Harshal Patel: ಇದೇ ಕಾರಣದಿಂದ RCB ನನ್ನನ್ನು ಉಳಿಸಿಕೊಂಡಿಲ್ಲ..!

IPL 2022 Mega Auction: ಐಪಿಎಲ್ ರಿಟೈನ್ ನಿಯಮದ ಪ್ರಕಾರ ಆಟಗಾರರನ್ನು ಉಳಿಸಿಕೊಳ್ಳಲು ಮೊತ್ತ ನಿಗದಿ ಮಾಡಲಾಗಿತ್ತು. ಅದರಂತೆ ಒಟ್ಟು 90 ಕೋಟಿ ಮೊತ್ತದಿಂದ ಆಟಗಾರರ ರಿಟೈನ್​ಗಾಗಿ 42 ಕೋಟಿ ನೀಡಲಾಗಿತ್ತು.

Harshal Patel: ಇದೇ ಕಾರಣದಿಂದ RCB ನನ್ನನ್ನು ಉಳಿಸಿಕೊಂಡಿಲ್ಲ..!
Harshal Patel
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 08, 2022 | 5:04 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಸೀಸನ್ 15 ಮೆಗಾ ಹರಾಜಿಗೂ ಮುನ್ನ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ರಿಟೈನ್ ಮಾಡಿಕೊಂಡಿತ್ತು. ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವಿದ್ದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ರಿಟೈನ್ ಮಾಡಿಕೊಂಡಿದ್ದು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಮೊಹಮ್ಮದ್ ಸಿರಾಜ್. ಇನ್ನು ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಹಲ್ ಹಾಗೂ ಹರ್ಷಲ್ ಪಟೇಲ್​ನಂತಹ ಸ್ಟಾರ್​ ಆಟಗಾರರಿದ್ದರು. ಅದರಲ್ಲೂ ಐಪಿಎಲ್ 2021 ರ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದ ಹರ್ಷಲ್ ಪಟೇಲ್ ಅವರನ್ನು ರಿಲೀಸ್ ಮಾಡಿ ಆರ್​ಸಿಬಿ ಫ್ರಾಂಚೈಸಿ ಅಚ್ಚರಿ ಮೂಡಿಸಿದ್ದರು. ಕಳೆದ ಸೀಸನ್​ನಲ್ಲಿ 32 ವಿಕೆಟ್​ಗಳೊಂದಿಗೆ ಪರ್ಪಲ್ ಕ್ಯಾಪ್ ಗೆದ್ದಿದ್ದ ಹರ್ಷಲ್ ಪಟೇಲ್ ಇದೀಗ ಮೆಗಾ ಹರಾಜಿನಲ್ಲಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ಸೀಸನ್​ನಲ್ಲೂ ಆರ್​ಸಿಬಿ ಪರ ಆಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ಆದರೆ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದಾದ ಅವಕಾಶವಿದ್ದರೂ ಆರ್​ಸಿಬಿ ತನ್ನನ್ನೇಕೆ ರಿಟೈನ್ ಮಾಡಿಕೊಳ್ಳದ ಬಗ್ಗೆ ಹರ್ಷಲ್ ಪಟೇಲ್ ಮನಬಿಚ್ಚಿ ಮಾತನಾಡಿದ್ದಾರೆ. ಆಟಗಾರರ ರಿಟೈನ್ ವೇಳೆ ನನಗೆ ಆರ್​ಸಿಬಿ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಕರೆ ಮಾಡಿದ್ದರು. ಈ ವೇಳೆ ರಿಟೈನ್ ಮೊತ್ತದ ಬಗ್ಗೆ ಪ್ರಸ್ತಾಪಿಸಿದ್ದರು. ರಿಟೈನ್ ಮೊತ್ತದ ನಿರ್ವಹಣೆಯ ಕಾರಣ ಉಳಿಸಿಕೊಳ್ಳಲಾಗಲಿಲ್ಲ ಎಂದು ಹೆಸ್ಸನ್ ತಿಳಿಸಿದ್ದರು ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ.

ಐಪಿಎಲ್ ರಿಟೈನ್ ನಿಯಮದ ಪ್ರಕಾರ ಆಟಗಾರರನ್ನು ಉಳಿಸಿಕೊಳ್ಳಲು ಮೊತ್ತ ನಿಗದಿ ಮಾಡಲಾಗಿತ್ತು. ಅದರಂತೆ ಒಟ್ಟು 90 ಕೋಟಿ ಮೊತ್ತದಿಂದ ಆಟಗಾರರ ರಿಟೈನ್​ಗಾಗಿ 42 ಕೋಟಿ ನೀಡಲಾಗಿತ್ತು. ಇಲ್ಲಿ ಒಂದು ತಂಡವು ನಾಲ್ವರನ್ನು ಉಳಿಸಿಕೊಳ್ಳಲು ಬಯಸಿದರೆ 42 ಕೋಟಿ ರೂ. ವ್ಯಯಿಸಬೇಕಿತ್ತು. ಒಂದು ವೇಳೆ ಮೂವರನ್ನು ಮಾತ್ರ ಉಳಿಸುವುದಾದರೆ 33 ಕೋಟಿ ರೂ. ನೀಡಬೇಕಿತ್ತು. ಇನ್ನು ಇಬ್ಬರು ಆಟಗಾರರನ್ನು ಉಳಿಸಿಕೊಂಡರೆ 24 ಕೋಟಿ. ರೂ ನೀಡಬೇಕು. ಒಂದು ವೇಳೆ ಒಬ್ಬ ಆಟಗಾರನನ್ನು ಮಾತ್ರ ಉಳಿಸಿಕೊಂಡರೆ 14 ಕೋಟಿ. ರೂ ನೀಡಬೇಕಿತ್ತು.

ಅದರಂತೆ 4 ಆಟಗಾರರನ್ನು ಉಳಿಸಿಕೊಂಡರೆ ಮೊದಲ ಆಟಗಾರನಿಗೆ 16 ಕೋಟಿ ರೂ., 2ನೇ ಆಟಗಾರನಿಗೆ 12 ಕೋಟಿ ರೂ., 3ನೇ ಆಟಗಾರನಿಗೆ 8 ಕೋಟಿ ರೂ., 4ನೇ ಆಟಗಾರನಿಗೆ 6 ಕೋಟಿ ರೂ. ನೀಡಬೇಕಿತ್ತು. ಇನ್ನು 3 ಆಟಗಾರರನ್ನು ಉಳಿಸಿಕೊಂಡರೆ ಮೊದಲ ಆಟಗಾರನಿಗೆ 15 ಕೋಟಿ ರೂ., 2ನೇ ಆಟಗಾರನಿಗೆ 11 ಕೋಟಿ ರೂ., 3ನೇ ಆಟಗಾರನಿಗೆ 7 ಕೋಟಿ ರೂ. ನೀಡಬೇಕಿತ್ತು. ಇಲ್ಲಿ ಆರ್​ಸಿಬಿ 3 ಆಟಗಾರರನ್ನು ಉಳಿಸಿ 33 ಕೋಟಿ ವ್ಯಯಿಸಿದೆ. ಇನ್ನು ನಾಲ್ವರನ್ನು ಉಳಿಸಲು ಮುಂದಾಗಿದ್ರೆ 42 ಕೋಟಿ ನೀಡಬೇಕಾಗಿತ್ತು. ಇದರಿಂದಾಗಿ ಆರ್​ಸಿಬಿ ರಿಟೈನ್ ಮಾಡಿಕೊಂಡಿಲ್ಲ ಎಂದು ಹರ್ಷಲ್ ಪಟೇಲ್ ಹೇಳಿದ್ದಾರೆ.

ಇದೇ ವೇಳೆ ನಾನು ಮತ್ತೊಮ್ಮೆ ಆರ್‌ಸಿಬಿ ತಂಡದ ಭಾಗವಾಗಲು ಬಯಸುತ್ತೇನೆ ಎಂದಿರುವ ಹರ್ಷಲ್ ಪಟೇಲ್, ಆರ್​ಸಿಬಿ ಫ್ರಾಂಚೈಸ್ ನನ್ನ ವೃತ್ತಿಜೀವನಕ್ಕೆ ಹೊಸ ದಿಕ್ಕನ್ನು ತೋರಿಸಿದೆ. ಈ ತಂಡವು ನನ್ನನ್ನು ಅನುಭವಿ ಡೆತ್ ಬೌಲರ್ ಆಗಿ ರೂಪುಗೊಳ್ಳಲು ಸಹಾಯ ಮಾಡಿದೆ. ಹೀಗಾಗಿ ನಾನು ಮತ್ತೊಮ್ಮೆ RCBಯ ಕೆಂಪು ಜೆರ್ಸಿಯಲ್ಲಿ ಆಡಲು ಬಯಸುತ್ತೇನೆ. ಆರ್‌ಸಿಬಿ ಕೂಡ ನನ್ನ ಖರೀದಿಗಾಗಿ ಅತ್ಯುತ್ತಮ ಪ್ರಯತ್ನ ಮಾಡುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ ಯಾವುದೇ ಫ್ರಾಂಚೈಸಿಗಳಿಂದ ನನಗೆ ಯಾವುದೇ ಆಫರ್ ಬಂದಿಲ್ಲ. ನಾನು ಈಗಲೂ ಆರ್​ಸಿಬಿ ಪರ ಆಡಬೇಕೆಂದು ಬಯಸುತ್ತೇನೆ. ಹೀಗಾಗಿ ಮೆಗಾ ಹರಾಜಿನಲ್ಲಿ ಆರ್​ಸಿಬಿ ನನ್ನ ಖರೀದಿಗೆ ಪೈಪೋಟಿ ನಡೆಸುವ ವಿಶ್ವಾಸವಿದೆ ಎಂದು ಹರ್ಷಲ್ ಪಟೇಲ್ ತಿಳಿಸಿದ್ದಾರೆ.

ಇದನ್ನೂ ಓದಿ: IPL 2022: ಮತ್ತೆ RCB ಪರ ಆಡಬೇಕೆಂದ ಸ್ಟಾರ್ ಬೌಲರ್

ಇದನ್ನೂ ಓದಿ:  Sachin Tendulkar: ಆಲ್‌ ಟೈಮ್ ಬೆಸ್ಟ್‌ 11 ಹೆಸರಿಸಿದ ಸಚಿನ್: ಪ್ರಮುಖ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: Steve Smith: 11 ಶತಕ, 11 ಅರ್ಧಶತಕ: ವಿಶೇಷ ದಾಖಲೆ ಬರೆದ ಸ್ಟೀವ್ ಸ್ಮಿತ್

ಇದನ್ನೂ ಓದಿ: IPL 2022: ಅಹಮದಾಬಾದ್ ತಂಡಕ್ಕೆ ಟೀಮ್ ಇಂಡಿಯಾ ಮಾಜಿ ಆಟಗಾರ ಕೋಚ್..!

(IPL 2022: Harshal Patel breaks his silence on why RCB didn’t retain him)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ