AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL ಮೆಗಾ ಹರಾಜು ಯಾವಾಗ, ಎಲ್ಲಿ, ಎಷ್ಟು ಗಂಟೆಗೆ ಆರಂಭ? ಎಲ್ಲಿ ನೇರಪ್ರಸಾರ ವೀಕ್ಷಿಸಬಹುದು?

WPL 2026 Mega Auction: 2026ರ WPL ಮೆಗಾ ಹರಾಜು ನವೆಂಬರ್ 27ರಂದು ನವದೆಹಲಿಯಲ್ಲಿ ನಡೆಯಲಿದೆ. ಒಟ್ಟು 277 ಆಟಗಾರ್ತಿಯರು ಭಾಗವಹಿಸಲಿದ್ದು, ಇದರಲ್ಲಿ 194 ಭಾರತೀಯರು ಸೇರಿದ್ದಾರೆ. ಫ್ರಾಂಚೈಸಿಗಳು ಕನಿಷ್ಠ 15 ಮತ್ತು ಗರಿಷ್ಠ 18 ಆಟಗಾರ್ತಿಯರನ್ನು ಖರೀದಿಸಬಹುದು. RTM ಕಾರ್ಡ್‌ಗಳ ಬಳಕೆ, ತಂಡಗಳ ಹರಾಜು ಬಜೆಟ್ ಮತ್ತು JioHotstar ಹಾಗೂ Star Sports ನಲ್ಲಿ ನೇರ ಪ್ರಸಾರ ವಿವರಗಳನ್ನು ಲೇಖನದಲ್ಲಿ ಓದಿ.

WPL ಮೆಗಾ ಹರಾಜು ಯಾವಾಗ, ಎಲ್ಲಿ, ಎಷ್ಟು ಗಂಟೆಗೆ ಆರಂಭ? ಎಲ್ಲಿ ನೇರಪ್ರಸಾರ ವೀಕ್ಷಿಸಬಹುದು?
Wpl
ಪೃಥ್ವಿಶಂಕರ
|

Updated on: Nov 26, 2025 | 9:55 PM

Share

2026 ರ ಮಹಿಳಾ ಪ್ರೀಮಿಯರ್ ಲೀಗ್​ನ 4ನೇ ಆವೃತ್ತಿಯ ಮೆಗಾ ಹರಾಜು (WPL 2026 Mega Auction) ನಾಳೆ ಅಂದರೆ ನವೆಂಬರ್ 27 ರಂದು ನವದೆಹಲಿಯಲ್ಲಿ ನಡೆಯಲಿದೆ. ಈ ಮೆಗಾ ಹರಾಜು ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗಲಿದೆ. ಈ ಹರಾಜಿನಲ್ಲಿ ಒಟ್ಟು 277 ಆಟಗಾರ್ತಿಯರು ಭಾಗವಹಿಸಲಿದ್ದಾರೆ. ಇವರಲ್ಲಿ 194 ಭಾರತೀಯ ಆಟಗಾರ್ತಿಯರು ಮತ್ತು 66 ವಿದೇಶಿ ಆಟಗಾರ್ತಿಯರು ಸೇರಿದ್ದಾರೆ. ಇದು ಮೆಗಾ ಹರಾಜು ಆಗಿರುವ ಕಾರಣ ಐದು ಫ್ರಾಂಚೈಸಿಗಳು ಒಟ್ಟು 16 ಆಟಗಾರರ್ತಿಯರನ್ನು ತಂಡದಲ್ಲಿ ಉಳಿಸಿಕೊಂಡಿವೆ. ಉಳಿದಂತೆ ಎಲ್ಲಾ ಆಟಗಾರ್ತಿಯರನ್ನು ತಂಡದಿಂದ ಬಿಡುಗಡೆ ಮಾಡಿದ್ದು, ನಾಳೆ ನಡೆಯಲಿರುವ ಹರಾಜಿನಲ್ಲಿ ತಮಗೆ ಬೇಕಾಗಿರುವ ಆಟಗಾರ್ತಿಯರನ್ನು ಖರೀದಿಸುವ ಮೂಲಕ ತಂಡವನ್ನು ಬಲಿಷ್ಠಗೊಳಿಸಲು ನೋಡಲಿವೆ.

ಮಹಿಳಾ ಪ್ರೀಮಿಯರ್ ಲೀಗ್​ನ ಮೆಗಾ ಹರಾಜು ಯಾವಾಗ ನಡೆಯಲಿದೆ?

ಮಹಿಳಾ ಪ್ರೀಮಿಯರ್ ಲೀಗ್ 2026 ರ ಹರಾಜು ನವೆಂಬರ್ 27 ರ ಗುರುವಾರ ಮಧ್ಯಾಹ್ನ 3.30 ರಿಂದ ನವದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ನಡೆಯಲಿದೆ.

ಮಹಿಳಾ ಪ್ರೀಮಿಯರ್ ಲೀಗ್​ನ ಮೆಗಾ ಹರಾಜನ್ನು ನೇರಪ್ರಸಾರ ಎಲ್ಲಿ ವೀಕ್ಷಿಸಬೇಕು?

ಮಹಿಳಾ ಪ್ರೀಮಿಯರ್ ಲೀಗ್​ನ ಮೆಗಾ ಹರಾಜನ್ನು JioHotstar ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ . ಈವೆಂಟ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಈವೆಂಟ್ ವರದಿ ಮಧ್ಯಾಹ್ನ 2:30 ಕ್ಕೆ ಪ್ರಾರಂಭವಾಗುತ್ತದೆ, ಆದರೆ ಹರಾಜು ಮಧ್ಯಾಹ್ನ 3:30 ಕ್ಕೆ ಪ್ರಾರಂಭವಾಗುತ್ತದೆ.

ಯಾವ ತಂಡದ ಬಳಿ ಎಷ್ಟು ಹಣವಿದೆ?

  • ಯುಪಿ ವಾರಿಯರ್ಸ್ – 14.5 ಕೋಟಿ ರೂ.
  • ಗುಜರಾತ್ ಜೈಂಟ್ಸ್- 9 ಕೋಟಿ ರೂ.
  • ಆರ್‌ಸಿಬಿ- 6.15 ಕೋಟಿ ರೂ.
  • ಮುಂಬೈ ಇಂಡಿಯನ್ಸ್- 5.75 ಕೋಟಿ ರೂ.
  • ಡೆಲ್ಲಿ ಕ್ಯಾಪಿಟಲ್ಸ್- 5.7 ಕೋಟಿ ರೂ

ಹರಾಜಿನ ನಿಯಮಗಳು

  • ಪ್ರತಿ ಫ್ರಾಂಚೈಸಿ ಗರಿಷ್ಠ 18 ಆಟಗಾರ್ತಿಯರನ್ನು ಖರೀದಿಸಬಹುದು ಹಾಗೆಯೇ ಪ್ರತಿ ತಂಡದಲ್ಲಿ ಕನಿಷ್ಠ 15 ಆಟಗಾರರ್ತಿಯರಿರಬೇಕು.
  • ಐದು ತಂಡಗಳಲ್ಲಿ ಒಟ್ಟು 73 ಸ್ಥಾನಗಳು ಖಾಲಿ ಇದ್ದು, ಅವುಗಳಲ್ಲಿ 23 ಸ್ಥಾನಗಳು ವಿದೇಶಿ ಆಟಗಾರ್ತಿಯರಿಗೆ ಮೀಸಲಾಗಿವೆ.
  • ಮೊದಲ ಬಾರಿಗೆ ಪ್ರತಿ ತಂಡಗಳು ತಮ್ಮ 2025 ರ ತಂಡದಿಂದ ಆಟಗಾರ್ತಿಯರನ್ನು ಮರಳಿ ಖರೀದಿಸಲು ಗರಿಷ್ಠ ಐದು ರೈಟ್ ಟು ಮ್ಯಾಚ್ ( RTM) ಕಾರ್ಡ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ.
  • ಕಡಿಮೆ ಆಟಗಾರ್ತಿಯರನ್ನು ಉಳಿಸಿಕೊಂಡಿರುವ ಫ್ರಾಂಚೈಸಿಗಳು ಹೆಚ್ಚಿನ ಆರ್‌ಟಿಎಂ ಮತ್ತು ಹರಾಜಿನಲ್ಲಿ ಹೆಚ್ಚಿನ ಹಣವನ್ನು ಹೊಂದಿರುತ್ತವೆ.

ಹರಾಜಿಗೂ ಮುನ್ನ ತಂಡದಲ್ಲಿ ಉಳಿದುಕೊಂಡವರು

ಮುಂಬೈ ಇಂಡಿಯನ್ಸ್: ನ್ಯಾಟ್ ಸಿವರ್-ಬ್ರಂಟ್ (3.5 ಕೋಟಿ ರೂ.), ಹರ್ಮನ್ಪ್ರೀತ್ ಕೌರ್ (2.5 ಕೋಟಿ ರೂ.), ಹೇಲಿ ಮ್ಯಾಥ್ಯೂಸ್ (1.75 ಕೋಟಿ ರೂ.), ಅಮನ್ಜೋತ್ ಕೌರ್ (1 ಕೋಟಿ ರೂ.), ಜಿ. ಕಮಲಿನಿ (50 ಲಕ್ಷ ರೂ.)

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (3.5 ಕೋಟಿ ರೂ.), ರಿಚಾ ಘೋಷ್ (2.75 ಕೋಟಿ ರೂ.), ಎಲ್ಲಿಸ್ ಪೆರ್ರಿ (2 ಕೋಟಿ ರೂ.), ಶ್ರೇಯಾಂಕ ಪಾಟೀಲ್ (60 ಲಕ್ಷ ರೂ.)

ಗುಜರಾತ್ ಜೈಂಟ್ಸ್: ಆಶ್ಲೀ ಗಾರ್ಡ್ನರ್ (3.5 ಕೋಟಿ ರೂ.), ಬೆತ್ ಮೂನಿ (2.5 ಕೋಟಿ ರೂ.)

ಯುಪಿ ವಾರಿಯರ್ಸ್: ಶ್ವೇತಾ ಸೆಹ್ರಾವತ್ (50 ಲಕ್ಷ)

ಡೆಲ್ಲಿ ಕ್ಯಾಪಿಟಲ್ಸ್: ಜೆಮಿಮಾ ರೊಡ್ರಿಗಸ್ ( 2.2 ಕೋಟಿ), ಶಫಾಲಿ ವರ್ಮಾ ( 2.2 ಕೋಟಿ), ಅನ್ನಾಬೆಲ್ ಸದರ್ಲ್ಯಾಂಡ್ ( 2.2 ಕೋಟಿ), ಮರಿಜಾನ್ನೆ ಕಾಪ್ (2.2 ಕೋಟಿ), ನಿಕಿ ಪ್ರಸಾದ್ ( 50 ಲಕ್ಷ).

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ