AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬರಿಸಲು ಮುಂದಾಗಿ ವಿಕೆಟ್ ಒಪ್ಪಿಸಿದ ವೈಭವ್ ಸೂರ್ಯವಂಶಿ..!

India A vs Afghanistan A: ಭಾರತ ಎ ಮತ್ತು ಅಫ್ಘಾನಿಸ್ತಾನ್ ಎ ನಡುವಣ ಏಕದಿನ ಪಂದ್ಯವು ಶ್ರೀಲಂಕಾದಲ್ಲಿ ನಡೆಯುತ್ತಿದೆ. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದಿರುವ ಅಫ್ಘಾನಿಸ್ತಾನ್ ತಂಡ ಬೌಲಿಂಗ್ ಆಯ್ದುಕೊಂಡಿದೆ. ಅದರಂತೆ ಮೊದಲು ಬ್ಯಾಟ್ ಮಾಡುತ್ತಿರುವ ಟೀಮ್ ಇಂಡಿಯಾ ದಾಂಡಿಗರು ಅತ್ಯುತ್ತಮ ಬ್ಯಾಟಿಂಗ್ ಮುಂದುವರೆಸಿದ್ದಾರೆ.

ಅಬ್ಬರಿಸಲು ಮುಂದಾಗಿ ವಿಕೆಟ್ ಒಪ್ಪಿಸಿದ ವೈಭವ್ ಸೂರ್ಯವಂಶಿ..!
Vaibhav Sooryavanshi Image Credit source: Espn
ಝಾಹಿರ್ ಯೂಸುಫ್
|

Updated on:Jun 17, 2026 | 2:40 PM

Share

ಶ್ರೀಲಂಕಾದ ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ 5ನೇ ಪಂದ್ಯದಲ್ಲೂ ಭಾರತ ‘ಎ’ ತಂಡದ ಯುವ ಆರಂಭಿಕ ದಾಂಡಿಗ ವೈಭವ್ ಸೂರ್ಯವಂಶಿ ನಿರಾಸೆ ಮೂಡಿಸಿದ್ದಾರೆ. ಈ ಪಂದ್ಯದಲ್ಲೂ ಓಪನರ್ ಆಗಿ ಕಣಕ್ಕಿಳಿದ ವೈಭವ್ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನಿಡಿದ್ದರು. ಅದರಂತೆ ಕೇವಲ 27 ಎಸೆತಗಳಲ್ಲಿ 38 ರನ್ ಬಾರಿಸಿದ್ದರು. ಆದರೆ 28ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಔಟಾಗಿದ್ದಾರೆ.

ಔಟ್ ಆಗಿದ್ದು ಹೇಗೆ?

ಇನ್ನಿಂಗ್ಸ್‌ನ 8ನೇ ಓವರ್‌ನಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ವೈಭವ್ ಸೂರ್ಯವಂಶಿ, ಬೌಲರ್ ಫರಿದೂನ್ ಎಸೆದ ಶಾರ್ಟ್ ಪಿಚ್ ಚೆಂಡನ್ನು ಪುಲ್ ಶಾಟ್ ಆಡಲು ಪ್ರಯತ್ನಿಸಿದರು. ಆದರೆ, ಚೆಂಡು ಬ್ಯಾಟ್‌ನ ಮೇಲ್ಭಾಗದ ತುದಿಗೆ ತಗುಲಿ ಗಾಳಿಯಲ್ಲಿ ಚಿಮ್ಮಿತು. ಪಾಯಿಂಟ್ ಭಾಗದಲ್ಲಿ ನಿಂತಿದ್ದ ಅಫ್ಘಾನಿಸ್ತಾನ್ ಫೀಲ್ಡರ್ ಖಾಲಿದ್ ತನಿವಾಲ್ ಸುಲಭವಾಗಿ ಕ್ಯಾಚ್ ಹಿಡಿದರು. ಇದರೊಂದಿಗೆ ವೈಭವ್ ಸೂರ್ಯವಂಶಿ ಇನಿಂಗ್ಸ್ ಅಂತ್ಯಗೊಂಡಿತು.

ಆರಂಭದಲ್ಲೇ ಜೀವದಾನ:

ಟೀಮ್ ಇಂಡಿಯಾ ಇನ್ನಿಂಗ್ಸ್‌ನ ಆರಂಭದಲ್ಲೇ ಕಟ್ ಶಾಟ್ ಹೊಡೆಯಲು ಹೋಗಿ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ವೈಭವ್ ಸೂರ್ಯವಂಶಿ ಕ್ಯಾಚ್ ನೀಡಿದ್ದರು. ಆನ್-ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರೂ, ಥರ್ಡ್ ಅಂಪೈರ್ ಮರುಪರಿಶೀಲಿಸಿದಾಗ ಫೀಲ್ಡರ್ ಚೆಂಡನ್ನು ನೆಲಕ್ಕೆ ಮುಟ್ಟಿಸಿರುವುದು ಕಂಡು ಬಂತು. ಇದರಿಂದಾಗಿ ವೈಭವ್​ಗೆ ಆರಂಭದಲ್ಲೇ  ಜೀವದಾನ ಸಿಕ್ಕಿತ್ತು. ಝೀರೋ ರನ್​ಗೆ ಸಿಕ್ಕ ಈ ಜೀವದಾನದ ಸದುಪಯೋಗ ಪಡೆದು 38 ರನ್ ಬಾರಿಸಿದರೂ, ಚೊಚ್ಚಲ ಅರ್ಧಶತಕ ಬಾರಿಸುವಲ್ಲಿ ವೈಭವ್ ವಿಫಲರಾಗಿದ್ದಾರೆ.

117 ರನ್ ಪೂರೈಸಿದ ವೈಭವ್:

ವೈಭವ್ ಸೂರ್ಯವಂಶಿ ಅವರು ಸರಣಿಯ ನಾಲ್ಕು ಪಂದ್ಯಗಳ ಮೂಲಕ ಒಟ್ಟು 117 ರನ್ ಕಲೆಹಾಕಿದ್ದಾರೆ.

  • ಮೊದಲ ಪಂದ್ಯ (vs ಶ್ರೀಲಂಕಾ ‘ಎ’ ): 14 ರನ್ (12 ಎಸೆತಗಳು, 3 ಫೋರ್)
  • ಎರಡನೇ ಪಂದ್ಯ (vs ಅಫ್ಘಾನಿಸ್ತಾನ್ ‘ಎ’): 44 ರನ್ (22 ಎಸೆತಗಳು, 9 ಫೋರ್)
  • ಮೂರನೇ ಪಂದ್ಯ (vs ಶ್ರೀಲಂಕಾ ‘ಎ’): 21 ರನ್ (14 ಎಸೆತಗಳು, 1 ಸಿಕ್ಸ್, 3 ಫೋರ್)
  • ನಾಲ್ಕನೇ ಪಂದ್ಯ (vs ಅಫ್ಘಾನಿಸ್ತಾನ್ ‘ಎ’): 38 ರನ್​ (27 ಎಸೆತಗಳು, 2 ಸಿಕ್ಸ್, 4 ಫೋರ್)

ಈ ನಾಲ್ಕು ಇನಿಂಗ್ಸ್​ಗಳ ಮೂಲಕ ವೈಭವ್ ಸೂರ್ಯವಂಶಿ ತಮ್ಮ ಕೆರಿಯರ್​ನ ಮೊದಲ ತಿಕ್ರೋನ ಸರಣಿಯಲ್ಲಿ ನೂರು ರನ್​ಗಳ ಗಡಿದಾಟಿದ್ದಾರೆ.

ಟೀಮ್ ಇಂಡಿಯಾ ಸ್ಕೋರ್:

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 319 ರನ್ ಕಲೆಹಾಕಿದೆ. ಈ ಮೂಲಕ ಅಫ್ಘಾನಿಸ್ತಾನ್ ಎ ತಂಡಕ್ಕೆ 320 ರನ್​ಗಳ ಕಠಿಣ ಗುರಿ ನೀಡಿದೆ.

ಭಾರತ ಎ ಪ್ಲೇಯಿಂಗ್ 11: ಪ್ರಿಯಾಂಶ್ ಆರ್ಯ , ವೈಭವ್ ಸೂರ್ಯವಂಶಿ , ರುತುರಾಜ್ ಗಾಯಕ್ವಾಡ್ , ತಿಲಕ್ ವರ್ಮಾ (ನಾಯಕ) , ಕುಮಾರ್ ಕುಶಾಗ್ರ (ವಿಕೆಟ್ ಕೀಪರ್) , ನಿಶಾಂತ್ ಸಿಂಧು , ಸೂರ್ಯಾಂಶ್ ಶೆಡ್ಗೆ , ವಿಪ್ರಾಜ್ ನಿಗಮ್ , ಅನ್ಕೂಲ್ ರಾಯ್ , ಅನ್ಶುಲ್ ಕಂಬೋಜ್ , ಯಶ್ ಠಾಕೂರ್.

ಇದನ್ನೂ ಓದಿ: ಗೋಲು ಬಾರಿಸಿ ಕ್ಷಮೆಯಾಚಿಸಿದ ಯಾಸಿನ್ ಅಯಾರಿ..!

ಅಫ್ಘಾನಿಸ್ತಾನ್ ಎ ಪ್ಲೇಯಿಂಗ್ 11: ಇಮ್ರಾನ್ ಮೀರ್ (ನಾಯಕ) , ಹಸನ್ ಐಸಾಖಿಲ್ , ಖಾಲಿದ್ ತನಿವಾಲ್ , ಫೈಸಲ್ ಶಿನೋಜಾಡಾ , ಬಹೀರ್ ಶಾ , ಫರ್ಮಾನುಲ್ಲಾ ಸಫಿ , ಶಮ್ಸ್ ಉರ್ ರೆಹಮಾನ್ , ಮೊಹಮ್ಮದ್ ಇಶಾಕ್ (ವಿಕೆಟ್ ಕೀಪರ್) , ಝಹೀರ್ ಖಾನ್ , ಅಬ್ದುಲ್ಲಾ ಅಹ್ಮದ್‌ಝಾಹಿ , ಫರಿದೂನ್ ದಾವೂದ್‌.

Published On - 11:13 am, Wed, 17 June 26

Follow Us
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಸುದ್ದಿಗೋಷ್ಠಿ ನೇರಪ್ರಸಾರ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ: ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು!
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
ಬೆಂಗಳೂರಿನ ಪ್ಯಾಲೇಸ್ ರಸ್ತೆ ಮಧ್ಯೆ ಹೆಡೆಬಿಚ್ಚಿ ನಿಂತ ನಾಗರಹಾವು
24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ
24 ಗಂಟೆಗಳಿಂದ ಕೆಸರಿನಲ್ಲಿ ಸಿಲುಕಿ ನರಳಾಡುತ್ತಿರುವ ಕಾಡಾನೆ