ವುಮೆನ್ಸ್ ಪ್ರೀಮಿಯರ್ ಲೀಗ್ನ 3ನೇ ಸೀಸನ್ಗೆ ತೆರೆಬಿದ್ದಿದೆ. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 149 ರನ್ ಕಲೆಹಾಕಿತು.
150 ರನ್ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 141 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ 8 ರನ್ಗಳ ಜಯ ಸಾಧಿಸಿ 2ನೇ ಬಾರಿ ವುಮೆನ್ಸ್ ಪ್ರೀಮಿಯರ್ ಲೀಗ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಇದಕ್ಕೂ ಮುನ್ನ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಮುಂಬೈ ಪಡೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಇದೀಗ ಮತ್ತೊಮ್ಮೆ ಡೆಲ್ಲಿ ವಿರುದ್ಧ ಗೆದ್ದು ಮುಂಬೈ ಇಂಡಿಯನ್ಸ್ ಟ್ರೋಫಿ ಎತ್ತಿ ಹಿಡಿದಿದೆ. ಈ ಟ್ರೋಫಿಯೊಂದಿಗೆ ತಂಡಕ್ಕೆ ಹಾಗೂ ಆಟಗಾರರಿಗೆ ಬಹುಮಾನ ಮೊತ್ತ ಕೂಡ ಸಿಕ್ಕಿದೆ. ಅದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
WPL 2025 ಪ್ರಶಸ್ತಿ ವಿಜೇತರು:
ಪ್ರಶಸ್ತಿ |
ವಿಜೇತ ತಂಡ |
ಬಹುಮಾನ ಮೊತ್ತ |
ವಿನ್ನರ್ |
ಮುಂಬೈ ಇಂಡಿಯನ್ಸ್ |
6 ಕೋಟಿ ರೂ. |
ರನ್ನರ್-ಅಪ್ |
ಡೆಲ್ಲಿ ಕ್ಯಾಪಿಟಲ್ಸ್ |
3 ಕೋಟಿ ರೂ. |
ಫೈನಲ್ ಪಂದ್ಯಶ್ರೇಷ್ಠ ಪ್ರಶಸ್ತಿ:
ಪ್ರಶಸ್ತಿ |
ವಿಜೇತೆ |
ಪ್ಲೇಯರ್ ಆಫ್ ದಿ ಮ್ಯಾಚ್ |
ಹರ್ಮನ್‌ಪ್ರೀತ್ ಕೌರ್ |
ಫೈನಲ್ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು:
ಪ್ರಶಸ್ತಿ |
ವಿಜೇತೆ |
ಬಹುಮಾನ ಮೊತ್ತ |
ಫೈನಲ್ ಮ್ಯಾಚ್ ಸಿಕ್ಸರ್ |
ಹರ್ಮನ್‌ಪ್ರೀತ್ ಕೌರ್ ಮತ್ತು ಮರಿಝನ್ನೆ ಕಪ್ (ತಲಾ 2 ಸಿಕ್ಸರ್) |
1 ಲಕ್ಷ ರೂಪಾಯಿ |
ಫೈನಲ್ ಸೂಪರ್ ಸ್ಟ್ರೈಕರ್ ಪ್ರಶಸ್ತಿ:
ಪ್ರಶಸ್ತಿ |
ವಿಜೇತೆ |
ಬಹುಮಾನ ಮೊತ್ತ |
ಫೈನಲ್ ಮ್ಯಾಚ್ ಎಲೆಕ್ಟ್ರಿಕ್ ಸ್ಟ್ರೈಕರ್ |
ಅಮನ್‌ಜೋತ್ ಕೌರ್ (ಸ್ಟ್ರೈಕ್ ರೇಟ್ – 200.00) |
1 ಲಕ್ಷ ರೂಪಾಯಿ |
WPL 2025ರ ಸೂಪರ್ ಸ್ಟ್ರೈಕರ್ ಪ್ರಶಸ್ತಿ:
ಪ್ರಶಸ್ತಿ |
ವಿಜೇತೆ |
ಸೀಸನ್‌ನ ಎಲೆಕ್ಟ್ರಿಕ್ ಸ್ಟ್ರೈಕರ್ |
ಶಿನೆಲ್ಲೆ ಹೆನ್ರಿ (ಸ್ಟ್ರೈಕ್ ರೇಟ್ – 196.38) |
WPL 2025ರ ಸಿಕ್ಸರ್ ಸರದಾರಿಣಿ:
ಪ್ರಶಸ್ತಿ |
ವಿಜೇತೆ |
ಬಹುಮಾನ ಮೊತ್ತ |
2025ರ ಸಿಕ್ಸರ್ ಕ್ವೀನ್ |
ಆಶ್ಲೀ ಗಾರ್ಡ್ನರ್ (18 ಸಿಕ್ಸರ್‌ಗಳು) |
5 ಲಕ್ಷ ರೂ. |
WPL 2025ರ ಉದಯೋನ್ಮುಖ ಆಟಗಾರ್ತಿ:
ಪ್ರಶಸ್ತಿ |
ವಿಜೇತೆ |
ಬಹುಮಾನ ಮೊತ್ತ |
ಸೀಸನ್‌ನ ಉದಯೋನ್ಮುಖ ಆಟಗಾರ್ತಿ |
ಅಮನ್‌ಜೋತ್ ಕೌರ್ |
5 ಲಕ್ಷ ರೂ. |
WPL 2025ರ ಆರೆಂಜ್ ಕ್ಯಾಪ್ (ಹೆಚ್ಚು ರನ್):
ಪ್ರಶಸ್ತಿ |
ವಿಜೇತೆ |
ಬಹುಮಾನ ಮೊತ್ತ |
ಆರೆಂಜ್ ಕ್ಯಾಪ್ ವಿನ್ನರ್ |
ನ್ಯಾಟ್ ಸಿವರ್-ಬ್ರಂಟ್ (523 ರನ್‌ಗಳು, 10 ಇನ್ನಿಂಗ್ಸ್‌ಗಳು) |
5 ಲಕ್ಷ ರೂ. |
WPL 2025ರ ಪರ್ಪಲ್ ಕ್ಯಾಪ್ (ಹೆಚ್ಚು ವಿಕೆಟ್‌ಗಳು):
ಪ್ರಶಸ್ತಿ |
ವಿಜೇತೆ |
ಬಹುಮಾನ ಮೊತ್ತ |
ಪರ್ಪಲ್ ಕ್ಯಾಪ್ ವಿನ್ನರ್ |
ಅಮೆಲಿಯಾ ಕೆರ್ (18 ವಿಕೆಟ್‌ಗಳು, 10 ಇನ್ನಿಂಗ್ಸ್‌ಗಳು) |
5 ಲಕ್ಷ ರೂ. |
WPL 2025ರಲ್ಲಿ ಅತೀ ಹೆಚ್ಚು ಡಾಟ್ ಬಾಲ್ ಎಸೆದವರು:
ಪ್ರಶಸ್ತಿ |
ವಿಜೇತೆ |
ಅತೀ ಹೆಚ್ಚು ಡಾಟ್ ಬಾಲ್ ಎಸೆದವರು |
ಶಬ್ನಿಮ್ ಇಸ್ಮಾಯಿಲ್ (ಮುಂಬೈ ಇಂಡಿಯನ್ಸ್) |
WPL 2025 ರ ಅತ್ಯಂತ ಮೌಲ್ಯಯುತ ಆಟಗಾರ್ತಿ:
ಪ್ರಶಸ್ತಿ |
ವಿಜೇತೆ |
ಬಹುಮಾನ ಮೊತ್ತ |
ಅತ್ಯಂತ ಮೌಲ್ಯಯುತ ಆಟಗಾರ್ತಿ |
ನ್ಯಾಟ್ ಸಿವರ್-ಬ್ರಂಟ್ (523 ರನ್‌ಗಳು, 12 ವಿಕೆಟ್‌ಗಳು) |
5 ಲಕ್ಷ ರೂ. |
WPL 2025 ಸೀಸನ್‌ನ ಕ್ಯಾಚ್ ಪ್ರಶಸ್ತಿ:
ಪ್ರಶಸ್ತಿ |
ವಿಜೇತೆ |
ಸೀಸನ್‌ನ ಬೆಸ್ಟ್ ಕ್ಯಾಚ್ |
ಅನ್ನಾಬೆಲ್ ಸದರ್ಲ್ಯಾಂಡ್ |
WPL 2025 ಫೇರ್‌ಪ್ಲೇ ಪ್ರಶಸ್ತಿ:
ಪ್ರಶಸ್ತಿ |
ವಿಜೇತರು |
ಫೇರ್‌ಪ್ಲೇ ಪ್ರಶಸ್ತಿ |
ಗುಜರಾತ್ ಜೈಂಟ್ಸ್ |