VIDEO: ಕ್ರಿಕೆಟ್ ಲೀಗ್ನಲ್ಲಿ ಕೈ ಕೈ ಮಿಲಾಯಿಸಿದ ಸೆಲೆಬ್ರಿಟಿಗಳು..!
ಸೆಲೆಬ್ರಿಟಿಗಳ ಜಗಳವನ್ನು ತಡೆಯಲು ಪಂದ್ಯಾವಳಿಯ ಆಯೋಜಕರು ಹರಸಾಹಸಪಟ್ಟರು. ಅಲ್ಲದೆ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಇದೀಗ ಬಾಂಗ್ಲಾದೇಶ್ ಸೆಲೆಬ್ರಿಟಿಗಳ ಜಗಳದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕ್ರಿಕೆಟ್ ಮೈದಾನದಲ್ಲಿ ಮಾತಿನ ಚಕಮಕಿ ನಡೆಯುವುದು ಸಾಮಾನ್ಯ. ಅದರಲ್ಲೂ ಸ್ಲೆಡ್ಜಿಂಗ್ ಆಗಾಗ್ಗೆ ಕಾಣ ಸಿಗುತ್ತವೆ. ಆದರೆ ಇಲ್ಲೊಂದು ಲೀಗ್ನಲ್ಲಿ ಒಂದು ಫೋರ್ಗಳಾಗಿ ಖ್ಯಾತನಾಮರು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ. ಇಂತಹದೊಂದು ಅಹಿತಕರ ಘಟನೆ ನಡೆದಿರುವುದು ಬಾಂಗ್ಲಾದೇಶ್ನ ಸೆಲೆಬ್ರಿಟಿ ಕ್ರಿಕೆಟ್ ಲೀಗ್ನಲ್ಲಿ. ಈ ಲೀಗ್‌ನ ಪಂದ್ಯವೊಂದರಲ್ಲಿ ಮುಸ್ತಫಾ ಕಮಾಲ್ ರಿಯಾಜ್ ಮತ್ತು ದೀಪಂಕರ್ ದೀಪನ್ ಅವರ ತಂಡಗಳು ಮುಖಾಮುಖಿಯಾಗಿತ್ತು.
ಜಿದ್ದಾಜಿದ್ದಿನ ಹೋರಾಟವನ್ನು ನಿರೀಕ್ಷಿಸಲಾಗಿದ್ದ ಈ ಪಂದ್ಯದಲ್ಲಿ ಹಣಾಹಣಿ ಕಂಡು ಬಂದಿದ್ದು ಮಾತ್ರ ಅಚ್ಚರಿ. ಅದು ಕೂಡ ಕೇವಲ ಒಂದು ಫೋರ್ಗಾಗಿ ಉಭಯ ತಂಡಗಳ ಆಟಗಾರರು ಪರಸ್ಪರ ಹೊಡೆದಾಟಕ್ಕಿಳಿದಿರುವುದು ಪರಮಾಶ್ಚರ್ಯ ಎನ್ನದೇ ವಿಧಿಯಿಲ್ಲ.
Celebrity Cricket League has turned into WWE Royal Rumble. 😂
– 6 people got injured – Tournament got cancelled before semis
30+ year old male & female adults fighting over boundary & out decision in a ‘friendly’ tournament. 🤣 pic.twitter.com/FOAxEI00rz
— Saif Ahmed 🇧🇩 (@saifahmed75) September 30, 2023
ಏಕೆಂದರೆ ಇದೊಂದು ಸೆಲೆಬ್ರಿಟಿ ಲೀಗ್ ಪಂದ್ಯ. ಇದರ ಉದ್ದೇಶವೇ ಎಲ್ಲಾ ಕಲಾವಿದರನ್ನು ಒಗ್ಗೂಡಿಸುವುದಾಗಿತ್ತು. ಆದರೆ ಕ್ರಿಕೆಟ್ ಪಂದ್ಯಾಟ ರಣಾಂಗಣವಾದ ಪರಿಣಾಮ ಪಂದ್ಯವನ್ನೇ ರದ್ದುಗೊಳಿಸಲಾಯಿತು. ಅಷ್ಟೇ ಅಲ್ಲದೆ ಈ ಹೊಡೆದಾಟದಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.
ಹೊಡೆದಾಟಕ್ಕೆ ಕಾರಣವೇನು?
ವರದಿಗಳ ಪ್ರಕಾರ, ಈ ಪಂದ್ಯದಲ್ಲಿ ಜಗಳಕ್ಕೆ ಮುಖ್ಯ ಕಾರಣ ಅಂಪೈರ್ ನೀಡಿದ ತಪ್ಪು ತೀರ್ಪು. ಅಂಪೈರ್ ಬೌಂಡರಿ ನೀಡದ ಹಿನ್ನೆಲೆಯಲ್ಲಿ ಈ ಉಭಯ ತಂಡಗಳ ನಡುವೆ ವಾಗ್ವಾದ ನಡೆಯಿತು. ಈ ಮಾತಿನ ಚಕಮಕಿ ಆ ಬಳಿಕ ಕಾದಾಟಕ್ಕೆ ಕಾರಣವಾಯಿತು.
Hilarious scenes in Celebrity Cricket League. 😂
A celebrity crying because an umpire didn’t give a boundary which was clearly a four.
Two teams fought badly, 6 people injured in hospital and the tournament is now cancelled!!! pic.twitter.com/brEYCKzIw3
— Saif Ahmed 🇧🇩 (@saifahmed75) September 30, 2023
ಇದರ ನಡುವೆ ಸೆಲೆಬ್ರಿಟಿಗಳ ಜಗಳವನ್ನು ತಡೆಯಲು ಪಂದ್ಯಾವಳಿಯ ಆಯೋಜಕರು ಹರಸಾಹಸಪಟ್ಟರು. ಅಲ್ಲದೆ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು. ಇದೀಗ ಈ ಜಗಳದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.