
ಟೀಮ್ ಇಂಡಿಯಾದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ (Virat Kohli) ಅವರಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಕೇವಲ ಕ್ರಿಕೆಟ್ ಲೋಕದಲ್ಲಿ ಮಾತ್ರವಲ್ಲದೆ ಇತರೆ ಕ್ರೀಡೆಗಳಲ್ಲೂ ಕೊಹ್ಲಿ ಫ್ಯಾನ್ಸ್ ಬಳಗವಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿಯಲ್ಲಿದ್ದ ಕಾರಣ ಕೊಹ್ಲಿ ಈಗ ತನ್ನ ಸಮಯವನ್ನು ಹೆಂಡತಿ ಮತ್ತು ಮಗಳೊಂದಿಗೆ ಕಳೆಯುತ್ತಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಕೊಹ್ಲಿ ಅಪಪೂರಕ್ಕೆ ಜನರ ಕಣ್ಣಿಗೆ ಕಾಣಿಸುತ್ತಾರೆ. ಹಾಗೆ ಕಂಡಾಗಲೆಲ್ಲ ಅಭಿಮಾನಿಗಳು ಇವರನ್ನು ನೋಡಲು ಮುಗಿ ಬೀಳುತ್ತಾರೆ. ಈಗ ಅಂತಹದೆ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಕೊಹ್ಲಿ ತಮ್ಮ ಕಾರಿಗೆ ಹತ್ತಲು ಮುಂದಾದಾಗ ಅಭಿಮಾನಿಯೊಬ್ಬರು ಅವರ ಬಳಿಗೆ ಬಂದು ಒಂದು ಸೆಲ್ಫಿ ಪ್ಲೀಸ್ ಎಂದು ಕೇಳಿದ್ದಾರೆ. ಆಗ ವಿರಾಟ್ ಅಭಿಮಾನಿಯ ಜೊತೆ ಯಾವುದೇ ಕೋಪ ಅಥವಾ ಅಸಮಾಧಾನವನ್ನು ತೋರಿಸದೆ, ಪ್ರ್ಯಾಕ್ಟೀಸ್ಗೆ ತೆರಳುವ ಮೊದಲು ಸೆಲ್ಫಿ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ. ಭಾರತದ ಏಷ್ಯಾಕಪ್ ತಂಡವು ಆಗಸ್ಟ್ 23 ರಂದು ಬೆಂಗಳೂರಿನಿಂದ ಶ್ರೀಲಂಕಾಕ್ಕೆ ತೆರಳಲಿದೆ. ಇದರ ಮೊದಲು ನಿಮ್ಮ ಜೊತೆ ಸೆಲ್ಫಿ ಕ್ಲಿಕ್ಕಿಸುತ್ತೇನೆ ಎಂದು ಕೊಹ್ಲಿ ತನ್ನ ಅಭಿಮಾನಿಗೆ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಸದ್ಯ ವಿಶ್ರಾಂತಿಯಲ್ಲಿದ್ದು ಏಷ್ಯಾಕಪ್ಗಾಗಿ ಕೆಲವೇ ದಿನಗಳಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ. ಕೊಹ್ಲಿ ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾದ ಪ್ರಮುಖ ಸದಸ್ಯರಾಗಿದ್ದಾರೆ. ಏಷ್ಯಾಕಪ್ 2023 ಪಂದ್ಯಾವಳಿಯು ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಆಯೋಜಿಸಲಾಗಿದೆ. ಆದರೆ, ಭಾರತ ತಂಡ ಪಾಕ್ಗೆ ಪ್ರಯಾಣಿಸದ ಕಾರಣ ತಮ್ಮ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಪ್ಟೆಂಬರ್ 2 ರಂದು ಕಣಕ್ಕಿಳಿಯಲಿದೆ.
ಹೀನಾಯ ಸೋಲು: ಪಂದ್ಯ ಮುಗಿದ ಬಳಿಕ ತನಗೆ ತಾನೇ ಬೈದುಕೊಂಡ ಹಾರ್ದಿಕ್ ಪಾಂಡ್ಯ: ಏನಂದ್ರು ನೋಡಿ
ವಿರಾಟ್ ಕೊಹ್ಲಿ ಏಷ್ಯಾಕಪ್ನಲ್ಲಿ ಅಪರೂಪದ ಸಾಧನೆ ಮಾಡಲು ಎದುರು ನೋಡುತ್ತಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 13,000 ರನ್ ಗಳಿಸಿದ 5ನೇ ಬ್ಯಾಟ್ಸ್ಮನ್ ಆಗಲು ಕೊಹ್ಲಿಗಿನ್ನು ಕೇವಲ 102 ರನ್ಗಳ ಅಗತ್ಯವಿದೆಯಷ್ಟೆ. ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಭಾಗವಾಗಿದ್ದರು, ಆದರೆ ಒಂದೇ ಒಂದು ಪಂದ್ಯದಲ್ಲಿ ಬ್ಯಾಟ್ ಮಾಡಲು ಸಾಧ್ಯವಾಗಲಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ