Women’s Asia Cup Schedule: ಏಷ್ಯಾಕಪ್ ವೇಳಾಪಟ್ಟಿ ಪ್ರಕಟ
Women's Asia Cup 2024: ಈ ಬಾರಿಯ ಮಹಿಳಾ ಏಷ್ಯಾಕಪ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ. ಟಿ20 ಸ್ವರೂಪದಲ್ಲಿ ನಡೆಯಲಿರುವ ಈ ಪಂದ್ಯಗಳಿಗೆ ಶ್ರೀಲಂಕಾದ ಡಂಬುಲ್ಲಾದ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಇನ್ನು ಈ ಟೂರ್ನಿಯಲ್ಲಿ 6ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮಹಿಳಾ ಏಷ್ಯಾಕಪ್ (Asia Cup 2024) ವೇಳಾಪಟ್ಟಿಯನ್ನು ಪ್ರಕಟಿಸಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್ ಜುಲೈ 19 ರಿಂದ ಶುರುವಾಗಲಿದೆ. ಟಿ20 ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ಜುಲೈ 28 ರಂದು ನಡೆಯಲಿದೆ. ಎಂಟು ತಂಡಗಳ ನಡುವಣ ಈ ಕದನದ ಮೊದಲ ದಿನವೇ ಭಾರತ ತಂಡ ಕೂಡ ಕಣಕ್ಕಿಳಿಯಲಿದೆ.
ಜುಲೈ 19 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ನೇಪಾಳ ತಂಡಗಳು ಮುಖಾಮಜಖಿಯಾಗಲಿದೆ. ಇನ್ನು ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಯುಎಇ ತಂಡವನ್ನು ಎದುರಿಸಲಿದೆ. ಹಾಗೆಯೇ ಜುಲೈ 21 ರಂದು ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಸಾಂಪ್ರಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ.
ಇದನ್ನೂ ಓದಿ: IPL 2024: ಹಾರ್ದಿಕ್ ಪಾಂಡ್ಯರ ಚಿಂತೆ ಹೆಚ್ಚಿಸಿದ ಶಿವಂ ದುಬೆ
2 ಗ್ರೂಪ್:
ಈ ಬಾರಿಯ ಏಷ್ಯಾಕಪ್ನಲ್ಲಿ ಕಣಕ್ಕಿಳಿಯುವ 8 ತಂಡಗಳನ್ನು 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಗ್ರೂಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಬಲಿಷ್ಠವಾಗಿ ಕಾಣಿಸಿಕೊಂಡರೆ, ಎರಡನೇ ಗ್ರೂಪ್ನಲ್ಲಿ ಬಾಂಗ್ಲಾದೇಶ್ ಶ್ರೀಲಂಕಾ ತಂಡಗಳಿವೆ.
| ಗ್ರೂಪ್ A | ಗ್ರೂಪ್ B |
| ಭಾರತ | ಬಾಂಗ್ಲಾದೇಶ್ |
| ಪಾಕಿಸ್ತಾನ್ | ಶ್ರೀಲಂಕಾ |
| ಯುಎಇ | ಮಲೇಷ್ಯಾ |
| ನೇಪಾಳ | ಥಾಯ್ಲೆಂಡ್ |
ಏಷ್ಯಾಕಪ್ 2024 ವೇಳಾಪಟ್ಟಿ:
| ದಿನಾಂಕ | ಪಂದ್ಯ 1 | ಪಂದ್ಯ 2 |
| ಜುಲೈ 19, 2024 | ಪಾಕಿಸ್ತಾನ್ vs ನೇಪಾಳ | ಭಾರತ vs ಯುಎಇ |
| ಜುಲೈ 20, 2024 | ಮಲೇಷ್ಯಾ vs ಥಾಯ್ಲೆಂಡ್ | ಶ್ರೀಲಂಕಾ vs ಬಾಂಗ್ಲಾದೇಶ್ |
| ಜುಲೈ 21, 2024 | ನೇಪಾಳ vs ಯುಎಇ | ಭಾರತ vs ಪಾಕಿಸ್ತಾನ್ |
| ಜುಲೈ 22 2024 | ಶ್ರೀಲಂಕಾ vs ಮಲೇಷ್ಯಾ | ಬಾಂಗ್ಲಾದೇಶ್ vs ಥಾಯ್ಲೆಂಡ್ |
| ಜುಲೈ 23, 2024 | ಪಾಕಿಸ್ತಾನ್ vs ಯುಎಇ | ಭಾರತ vs ನೇಪಾಳ |
| ಜುಲೈ 24, 2024 | ಬಾಂಗ್ಲಾದೇಶ್ vs ಮಲೇಷ್ಯಾ | ಶ್ರೀಲಂಕಾ vs ಥಾಯ್ಲೆಂಡ್ |
| ಜುಲೈ 26, 2024 | ಮೊದಲ ಸೆಮಿಫೈನಲ್ | ಎರಡನೇ ಸೆಮಿಫೈನಲ್ |
| ಜುಲೈ 28, 2024 | ಫೈನಲ್ |




