Vijay Hazare Trophy 2021: ದೇಸಿ ಕ್ರಿಕೆಟ್​ ವಿಜಯ್​ ಹಜಾರೆ ಟ್ರೋಫಿ 2021 ಆರಂಭ.. ಪಂದ್ಯಾವಳಿಯ ವಿವರ ಇಲ್ಲಿದೆ

Vijay Hazare Trophy 2021: ಫೆಬ್ರವರಿ 20ರಿಂದ ಮಾರ್ಚ್​ 14ರ ತನಕ ನಡೆಯಲಿರುವ ವಿಜಯ್​ ಹಜಾರೆ ಟ್ರೋಫಿ 2021ರ ಆರಂಭಿಕ ಪಂದ್ಯಗಳ ನೇರಪ್ರಸಾರ ಟಿವಿ ವಾಹಿನಿಯಲ್ಲಿ ಲಭ್ಯವಿಲ್ಲ. ಆದರೆ, ಎರಡನೇ ಸುತ್ತಿನ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಸಮೂಹದ ವಾಹಿನಿಗಳು ಪ್ರಸಾರ ಮಾಡಲಿವೆ.

Vijay Hazare Trophy 2021: ದೇಸಿ ಕ್ರಿಕೆಟ್​ ವಿಜಯ್​ ಹಜಾರೆ ಟ್ರೋಫಿ 2021 ಆರಂಭ.. ಪಂದ್ಯಾವಳಿಯ ವಿವರ ಇಲ್ಲಿದೆ
ಸಂಗ್ರಹ ಚಿತ್ರ
Follow us
|

Updated on: Feb 20, 2021 | 12:25 PM

ಭಾರತದ ದೇಸಿ ಕ್ರಿಕೆಟ್​ ಪಂದ್ಯಾವಳಿ ವಿಜಯ್​ ಟ್ರೋಫಿ 2021 ಇಂದು (ಫೆಬ್ರವರಿ 20) ಆರಂಭವಾಗುತ್ತಿದೆ. ಮಾರ್ಚ್​ 14ರ ತನಕ ನಡೆಯಲಿರುವ 50 ಓವರ್​ಗಳ103 ಪಂದ್ಯಗಳಲ್ಲಿ ಈ ಬಾರಿ ಒಟ್ಟು 38 ತಂಡಗಳು ಭಾಗವಹಿಸುತ್ತಿದ್ದು ಪ್ರತಿಷ್ಠಿತ ಚಾಂಪಿಯನ್​ ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ. ಕೊರೊನಾ ಕಾರಣದಿಂದಾಗಿ ಭಾರತೀಯ ಕ್ರಿಕೆಟ್​ ನಿಯಂತ್ರಣಾ ಮಂಡಳಿ (BCCI) ರಣಜಿ ಟ್ರೋಫಿಯನ್ನು ಮೊದಲ ಬಾರಿಗೆ ಆಯೋಜಿಸಿಲ್ಲ. ಜೊತೆಗೆ, ಕಳೆದ ತಿಂಗಳೇ ನಡೆಸಬೇಕಾಗಿದ್ದ ವಿಜಯ್​ ಟ್ರೋಫಿ ಪಂದ್ಯಾವಳಿಯನ್ನೂ ಈಗ ಏರ್ಪಡಿಸಿದೆ. ಈ ಪಂದ್ಯಾವಳಿಯು ಸೂರತ್, ಇಂದೋರ್, ಬೆಂಗಳೂರು, ಜೈಪುರ, ಕೋಲ್ಕತ್ತಾ ಹಾಗೂ ಚೆನ್ನೈ ಸೇರಿದಂತೆ 6 ಕಡೆಗಳಲ್ಲಿ ನಡೆಯಲಿದ್ದು, ಮೊದಲ ದಿನವೇ 18 ತಂಡಗಳು 9 ಪಂದ್ಯಗಳಿಗೆ ಸಾಕ್ಷಿಯಾಗಲಿವೆ. 

ಕಳೆದ ಬಾರಿ ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಫೈನಲ್​ನಲ್ಲಿ 60 ರನ್​ಗಳಿಂದ ತಮಿಳುನಾಡು ತಂಡವನ್ನು ಮಣಿಸಿತ್ತು. ಈ ಬಾರಿಯೂ ಕರ್ನಾಟಕ ತಂಡ ಚಾಂಪಿಯನ್​ ಪಟ್ಟವನ್ನು ಉಳಿಸಿಕೊಳ್ಳುವ ತವಕದಲ್ಲಿದ್ದು, ಯಾವ ರೀತಿ ಪ್ರದರ್ಶನ ನೀಡಲಿದೆ ಎಂದು ನೋಡಲು ಕ್ರಿಕೆಟ್​ ಪ್ರೇಮಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಬಾರಿಯ ಎಲ್ಲಾ ಪಂದ್ಯಗಳೂ ಮುಂಜಾನೆ 9 ಗಂಟೆಗೆ ಆರಂಭವಾಗಲಿದ್ದು ನಿಗದಿತ ಮೈದಾನಗಳಲ್ಲಿ ನಡೆಯಲಿವೆ.

ವಿಜಯ್​ ಟ್ರೋಫಿ 2021ನ್ನು ಎಲ್ಲಿ ನೋಡಬಹುದು? ಫೆಬ್ರವರಿ 20ರಿಂದ ಮಾರ್ಚ್​ 14ರ ತನಕ ನಡೆಯಲಿರುವ ವಿಜಯ್​ ಹಜಾರೆ ಟ್ರೋಫಿ 2021ರ ಆರಂಭಿಕ ಪಂದ್ಯಗಳ ನೇರಪ್ರಸಾರ ಟಿವಿ ವಾಹಿನಿಯಲ್ಲಿ ಲಭ್ಯವಿಲ್ಲ. ಆದರೆ, ಎರಡನೇ ಸುತ್ತಿನ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಸಮೂಹದ ವಾಹಿನಿಗಳು ಪ್ರಸಾರ ಮಾಡಲಿವೆ. ಜೊತೆಗೆ ಸ್ಟಾರ್​ ನೆಟ್​ವರ್ಕ್​ನ ಡಿಜಿಟಲ್​ ವೇದಿಕೆಯಲ್ಲೂ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ. ಜೊತೆಗೆ, BCCI ನ ಅಧಿಕೃತ ಜಾಲತಾಣದಲ್ಲಿ ವೇಳಾಪಟ್ಟಿಯನ್ನು ಪಡೆಯಬಹುದಾಗಿದೆ.

ವಿಜಯ್​ ಹಜಾರೆ ಟ್ರೋಫಿ 2021ರ ಗುಂಪುಗಳು ಮತ್ತು ಪಂದ್ಯ ನಡೆಯುವ ಸ್ಥಳ

ಎ ಗುಂಪು: ಬರೋಡಾ, ತ್ರಿಪುರಾ, ಛತ್ತೀಸ್​ಗಡ, ಗುಜರಾತ್, ಗೋವಾ, ಹೈದರಾಬಾದ್ ಪಂದ್ಯ ನಡೆಯುವ ಸ್ಥಳ: ಸೂರತ್

ಬಿ ಗುಂಪು: ಆಂಧ್ರ, ವಿದರ್ಭ, ಜಾರ್ಖಂಡ್, ಮಧ್ಯಪ್ರದೇಶ, ಪಂಜಾಬ್, ತಮಿಳುನಾಡು ಪಂದ್ಯ ನಡೆಯುವ ಸ್ಥಳ: ಇಂದೋರ್

ಸಿ ಗುಂಪು: ಬಿಹಾರ, ಕರ್ನಾಟಕ, ಕೇರಳ, ಒಡಿಶಾ, ರೈಲ್ವೇಸ್, ಉತ್ತರ ಪ್ರದೇಶ ಪಂದ್ಯ ನಡೆಯುವ ಸ್ಥಳ: ಬೆಂಗಳೂರು

ಡಿ ಗುಂಪು: ಪುದುಚೇರಿ, ರಾಜಸ್ಥಾನ, ದೆಹಲಿ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಮುಂಬೈ ಪಂದ್ಯ ನಡೆಯುವ ಸ್ಥಳ: ಜೈಪುರ

ಇ ಗುಂಪು: ಚಂಡೀಗಡ, ಸರ್ವಿಸ್, ಬಂಗಾಳ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಸೌರಾಷ್ಟ್ರ ಪಂದ್ಯ ನಡೆಯುವ ಸ್ಥಳ: ಕೋಲ್ಕತ್ತಾ

ಪ್ಲೇಟ್ ಗ್ರೂಪ್: ಮಿಜೋರಾಂ, ಸಿಕ್ಕಿಂ, ಉತ್ತರಾಖಂಡ, ಮೇಘಾಲಯ, ಅರುಣಾಚಲ ಪ್ರದೇಶ, ಮಣಿಪುರ, ಅಸ್ಸಾಂ, ನಾಗಾಲ್ಯಾಂಡ್ ಪಂದ್ಯ ನಡೆಯುವ ಸ್ಥಳ: ಚೆನ್ನೈ

ಓದಿ: 87 ವರ್ಷಗಳಲ್ಲಿ ಮೊದಲ ಬಾರಿಗೆ ರಣಜಿ ಟ್ರೋಫಿಗೆ ಬ್ರೇಕ್ ಹಾಕಿದ BCCI​.. ವಿಜಯ್ ಹಜಾರೆ ಟ್ರೋಫಿಗೆ ಗ್ರೀನ್​ ಸಿಗ್ನಲ್​..! ಇದನ್ನೂ ಓದಿ: ಯೋ-ಯೋ 2.0? ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಆಟಗಾರರಿಗಾಗಿ ಹೊಸ ಫಿಟ್‌ನೆಸ್ ಪರೀಕ್ಷೆ ಪರಿಚಯಿಸಿದ BCCI

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಬೆಳಗಾವಿಯಲ್ಲಿ ಪ್ರತಿಷ್ಠಾಪಿಸಲಾಗಿದೆ ಹುಣಸೆ ಬೀಜದಿಂದ ತಯಾರಿಸಿದ ಗಣೇಶ
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಮ್ಯಾನೇಜರ್ ಕರಕೌಶಲದಲ್ಲಿ ಮೂಡಿದ ಗಣಪ!
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್
ಬರೋಬ್ಬರಿ 111 ಎಸೆತಗಳು... ಕೆಟ್ಟ ರೀತಿಯಲ್ಲಿ ಔಟಾದ ಕೆಎಲ್ ರಾಹುಲ್