PBKS vs MI, IPL 2025: ಪ್ಲೇಆಫ್‌ಗೂ ಮುನ್ನ ಪಂಜಾಬ್ ಕಿಂಗ್ಸ್‌ಗೆ ದೊಡ್ಡ ಹೊಡೆತ: ಸ್ಟಾರ್ ಆಟಗಾರ ಆಡೋದು ಡೌಟ್
Punjab Kings vs Mumbai Indians: ಪಂಜಾಬ್ ಇಂದಿನ ಪಂದ್ಯವನ್ನು ಗೆದ್ದರೆ ಗುಂಪು ಹಂತವನ್ನು ಅಗ್ರಸ್ಥಾನದಲ್ಲಿ ಮುಗಿಸಬಹುದು. ಮತ್ತೊಂದೆಡೆ, ಮುಂಬೈ ಗೆದ್ದರೆ ಅಗ್ರ 2 ಸ್ಥಾನ ಪಡೆಯುವ ಅವಕಾಶವಿರುತ್ತದೆ. ಎರಡೂ ತಂಡಗಳಿಗೂ ಇದು ದೊಡ್ಡ ಪಂದ್ಯ. ಆದರೆ, ಇದಕ್ಕೂ ಮೊದಲೇ ಪಂಜಾಬ್‌ನ ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಗಾಯಗೊಂಡಿರುವ ಸುದ್ದಿ ಬೆಳಕಿಗೆ ಬಂದಿದೆ.

ಬೆಂಗಳೂರು (ಮೇ. 26): ಇಂಡಿಯನ್ ಪ್ರೀಮಿಯರ್ ಲೀಗ್ 2025 ರ 69 ನೇ ಪಂದ್ಯವು ಇಂದು ಮೇ 26 ರಂದು ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (Punjab Kings vs Mumbai Indians) ನಡುವೆ ನಡೆಯಲಿದೆ. ಪಂಜಾಬ್ ತಂಡ 13 ಪಂದ್ಯಗಳಿಂದ 17 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮುಂಬೈ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಅಗ್ರ 2 ಸ್ಥಾನಗಳ ವಿಷಯದಲ್ಲಿ ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯವಾಗಿದೆ. ಪಂಜಾಬ್ ಈ ಪಂದ್ಯವನ್ನು ಗೆದ್ದರೆ ಅವರು ಗುಂಪು ಹಂತವನ್ನು ಅಗ್ರಸ್ಥಾನದಲ್ಲಿ ಮುಗಿಸಬಹುದು. ಮತ್ತೊಂದೆಡೆ, ಮುಂಬೈ ಗೆದ್ದರೆ ಅಗ್ರ 2 ಸ್ಥಾನ ಪಡೆಯುವ ಅವಕಾಶವಿರುತ್ತದೆ. ಎರಡೂ ತಂಡಗಳಿಗೂ ಇದು ದೊಡ್ಡ ಪಂದ್ಯ. ಆದರೆ, ಇದಕ್ಕೂ ಮೊದಲೇ ಪಂಜಾಬ್‌ನ ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಗಾಯಗೊಂಡಿರುವ ಸುದ್ದಿ ಬೆಳಕಿಗೆ ಬಂದಿದೆ.
ಯುಜ್ವೇಂದ್ರ ಚಾಹಲ್ ಇಂಜುರಿ:
ಭಾರತ ಮತ್ತು ಪಂಜಾಬ್‌ನ ಅನುಭವಿ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಗಾಯದ ಕಾರಣದಿಂದಾಗಿ ಕಳೆದ ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು ಆಡಲಿಲ್ಲ. ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಪ್ರಕಾರ, ಮಣಿಕಟ್ಟಿನ ಗಾಯದಿಂದಾಗಿ ಚಾಹಲ್ ಮುಂಬೈ ಇಂಡಿಯನ್ಸ್ ವಿರುದ್ಧವೂ ಆಡಲು ಸಾಧ್ಯವಾಗುವುದಿಲ್ಲ. ಆದರೆ ಪ್ಲೇಆಫ್‌ಗೆ ಮುನ್ನ ಚಾಹಲ್ ಚೇತರಿಸಿಕೊಳ್ಳುತ್ತಾರೆ ಎಂಬ ಭರವಸೆ ತಂಡಕ್ಕಿದೆ. ಸೋಮವಾರ ಮುಂಬೈ ಇಂಡಿಯನ್ಸ್ ವಿರುದ್ಧದ ದೊಡ್ಡ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಚಹಾಲ್ ಅವರನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ವರದಿ ಹೇಳುತ್ತದೆ.
ಐಪಿಎಲ್ 2025 ರಲ್ಲಿ ಚಾಹಲ್ ಪ್ರದರ್ಶನ:
ಯುಜ್ವೇಂದ್ರ ಚಾಹಲ್ ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ಪರ 12 ಪಂದ್ಯಗಳನ್ನು ಆಡಿದ್ದಾರೆ ಮತ್ತು 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದು ಮಾತ್ರವಲ್ಲದೆ, ಚಾಹಲ್ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದರು. ಚಹಾಲ್ ಸಮಯಕ್ಕೆ ತಕ್ಕಂತೆ ಫಿಟ್ ಆಗಿದ್ದರೆ, ಪ್ಲೇಆಫ್‌ನಲ್ಲಿ ತಂಡಕ್ಕೆ ಪ್ರಮುಖ ಪಾತ್ರ ವಹಿಸಬಹುದು.
IPL 2025: ಸೋಲಿನೊಂದಿಗೆ ಪ್ರಯಾಣ ಮುಗಿಸಿದ ಹಾಲಿ ಚಾಂಪಿಯನ್ ಕೆಕೆಆರ್
11 ವರ್ಷಗಳ ನಂತರ ಪಂಜಾಬ್ ಕಿಂಗ್ಸ್ ಪ್ಲೇಆಫ್ ತಲುಪಿದೆ:
11 ವರ್ಷಗಳ ಸುದೀರ್ಘ ಅಂತರದ ನಂತರ, ಪಂಜಾಬ್ ಕಿಂಗ್ಸ್ ಈ ಋತುವಿನ ಐಪಿಎಲ್‌ನಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆದಿದೆ. ಈ ಫ್ರಾಂಚೈಸಿ ಇದಕ್ಕೂ ಮೊದಲು 2014 ರಲ್ಲಿ ಪ್ಲೇಆಫ್‌ಗೆ ಅರ್ಹತೆ ಪಡೆದು ಫೈನಲ್ ತಲುಪಿತ್ತು.
ಪ್ರೀತಿ ಝಿಂಟಾ ದೇಣಿಗೆ:
ಪಂಜಾಬ್ ಕಿಂಗ್ಸ್ ತಂಡದ ಸಹ-ಮಾಲಿಕಿ, ಬಾಲಿವುಡ್ ನಟಿ ಪ್ರೀತಿ ಝಿಂಟಾ ಸೇನಾ ಪತ್ನಿಯರ ಕಲ್ಯಾಣ ಸಂಘಕ್ಕೆ 1.10 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಪ್ರೀತಿ ಜಿಂಟಾ ಅವರ ಕೊಡುಗೆಯನ್ನು ಪಂಜಾಬ್ ಕಿಂಗ್ಸ್‌ನ ಸಿಎಸ್‌ಆರ್ ಚಟುವಟಿಕೆಯಡಿಯಲ್ಲಿ ನೀಡಲಾಗಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರ ಪತ್ನಿಯರು ಮತ್ತು ಮಕ್ಕಳಿಗೆ ಬೆಂಬಲವಾಗಿ ಪ್ರೀತಿ ಅವರ ಕೊಡುಗೆ ನೀಡಲಾಗಿದೆ. ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರೀತಿ, ನಮ್ಮ ಸೈನಿಕರ ಧೈರ್ಯಶಾಲಿ ಕುಟುಂಬಗಳನ್ನು ಬೆಂಬಲಿಸುವುದು ಗೌರವ ಮತ್ತು ಜವಾಬ್ದಾರಿ ಎರಡೂ ಆಗಿದೆ ಎಂದು ಹೇಳಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




