಮೂರು ಬಾರಿ ಶತಕಗಳನ್ನು ಬಾರಿಸಿದ ವಿಶ್ವದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿದೆ.

7- ಗವಾಸ್ಕರ್ ಬಳಿಕ ಆಸ್ಟ್ರೇಲಿಯಾ ರಿಕಿ ಪಾಂಟಿಂಗ್ ಮತ್ತು ಡೇವಿಡ್ ವಾರ್ನರ್ 3 ಬಾರಿ ಈ ಸಾಧನೆ ಮಾಡಿದ್ದಾರೆ.

8- ರಾಹುಲ್ ದ್ರಾವಿಡ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಎರಡು ಇನ್ನಿಂಗ್ಸ್‌ಗಳಲ್ಲಿ ಎರಡು ಬಾರಿ ಶತಕಗಳನ್ನು ಬಾರಿಸಿದ್ದಾರೆ.

9- ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಲಾ ಒಂದು ಬಾರಿ ಈ ಸಾಧನೆ ಮಾಡಿದ್ದಾರೆ.

10- ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ 87 ಬಾರಿ ಬ್ಯಾಟರ್​ಗಳು ಬ್ಯಾಕ್ ಟು ಬ್ಯಾಕ್ ಶತಕ ಬಾರಿಸಿದ್ದಾರೆ.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(Usman Khawaja makes Ashes history with back-to-back centuries)